ನಾನೇ ಮೇಲು ಅನ್ನೋ ಭಾವ ನಿಮ್ಮಲ್ಲೂ ಇದ್ಯಾ; ಸುಪೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರ ಬರದಿದ್ರೆ ಅಪಾಯ ತಪ್ಪಿದ್ದಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ನಾನೇ ಮೇಲು ಅನ್ನೋ ಭಾವ ನಿಮ್ಮಲ್ಲೂ ಇದ್ಯಾ; ಸುಪೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರ ಬರದಿದ್ರೆ ಅಪಾಯ ತಪ್ಪಿದ್ದಲ್ಲ

ನಾನೇ ಮೇಲು ಅನ್ನೋ ಭಾವ ನಿಮ್ಮಲ್ಲೂ ಇದ್ಯಾ; ಸುಪೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರ ಬರದಿದ್ರೆ ಅಪಾಯ ತಪ್ಪಿದ್ದಲ್ಲ

Superiority Complex: ನಮ್ಮಲ್ಲಿ ಹಲವರಿಗೆ ನಾನೇ ಮೇಲೂ, ನಾನು ಎಲ್ಲರಿಗಿಂತ ಬೆಸ್ಟ್‌, ನಾನು ನಡೆದಿದ್ದೇ ದಾರಿ ಎಂಬಂತಹ ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಇರುವುದು ಸಹಜ. ಇದು ನಿಮ್ಮಲ್ಲು ಇರಬಹುದು. ಆದ್ರೆ ಈ ಗುಣವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಘಾತಕಾರಿ ಅಂಶವೊಂದು ಹೊರ ಬಿದ್ದಿದೆ.

ನಾನೇ ಮೇಲು ಅನ್ನೋ ಭಾವ ನಿಮ್ಮಲ್ಲೂ ಇದ್ಯಾ; ಸುಪೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರ ಬರದಿದ್ರೆ ಅಪಾಯ ತಪ್ಪಿದ್ದಲ್ಲ
ನಾನೇ ಮೇಲು ಅನ್ನೋ ಭಾವ ನಿಮ್ಮಲ್ಲೂ ಇದ್ಯಾ; ಸುಪೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರ ಬರದಿದ್ರೆ ಅಪಾಯ ತಪ್ಪಿದ್ದಲ್ಲ

ಮನುಷ್ಯ ಎಂದ ಮೇಲೆ ಒಬ್ಬೊಬ್ಬರಲ್ಲಿ ಒಂದೊಂದು ಗುಣ ಇರುವುದು ಸಹಜ. ಒಬ್ಬರಲ್ಲಿ ಇರುವ ಗುಣ ಇನ್ನೊಬ್ಬರಲ್ಲಿ ಇರಬೇಕು ಎಂದೇನಿಲ್ಲ. ನಮ್ಮಲ್ಲಿ ಹಲವರಿಗೆ ʼನಾನುʼ ಎನ್ನುವ ಭಾವ ಹೆಚ್ಚು. ನಾನೇ ಶ್ರೇಷ್ಠ, ನಾನು ಮಾಡುತ್ತಿರುವುದೆಲ್ಲಾ ಸರಿ ಎಂಬ ಭಾವ ಇರುವವರೇ ಹೆಚ್ಚು. ಇದನ್ನೇ ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಎನ್ನುತ್ತಾರೆ. ಈ ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಇಬ್ಬರಲ್ಲೂ ಇರುತ್ತದೆ. ಈ ಗುಣ ಇರುವವರಲ್ಲಿ ತನ್ನ ಸ್ನೇಹಿತರು, ಸಂಬಂಧಿಕರು, ಸಹಪಾಠಿಗಳು, ಸಹೋದ್ಯೋಗಿಗಳು ಎಲ್ಲರ ನಡುವೆ ತಾನೇ ಶ್ರೇಷ್ಠ ಎಂಬ ಭಾವ ಇರುವುದು ಸುಳ್ಳಲ್ಲ. ದುಡ್ಡು-ಕಾಸು, ಕೆಲಸ ಹೀಗೆ ಯಾವುದೇ ವಿಚಾರದಲ್ಲೂ ತನಗಿಂತ ಉತ್ತಮರಿಲ್ಲ ಎಂಬ ಭಾವ ಅವರನ್ನು ಆವರಿಸಬಹುದು.

1990ರ ದಶಕದಲ್ಲಿ ಆಸ್ಟ್ರಿಯನ್‌ ಮೂಲದ ಮನಶಾಸ್ತ್ರಜ್ಞ ಆಲ್ಪ್ರೆಡ್‌ ಆಡ್ಲರ್‌ ಈ ಪರಿಕಲ್ಪನೆಯ ಬಗ್ಗೆ ಜಗತ್ತಿಗೆ ವಿವರಿಸುತ್ತಾರೆ. ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಹೊಂದಿರುವ ವ್ಯಕ್ತಿಯು ಇತರರನ್ನು ಅವಮಾನ ಮಾಡುವ ರೀತಿ ನಡೆದುಕೊಳ್ಳುತ್ತಾನೆ. ಆದರೆ ಇದು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಖಂಡಿಂತ ಒಳ್ಳೆಯದಲ್ಲ. ಯಾಕೆಂದರೆ ಇದರಿಂದ ಆತಂಕದಂತಹ ಸಮಸ್ಯೆಗಳು ಕಾಡಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ಈ ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಬೆಳೆಯಲು ಕಾರಣವೇನು, ಇದನ್ನು ನಿವಾರಿಸುವ ಮಾರ್ಗಗಳೇನು? ಎಂಬುದನ್ನು ತಿಳಿಯಲು ಮುಂದೆ ನೋಡಿ.

ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಎಂದರೇನು?

ಸುಪೀಯಾರಿಟಿ ಕಾಂಪ್ಲೆಕ್ಸ್‌ ಎನ್ನುವುದು ಮಾನಸಿಕ ಸಮಸ್ಯೆಯಲ್ಲ. ಇದು ಕೆಲವರಿಗೆ ತಮ್ಮ ಬಗ್ಗೆ ಇರುವ ಕಲ್ಪನೆ. ಅವರು ಇತರರಿಗಿಂತ ತಾನು ಉತ್ತಮ ಹಾಗೂ ಹೆಚ್ಚು ಸಮರ್ಥರು ಎಂಬ ಭಾವನೆ ಇರಿಸಿಕೊಂಡಿರುತ್ತಾರೆ. ಇದರಿಂದ ಅವರು ತಮ್ಮ ಬಗ್ಗೆ ತಾವು ಹೆಮ್ಮೆಪಡುತ್ತಾರೆ. ತಮ್ಮಲ್ಲಿನ ಸಾಮರ್ಥ್ಯಗಳನ್ನು ಉತ್ಪ್ರೇಕ್ಷಿತ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಅಲ್ಲದೇ ಇವರು ಇತರರನ್ನು ಕೀಳು ಎಂಬ ಭಾವನೆಯಲ್ಲಿ ನೋಡುತ್ತಾರೆ. ಯಾವುದೇ ಸಾಧನೆ ಮಾಡಿದರೂ ಇದು ನನ್ನಿಂದ ಮಾತ್ರ ಸಾಧ್ಯ ಎಂಬ ಭಾವನೆ ಇವರಲ್ಲಿರುತ್ತದೆ.

ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಹೊಂದಿರುವ ವ್ಯಕ್ತಿಗಳ ಲಕ್ಷಣ

2013ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಸುಪೀರಿಯಾರಿಸಿ ಕಾಂಪ್ಲೆಕ್ಸ್‌ ಹೊಂದಿರುವುದು ಸಹಜ ಗುಣ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಈ ಗುಣ ಇರುವವರಲ್ಲಿ ಪಕ್ಷಪಾತದ ಮನೋಭಾವಿರುತ್ತದೆ. ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಹೊಂದಿರುವ ಹೆಚ್ಚಿನವರು ತಾವು ಮಾತ್ರ ಶ್ರೇಷ್ಠರು ಎಂದು ತಮಗೆ ತಾವೇ ಸರ್ಟಿಫಿಕೇಟ್‌ ಕೊಟ್ಟುಕೊಳ್ಳುತ್ತಾರೆ.

* ಇತರರನ್ನು ಕಡೆಗಣಿಸುವುದು

* ತಮ್ಮ ಆಲೋಚನೆಗಳಷ್ಟೇ ಸರಿ ಎನ್ನುವುದು, ಅದಕ್ಕೆ ವಿರೋಧ ಮಾಡಿದರೆ ಕೋಪಗೊಳ್ಳುವುದು

* ಇತರರನ್ನು ಕೀಳಾಗಿ ನೋಡುವುದು

* ತಮ್ಮ ವರ್ತನೆಯಿಂದ ಬೇರೆಯವರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ಊಹಿಸಿದೇ ವರ್ತಿಸುವುದು.

* ತಮ್ಮಲ್ಲಿರುವ ಸಾಮರ್ಥ್ಯಗಳ ಬಗ್ಗೆ ಉತ್ಪ್ರೇಕ್ಷೆ ಮಾಡುವುದು

* ಎಲ್ಲರನ್ನೂ ನಿಯಂತ್ರಣದಲ್ಲಿಡಲು ಬಯಸುವುದು ಹಾಗೂ ಡಾಮಿನೇಟಿಂಗ್‌ ಗುಣ.

ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಹೊಂದಲು ಕಾರಣವೇನು?

ಒಂದು ವ್ಯಕ್ತಿ ಮಗುವಾಗಿದ್ದಾನಿಂದ ಬೆಳೆದು ದೊಡ್ಡವನಾಗುವವರೆ ಅವನಲ್ಲಿ ಸುಪಿರಿಯಾರಿಟಿ ಕಾಂಪ್ಲೆಕ್ಸ್‌ ಬೆಳೆಯಲು ಕಾರಣಗಳು ಹಲವಿರಬಹುದು ಎನ್ನುತ್ತಾರೆ ತಜ್ಞರು.

* ನಿಂದನೆ ಹಾಗೂ ನಿರ್ಲಕ್ಷ್ಯದ ಭಾವವು ಮನದಲ್ಲಿ ಕೀಳರಿಮೆ ಮೂಡಲು ಕಾರಣವಾಗಬಹುದು. ಇದು ನಿಧಾನಕ್ಕೆ ಸುಪೀರಿಯಾರಿಟಿ ಭಾವ ಮೂಡಲು ಕಾರಣವಾಗಬಹುದು.

* ಅಣ್ಣ-ತಮ್ಮ, ಅಕ್ಕ-ತಂಗಿ ಅಥವಾ ಮನೆಯ ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದು

* ಕೀಳು ಭಾವನೆ ತಪ್ಪಿಸಲು ರಕ್ಷಣಾತ್ಮಕ ಮಾರ್ಗವಾಗಿ ವ್ಯಕ್ತಿಯು ತನ್ನಲ್ಲಿ ತಾನು ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಬೆಳೆಸಿಕೊಳ್ಳಬಹುದು.

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಅನ್ನು ಯಾವುದೇ ಮಾನಸಿಕ ಕಾಯಿಲೆಯಾಗಿ ಅಧಿಕೃತವಾಗಿ ಸೇರಿಸಿಲ್ಲ. ಆದರೆ ಇದು ಖಂಡಿತ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

* ಇದು ಸ್ವ ಮೌಲ್ಯದ ಕೊರತೆ ಉಂಟು ಮಾಡಬಹುದು. ನಿಮ್ಮ ಮೇಲೆ ನಿಮಗಿರುವ ಕೀಳರಿಮೆಯೇ ಇದಕ್ಕೆ ಕಾರಣವಾಗಬಹುದು.

* ನಿರಂತರವಾಗಿ ಶ್ರೇಷ್ಠತೆ ಕಾಪಾಡಿಕೊಳ್ಳುವ ಅಗತ್ಯವು ನಿಮ್ಮಲ್ಲಿ ಆತಂಕ ಉಂಟು ಮಾಡಲು ಕಾರಣವಾಗಬಹುದು.

* ಇತರರನ್ನು ತಿರಸ್ಕಾರ ಮಾಡುವ ನಿಮ್ಮ ಮನೋಭಾವದಿಂದ ಅವರು ನಿಮ್ಮಿಂದ ದೂರವಾಗಬಹುದು. ಇದು ನಿಮ್ಮ ಪಸರ್ನಲ್‌ ಡೊಮೈನ್‌ ಮೇಲೆ ಪರಿಣಾಮ ಬೀರಬಹುದು. ಇದರಿಂದ ವೈಯಕ್ತಿಕ ಹಾಗೂ ಔದ್ಯೋಗಿಕ ರಂಗದಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಕಷ್ಟವಾಗಬಹುದು.

ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಮನೋಭಾವದಿಂದ ಹೊರ ಬರುವುದು ಹೇಗೆ?

* ಸ್ವಯಂ ಜಾಗೃತಿ ಬಹಳ ಮುಖ್ಯ. ನಿರಂತರ ಹೆಗ್ಗಳಿಕೆಗೆ ಕಾರಣವಾಗುವ ಚಿಂತನೆಯ ಮಾದರಿಗಳನ್ನು ಗುರುತಿಸಿ.

* ಕೀಳರಿಮೆ, ಅಪೂರ್ಣ ಭಾವವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಬೆಳೆಯುತ್ತದೆ. ಈ ಜಗತ್ತಿನಲ್ಲಿ ಯಾವುದೂ, ಯಾರೂ ಪರಿಪೂರ್ಣ ಎಂಬುದನ್ನು ಒಪ್ಪಿಕೊಳ್ಳುವುದನ್ನು ಕಲಿತಾಗ ಸಂಘರ್ಷವನ್ನು ತಪ್ಪಿಸಬಹುದು.

* ಇತರ ವ್ಯಕ್ತಿಗಳ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ಇತರರೊಂದಿಗೆ ದೈನಂದಿಕ ಸಂವಹನಗಳಲ್ಲಿ ಸಹಾನುಭೂತಿಯನ್ನು ಅಭ್ಯಾಸ ಮಾಡಿ.

* ನೀವು ಹೇಳುವುದನ್ನೆಲ್ಲಾ ಇತರರು ಕೇಳಬೇಕು ಎಂದೇನಿಲ್ಲ ಎಂಬುದನ್ನು ತಿಳಿಯಿರಿ. ಬೇರೆಯವರ ಟೀಕೆಗಳನ್ನು ಸ್ವೀಕರಿಸುವ ಹಾಗೂ ಬೇರೆಯವರು ಆಡುವ ಮಾತನ್ನು ಕೇಳುವ ಮನೋಭಾವ ರೂಢಿಸಿಕೊಳ್ಳಿ. ಯಾಕೆಂದರೆ ಪ್ರತಿಯೊಬ್ಬರಲ್ಲೂ ಸ್ವಂತ ಅಭಿಪ್ರಾಯ ಎನ್ನುವುದು ಇರುತ್ತದೆ ಎಂಬುದನ್ನು ಮರೆಯಬೇಡಿ.

ಈ ಎಲ್ಲಾ ಅಂಶಗಳಿಂದ ನೀವು ನಿಮ್ಮಲ್ಲಿರುವ ಸುಪೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರ ಬರಬಹುದು. ಅಲ್ಲದೇ ನಿಮ್ಮಲ್ಲಿ ಸುಪೀರಿಯಾರಿಟಿ ಬೆಳೆಯಲು ಕಾರಣವಾದ ಅಂಶ ಏನು ಎಂಬುದನ್ನು ಹುಡುಕು ಪ್ರಯತ್ನಿಸಿ. ಕೀಳರಿಮೆ ಇದ್ದರೆ ಅದರಿಂದ ಹೊರ ಬನ್ನಿ. ಪ್ರಪಂಚದಲ್ಲಿ ಎನ್ನುವುದು ಒಂದೇ ಆದರೂ ಈ ಪ್ರಪಂಚದಲ್ಲಿರುವುದು ನೀವೊಬ್ಬರೇ ಅಲ್ಲ ನೆನಪಿರಲಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner