Monday Motivation: ತಪ್ಪು ತಿದ್ದಿಕೊಳ್ಳುವ ಮಾರ್ಗ; ಚಪ್ಪಾಳೆ ಹೊಡೆಯುವ 99 ಜನರಿಗಿಂತ ವಿಮರ್ಶೆ ಮಾಡುವ ಒಬ್ಬರು ಇದ್ದರೆ ಸಾಕು
ಕನ್ನಡ ಸುದ್ದಿ  /  ಜೀವನಶೈಲಿ  /  Monday Motivation: ತಪ್ಪು ತಿದ್ದಿಕೊಳ್ಳುವ ಮಾರ್ಗ; ಚಪ್ಪಾಳೆ ಹೊಡೆಯುವ 99 ಜನರಿಗಿಂತ ವಿಮರ್ಶೆ ಮಾಡುವ ಒಬ್ಬರು ಇದ್ದರೆ ಸಾಕು

Monday Motivation: ತಪ್ಪು ತಿದ್ದಿಕೊಳ್ಳುವ ಮಾರ್ಗ; ಚಪ್ಪಾಳೆ ಹೊಡೆಯುವ 99 ಜನರಿಗಿಂತ ವಿಮರ್ಶೆ ಮಾಡುವ ಒಬ್ಬರು ಇದ್ದರೆ ಸಾಕು

Monday Motivation: ಜೀವನದಲ್ಲಿ ಯಶಸ್ವಿಯಾಗಲು ಹೊಗಳುವವರನ್ನು ಪಕ್ಕದಲ್ಲಿ ಇರಿಸಿಕೊಳ್ಳಬಾರದು. ನಮ್ಮೊಂದಿಗೆ ಇದ್ದು ನಮ್ಮ ತಪ್ಪುಗಳನ್ನು ಗುರುತಿಸಿ ವಿಮರ್ಶೆ ಮಾಡುವವರು ಒಬ್ಬರಿದ್ದರೆ ಸಾಕು.

ಚಪ್ಪಾಳೆ ಹೊಡೆಯುವವರಿಗಿಂತ ವಿರ್ಮಶೆ ಮಾಡುವವರು ಮೇಲು (ಫೋಟೋ ಫೈಲ್)
ಚಪ್ಪಾಳೆ ಹೊಡೆಯುವವರಿಗಿಂತ ವಿರ್ಮಶೆ ಮಾಡುವವರು ಮೇಲು (ಫೋಟೋ ಫೈಲ್)

ದೊಡ್ಡ ದೊಡ್ಡ ವ್ಯಕ್ತಿಗಳನ್ನು ಅವರ ಪಕ್ಕದಲ್ಲಿರುವವರು ಹೊಳಗಲೇ ಬೇಕು. ಆದರೆ ಒಂದೇ ಒಂದು ಮಾತು ನೀನು ಮಾಡ್ತಿರೋದು ತಪ್ಪು ಅಂತ ಹೇಳಿದರೆ ಸಾಕು ನಿಮ್ಮ ಮೇಲೆ ಮುಗಿ ಬೀಳೋದು ಗ್ಯಾರಂಟಿ. ತಪ್ಪನ್ನು ತಿಳಿಸುವ ಅಥವಾ ವಿಮರ್ಶೆ ಮಾಡುವವರಿಗಿಂತ ಚಪ್ಪಾಳೆ ತಟ್ಟಿ ಅಭಿನಂದಿಸುವವರ ತುಂಬಾ ಅಪಾಯಕಾರಿ. ಯಾಕೆಂದರೆ ಅಭಿನಂದನೆಗಳು ಅನ್ನೋದು ಒಂದು ಮಟ್ಟದವರೆಗೆ ಸರಿ. ಅದನ್ನು ಮೀರಿದರೆ ನಿಮ್ಮ ಜೀವನನ್ನು ಹಾಳು ಮಾಡಿಕೊಳ್ಳುವ ಎಲ್ಲಾ ಸಾಧ್ಯತೆ ಇರುತ್ತವೆ.

ಹೊಗಳಿಕೆ ಮಾತುಗಳನ್ನು ಹೇಳುವವರು ನಿಮ್ಮ ತಪ್ಪುಗಳನ್ನು ತಿಳಿಸೋದಿಲ್ಲ ಬದಲಾಗಿ ಅಭಿನಂದಿಸುವ ಮೂಲಕ ನಿಮ್ಮನ್ನು ಸಂತೋಷ ಪಡಿಸಲು ಯತ್ನಿಸುತ್ತಾರೆ. ಆದ್ದರಿಂದಲೇ ಜೀವನದಲ್ಲಿ ಚಪ್ಪಾಳೆ ತಟ್ಟುವ 99 ಜನರಿಗಿಂತ ವಿಮರ್ಶೆ ಮಾಡುವ ಒಬ್ಬರು ಇದ್ದರೆ ಸಾಕು ಅಂತ ಹೇಳುತ್ತಾರೆ. ವಾಸ್ತಾವದಲ್ಲಿ ನಿಮ್ಮನ್ನು ವಿರ್ಮಶೆ ಮಾಡುವವರನ್ನು ಶತ್ರುಗಳಂತೆ ನೋಡುತ್ತೇವೆ. ಆದರೆ ಇವರೇ ನಿಮ್ಮ ನಿಜವಾದ ಸ್ನೇಹಿತರು ಎಂಬುವ ಸತ್ಯಾಂಶವನ್ನು ಅರಿಯಬೇಕು. ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವವರ ಬಗ್ಗೆ ಎಂದಿಗೂ ಕೋಪಗೊಳ್ಳಬಾರದು. ಅವರ ಟೀಕೆಗಳನ್ನು ಒಪ್ಪಿಕೊಳ್ಳಬೇಕು. ಆಗ ಮಾತ್ರ ನೀವು ಬೆಳೆಯುತ್ತೀರಿ. ಇಲ್ಲವಾದರೆ ಒಂದು ದಿನ ಕೆಳೆಗೆ ಬೀಳುತ್ತೀರಿ.

ಟೀಕೆ ಮತ್ತು ಹೊಗಳಿಕೆಗಳು ಯಾವುದು ಶಾಶ್ವತವಲ್ಲ

ಯಾರೋ ಏನೋ ಹೇಳಿದರೂ ಅಂತ ನೆನಪಿಸಿಕೊಳ್ಳತ್ತಲೇ ಬೇಸರ ಮಾಡಿಕೊಳ್ಳಬೇಡಿ. ನಾವು ಎದುರಿಸುವ ಟೀಕೆಗಳು ಮತ್ತು ಹೊಗಳಿಕೆಗಳು ಯಾವುದು ಶಾಶ್ವತವಲ್ಲ. ಅವು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತವೆ. ಆದರೆ ನಮ್ಮ ಟೀಕಾಕಾರರು ನಮ್ಮೊಂದಿಗಿದ್ದರೆ, ನಮ್ಮ ತಪ್ಪು ತಿಳಿಯುತ್ತದೆ. ಮುಂದೆ ಸಾಗಲು ಸುಲಭವಾಗುತ್ತದೆ. ನಿಜವಾದ ಸ್ನೇಹಿತ ನಿಮ್ಮನ್ನು ಟೀಕಿಸುತ್ತಾನೆ. ಅಂತಹವರಿಂದ ಎಂದಿಗೂ ದೂರವಾಗಬೇಡಿ. ಅವಶ್ಯಕತೆಗಾಗಿ ನಿಮ್ಮೊಂದಿಗೆ ಸ್ನೇಹ ಬೆಳೆಸುವವರು ಸಾಮಾನ್ಯವಾಗಿ ನಿಮ್ಮನ್ನು ಹೊಳಗುತ್ತಾರೆ ಇಂಥ ಜನರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಹಣಕ್ಕಾಗಿ ಹೊಗಳುವವರು ಕೆಲವರಾದರೆ, ಸೇಡಿಗಾಗಿ ಹೊಗಳುವವರು ನಮ್ಮ ಸುತ್ತುಮುತ್ತಲೂ ಇದ್ದಾರೆ. ಯಾರು ಏನೇ ಅಂದುಕೊಂಡರೂ ಟೀಕೆಗಳೇ ಯಶಸ್ಸಿನ ಮೆಟ್ಟಿಲುಗಳು. ಅದಕ್ಕೇ ಜೀವನದಲ್ಲಿ ಟೀಕಾಕಾರರಿಂದ ದೂರ ಇರೋದು. ಒಂದೇ ಒಂದು ಟೀಕೆ ನಿಮ್ಮನ್ನು ನೂರು ಮೆಟ್ಟಿಲು ಏರಿಸಬಹುದು. ಆದರೆ ಒಂದೇ ಒಂದು ಹೊಗಳಿಕೆ ಮುಂದೊಂದು ದಿನ ನೀವು ತುಂಬಾ ಕಷ್ಟಗಳನ್ನು ಅನುಭವಿಸುವಂತೆ ಮಾಡುತ್ತದೆ. ಅದಕ್ಕಾಗಿಯೇ ಹೊಗಳಿಕೆ ಮಾತುಗಳನ್ನಾಡುವವರು ಅಲ್ಲ, ಟೀಕೆ ಮಾಡುವವರು ನಿಮ್ಮ ನಿಜವಾದ ಗೆಳೆಯರೆಂದು ಭಾವಿಸಬೇಕು. ನಿಮಗಾಗಿ ಇನ್ನೂ ಕೆಲವು ಮಾತುಗಳು ಇಲ್ಲಿವೆ.

  • ಸುಳ್ಳಿನ ಗೆಲುವಿಗಿಂತ ಸತ್ಯದ ಸೋಲು ಮೇಲು
  • ಶುಭಾರಂವಾದರೆ ಸಾಕು ಯಶಸ್ಸುು ತಾನಾಗಿಯೇ ಬರುತ್ತೆ
  • ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು
  • ಕ್ಷಮೆ ಭೂತಕಾಲವನ್ನ ಬದಲಾಯಿಸದಿರಬಹುದು, ಆದರೆ ಖಂಡಿತ ಭವಿಷ್ಯವನ್ನ ಬದಲಾಯಿಸುತ್ತೆ
  • ಮನಸ್ಸಿದ್ದರೆ ಮಾರ್ಗ
  • ತಾಳಿದವನು ಬಾಳಿಯಾನು
  • ಸೋಲೇ ಗೆಲುವಿನ ಮೆಟ್ಟಿಲು

(This copy first appeared in Hindustan Times Kannada website. To read more like this please logon to kannada.hindustantime.com).

Whats_app_banner