ಮುಖದ ಮೇಲಿನ ಈ 4 ಜಾಗದಲ್ಲಿ ಮಚ್ಚೆಗಳಿವೆಯಾ? ಹಾಗಾದರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಖದ ಮೇಲಿನ ಈ 4 ಜಾಗದಲ್ಲಿ ಮಚ್ಚೆಗಳಿವೆಯಾ? ಹಾಗಾದರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ

ಮುಖದ ಮೇಲಿನ ಈ 4 ಜಾಗದಲ್ಲಿ ಮಚ್ಚೆಗಳಿವೆಯಾ? ಹಾಗಾದರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ

ನಿಮ್ಮ ಮುಖದ ಮೇಲೆ ಮಚ್ಚೆಗಳಿವೆಯಾ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದಕ್ಕೆ ವಿಶೇಷ ಅರ್ಥವಿದೆ. ಅದು ನಿಮ್ಮ ವ್ಯಕ್ತಿತ್ವ, ಭವಿಷ್ಯ ಹಾಗೂ ಯಶಸ್ಸಿನ ಬಗ್ಗೆ ಹೇಳುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಮುಖದ ಮೇಲೆ ಈ 4 ಜಾಗದಲ್ಲಿರುವ ಮಚ್ಚೆ ಏನು ಹೇಳುತ್ತದೆ? ಎಂದು ನೋಡೋಣ.

ನಿಮ್ಮ ಮುಖದ ಮೇಲಿನ ಮಚ್ಚೆಗಳ ಹಿಂದಿನ ಅರ್ಥವನ್ನು ತಿಳಿಯಿರಿ
ನಿಮ್ಮ ಮುಖದ ಮೇಲಿನ ಮಚ್ಚೆಗಳ ಹಿಂದಿನ ಅರ್ಥವನ್ನು ತಿಳಿಯಿರಿ

ಪ್ರತಿಯೊಬ್ಬ ಮನುಷ್ಯನ ದೇಹದ ಮೇಲೆ ಮಚ್ಚೆಗಳಿರುತ್ತವೆ. ಜ್ಯೊತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ದೇಹದ ಮೇಲಿರುವ ಮಚ್ಚೆ ಅಥವಾ ಮೋಲ್‌ಗಳು ಬಹಳಷ್ಟು ಅರ್ಥಗಳನ್ನು ಹೊಂದಿವೆ ಎಂಬ ನಂಬಿಕೆಯಿದೆ. ದೇಹದ ಕೆಲವು ಭಾಗಗಳಲ್ಲಿರುವ ಮಚ್ಚೆಗಳನ್ನು ನೋಡಿ ಅದು ಶುಭ ಅಥವಾ ಅಶುಭ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಮಚ್ಚೆಗಳ ಆಧಾರದ ಮೇಲೆ, ವ್ಯಕ್ತಿಯ ನಡವಳಿಕೆ, ಭಾವನೆಗಳು, ಭವಿಷ್ಯ, ಅದೃಷ್ಟ ಮತ್ತು ಲಾಭದಂತಹ ವಿಷಯಗಳನ್ನ ಹೇಳುತ್ತಾರೆ. ಸಾಮುದ್ರಿಕ ಶಾಸ್ತ್ರದ ಮೂಲಕ ನಾವು ಅನೇಕ ವಿಷಯಗಳನ್ನು ಕಲಿಯಬಹುದು. ಸಾಮುದ್ರಿಕ ಶಾಸ್ತ್ರವು ದೇಹದ ಮೇಲೆ ಇರುವ ಮಚ್ಚೆಗಳ ಬಗ್ಗೆ ವಿವರವಾಗಿ ಹೇಳುತ್ತೆ. ನಮ್ಮಲ್ಲಿ ಅನೇಕ ಜನರಿಗೆ ಮುಖದಲ್ಲಿ ಮಚ್ಚೆಗಳು ಇರುತ್ತವೆ. ಅವು ಕೆಲವು ಸೂಚನೆಗಳನ್ನು ನೀಡುತ್ತವೆ. ನಿಮ್ಮ ಮುಖದ ಮೇಲೆ ಈ 4 ಸ್ಥಳಗಳಲ್ಲಿ ಇರುವ ಮಚ್ಚೆಗಳ ಹಿಂದಿನ ರಹಸ್ಯವೇನು? ಅದರಿಂದ ನೀವು ಅದೃಷ್ಟವಂತರು ಎಂದು ಹೇಗೆ ಹೇಳಬಹುದು ಎಂದು ನೋಡೋಣ.

ನಿಮ್ಮ ಮುಖದ ಮೇಲಿನ ಮಚ್ಚೆಗಳ ಹಿಂದಿನ ಅರ್ಥ

ಮುಖದ ಮೇಲಿನ ಮಚ್ಚೆಗಳು ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಮುಖದ ಮೇಲಿನ ಮಚ್ಚೆಗಳು ನಿಮ್ಮ ಭವಿಷ್ಯ, ಭಾವನೆಗಳು ಮತ್ತು ಅದೃಷ್ಟದಂತಹ ಹಲವು ವಿಷಯಗಳನ್ನು ಬಹಿರಂಗಪಡಿಸಬಹುದು. ಅದರಲ್ಲೂ ಮುಖದ ಕೆಲವು ಭಾಗಗಳಲ್ಲಿರುವ ಮಚ್ಚೆಗಳು ವಿಶೇಷವಾಗಿರುತ್ತವೆ.

1. ಹಣೆಯ ಮೇಲೆ ಮಚ್ಚೆ

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಣೆಯ ಮೇಲೆ ಮಚ್ಚೆಯಿದ್ದರೆ, ಅದು ತುಂಬಾ ವಿಶೇಷವೆಂದು ಪರಿಗಣಿಸಲಾಗುತ್ತದೆ. ಹಣೆಯ ಮೇಲೆ ಮಚ್ಚೆಯಿದ್ದರೆ, ಅವರು ಶಾಂತವಾಗಿರುತ್ತಾರೆ. ಈ ಜನರು ಬುದ್ದಿವಂತರು ಎಂದು ಪರಿಗಣಿಸಲಾಗುತ್ತದೆ. ಈ ಮಚ್ಚೆ ಅವರ ಅದೃಷ್ಟವನ್ನು ಪ್ರತಿಬಿಂಬಿಸುತ್ತದೆ. ಈ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಮನ್ನಣೆ ಪಡೆಯುತ್ತಾರೆ.

2. ತುಟಿಗಳ ಮೇಲೆ ಮಚ್ಚೆ

ನಿಮ್ಮ ತುಟಿಗಳ ಮೇಲೆ ಮಚ್ಚೆಯಿದ್ದರೆ, ತುಂಬಾ ಸುಂದರವಾಗಿರುತ್ತೀರಿ. ನೀವು ಚೆನ್ನಾಗಿ ಮಾತನಾಡುತ್ತೀರಿ. ನಿಮ್ಮ ಮಾತುಗಳು ಸಹ ಸಿಹಿಯಾಗಿರುತ್ತವೆ. ನೀವು ನಿಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತೀರಿ. ಅವರಿಗೆ ಸಾಕಷ್ಟು ಬೆಂಬಲ ನೀಡುತ್ತೀರಿ. ಕುಟುಂಬದಲ್ಲಿ ನಿಮಗೆ ವಿಶೇಷ ಮನ್ನಣೆ ಇರುತ್ತದೆ. ಸಮುದಾಯದಲ್ಲಿ ನಿಮಗೆ ಗೌರವ ದೊರಕುತ್ತದೆ.

3. ಮೂಗಿನ ಮೇಲೆ ಮಚ್ಚೆ

ಮೂಗಿನ ಮೇಲೆ ಮಚ್ಚೆ ಇದ್ದರೆ ಅದು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಈ ಮಚ್ಚೆ ಇರುವ ಜನರು ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುತ್ತಾರೆ. ಅವರು ತಮ್ಮ ಉದ್ಯೋಗ ಅಥವಾ ವ್ಯವಹಾರದಲ್ಲಿ ಇತರರಿಗೆ ಮಾದರಿಯಾಗುತ್ತಾರೆ. ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅದರಿಂದ ಅದೃಷ್ಟ ಅವರಿಗೆ ಒಲಿದು ಬರುತ್ತದೆ.

4. ಕೆನ್ನೆಗಳ ಮೇಲೆ ಮಚ್ಚೆ

ಸಮುದ್ರಿಕಾ ಶಾಸ್ತ್ರದ ಪ್ರಕಾರ ನಿಮ್ಮ ಕೆನ್ನೆಯ ಮೇಲೆ ಮಚ್ಚೆಯಿದ್ದರೆ, ನೀವು ಇತರರಿಗಿಂತ ಭಿನ್ನವಾಗಿರುತ್ತೀರಿ ಎಂದು ಹೇಳಲಾಗಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸಂತೋಷವಾಗಿರುತ್ತೀರಿ. ನಿಮಗೆ ಸಾಕಷ್ಟು ಸೃಜನಶೀಲತೆ ಇರುತ್ತದೆ. ನೀವು ಯಾವಾಗಲೂ ಇತರರ ಹೃದಯಗಳನ್ನು ಗೆಲ್ಲುತ್ತೀರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

HT Kannada Desk