Airtel Recharge Plan: ಡೇಟಾ ಬಳಸದ ಪ್ರೀಪೇಯ್ಡ್ ಗ್ರಾಹಕರಿಗೆ ಏರ್‌ಟೆಲ್ ನೀಡಲಿದೆ ಪರಿಷ್ಕೃತ ರೀಚಾರ್ಜ್ ಆಫರ್, ಹೀಗಿದೆ ಪ್ಲಾನ್ ವಿವರ
ಏರ್‌ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಪರಿಷ್ಕೃತ ರೀಚಾರ್ಜ್ ಪ್ಲಾನ್ ಒಂದನ್ನು ಘೋಷಿಸಲಿದೆ. ಇದು ಇಂಟರ್‌ನೆಟ್ ಬಳಕೆ ಮಾಡದವರಿಗೆ ಬೆಸ್ಟ್ ಆಫರ್ ಎನ್ನಬಹುದು. ಕಳೆದ ತಿಂಗಳ ಟ್ರಾಯ್ ಹೊಸ ನಿಯಮದನ್ವಯ ಈ ಆಫರ್ ಪರಿಚಯಿಸಲು ನಿರ್ಧರಿಸಿದೆ ಏರ್‌ಟೆಲ್. ಈ ಹೊಸ ಆಫರ್ ವಾಯ್ಸ್ ಹಾಗೂ ಎಸ್‌ಎಂಎಸ್ ಪ್ಲಾನ್‌ಗಳನ್ನು ಹೊಂದಿರುತ್ತದೆ.

ಭಾರ್ತಿ ಏರ್‌ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಪರಿಷ್ಕೃತ ರೀಚಾರ್ಜ್ ಆಫರ್ ಒಂದನ್ನು ಘೋಷಿಸಲಿದೆ. ಈ ಆಫರ್ ವಾಯ್ಸ್ ಹಾಗೂ ಎಸ್‌ಎಂಎಸ್ ಪ್ಲಾನ್‌ಗೆ ಸಂಬಂಧಿಸಿದೆ. ಕಳೆದ ತಿಂಗಳು ದೂರ ಸಂರ್ಪಕ ಸಂಸ್ಥೆ ಟ್ರಾಯ್ ಹೊರಡಿಸಿದ್ದ ಹೊಸ ನಿಯಮದ ಅನ್ವಯ ವಾಯ್ಸ್ ಹಾಗೂ ಎಸ್‌ಎಂಎಸ್‌ಗಾಗಿ ಈ ವಿಶೇಷ ಪ್ಲಾನ್ ಬಿಡುಗಡೆ ಮಾಡಲಿದೆ ಏರ್‌ಟೆಲ್ ಸಂಸ್ಥೆ.
ಈ ಆಫರ್‌ನಲ್ಲಿ ಯಾವುದೇ ಡೇಟಾ ಸೌಲಭ್ಯ ಇರುವುದಿಲ್ಲ. ಇಂಟರ್‌ನೆಟ್ ಬಳಸದ ವ್ಯಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಈ ವಿಶೇಷ ಆಫರ್ ಅನ್ನು ಪರಿಚಯಿಸಲಾಗಿದೆ. ಇದು ಫೀಚರ್ ಫೋನ್ ಅಥವಾ ಬೇಸಿಕ್ ಫೋನ್ ಬಳಸುವವರಿಗೆ ಹೇಳಿ ಮಾಡಿಸಿದ ಪ್ಲಾನ್ ಆಗಿದೆ. ಅಲ್ಲದೇ ಡ್ಯೂಯಲ್ ಸಿಮ್ ಬಳಸುವ ಗ್ರಾಹಕರಿಗೆ ಇದು ಬೆಸ್ಟ್ ಆಫರ್ ಆಗಿರುತ್ತದೆ. TRAI ಹೊರಡಿಸಿದ ಮಾರ್ಗಸೂಚಿಗಳಿಗೆ ಸರಿಹೊಂದುವಂತೆ ಕಂಪನಿಯು ಅಸ್ತಿತ್ವದಲ್ಲಿರುವ ಎರಡು ಪ್ಲಾನ್‌ಗಳಲ್ಲಿ ಬದಲಾವಣೆ ತರಲಿದೆ ಎಂದು ವರದಿಯಾಗಿದೆ.
ಟ್ರಾಯ್‌ನ ಹೊಸ ನಿಯಮದ ಬಳಿಕ ಗ್ರಾಹಕರಿಗೆ ವಾಯ್ಸ್ ಮತ್ತು ಎಸ್‌ಎಂಎಸ್ ಮಾತ್ರ ಇರುವ ರೀಜಾರ್ಜ್ ಪ್ಲಾನ್ ಘೋಷಿಸಿದ ಮೊದಲ ಸಂಸ್ಥೆಯಾಗಿದೆ ಏರ್‌ಟೆಲ್. ಸಂಸ್ಥೆಯು ಇನ್ನೂ ತನ್ನ ವೆಬ್‌ಸೈಟ್‌ಗೆ ಹೊಸ ಯೋಜನೆಗಳನ್ನು ಸೇರಿಸಿಲ್ಲ, ಆದರೆ ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.ಕಂಪನಿಯು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ವಿವರಿಸದಿದ್ದರೂ, ಹಲವಾರು ವರದಿಗಳು ಬಳಕೆದಾರರು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಎತ್ತಿ ತೋರಿಸಿವೆ.
ಏರ್‌ಟೆಲ್ ಹೊಸ ರೀಚಾರ್ಜ್ ಪ್ಲಾನ್ ವಿವರ ಹೀಗಿದೆ
ಏರ್‌ಟೆಲ್ ನೀಡುತ್ತಿರುವ ಪರಿಷ್ಕೃತ ಪ್ಲಾನ್‌ಗಳಲ್ಲಿ 509ರೂ ನ ಪ್ರೀಪೇಯ್ಡ್ ಪ್ಲಾನ್ ಕೂಡ ಒಂದಾಗಿದೆ. ಇದು ಅನಿಯಮಿತ ವಾಯ್ಸ್ ಕಾಲ್ಸ್, 900 ಉಚಿತ ಎಸ್‌ಎಂಎಸ್‌ನೊಂದಿಗೆ 84 ದಿನಗಳ ವಾಲಿಡಿಟಿ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಯೋಜನೆಯ ಹಿಂದಿನ ಆವೃತ್ತಿಯು 6GB ಡೇಟಾವನ್ನು ಸಹ ನೀಡಿತು, ಅದನ್ನು ಈಗ ತೆಗೆದುಹಾಕಲಾಗಿದೆ ಎಂದು ವರದಿ ಹೇಳುತ್ತಿದೆ. ದೀರ್ಘಾವಧಿಯ ಮಾನ್ಯತೆಗಾಗಿ ಟೆಲಿಕಾಂ ಆಪರೇಟರ್ ರೂ. 1,999 ಯೋಜನೆಯನ್ನು ಪರಿಷ್ಕರಿಸುತ್ತಿದೆ ಎಂದು ವರದಿಯಾಗಿದೆ. ಇದು 365 ದಿನಗಳ ಅವಧಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು ಒಟ್ಟು 3,600 ಉಚಿತ ಎಸ್‌ಎಂಎಸ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಎಂದು ಸಿಎನ್‌ಬಿಸಿ ವರದಿಯನ್ನು ಉಲ್ಲೇಖಿಸಿದೆ ಗ್ಯಾಜೆಟ್ 360.
SMS ಮಿತಿಯನ್ನು ದಾಟಿದ ನಂತರ, ಏರ್‌ಟೆಲ್ ಬಳಕೆದಾರರಿಗೆ ಸ್ಥಳೀಯ ಸಂದೇಶಕ್ಕೆ 1 ರೂ. ಮತ್ತು ಎಸ್‌ಟಿಡಿ ಸಂದೇಶಕ್ಕೆ 1.5 ರೂ. ಶುಲ್ಕ ವಿಧಿಸುತ್ತದೆ ಎಂದು ವರದಿಯಾಗಿದೆ. ಕೆಲವು ವರದಿಗಳು ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಅಪೊಲೊ 24/7 ಸರ್ಕಲ್ ಸದಸ್ಯತ್ವ ಮತ್ತು ಉಚಿತ ಹಲೋ ಟ್ಯೂನ್ಸ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನೂ ಹೊಂದಿರಬಹುದು ಎಂದು ಹೇಳಿಕೊಂಡಿವೆ.
ಏರ್‌ಟೆಲ್ ಯೋಜನೆಗಳ ಬೆಲೆಗಳನ್ನು ಬಂಡಲ್ ಮಾಡಿದ ಡೇಟಾದೊಂದಿಗೆ ಹಾಗೆಯೇ ಇರಿಸುತ್ತದೆಯೇ ಅಥವಾ ಅವುಗಳಲ್ಲಿ ಬದಲಾವಣೆಗಳನ್ನು ಮಾಡುತ್ತದೆಯೇ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ.

ವಿಭಾಗ