Mental Health: ಮನಸ್ಸಿಗೂ ಹೃದಯಕ್ಕೂ ಇದೆ ಕನೆಕ್ಷನ್‌; ಖಿನ್ನತೆ, ಒತ್ತಡ ಅತಿಯಾದರೆ ಹೃದಯಕ್ಕೆ ತಪ್ಪಿದ್ದಲ್ಲ ತೊಂದರೆ; ಇರಲಿ ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  Mental Health: ಮನಸ್ಸಿಗೂ ಹೃದಯಕ್ಕೂ ಇದೆ ಕನೆಕ್ಷನ್‌; ಖಿನ್ನತೆ, ಒತ್ತಡ ಅತಿಯಾದರೆ ಹೃದಯಕ್ಕೆ ತಪ್ಪಿದ್ದಲ್ಲ ತೊಂದರೆ; ಇರಲಿ ಎಚ್ಚರ

Mental Health: ಮನಸ್ಸಿಗೂ ಹೃದಯಕ್ಕೂ ಇದೆ ಕನೆಕ್ಷನ್‌; ಖಿನ್ನತೆ, ಒತ್ತಡ ಅತಿಯಾದರೆ ಹೃದಯಕ್ಕೆ ತಪ್ಪಿದ್ದಲ್ಲ ತೊಂದರೆ; ಇರಲಿ ಎಚ್ಚರ

ಮಾನಸಿಕ ಸಮಸ್ಯೆಗಳಿಂದ ಕೇವಲ ಮನಸ್ಸು ಮಾತ್ರವಲ್ಲ, ದೇಹವೂ ಕೆಡುತ್ತದೆ. ಖಿನ್ನತೆ, ಒತ್ತಡ, ಆತಂಕದಂತಹ ಮಾನಸಿಕ ಸ್ಥಿತಿಗಳು ಹೃದಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇವು ಅತಿಯಾದರೆ ಹೃದಯಾಘಾತದಂತಹ ಸಮಸ್ಯೆಗಳೂ ಕಾಡಬಹುದು. ಹಾಗಾದರೆ ಮಾನಸಿಕ ಆರೋಗ್ಯವನ್ನು ಸ್ಥೀಮಿತದಲ್ಲಿ ಇರಿಸಿಕೊಂಡು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ.

ಮನಸ್ಸಿಗೂ ಹೃದಯಕ್ಕೂ ಇದೆ ಕನೆಕ್ಷನ್‌; ಖಿನ್ನತೆ, ಒತ್ತಡ ಅತಿಯಾದರೆ ಹೃದಯಕ್ಕೆ ತಪ್ಪಿದ್ದಲ್ಲ ತೊಂದರೆ
ಮನಸ್ಸಿಗೂ ಹೃದಯಕ್ಕೂ ಇದೆ ಕನೆಕ್ಷನ್‌; ಖಿನ್ನತೆ, ಒತ್ತಡ ಅತಿಯಾದರೆ ಹೃದಯಕ್ಕೆ ತಪ್ಪಿದ್ದಲ್ಲ ತೊಂದರೆ

ಹೃದಯವು ಸ್ವತಂತ್ರವಾಗಿ ಕೆಲಸ ಮಾಡುವುದಿಲ್ಲ, ಇದು ನಮ್ಮ ಮೆದುಳು, ಮನಸ್ಸು ಮತ್ತು ದೇಹದ ಉಳಿದ ಭಾಗಗಳೊಂದಿಗೆ ಪ್ರಮುಖ ಸಂಪರ್ಕವನ್ನು ಕಾಪಾಡಿಕೊಳ್ಳುತ್ತದೆ. ಹೃದಯದ ಆರೋಗ್ಯ ಮತ್ತು ದೇಹದ ಒಟ್ಟಾರೆ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಸಂಪರ್ಕಗಳು ಅತ್ಯಗತ್ಯ.

ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಇತರ ಯಾವುದೇ ದೀರ್ಘಕಾಲ ಕಾಡುವ ಕಾಯಿಲೆಗಳು ನಮ್ಮ ಹೃದಯದ ಕಾರ್ಯನಿರ್ವಹಣೆಯ ಮೇಲೆ ಮತ್ತು ಹೃದಯರಕ್ತನಾಳದ ಒಟ್ಟಾರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂಬುದು ಹಲವರಿಗೆ ತಿಳಿದಿರುವ ವಿಚಾರ. ಹೃದಯದ ಆರೋಗ್ಯದ ಮೇಲೆ ಮಾನಸಿಕ ಸ್ಥಿತಿಗಳು ಬೀರುವ ಪ್ರಭಾವದ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇಲ್ಲ.

ಮಾನಸಿಕ ಸ್ಥಿತಿ ಹದಗೆಟ್ಟರೆ ಹೃದಯಕ್ಕಾಗುವ ಅಪಾಯಗಳಿವು

ಶಾರೀರಿಕ ಅಂಶಗಳಂತೆ, ಮಾನಸಿಕ ಆರೋಗ್ಯ ಅಥವಾ ಮನಸ್ಸಿನ ಸ್ಥಿತಿಯಂತಹ ಮಾನಸಿಕ ಅಂಶಗಳು ಹೃದಯದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರಬಹುದು.

ಖಿನ್ನತೆಗೊಳಗಾಗಿರುವ ಮಾನಸಿಕ ಸ್ಥಿತಿ ಮತ್ತು ನಕಾರಾತ್ಮಕ ಮಾನಸಿಕ ಸ್ಥಿತಿ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಹೃದಯಾಘಾತ ಅಥವಾ ಹೃದಯರಕ್ತನಾಳದ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಖಿನ್ನತೆಯ ಅಂಶಗಳು ನಮ್ಮ ಒಟ್ಟಾರೆ ಅರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಹೃದಯದ ಆರೋಗ್ಯದ ಮೇಲೆ ಗಮನಾರ್ಹವಾದ ಋಣಾತ್ಮಕ ಪರಿಣಾಮವನ್ನೂ ಬೀರುತ್ತವೆ. ಹೃದಯದ ಮೇಲೆ ಪರಿಣಾಮ ಬೀರುವ ನಕಾರಾತ್ಮಕ ಮಾನಸಿಕ ಅಂಶ ಅಥವಾ ಮನಸ್ಸಿನ ಸ್ಥಿತಿಯ ಗಮನಾರ್ಹ ಉದಾಹರಣೆಯೆಂದರೆ 'ಸ್ಟ್ರೆಸ್-ಇಂಡ್ಯೂಸ್ಡ್ ಕಾರ್ಡಿಯೊಮಿಯೊಪತಿ'.

ಸ್ಟ್ರೆಸ್-ಇಂಡ್ಯೂಸ್ಡ್ ಕಾರ್ಡಿಯೊಮಿಯೊಪತಿ

ಸ್ಟ್ರೆಸ್-ಇಂಡ್ಯೂಸ್ಡ್ ಕಾರ್ಡಿಯೊಮಿಯೊಪತಿಯು ತೀವ್ರವಾದ ಮಾನಸಿಕ ಯಾತನೆ ಅಥವಾ ಭಾವನೆಗಳಿಂದ ಸಂಭವಿಸುತ್ತದೆ. ಇದರಿಂದ ಹೃದಯದ ಕೆಲವು ಕಾರ್ಯನಿರ್ವಹಣೆಗಳು ಕ್ಷೀಣಿಸುತ್ತವೆ ಮತ್ತು ಇದರಿಂದ ತೀವ್ರ ಹೃದಯಾಘಾತದಂತಹ ತೊಂದರೆಗಳು ಎದುರಾಗಬಹುದು. ಖಿನ್ನತೆಯ ರೋಗಲಕ್ಷಣಗಳ ಮಟ್ಟವು ಹೃದಯದ ಆರೋಗ್ಯ ಮತ್ತು ಸಾವಿಗೆ ನೇರವಾಗಿ ಸಂಬಂಧ ಹೊಂದಿದೆ ಎಂದು ಅಧ್ಯಯನಗಳು ತೋರಿಸಿವೆ. ಆತಂಕವು ಒಟ್ಟಾರೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವುದು ಮತ್ತು ಧನಾತ್ಮಕ ಮಾನಸಿಕ ಆರೋಗ್ಯದ ಉತ್ತೇಜನೆಯಿಂದ ನಮ್ಮ ಹೃದಯರಕ್ತನಾಳದ ಆರೋಗ್ಯ ಮತ್ತು ರೋಗದ ಸಾಧ್ಯತೆಗಳನ್ನು ಗಮನಾರ್ಹವಾಗಿ ಸುಧಾರಿಸಲು ಸಾಧ್ಯವಾಗುತ್ತದೆ.

ಡಾ. ರಾಕಿ ಕಥೇರಿಯಾ (ಬಲಚಿತ್ರ)
ಡಾ. ರಾಕಿ ಕಥೇರಿಯಾ (ಬಲಚಿತ್ರ)

ಮಾನಸಿಕ ಆರೋಗ್ಯ ಸುಧಾರಿಸಲು ಸಲಹೆ

ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ನೆರವಾಗುವ ಹಲವಾರು ಪರಿಹಾರಗಳಿವೆ. ಅವುಗಳಲ್ಲಿ ಧ್ಯಾನ, ಒತ್ತಡ ನಿರ್ವಹಣೆ ತರಬೇತಿ, ಅರಿವಿನ ವರ್ತನೆಯ ತರಬೇತಿ ಹಾಗೂ ಯೋಗ ಮುಂತಾದವು ಸೇರಿವೆ. ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಈ ಅಭ್ಯಾಸಗಳು ಪರಿಣಾಮಕಾರಿಯಾಗಿವೆ. ಈ ಕ್ರಮಗಳೊಂದಿಗೆ ಇತರ ದೈಹಿಕ ಚಟುವಟಿಕೆಗೂ ಒತ್ತು ನೀಡಬೇಕು. ಇದಲ್ಲದೆ, ಆಹಾರ ಪದ್ಧತಿಯನ್ನು ಸುಧಾರಿಸುವ ಮೂಲಕ, ಮಾದಕ ದ್ರವ್ಯ ಸೇವನೆಗೆ ಕಡಿವಾಣ ಹಾಕುವ ಮೂಲಕ ನಮ್ಮ ದೈನಂದಿನ ದಿನಚರಿಯನ್ನು ಸುಧಾರಿಸಿಕೊಳ್ಳಬೇಕು. ಆ ಮೂಲಕ ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಣೆಯತ್ತ ಗಮನ ನೀಡಬೇಕು. ಇದಲ್ಲದೆ, ಈ ಒತ್ತಡ ನಿರ್ವಹಣಾ ಚಟುವಟಿಕೆಗಳು ಆಶಾವಾದದ ಭಾವನೆಯನ್ನು ಹುಟ್ಟುಹಾಕುತ್ತವೆ. ಇವುಗಳು ಸಂತೋಷ ಮತ್ತು ಧನಾತ್ಮಕತೆಯನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಹೃದಯದ ಆರೋಗ್ಯ, ಒಟ್ಟಾರೆ ಯೋಗಕ್ಷೇಮ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ.

ಬರಹ: ಡಾ. ರಾಕಿ ಕಥೇರಿಯಾ, ಕನ್ಸಲ್ಟೆಂಟ್ - ಇಂಟರ್ವೆನ್ಷನಲ್ ಕಾರ್ಡಿಯಾಲಜಿ, ವರ್ತೂರು ರಸ್ತೆ, ಬೆಂಗಳೂರು

Whats_app_banner