ಕನ್ನಡ ಸುದ್ದಿ  /  ಜೀವನಶೈಲಿ  /  Mental Health Issues: ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಸ್ನೇಹಿತನಿಗೆ ನಿಮ್ಮ ಬೆಂಬಲ ಹೇಗಿರಬೇಕು..?

Mental Health Issues: ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಸ್ನೇಹಿತನಿಗೆ ನಿಮ್ಮ ಬೆಂಬಲ ಹೇಗಿರಬೇಕು..?

Mental Health: ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗಿದೆ. ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಮಾನಸಿಕವಾಗಿ ಅಸ್ವಸ್ಥತೆಯನ್ನು ಅನುಭವಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದ್ದರೆ ಒಬ್ಬ ಸ್ನೇಹಿತರಾಗಿ ನಿಮ್ಮ ಕರ್ತವ್ಯ ಏನಿರಬೇಕು..? ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಸ್ನೇಹಿತನಿಗೆ ನಿಮ್ಮ ಬೆಂಬಲ ಹೇಗಿರಬೇಕು..?
ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಸ್ನೇಹಿತನಿಗೆ ನಿಮ್ಮ ಬೆಂಬಲ ಹೇಗಿರಬೇಕು..?

Mental Health: ದೈಹಿಕ ಆರೋಗ್ಯದ ಬಗ್ಗೆ ಗಮನಹರಿಸುವ ನಾವು ಮಾನಸಿಕ ಆರೋಗ್ಯದ ಬಗ್ಗೆ ಎಷ್ಟು ಲಕ್ಷ್ಯ ತೋರಲು ಹೋಗುವುದೇ ಇಲ್ಲ. ಮಾನಸಿಕ ಅಸ್ವಸ್ಥತೆ ಎನ್ನುವುದು ಅಷ್ಟು ಸುಲಭವಾಗಿ ನಮ್ಮ ಗಮನಕ್ಕೆ ಬರುವುದೂ ಇಲ್ಲ. ನಿಮ್ಮ ಸ್ನೇಹಿತರಲ್ಲೇ ಯಾರೋ ಮಾನಸಿಕವಾಗಿ ಕುಗ್ಗಿರಬಹುದು. ಮಾನಸಿಕವಾಗಿ ಅನಾರೋಗ್ಯವನ್ನು ಅನುಭವಿಸುತ್ತಿರಬಹುದು. ಇಂತಹ ಸಂದರ್ಭದಲ್ಲಿ ಒಬ್ಬ ಸ್ನೇಹಿತರಾಗಿ ನೀವು ಯಾವ ರೀತಿಯಲ್ಲಿ ಅವರನ್ನು ಬೆಂಬಲಿಸಬೇಕು ಎನ್ನುವುದಕ್ಕೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ಈ ಬಗ್ಗೆ ನೀವು ಅಧ್ಯಯನ ನಡೆಸಿ

ಮಾನಸಿಕ ಸಮಸ್ಯೆ ಹೊಂದಿರುವ ಸ್ನೇಹಿತನನ್ನು ಬೆಂಬಲಿಸುವ ಮುನ್ನ ನೀವು ಇದರ ಬಗ್ಗೆ ಸೂಕ್ತ ಅಧ್ಯಯನ ನಡೆಸುವುದು ಹಾಗೂ ಮಾಹಿತಿ ಕಲೆ ಹಾಕುವುದು ಮುಖ್ಯವಾಗಿರುತ್ತದೆ. ಮಾನಸಿಕವಾಗಿ ತೊಂದರೆಯಲ್ಲಿ ಇರುವವರ ಲಕ್ಷಣಗಳೇನು , ಅವರಿಗೆ ಯಾವೆಲ್ಲ ರೀತಿಯಲ್ಲಿ ಸಮಸ್ಯೆಗಳು ಕಾಡುತ್ತಿರುತ್ತವೆ ಹಾಗೂ ನಾವು ಯಾವ ರೀತಿಯಲ್ಲಿ ಅವರಿಗೆ ಸಹಾಯ ನೀಡಬಹುದು ಎಂಬುದನ್ನು ಮೊದಲು ನೀವು ತಿಳಿದುಕೊಳ್ಳಬೇಕು.

ಉತ್ತಮ ಕೇಳುಗರಾಗಿ ಬದಲಾಗಿ

ಕೆಲವೊಮ್ಮೆ ಮಾನಸಿಕವಾಗಿ ನೊಂದಿರುವ ವ್ಯಕ್ತಿಗೆ ತನ್ನನ್ನು ತನ್ನ ಮಾತುಗಳಿಂದ ಅಳೆಯದೇ ಕೇವಲ ತನ್ನ ಮಾತನ್ನು ಕೇಳಿಸಿಕೊಳ್ಳುವ ವ್ಯಕ್ತಿ ಬೇಕು ಎಂದು ಎನಿಸುತ್ತಿರುತ್ತದೆ. ಒಬ್ಬ ಸ್ನೇಹಿತನಾಗಿ ನೀವು ಅವರ ಮಾತುಗಳಿಗೆ ಕಿವಿಯಾಗಬೇಕು. ಅವರ ಮಾತುಗಳಿಂದ ಅವರನ್ನು ಅಳೆಯಲು ಹೋಗಬೇಡಿ. ನಿಮ್ಮ ಕೈಲಾದಷ್ಟು ಉತ್ತಮ ಸಲಹೆಗಳನ್ನು ನೀಡಿ. ಅವರಿಗೆ ಮಾತನಾಡಲು ಅವರ ಭಾವನೆಗಳನ್ನು ಹೊರ ಹಾಕಲು ಹೆಚ್ಚಿನ ಅವಕಾಶವನ್ನು ನೀಡಿ.

ಕರುಣೆ ಹಾಗೂ ಅರ್ಥ ಮಾಡಿಕೊಳ್ಳುವ ಗುಣ ನಿಮ್ಮಲ್ಲಿರಲಿ

ಮಾನಸಿಕ ಅನಾರೋಗ್ಯ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಯೊಂದಿಗೆ ವ್ಯವಹರಿಸುವ ಮುನ್ನ ನೀವು ಅವರ ಸ್ಥಾನದಲ್ಲಿ ನಿಂತು ಯೋಚಿಸುವುದನ್ನು ಮೊದಲು ರೂಢಿಸಿಕೊಳ್ಳಬೇಕು. ಅವರ ಮೇಲೆ ಕರುಣೆಯಿರಲಿ, ಕೋಪ ಬೇಡ, ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಪ್ರಾಯೋಗಿಕ ಬೆಂಬಲ ನೀಡಿ

ನಿಮ್ಮ ಸ್ನೇಹಿತರಿಗೆ ನೀವು ಪ್ರಾಯೋಗಿಕವಾಗಿ ಬೆಂಬಲ ನೀಡಬೇಕು ಎಂದರೆ ಅವರ ದೈನಂದಿನ ಕಾರ್ಯಗಳಲ್ಲಿ ನೆರವಾಗುವುದು, ಅವರ ಚಿಕಿತ್ಸೆಗೆ ಬೇಕಾದ ಅಗತ್ಯ ಸಹಾಯಗಳನ್ನು ನೀಡುವುದು ಆಗಿದೆ. ಅವರ ಕೆಲಸಗಳನ್ನು ಸುಲಭವಾಗಿಸಲು ನೀವು ನಿಮ್ಮ ಕೈಲಾದ ಸಹಾಯ ಮಾಡಬೇಕು.

ವೃತ್ತಿಪರ ಸಹಾಯ ನೀಡಿ

ಭಾವನಾತ್ಮಕವಾಗಿ ಮಾತ್ರ ನಿಮ್ಮ ಸ್ನೇಹಿತರಿಗೆ ಬೆಂಬಲ ನೀಡಿದರೆ ಸಾಲದು. ಈ ಸಮಸ್ಯೆಯಿಂದ ಪಾರಾಗಲು ಅವರಿಗೆ ಸೂಕ್ತವಾದ ಮನೋವೈದ್ಯರನ್ನು ಹುಡುಕಲು ನೀವು ಸಹಾಯ ಮಾಡಬೇಕು. ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವುದು ಕೂಡಾ ನಿಮ್ಮ ಕರ್ತವ್ಯವಾಗಿದೆ. ವೈದ್ಯರೊಂದಿಗೆ ಅಪಾಯಿಂಟ್​ಮೆಂಟ್​ ನೋಂದಣಿಯಾದ ಬಳಿಕ ನೀವೇ ಅವರನ್ನು ಕರೆದುಕೊಂಡು ಹೋಗಲೂಬಹುದು.