ನಿದ್ರೆ ಕೊರತೆ ನಿಮ್ಮನ್ನೂ ಕಾಡ್ತಿದೆಯಾ; ರಾತ್ರಿ ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು-mental health expert advice for how to sleep better each night stress deep sleep deprivation jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿದ್ರೆ ಕೊರತೆ ನಿಮ್ಮನ್ನೂ ಕಾಡ್ತಿದೆಯಾ; ರಾತ್ರಿ ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು

ನಿದ್ರೆ ಕೊರತೆ ನಿಮ್ಮನ್ನೂ ಕಾಡ್ತಿದೆಯಾ; ರಾತ್ರಿ ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು

ಪ್ರತಿನಿತ್ಯ ಚೆನ್ನಾಗಿ ನಿದ್ರೆ ಮಾಡಲು ನಿಮಗೂ ಸಾಧ್ಯವಾಗದಿರಬಹುದು. ಗಾಢ ನಿದ್ರೆ ಬಿದ್ದರೆ ದಿನವಿಡೀ ಆರೋಗ್ಯಕರ ಜೀವನಶೈಲಿ ನಿಮ್ಮದಾಗುತ್ತದೆ. ನಿದ್ರೆಯ ಕೊರತೆಯಿಂದ ನೀವು ಬಳಲುತ್ತಿದ್ದರೆ, ಈ ಸಲಹೆಗಳು ನಿಮಗೆ ನೆರವಾಗಬಹುದು.

ನಿದ್ರೆ ಕೊರತೆ ಕಾಡ್ತಿದೆಯಾ; ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು
ನಿದ್ರೆ ಕೊರತೆ ಕಾಡ್ತಿದೆಯಾ; ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು (Pixabay)

ಪ್ರತಿನಿತ್ಯ ಸರಿಯಾಗಿ ನಿದ್ದೆ ಆಗದಿದ್ದರೆ ಆ ದಿನದ ಮೂಡ್ ಹಾಳಾಗುತ್ತೆ. ಮಾತ್ರವಲ್ಲದೆ ನಂತರದ ದಿನಗಳಲ್ಲಿ ನಿಧಾನವಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯಕರ ಜೀವನಶೈಲಿಯಲ್ಲಿ ನಿದ್ರೆ ಒಂದು ಪ್ರಮುಖ ಅವಶ್ಯಕತೆಯಾಗಿದೆ. ಎಚ್ಚರವಿರುವಾಗ ನಮ್ಮ ದೇಹದ ಜೀವಕೋಶಗಳು ಕ್ಷೀಣಿಸುತ್ತವೆ. ಹೀಗಾಗಿ ಉತ್ತಮ ಗುಣಮಟ್ಟದ ನಿದ್ರೆಯು ಶಾರೀರಿಕ ಏರುಪೇರುಗಳ ದುರಸ್ತಿ ಕಾರ್ಯಕ್ಕೆ ನೆರವಾಗುತ್ತದೆ. ವ್ಯಕ್ತಿಯ ಯೋಗಕ್ಷೇಮ ಮತ್ತು ಫಿಟ್ನೆಸ್‌ಗೆ ನಿದ್ರೆ ನಿರ್ಣಾಯಕ. ದಿನದೆಲ್ಲಾ ಸುಸ್ತು, ಮಾನಸಿಕ ಯಾತನೆಗಳಿಗೆ ದಿನದ ಅಂತ್ಯದಲ್ಲಿ ನಿದ್ರೆಯೇ ಪರಿಹಾರ. ಮತ್ತೊಂದು ದಿನವನ್ನು ತಾಜಾತನದಿಂದ ಆರಂಭಿಸಲು ನಿದ್ದೆಯೇ ಮುನ್ನುಡಿ.

ಸರಿಯಾದ ಪ್ರಮಾಣದ ನಿದ್ರೆಯಿಂದ ಹಲವು ಪ್ರಯೋಜನಗಳಿವೆ. ಬೆಂಗಳೂರು ಮೂಲದ ನರವಿಜ್ಞಾನಿ ಡಾ.ಶ್ರೀನಿವಾಸ್ ರಾವ್ ಹೇಳುವ ಪ್ರಕಾರ, ಈ ಕಾರಣಗಳಿಗೆ ನಿತ್ಯ ನಿದ್ದೆ ಬೇಕು.

ದೈಹಿಕ ಚೇತರಿಕೆ: ಉತ್ತಮ ನಿದ್ರೆಯು ಸ್ನಾಯುಗಳು, ಅಂಗಾಂಶಗಳು ಮತ್ತು ಜೀವಕೋಶಗಳನ್ನು ಸರಿಪಡಿಸುತ್ತದೆ. ಸುದೀರ್ಘ ದೈಹಿಕ ಚಟುವಟಿಕೆಯ ನಂತರ ವಿಶ್ರಾಂತಿ ಮಾತ್ರವಲ್ಲದೆ ದೇಹದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಅರಿವಿನ ಕಾರ್ಯಕ್ಕೆ ಬಲ: ನಿದ್ರೆಯು ನಿಮ್ಮ ಸ್ಮರಣ ಶಕ್ತಿಯ ಬಲವರ್ಧನೆ, ಗ್ರಹಿಸುವಿಕೆ ಮತ್ತು ಕೌಶಲ್ಯವನ್ನು ಹೆಚ್ಚಿಸುತ್ತದೆ. ದಿನದ ಉಳಿದ ಸಮಯದಲ್ಲಿ ಜಾಗರೂಕರಾಗಿ, ತೀಕ್ಷ್ಣವಾಗಿ ಮತ್ತು ಗಮನವಿಟ್ಟು ಇರಲು ಸಹಾಯ ಮಾಡುತ್ತದೆ.

ಭಾವನಾತ್ಮಕ ನಿಯತಾಂಕ: ಒತ್ತಡ ಕಡಿಮೆ ಮಾಡಲು, ಮನಸ್ಥಿತಿಯನ್ನು ನಿಯಂತ್ರಿಸಲು, ಬುದ್ಧಿಶಕ್ತಿಯನ್ನು ಉತ್ತೇಜಿಸಲು ಮತ್ತು ನೇರವಾಗಿ ಯೋಚಿಸಲು ಉತ್ತಮ ನಿದ್ರೆ ಅಗತ್ಯ.

ಪ್ರತಿರಕ್ಷಣಾ ಕಾರ್ಯ: ಸೋಂಕುಗಳು ಮತ್ತು ಕಾಯಿಲೆಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಗಾಢ ನಿದ್ರೆ ನಿರ್ಣಾಯಕವಾಗಿದೆ.

ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು
ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು (Photo by Spowerbeauty)

ನಿದ್ರೆಯ ಕೊರತೆ ಎಂದರೇನು?

ನಿದ್ರೆಯ ಕೊರತೆ ಎಂದರೆ ವ್ಯಕ್ತಿಯು ಸಾಕಷ್ಟು ನಿದ್ರೆಯನ್ನು ಪಡೆಯದ ಸ್ಥಿತಿ. ಈ ಸ್ಥಿತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಸಾಮಾನ್ಯವಾಗಿ ಆರೋಗ್ಯಕರ ಜೀವನಕ್ಕೆ 7ರಿಂದ 8 ಗಂಟೆಗಳ ನಿದ್ರೆ ಅಗತ್ಯ. ಇದಕ್ಕಿಂತ ಹೆಚ್ಚಿನ ನಿದ್ರೆ ಕೂಡಾ ಆಲಸ್ಯ ಹಾಗೂ ಸೋಮಾರಿತನಕ್ಕೆ ಕಾರಣವಾಗಬಹುದು.

ನಿದ್ರೆ ಕೊರತೆಯಿಂದ ಏನಾಗುತ್ತೆ?

ಹಗಲು ಹೊತ್ತಿನಲ್ಲಿ ತೂಕಡಿಸುವುದು, ಕೆಲಸದ ಸಮಯದಲ್ಲಿ ನಿದ್ದೆ ಮಾಡಬೇಕು ಎಂಬ ಪ್ರಚೋದನೆಯ ಅನುಭವವಾಗುವುದು ನಿದ್ರಾಹೀನತೆಯ ಲಕ್ಷಣ.

ಪುಣೆಯ ಮನೋವೈದ್ಯ ಕಿರಣ್ ಸೇಥಿ ನಿದ್ರೆಯ ಕೊರತೆಯಿಂದ ದೇಹದ ಮೇಲಾಗುವ ಪರಿಣಾಮಗಳನ್ನು ವಿವರಿಸುತ್ತಾರೆ. ನಿದ್ರೆಯ ಕೊರತೆಯು ಒತ್ತಡದ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಖಿನ್ನತೆ, ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಂತಹ ಹಲವಾರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿ ದೇಹದ ಅಂತರ್ಗತ ಉತ್ಸಾಹ ಕಡಿಮೆಯಾಗುತ್ತದೆ. ನಿತ್ಯಜೀವನದ ಅರಿವಿನ ಕ್ರಿಯೆಗಳು ಶ್ರಮದಾಯಕವೆಂದು ಭಾಸವಾಗುತ್ತವೆ. ಮನಸ್ಥಿತಿಯ ಬದಲಾವಣೆ, ಆತಂಕ, ಖಿನ್ನತೆಯು ನಿದ್ರಾಹೀನತೆಯ ಕೆಲವು ಪರಿಣಾಮಗಳಾಗಿವೆ.

ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು
ಕಣ್ತುಂಬ ನಿದ್ದೆ ಬೀಳಲು ತಜ್ಞರ ಈ ಸಲಹೆ ನಿಮಗೆ ನೆರವಾಗಬಹುದು (Twitter/MindfulOnline)

ಉತ್ತಮ ನಿದ್ರೆಗೆ ಏನು ಮಾಡಬಹುದು?

ಗಾಢ ನಿದ್ರೆ ದೇಹಕ್ಕೆ ಅಗತ್ಯ. ಹೀಗಾಗಿ ದೇಹಕ್ಕೆ ಆರಾಮದಾಯಕ ಎನಿಸುವ ಹಾಸಿಗೆಯಲ್ಲಿ ಮಲಗಿ. ಕತ್ತಲೆ ಅಥವಾ ಮಂದ ಬೆಳಕಿನ ಕೋಣೆಯಲ್ಲಿ ನಿದ್ರೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿ. ಡಾ.ಶ್ರೀನಿವಾಸ್ ರಾವ್ ಅವರ ಸಲಹೆಯ ಪ್ರಕಾರ, ನಿದ್ರೆಗಿಂತ ಒಂದೂವರೆ ಗಂಟೆ ಮುಂಚಿತವಾಗಿ ಎಲೆಕ್ಟ್ರಾನಿಕ್ ಸಾಧನಗಳಿಂದ ದೂರವಿರಿ. ಕಾಫಿ, ಆಲ್ಕೊಹಾಲ್, ಧೂಮಪಾನದಿಂದ ದೂರವಿರಿ. ಪುಸ್ತಕ, ಸಂಗೀತ ಆಲಿಸುವುದು ಅಥವಾ ಬಿಸಿನೀರಿನ ಸ್ನಾನದ ಬಳಿಕ ವಿಶ್ರಾಂತಿ ಪಡೆಯಿರಿ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ರೂಡಿಸಿಕೊಳ್ಳಿ.

mysore-dasara_Entry_Point