Weight Loss Tips: ರಾಗಿ, ಜೋಳ, ಗೋಧಿ - ತೂಕ ಇಳಿಕೆಗೆ ಯಾವುದು ಬೆಸ್ಟ್, ಈ ಹಿಟ್ಟಿನ ರೊಟ್ಟಿ ತಿಂದ್ರೆ ನೀವು ಬೇಗ ಸಣ್ಣ ಆಗ್ತೀರ
Weight Loss Tips: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಸಾಮಾನ್ಯವಾಗಿ ಯಾವಾಗಲೂ ರೊಟ್ಟಿ ತಿನ್ನುತ್ತಾರೆ. ಕೆಲವರು ರಾತ್ರಿ ಹೊತ್ತು ಮಾತ್ರ ತಿಂದರೆ, ಇನ್ನು ಕೆಲವರು ಸಾಮಾನ್ಯವಾಗಿ ಎರಡು ಹೊತ್ತು ರೊಟ್ಟಿ ತಿನ್ನುತ್ತಾರೆ. ಹಾಗಾದರೆ ಯಾವ ಧಾನ್ಯದ ಹಿಟ್ಟಿನಿಂದ ಮಾಡಿದ ರೊಟ್ಟಿ ಉತ್ತಮ ಎಂದು ತಿಳಿದುಕೊಳ್ಳಿ.
ರೊಟ್ಟಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಸಸ್ಯಹಾರಿಗಳು ಮಾಂಸಾಹಾರಿಗಳು ಎರಡು ಇದನ್ನು ಇಷ್ಟಪಡುತ್ತಾರೆ. ರೊಟ್ಟಿಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ಶಕ್ತಿಯ ಸಂಪನ್ಮೂಲಗಳು ಹೆಚ್ಚಾಗಿ ಇರುತ್ತವೆ. ತರಕಾರಿ ಪಲ್ಯಗಳು, ದಾಲ್ ಹಾಗೆ ಮೊಸರು, ಚಟ್ನಿ ಪುಡಿ ಈ ರೀತಿ ಸೈಡ್ ಡಿಶ್ನೊಂದಿಗೆ ಇದನ್ನು ತಿನ್ನುತ್ತಾರೆ. ಹೆಚ್ಚಿನ ಜನರು ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ರೊಟ್ಟಿಯನ್ನು ತಿನ್ನುತ್ತಾರೆ. ಆದರೆ ಯಾವ ಧಾನ್ಯದಿಂದ ಮಾಡಿದ ರೊಟ್ಟಿಯನ್ನು ತಿಂದರೆ ಬಹುಬೇಗ ತೂಕ ಇಳಿಸಿಕೊಳ್ಳಬಹುದೆಂಬುದನ್ನ ನಾವಿಲ್ಲಿ ನೀಡಿದ್ದೇವೆ.
ಗೋಧಿ
ಹೆಚ್ಚಾಗಿ ರೊಟ್ಟಿಯನ್ನು ಗೋಧಿ ಹಿಟ್ಟಿನಿಂದ ಮಾಡಿಕೊಂಡು ತಿನ್ನುತ್ತಾರೆ. ಇದರಿಂದಾಗಿ ಜೋಳ ಮತ್ತು ಓಟ್ಸ್ ನಂತಹ ಹಲವಾರು ಇತರ ಉತ್ಪನ್ನಗಳನ್ನು ಮರೆಯುತ್ತಾರೆ. ರೊಟ್ಟಿ ಮಾಡಲು ಗೋಧಿ ಒಂದನ್ನೇ ಉಪಯೋಗಿಸುವರು ಹಲವರಿದ್ದಾರೆ. ಉಳಿದ ಧಾನ್ಯಗಳಲ್ಲೂ ಸಹ ತುಂಬಾ ಉತ್ತಮ ಅಂಶಗಳಿವೆ. ಹಾಗಂತ ಗೋಧಿ ನಿರುಪಯುಕ್ತವಲ್ಲ ಇದೂ ಸಹ ಉತ್ತಮ ಆಹಾರವೇ ಆಗಿದೆ.
ರಾಗಿ
ರಾಗಿಯನ್ನು ಬಳಸಿದರೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಹಸಿವನ್ನು ನಿಯಂತ್ರಿಸಲು ರಾಗಿ ತುಂಬಾ ಉಪಯುಕ್ತವಾಗಿದೆ. ಹೆಚ್ಚು ಬಾರಿ ನಿಮಗೆ ಏನಾದರೂ ತಿನ್ನಬೇಕು ಅನಿಸದಿದ್ದರೆ ಆಗ ನಿಮ್ಮ ತೂಕ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡ ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ರಾಗಿ ಪಾತ್ರ ಪ್ರಮುಖವಾಗಿದೆ. ರಾಗಿ ರೊಟ್ಟಿಯನ್ನು ನೀವು ಕೇವಲ ಮೊಸರಿನೊಂದಿಗೆ ಬೇಕಾದರೂ ತಿನ್ನಬಹುದು. ಥೈರೊಯ್ಡ್ ಸಮಸ್ಯೆ ಇದ್ದವರಿಗೆ ರಾಗಿ ಉತ್ತಮ ಆಹಾರ ಮೂಲವಾಗಿದೆ. ಇದರಲ್ಲಿ ಕೂಡ ಫೈಬರ್ ಅಧಿಕವಾಗಿರುತ್ತದೆ.
ಇನ್ನು ರಾಗಿಯಿಂದ ನೀವು ಮಾಲ್ಟ್ ಕೂಡ ಮಾಡಿ ತಿನ್ನಬಹುದು. ಅಥವಾ ರಾಗಿ ಸೂಪ್ ಎಂದು ಕರೆಯುವ ಒಂದು ಸಂಪೂರ್ಣ ಹೊಟ್ಟೆತುಂಬುವ ಬೌಲ್ ಕುಡಿಯಬಹುದು.
ಓಟ್ಸ್
ಹೃದಯ ರೋಗ ಇದ್ದವರು ಇದನ್ನು ತಿನ್ನುವುದು ಉತ್ತಮ. ಇದರಿಂದಲೂ ನೀವು ತೂಕ ಇಳಿಕೆ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ಎಲ್ಲಾ ರೀತಿಯ ಧಾನ್ಯಗಳನ್ನೂ ಬಳಸಿ ನೀವು ನಿಮ್ಮ ಊಟ ಮಾಡಿ. ಆಗ ನಿಮಗೆ ಎಲ್ಲ ರೀತಿಯ ಪೋಷಕಾಂಶಗಳೂ ಸಿಗುತ್ತದೆ. ಇಲ್ಲವಾದಲ್ಲಿ ಯಾವುದೇ ಒಂದು ಅಂಶ ಮಾತ್ರ ನಿತ್ಯ ನಿಮ್ಮ ದೇಹಕ್ಕೆ ಸಿಗುತ್ತದೆ. ಉಳಿದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.
ಯಾವುದು ಬೆಸ್ಟ್?
ಎಲ್ಲ ಧಾನ್ಯಗಳನ್ನು ಬಳಸಿ ಮಾಡುವುದುಬೆಸ್ಟ್. ಯಾಕೆಂದರೆ ಯಾವಾಗಲೂ ಒಂದೇ ರೀತಿಯ ಧಾನ್ಯವನ್ನು ಬಳಕೆ ಮಾಡುವುದು ನಿಮಗೆ ಅಷ್ಟು ಸೂಕ್ತವಲ್ಲ. ಬೇರೆ ಬೇರೆ ಧಾನ್ಯ ಬಳಸಿ. ಒಂದೊಂದು ದಿನ ಒಂದೊಂದು ರೀತಿಯ ಹಿಟ್ಟನ್ನು ಬಳಸಿ. ಅಥವಾ ಒಂದೊಂದು ವಾರ ಒಂದೊಂದು ರೀತಿಯ ಹಿಟ್ಟನ್ನು ಬಳಸಿ ರೊಟ್ಟಿ ಮಾಡಿ ತಿನ್ನಿ. ಗೋಧಿ ರೊಟ್ಟಿಯೊಂದನ್ನೇ ತಿನ್ನುವುದು ಬಿಡಿ.
ವಿಭಾಗ