ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Meditation: ಮನೆಯಿಂದ ಹಿಡಿದು ಆಫೀಸ್‌ನವರೆಗೆ ಎಲ್ಲವನ್ನು ಸುಸೂತ್ರವಾಗಿ ನಿಭಾಯಿಸಬೇಕೆಂದರೆ ಮೊದಲು ನೀವು ಮಾನಸಿಕವಾಗಿ ಸದೃಢವಾಗಿರಬೇಕಾಗುತ್ತದೆ. ಮಾನಸಿಕ ಆರೋಗ್ಯ ಸುಧಾರಣೆಗೆ ಧ್ಯಾನವು ಉತ್ತಮವಾಗಿದೆ. ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ.

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ
ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ (PC: Pixaby)

ಇಂದಿನ ಧಾವಂತದ ಜೀವನಶೈಲಿಯಲ್ಲಿ ಆತಂಕ, ಖಿನ್ನತೆ, ಆಯಾಸ, ಭಯ ಮುಂತಾದ ಸಮಸ್ಯೆಗಳ ಸಾಮಾನ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳು ಮಾನಸಿಕ ಆರೋಗ್ಯದ ಮೇಲಷ್ಟೇ ಪರಿಣಾಮ ಬೀರುವುದಿಲ್ಲ ಜೊತೆಗೆ ದೈಹಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಮನೆ, ಉದ್ಯೋಗ ಎರಡನ್ನು ನಿಭಾಯಿಸುವವರಲ್ಲಿ ಮಾನಸಿಕ ಸಮಸ್ಯೆಗಳು ತುಸು ಹೆಚ್ಚೇ ಎಂದರೂ ತಪ್ಪಾಗಲಾರದು. ಹಾಗಾಗಿ ಔಷಧಿಯ ಜೊತೆಗೆ ಮನಸ್ಸನ್ನು ಶಾಂತಗೊಳಿಸುವ ಧ್ಯಾನ, ಯೋಗಾಭ್ಯಾಸಗಳು ಮುಖ್ಯವಾಗಿದೆ. ಪ್ರತಿನಿತ್ಯ ನಿರ್ದಿಷ್ಟ ಸಮಯದವರೆಗೆ ಧ್ಯಾನ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಮನೆಯಿಂದ ಹಿಡಿದು ಆಫೀಸ್‌ನವರೆಗೆ ಎಲ್ಲವನ್ನು ಸರಿಯಾಗಿ ನಿಭಾಯಿಸಬೇಕೆಂದರೆ ಮೊದಲು ನೀವು ಮಾನಸಿಕವಾಗಿ ಸದೃಢವಾಗಿರಬೇಕು. ಮಾನಸಿಕ ಆರೋಗ್ಯ ಸುಧಾರಣೆಗೆ ಧ್ಯಾನವು ಉತ್ತಮವಾಗಿದೆ. ಧ್ಯಾನದಿಂದ ಮನಸ್ಸು ಮತ್ತು ದೇಹ ಎರಡನ್ನು ಸಂತುಲಿತವಾಗಿ ಇಟ್ಟುಕೊಳ್ಳಬಹುದು. ದಿನದಲ್ಲಿ ಕೇವಲ 10 ನಿಮಿಷ ಧ್ಯಾನಕ್ಕೆ ಮೀಸಲಿಡುವುದರಿಂದ ಬಹಳ ಪ್ರಯೋಜನಗಳು ನಿಮ್ಮದಾಗುತ್ತದೆ. ನಿಮ್ಮಲ್ಲಿರುವ ಅದೆಷ್ಟೋ ತೊಂದರೆಗಳು ದೂರವಾಗುತ್ತದೆ. ಧ್ಯಾನಕ್ಕೆ ಅಷ್ಟು ಮಹತ್ವವನ್ನು ನೀಡಲಾಗಿದೆ.

10 ನಿಮಿಷ ಧ್ಯಾನ ಮಾಡುವುದರಿಂದ ಸಿಗುವ 10 ಲಾಭಗಳು

1) ಒತ್ತಡ ಕಡಿಮೆ ಮಾಡುತ್ತದೆ

ಧ್ಯಾನದಿಂದ ಏಕಾಗ್ರತೆ ಸಾಧ್ಯವಾಗುತ್ತದೆ. ಒತ್ತಡದ ಸಮಯವನ್ನು ಸರಿಯಾಗಿ ನಿಭಾಯಿಸಲು ಮೆದುಳಿಗೆ ಮಾರ್ಗದರ್ಶನ ನೀಡುತ್ತದೆ. ಚಿಂತೆ, ಗೊಂದಲಗಳನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಇದರಿಂದ ಒತ್ತಡ, ಆತಂಕ ದೂರವಾಗುತ್ತದೆ. ಮನಸ್ಸು ಉಲ್ಲಾಸದಿಂದ ಇರುತ್ತದೆ.

2) ಸ್ವಯಂ ಅರಿವು ಮೂಡಿಸುತ್ತದೆ

ನಿಯಮಿತವಾದ ಧ್ಯಾನಾಭ್ಯಾಸವು ನಿಮ್ಮನ್ನು ನೀವು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮೊಳಗಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿಯಾದ ಸಮಯದಲ್ಲಿ ಅವುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ಯೋಚಿಸಲು ಸಹಾಯ ಮಾಡುತ್ತದೆ.

3) ಗುರಿ ಮತ್ತು ಏಕಾಗ್ರತೆ ಸಾಧಿಸಲು ನೆರವಾಗುತ್ತದೆ

ಧ್ಯಾನದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರ ಮೂಲಕ ಮನಸ್ಸನ್ನು ಶಾಂತಗೊಳಿಸುಬಹುದು. ಅದು ನಿಮ್ಮ ನಿಜವಾದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಗುರಿ ತಲುಪಲು ಬೇಕಾಗಿರುವ ಏಕಾಗ್ರತೆಯನ್ನು ಸಾಧಿಸಲು ನೆರವು ನೀಡುತ್ತದೆ. ಅದರಿಂದ ನೀವು ಮಾಡಿದ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ.

4) ಭಾವೋದ್ವೇಗಗೊಳ್ಳುವುದನ್ನು ತಡೆಯುತ್ತದೆ

ಧ್ಯಾನವು ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ಭಾವನೆಗಳನ್ನು ಹೊರಹಾಕಲು ಯಾವುದೇ ಹಿಂಜರಿಕೆಯಿರದಂತೆಯೂ ಮಾಡುತ್ತದೆ. ಯಾವುದೇ ವಿಷಯದ ಬಗ್ಗೆ ಅತಿಯಾಗಿ ಭಾವೋದ್ವೇಗಗೊಳ್ಳದೇ ಸಮಾಧಾನದಿಂದ ಯೊಚಿಸುವಂತೆ ಮಾಡುತ್ತದೆ.

5) ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ

ಧ್ಯಾನ ಮಾಡುವ ಸಮಯದಲ್ಲಿ ದೇಹವನ್ನು ರಿಲ್ಯಾಕ್ಸ್‌ ಮಾಡುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಮನಸ್ಸು ಶಾಂತಗೊಳ್ಳುವುದರಿಂದ ರಾತ್ರಿಯಲ್ಲಿ ನೆಮ್ಮದಿಯಿಂದ ನಿದ್ರಿಸಬಹುದಾಗಿದೆ.

6) ನೋವಿನ ಚಿಂತೆ ದೂರಮಾಡುತ್ತದೆ

ಧ್ಯಾನವು ದೀರ್ಘ ಸಮಯದಿಂದ ಕಾಡುತ್ತಿರುವ ನೋವಿನ ತೀವ್ರತೆಯನ್ನು ಸುಧಾರಿಸುತ್ತದೆ. ಸದಾ ನೋವಿನ ಬಗ್ಗೆ ಯೋಚಿಸುವುದನ್ನು ತಡೆಯುತ್ತದೆ. ಧ್ಯಾನ ಮಾಡುವಾಗ ಉಸಿರಾಟ ಅಥವಾ ಮಂತ್ರದ ಮೇಲೆ ಗಮನ ಕೇಂದ್ರಿಕೃತವಾಗುವುದರಿಂದ ಬೇರೆ ಯೋಚನೆ ಬರದಂತೆ ತಡೆಯುತ್ತದೆ.

7) ಸೃಜನಶೀಲತೆಯನ್ನು ಉತ್ತೇಜಿಸುತ್ತದೆ

ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಅದು ನಿಮ್ಮೊಳಗಿನ ಸೃಜನಶೀಲತೆ ಹೊರಬರಲು ಸಹಾಯ ಮಾಡತ್ತದೆ. ಹೊಸ ಹೊಸ ವಿಚಾರ, ಯೋಚನೆಗಳು ಬರುವಂತೆ ಮಾಡುತ್ತದೆ. ಅದರಿಂದ ಜೀವನದಲ್ಲಿ ಹೊಸ ಚೈತನ್ಯ ತುಂಬುತ್ತದೆ.

8) ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಅಧ್ಯಯನಗಳು ಹೇಳುವುದೇನೆಂದರೆ ಧ್ಯಾನದಿಂದ ಧನಾತ್ಮಕತೆ ಸಾಧ್ಯ. ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

9) ಸಹಾನುಭೂತಿ ಬೆಳೆಸುತ್ತದೆ

ಸಂಬಂಧಗಳಲ್ಲಿ ದಯೆ, ಅನುಕಂಪ, ಕರುಣೆ, ಸಹಾನುಭೂತಿಯನ್ನು ಹೆಚ್ಚಿಸುತ್ತದೆ. ಧ್ಯಾನದಿಂದ ಸಂಬಂಧಗಳ ನಡುವೆ ಉತ್ತಮ ಭಾಂದವ್ಯ ಬೆಳೆಸಲು ಸಹಾಯ ಮಾಡುತ್ತದೆ. ಎಂತದ್ದೇ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೇ ಶಾಂತಚಿತ್ತದಿಂದ ಯೋಚಿಸುವಂತೆ ಮಾಡುತ್ತದೆ.

10) ಮಾನಸಿಕ–ದೈಹಿಕ ಆರೋಗ್ಯ ಹೆಚ್ಚಿಸುತ್ತದೆ

ಧ್ಯಾನದಿಂದ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಅದು ದೈಹಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಸಂಪೂರ್ಣ ದೇಹದ ಆರೋಗ್ಯ ಹೆಚ್ಚುತ್ತದೆ. ಅದು ಎಲ್ಲಾ ರೀತಿಯ ಕೆಲಸಗಳಲ್ಲೂ ಉತ್ತಮ ಸಾಧನೆ ಮಾಡಲು ನೆರವಾಗುತ್ತದೆ.