ಗರ್ಭಪಾತ ರಜೆ ಕರ್ನಾಟಕ: ಸರಕಾರಿ-ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ರಜೆ ನಿಯಮಗಳು, ಅಕಾಲ ಪ್ರಸವವಾದ್ರೆ ಪತಿಗೆ ಪಿತೃತ್ವ ರಜೆ ದೊರಕುತ್ತಾ?
ಕನ್ನಡ ಸುದ್ದಿ  /  ಜೀವನಶೈಲಿ  /  ಗರ್ಭಪಾತ ರಜೆ ಕರ್ನಾಟಕ: ಸರಕಾರಿ-ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ರಜೆ ನಿಯಮಗಳು, ಅಕಾಲ ಪ್ರಸವವಾದ್ರೆ ಪತಿಗೆ ಪಿತೃತ್ವ ರಜೆ ದೊರಕುತ್ತಾ?

ಗರ್ಭಪಾತ ರಜೆ ಕರ್ನಾಟಕ: ಸರಕಾರಿ-ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ರಜೆ ನಿಯಮಗಳು, ಅಕಾಲ ಪ್ರಸವವಾದ್ರೆ ಪತಿಗೆ ಪಿತೃತ್ವ ರಜೆ ದೊರಕುತ್ತಾ?

ಗರ್ಭಪಾತ ರಜೆ ಕರ್ನಾಟಕ: ಸರಕಾರಿ ಮತ್ತು ಕಾಸಗಿ ಉದ್ಯೋಗಿಗಳಿಗೆ ಮಾತೃತ್ವ, ಪಿತೃತ್ವ ಸೇರಿದಂತೆ ವಿವಿಧ ರಜೆಗಳು ದೊರಕುತ್ತವೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಮಿಸ್‌ಕ್ಯಾರೇಜ್‌ ರಜೆ (Miscarriage leave rules) ಕುರಿತು ಸಾಕಷ್ಟು ಗೊಂದಲ ಇರಬಹುದು. ಮೆಟರ್ನಿಟಿ ರಜೆಯಡಿ ಸೂಕ್ತ ವೈದ್ಯಕೀಯ ದಾಖಲೆಗಳನ್ನು ನೀಡಿ ಗರ್ಭಪಾತ ರಜೆ ಪಡೆಯಲು ಅವಕಾಶವಿರುತ್ತದೆ.

ಗರ್ಭಪಾತ ರಜೆ ಕರ್ನಾಟಕ: ಸರಕಾರಿ-ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ರಜೆ ನಿಯಮಗಳು (ಸಾಂದರ್ಭಿಕ ಚಿತ್ರ)
ಗರ್ಭಪಾತ ರಜೆ ಕರ್ನಾಟಕ: ಸರಕಾರಿ-ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ರಜೆ ನಿಯಮಗಳು (ಸಾಂದರ್ಭಿಕ ಚಿತ್ರ)

ಗರ್ಭಪಾತ ರಜೆ ಕರ್ನಾಟಕ: ಕರ್ನಾಟಕ ಸರಕಾರವು ಸರಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಕಾರ್ಮಿಕ ಇಲಾಖೆಯ ಕಾನೂನು ನಿಯಮಗಳಡಿಯಲ್ಲಿ ಮಾತೃತ್ವ, ಪಿತೃತ್ವ ರಜೆಗಳನ್ನು ನೀಡುತ್ತದೆ. ಮೆಟರ್ನಿಟಿ, ಪೆಟರ್ನಿಟಿ ರಜೆಗಳ ಜತೆಗೆ ಸಾಕಷ್ಟು ಜನರು ಗರ್ಭಪಾತ ರಜೆ ಕುರಿತೂ ಪ್ರಶ್ನೆಗಳನ್ನು ಹೊಂದಿರುತ್ತಾರೆ. ಮಾತೃತ್ವ ರಜೆಯು ಮಗು ಜನಿಸಿದರೆ ಮಾತ್ರ ದೊರಕುವುದೇ, ದುರಾದೃಷ್ಟವಶಾತ್‌ ಮಗು ಜನಿಸುವ ಮೊದಲೇ ಮಿಸ್‌ಕ್ಯಾರೇಜ್‌ ಆದ್ರೆ ಗರ್ಭಪಾತ ರಜೆ ದೊರಕುವುದೇ? ಹೆಂಡತಿಗೆ ಗರ್ಭಪಾತವಾದರೆ ಪತಿಗೆ ಪಿತೃತ್ವ ರಜೆ ದೊರಕುವುದೇ? ಗರ್ಭಪಾತ ರಜೆ ಕುರಿತು ಸರಕಾರಿ ಉದ್ಯೋಗಿಗಳಲ್ಲಿ ಸಾಕಷ್ಟು ಪ್ರಶ್ನೆಗಳು ಇರಬಹುದು. ಕರ್ನಾಟಕದಲ್ಲಿ ಗರ್ಭಪಾತ ರಜೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಗರ್ಭಪಾತ ಎಂದರೇನು?

ಮಗು ಜನಿಸುವ ಮೊದಲೇ ಭ್ರೂಣ ನಷ್ಟವಾಗುವುದನ್ನು ಗರ್ಭಪಾತ ಎನ್ನಬಹುದು. ಗರ್ಭಧರಿಸಿದ ಆರು ವಾರಗಳ ಒಳಗೆ ಆದ ಗರ್ಭಪಾತವನ್ನು ಬಯೋಕೆಮಿಕಲ್‌ ಲಾಸ್‌ ಎಂದು ಕರೆಯುತ್ತಾರೆ. 12-24 ವಾರಗಳ ನಡುವಿನ ಅವಧಿಯನ್ನು ಕ್ಲಿನಿಕಲ್‌ ಮಿಸ್‌ಕ್ಯಾರೇಜ್‌ ಅಥವಾ ವೈದ್ಯಕೀಯ ಗರ್ಭಪಾತ ಎಂದು ಕರೆಯಲಾಗುತ್ತದೆ. ಅಂದರೆ, ಅಲ್ಟ್ರಾಸೌಂಡ್‌ ಅಥವಾ ಇತರೆ ವಿಧಾನಗಳಿಂದ ಹೊಟ್ಟೆಯೊಳಗೆ ಪ್ರೆಗ್ನೆನ್ಸಿ ಕಳೆದುಕೊಳ್ಳಲಾಗಿದೆ ಎಂದು ತಿಳಿದುಬಂದರೆ ಅದನ್ನು ವೈದ್ಯಕೀಯ ಗರ್ಭಪಾತ ಎಂದು ಘೋಷಿಸಲಾಗುತ್ತದೆ.

ಗರ್ಭಪಾತಗೊಂಡ ಮಹಿಳೆಗೆ ರಜೆ ಏಕೆ ಬೇಕು?

ಗರ್ಭಪಾತಗೊಂಡ ಮಹಿಳೆಗೆ ರಜೆ, ವಿಶ್ರಾಂತಿ ಅಗತ್ಯವಾಗಿದೆ. ಇದೇ ಕಾರಣಕ್ಕೆ ಕಾನೂನು ಇಲಾಖೆಯು ಸರಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಗರ್ಭಪಾತ ರಜೆಯನ್ನು ಮಾತೃತ್ವ ರಜೆಯಡಿ ಪಡೆಯಲು ಅವಕಾಶ ನೀಡುತ್ತದೆ. ಪ್ರೆಗ್ನೆನ್ಸಿ ಕಳೆದುಕೊಂಡ ಸಮಯದಲ್ಲಿ ಮಹಿಳೆಯು ದೈಹಿಕವಾಗಿ, ಭಾವನಾತ್ಮಕವಾಗಿ ನೋವು ಅನುಭವಿಸಿರುತ್ತಾರೆ. ಇದರಿಂದ ರಿಕವರಿ ಆಗುವ ಸಲುವಾಗಿ ರಜೆ ಪಡೆಯಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುವ ಸಲುವಾಗಿ ಈ ಸಮಯದಲ್ಲಿ ರಜೆ ಪಡೆಯಬೇಕು.

  • ಗರ್ಭಪಾತದಿಂದ ಗಮನಾರ್ಹ ಭಾವನಾತ್ಮಕ ಒತ್ತಡವಾಗುತ್ತದೆ. ಒತ್ತಡ, ಖಿನ್ನತೆ, ಚಿಂತೆ ಇತ್ಯಾದಿ ಕಾರಣಗಳು ಮಹಿಳೆಯ ಚೇತರಿಕೆಗೆ ಅಡ್ಡಿಯಾಗುತ್ತದೆ.
  • ಗರ್ಭಪಾತದ ಬಳಿಕ ದೈಹಿಕವಾಗಿಯೂ ಸಾಕಷ್ಟು ತೊಂದರೆಯಾಗುತ್ತದೆ. ಇದಕ್ಕಾಗಿ ವೈದ್ಯರ ನೆರವು, ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುವ ಅಗತ್ಯ ಇರುತ್ತದೆ.
  • ಗರ್ಭಪಾತದ ಸಾಮಾಜಿಕ ಪರಿಣಾಮವೂ ಇರುತ್ತದೆ. ಮಗುವಿನ ನಿರೀಕ್ಷೆಯಲ್ಲಿರುವ ಕುಟುಂಬದ ಪ್ರತಿಕ್ರಿಯೆ, ನೋವು ಕೂಡ ಇರುತ್ತದೆ. ಇದೇ ಕಾರಣಕ್ಕೆ ಮಹಿಳೆ ಸಾಕಷ್ಟು ಚಿಂತೆ, ನೋವು ಅನುಭವಿಸುತ್ತಾರೆ. ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯು ಗರ್ಭಪಾತದ ಸಂದರ್ಭದಲ್ಲಿ ವೈಯಕ್ತಿಕವಾಗಿ ಸಾಕಷ್ಟು ನೋವು ಅನುಭವಿಸುತ್ತಾಳೆ. ತನ್ನ ಮಗುವನ್ನು ಕಳೆದುಕೊಂಡಂತಹ ನೋವಿನಲ್ಲಿ ಸಾಕಷ್ಟು ವ್ಯಥೆ ಅನುಭವಿಸುತ್ತಾಳೆ. ಇದೇ ಕಾರಣದಲ್ಲಿ ಉದ್ಯೋಗ ಸ್ಥಳದಲ್ಲಿ ಗರ್ಭಪಾತ ರಜೆ ನೀಡಬೇಕೆಂದು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕದ ಸರಕಾರಿ ಉದ್ಯೋಗಿಗಳಿಗೆ ಎಷ್ಟು ರಜೆ ದೊರಕುತ್ತದೆ? ಮಾತೃತ್ವ, ಪಿತೃತ್ವ, ಮಕ್ಕಳ ಕಾಳಜಿ, ಸಂಬಳಸಹಿತ, ಸಂಬಳರಹಿತ ರಜೆಗಳ ವಿವರ

ಸರಕಾರಿ ಉದ್ಯೋಗಿಗಳಿಗೆ ಗರ್ಭಪಾತ ರಜೆ

ಕರ್ನಾಟಕದಲ್ಲಿ ಸರಕಾರಿ ಉದ್ಯೋಗಿಗಳಿಗೆ ಮಾತೃತ್ವ ಮತ್ತು ಪಿತೃತ್ವ ರಜೆ ದೊರಕುತ್ತದೆ. 180 ದಿನಗಳ ಕಾಲ ಮಾತೃತ್ವ ರಜೆ ದೊರಕುತ್ತದೆ. ಮಗು ಜನಿಸಿದ ಆರು ತಿಂಗಳೊಳಗೆ 15 ದಿನಗಳ ಕಾಲ ಪಿತೃತ್ವ ರಜೆ ಪಡೆಯಲು ಅವಕಾಶವಿದೆ. ಇಬ್ಬರು ಮಕ್ಕಳಿಗೆ ಮಾತ್ರ ಅವಕಾಶವಿದೆ. ಇದೇ ರೀತಿ ಗರ್ಭಪಾತವಾದರೆ ಮಾತೃತ್ವ ರಜೆಯನ್ನು ಪಡೆಯಲು ಮಹಿಳಾ ಉದ್ಯೋಗಿಗೆ ಅವಕಾಶವಿದೆ. ಮಾತೃತ್ವ ರಜೆಯಡಿ 6 ವಾರಕ್ಕಿಂತ ಹೆಚ್ಚಿಲ್ಲದಂತೆ ಗರ್ಭಪಾತ ರಜೆ ಪಡೆಯಲು ಕರ್ನಾಟಕದಲ್ಲಿ ಅವಕಾಶವಿದೆ. ಈ ರಜೆ ಪಡೆಯಲು ಸೂಕ್ತ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.

ಖಾಸಗಿ ಉದ್ಯೋಗಿಗಳಿಗೆ ಗರ್ಭಪಾತ ರಜೆ

ಕರ್ನಾಟಕದ ಮಾತೃತ್ವ ಪ್ರಯೋಜನ ನಿಯಮಗಳಡಿ (The Karnataka Maternity Benefit Rules,1966) ಸರಕಾರಿ ಉದ್ಯೋಗಿಗಳಿಗೆ ಮಾತ್ರವಲ್ಲದೆ ಖಾಸಗಿ ಉದ್ಯೋಗಿಗಳಿಗೂ ಗರ್ಭಪಾತ ರಜೆ ಪಡೆಯಲು ಅವಕಾಶವಿದೆ. ಮಹಿಳೆ ಮಗುವಿಗೆ ಜನ್ಮ ನೀಡಿದ ತಕ್ಷಣ ಅಥವಾ ಗರ್ಭಪಾತವಾದ ತಕ್ಷಣ 6 ವಾರಗಳ ರಜೆ ನೀಡಬೇಕು. ಆರು ವಾರಗಳ ಪ್ರಸವಪೂರ್ವ ಮತ್ತು ಆರು ವಾರಗಳ ಪ್ರಸವ ನಂತರದ ರಜೆ ಪಡೆಯಲು ಅವಕಾಶವಿದೆ. ಗರ್ಭಪಾತವಾದರೆ ಗರ್ಭಪಾತಗೊಂಡ ನಂತರ ಆರು ವಾರ ವೇತನ ಸಹಿತ ರಜೆ ಪಡೆಯಲು ಅವಕಾಶವಿದೆ.

ಗರ್ಭಪಾತವಾದರೆ ಪಿತೃತ್ವ ರಜೆ ದೊರಕುತ್ತದೆಯೇ?

ಇಲ್ಲ, ಮಹಿಳಾ ಉದ್ಯೋಗಿಗೆ ಗರ್ಭಪಾತವಾದರೆ ಆಕೆಯ ಪತಿಗೆ ಪಿತೃತ್ವ ರಜೆ ಪಡೆಯಲು ಅವಕಾಶವಿಲ್ಲ. ಮಗು ಜನಿಸಿದರೆ ಆರು ತಿಂಗಳೊಳಗೆ 15 ದಿನಗಳ ಕಾಲ ಪಿತೃತ್ವ ರಜೆ ಪಡೆಯಲು ಅವಕಾಶವಿದೆ.

Whats_app_banner