Jio Postpaid offer: ಜಿಯೋ ಘೋಷಿಸಿದೆ 2 ಹೊಸ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ರೀಚಾರ್ಜ್ ಆಫರ್; ದರ ಎಷ್ಟು, ಏನೆಲ್ಲಾ ಸಿಗಲಿದೆ? ವಿವರ ಇಲ್ಲಿದೆ
Jio postpaid family plans: ಹೊಸ ಹೊಸ ಆಫರ್‌ಗಳನ್ನು ನೀಡುವ ಮೂಲಕ ಜನರನ್ನು ಸೆಳೆಯುವ ರಿಲಯೆನ್ಸ್ ಜಿಯೋ ಇದೀಗ ಹೊಸ ಪೋಸ್ಟ್‌ಪೇಯ್ಡ್ ಆಫರ್‌ವೊಂದನ್ನು ಘೋಷಿಸಿದೆ. ಇದು ಫ್ಯಾಮಿಲಿ ಪ್ಯಾಕ್ ರೀತಿ ರೀಚಾರ್ಜ್ ಆಫರ್ ಆಗಿದ್ದು, ಇದರಲ್ಲಿ ಏನೆಲ್ಲಾ ಕೊಡುಗೆಗಳು ಇವೆ ಎಂದು ನೋಡಿ.

Jio postpaid family plan: ನೀವು ಜಿಯೋ ಸಿಮ್ ಯೂಸ್ ಮಾಡ್ತಾ ಇದೀರಾ, ಸ್ಪೆಷಲ್ ರೀಚಾರ್ಜ್ ಪ್ಲಾನ್‌ಗಳಿಗಾಗಿ ಎದುರು ನೋಡ್ತಾ ಇದೀರಾ, ನಿಮಗೆ ಮಾತ್ರವಲ್ಲ ನಿಮ್ಮ ಕುಟುಂಬದವರಿಗೂ ಸೇರಿ ವಿಶೇಷ ಆಫರ್‌ವೊಂದನ್ನು ಫೋಷಿಸಿದೆ ರಿಲಯೆನ್ಸ್ ಜಿಯೋ. ಈ ಆಫರ್ ಖಂಡಿತ ನಿಮಗೆ ಇಷ್ಟವಾಗುತ್ತೆ, ಮಾತ್ರವಲ್ಲ ಇದರಿಂದ ನಿಮಗೆ ಲಾಭವೂ ಜಾಸ್ತಿ ಇದೆ. ಹಾಗಾದರೆ ಏನಿದು ಆಫರ್, ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ವಿವರ ತಿಳಿಯೋಣ
ಒಂದಲ್ಲ, ಎರಡು ಫ್ಯಾಮಿಲಿ ಪ್ಲಾನ್ ಆಫರ್
2025ರ ಹೊಸ ವರ್ಷದಲ್ಲಿ ಜಿಯೋ ಒಂದಲ್ಲ, ಎರಡು ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. 449 ರೂ. ಹಾಗೂ 749 ರೂ. ರೀಚಾರ್ಜ್ ಮೊತ್ತವಾಗಿದೆ. ಮೂಲ ಸಿಮ್‌ಗೆ ಬಿಲ್ ಬರುತ್ತದೆ. ಇದರ ಜೊತೆ ಸ್ನೇಹಿತರು, ಕುಟುಂಬದವರ ಸಿಮ್ ಅನ್ನು ಆ್ಯಡ್ ಆನ್ ಮಾಡಬಹುದು.
ಜಿಯೋ 449 ಪ್ಲಾನ್ ವಿವರ
ಮೊದಲೇ ಹೇಳಿದಂತೆ 449ರ ಜಿಯೋ ಫ್ಯಾಮಿಲಿ ಪ್ಲಾನ್‌ನಲ್ಲಿ 3 ಸಿಮ್ ಆ್ಯಡ್ ಆನ್ ಮಾಡಬಹುದು. ಮೂಲ ಬಳಕೆದಾರರು ಪ್ರತಿದಿನ 100 ಮೆಸೇಜ್‌ಗಳು, ಅನ್‌ಲಿಮಿಟೆಡ್ ಕಾಲ್, 75 ಜಿಬಿ ಡೇಟಾ, ಅನಿಯಮಿತ 5ಜಿ ಇಂಟರ್‌ನೆಟ್ ಬಳಕೆ ಮಾಡಬಹುದಾಗಿದೆ. ಆ್ಯಡ್ ಆನ್ ಸಿಮ್‌ಗಳಿಗೆ ಕರೆ, ಎಸ್‌ಎಂಎಸ್ ಹಾಗೂ 5ಜಿಬಿ ಡೇಟಾ ಲಭ್ಯವಿರುತ್ತದೆ.
ಜೀಯೋ 749 ರೂ ಪ್ಲಾನ್ ವಿವರ
ಇದರಲ್ಲೂ 3 ನಂಬರ್ ಆ್ಯಡ್ ಆನ್ ಇರುತ್ತದೆ. ಪ್ರಾಥಮಿಕ್ ಸಿಮ್‌ಗೆ 100ಜಿಬಿ ಡೇಟಾ ಲಭ್ಯವಿರುತ್ತದೆ. ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ಕಳುಹಿಸಬಹುದಾಗಿದೆ. ಇದು ಕೂಡ ಅನಿಯಮಿತ 5ಜಿ ಡೇಟಾ ಹೊಂದಿರುತ್ತದೆ. ಆ್ಯಡ್ ಆನ್ ಆಗಿರುವ ಸಿಮ್‌ಗಳಿಗೆ ಉಚಿತ ಕರೆ, ಎಸ್‌ಎಂಎಸ್ ಹಾಗೂ 5ಜಿಬಿ ಡೇಟಾ ಲಭ್ಯವಿರುತ್ತದೆ. ಇದರೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಲೈಟ್ ಹಾಗೂ ಆ್ಯಪ್‌ಗಳು ಕೂಡ ಲಭ್ಯವಿರುತ್ತದೆ.
ಹೊಸ ಹೊಸ ಆಫರ್‌ಗಳನ್ನು ಕೊಡುವ ಮೂಲಕ ಗ್ರಾಹಕರನ್ನು ಸೆಳೆಯುವ ರಿಲಯೆನ್ಸ್ ಜಿಯೋ ಇದೀಗ ಬಿಡುಗಡೆ ಮಾಡುತ್ತಿರುವ ಹೊಸ ಪೋಸ್ಟ್‌ಪೇಯ್ಡ್ ಆಫರ್ ಖಂಡಿತ ಗ್ರಾಹಕರಿಗೆ ಇಷ್ಟವಾಗುತ್ತದೆ. ಇದು ಬಳಕೆದಾರರಿಗೆ ಲಾಭ ತಂದುಕೊಡುವುದು ಖಂಡಿತ.
ವಿಭಾಗ