Monday Motivation: ನಿಜ ಜೀವನದ ಕಥೆ; ದೃಢ ಮನಸ್ಸು ಇದ್ದರೆ ಎಷ್ಟೇ ಕಷ್ಟಗಳು ಬಂದರೂ ಗೆಲ್ಲಬಹುದು ಅನ್ನೋದಕ್ಕೆ ಇವರೇ ಸಾಕ್ಷಿ
ಜೀವನದಲ್ಲಿ ಯಶಸ್ಸಿಯಾಗಲು ಎಲ್ಲಾ ಸೌಲಭ್ಯಗಳು ಬೇಕು ಎಂದು ಹಲವರು ಹೇಳುತ್ತಾರೆ. ಆದರೆ ಒಬ್ಬ ವ್ಯಕ್ತಿ ತನ್ನ ಕಾಲು ಮತ್ತು ಕೈಗಳು ಸರಿಯಾಗಿಲ್ಲದಿದ್ದರೂ ಸಹ ಯಶಸ್ವಿಯಾಗಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
Monday Inspirational Story: ಜೀವನದಲ್ಲಿ ಯಶಸ್ಸಿಯಾಗಲು ಎಲ್ಲಾ ಸೌಲಭ್ಯಗಳು ಬೇಕು ಎಂದು ಹಲವರು ಹೇಳುತ್ತಾರೆ. ಆದರೆ ಒಬ್ಬ ವ್ಯಕ್ತಿ ತನ್ನ ಕಾಲು ಮತ್ತು ಕೈಗಳು ಕಳೆದುಕೊಂಡರೂ ಸಹ ಯಶಸ್ವಿಯಾಗಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
ಕೆಲವರಿಗೆ ಎಲ್ಲಾ ರೀತಿಯ ಸೌಕರ್ಯಗಳು, ಸಂಪನ್ಮೂಲಗಳು ಇದ್ದರೂ ಜೀವನದಲ್ಲಿ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಗುರಿಯನ್ನು ಸಾಧಿಸುವುದು ತಪಸ್ಸಿನಂತೆ. ಗುರಿ ಸಾಧಿಸುವುದು ಎಲ್ಲರಿಗೂ ಸುಲಭದ ಕೆಲಸವಲ್ಲ. ಇದಕ್ಕಾಗಿ ಹಗಲಿರುಳು ಶ್ರಮಿಸಬೇಕು. ಶ್ರದ್ಧೆಯಿಂದ ಇರಬೇಕು. ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕು. ಆಸೆಗಳನ್ನು ಬದಿಗಿಡಬೇಕು. ಗುರಿ ಸಾಧಿಸಲು ತಪಸ್ಸು ಮಾಡಬೇಕು. ಆದರೂ ಯಶಸ್ಸು ಸಿಗುತ್ತೆ ಅನ್ನೋ ಗ್ಯಾರಂಟಿ ಇರುವುದಿಲ್ಲ.
ಆದರೆ ಕೆಲವರಿಗೆ ಒಂದಿಷ್ಟು ಸೌಲಭ್ಯಗಳಿಲ್ಲದಿದ್ದರೂ ಪರಿಸ್ಥಿತಿ ಸರಿಯಿಲ್ಲ ಅಂತ ಬೇಸರ ಮಾಡಿಕೊಳ್ಳುತ್ತಲೇ ಸಮರಯನ್ನು ಕಳೆಯುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಬಗ್ಗೆ ಹೇಳಿದರೆ ನೀವು ಅಚ್ಚರಿ ಪಡುತ್ತೀರಿ. ಏಕೆಂದರೆ ಈತ ರೈಲು ಅಪಘಾತದಲ್ಲಿ ಎರಡು ಕಾಲು ಮತ್ತು ಕೈಗಳನ್ನು ಕಳೆದುಕೊಂಡಿದ್ದಾರೆ. ಆದರೆ ಕೈಕಾಲು ಇಲ್ಲ ಅಂತ ಸುಮ್ಮನೆ ಕೂರದೆ, ಎದೆಗುಂದದೆ ದೃಢ ಸಂಕಲ್ಪದಿಂದ ಮುಂದೆ ಸಾಗಿದ ಪರಿಣಾಮವಾಗಿ ಇವರು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಯಶಸ್ವಿಯಾಗಿದ್ದಾರೆ. ಅವರೇ ಸೂರಜ್ ತಿವಾರಿ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರ್ಕಾರಿ ಉದ್ಯೋಗ ಮಾಡುತ್ತಿರುವ ಇವರ ಸಾಧನೆ ಕೋಟ್ಯಂತರ ಯುವ ಜನತೆಗೆ ಮಾದರಿಯಾಗಿದೆ. ಯುಪಿಎಸ್ ಪರೀಕ್ಷೆಯನ್ನು ಪಾಸ್ ಮಾಡಿ ಉನ್ನತ ಮಟ್ಟದ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಅನ್ನೋದು ಆನೇಕರ ಆಸೆಯಾಗಿರುತ್ತದೆ. ಆದರೆ ಅದರಲ್ಲಿ ಯಶಸ್ವಿಯಾಗುವವರ ಸಂಖ್ಯೆ ಕಡಿಮೆ. ಏಕೆಂದರೆ ಯುಪಿಎಸ್‌ಸಿ ಪರೀಕ್ಷೆ ಅಷ್ಟೊಂದು ಸುಲಭವಲ್ಲ. ಇದಕ್ಕೆ ಕಠಿಣ ಪರಿಶ್ರಮ ಬೇಕು. ಹಗಲು ರಾತ್ರಿ ಎನ್ನದೆ ಓಡಬೇಕಾಗುತ್ತದೆ.
ಆದರೆ ಎರಡು ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿರುವ ಸೂರಜ್ ತಿವಾರಿ ಅವರ ಜೀವನದ ಹೋರಾಟ ನಿಜಕ್ಕೂ ಆಶ್ಚರ್ಯಕರವಾಗಿದೆ. ಇವರು ಉನ್ನತ ಹುದ್ದೆಗೆ ಬರಲು ಎದುರಿಸಿದ ಸವಾಲುಗಳನ್ನು ಪ್ರತಿಯೊಬ್ಬರು ತಿಳಿಯಬೇಕು. ಎರಡು ಕಾಲು ಮತ್ತು ಕೈ ಕಳೆದುಕೊಂಡಿರುವ ಉತ್ತರ ಪ್ರದೇಶದ ಸೂರಜ್ ತಿವಾರಿ ಎಂಬ ಯುವಕ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಲ್ಲರ ಗಮನ ಸೆಳೆದಿದ್ದಾನೆ.
ಉತ್ತರ ಪ್ರದೇಶ ಮೈನ್‌ಪುರಿ ಜಿಲ್ಲೆಯ ಸೂರಜ್ ತಿವಾರಿ ಅವರು 2017 ರಲ್ಲಿ ಗಾಜಿಯಾಬಾದ್‌ನಲ್ಲಿ ಚಲಿಸುವ ರೈಲಿನಿಂದ ಬಿದ್ದು ಎರಡೂ ಕಾಲುಗಳು, ಬಲಗೈ ಮತ್ತು ಎಡಗೈನ ಎರಡು ಬೆರಳುಗಳನ್ನು ಕಳೆದುಕೊಂಡರು. ಸೂರಜ್ ಅವರ ಸಹೋದರ 2017ರ ಮೇ ನಲ್ಲಿ ರೈಲು ಅಪಘಾತದ ನಂತರ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆ ಸೂರಜ್ ಜೀವನವನ್ನು ಮತ್ತಷ್ಟು ಕತ್ತಲನ್ನಾಗಿಸಿತು. ಈತನ ಸ್ಥಾನದಲ್ಲಿ ಬೇರೆ ಯಾರೇ ಇದಿದ್ದರೂ ಖಂಡಿತಾ ಅವರು ಮುಂದೇನು ಅನ್ನೋ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದರೇನೋ.
ಅಣ್ಣ ಆತ್ಮಹತ್ಯೆ ಮಾಡಿಕೊಂಡರೂ ಎದೆಗುಂದದ ಸೂರಜ್ ಅವರು ಕುಟುಂಬವನ್ನು ಸಾಕಬೇಕು, ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಬಯಸುತ್ತಾರೆ. ಅದರೆ ಯುಪಿಎಸ್‌ಸಿಗೆ ತಯಾರಿ ನಡೆಸುತ್ತಾರೆ. ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿ 917ನೇ ಶ್ರೇಯಾಂಕವನ್ನು ಪಡೆಯುತ್ತಾರೆ.
ಕಾಲು ಕಳೆದುಕೊಂಡ ನಂತರ ಎದ್ದು ನಡೆಯಲಾರದ ಪರಿಸ್ಥಿತಿಯಲ್ಲಿದ್ದ ಸೂರಜ್ ಪ್ರತಿಯೊಂದು ಕೆಲಸಕ್ಕೂ ಬೇರೆಯವರನ್ನ ಅವಲಂಬಿಸಬೇಕಾಯಿತು. ಕುಳಿತು ಓದುವಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾನೆ. ಗಾಲಿ ಕುರ್ಚಿಯಲ್ಲೇ ಗ್ರಂಥಾಲಯಕ್ಕೆ ಹೋಗಿ ಗಂಟೆಗಟ್ಟಲೇ ಕುಳಿತು ಪುಸ್ತಕಗಳನ್ನು ಓದುತ್ತಿದ್ದರು. ನಿತ್ಯ 15 ಗಂಟೆಗಳ ಕಾಲ ಓದಿಗೆ ಮೀಸಲಿಟ್ಟಿದ್ದರಂತೆ. ಪರೀಕ್ಷೆಯಲ್ಲಿ ಪ್ರತಿ ಕ್ಷಣವೂ ತುಂಬಾ ಮುಖ್ಯ ಎಂಬುದನ್ನು ಅರಿತ ಸೂರಜ್ ಇದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಅಭ್ಯಾಸ ಮಾಡಿದ್ದರೆ. ಯಾರ ಆಶ್ರಯವನ್ನೂ ಪಡೆಯದೆ ಮೂರು ಬೆರಳಿನಿಂದ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಯಾವಾಗಲೂ ಅಯ್ಯೋ ಅದಿಲ್ಲ, ಇದಿಲ್ಲ ಎನ್ನುವವರ ನಡುವೆ ಸೂರಜ್ ಅವರ ಸಾಧನೆ ನಿಜಕ್ಕೂ ಮಾದರಿಯಾಗಿದೆ. (This copy first appeared in Hindustan Times Kannada website. To read more like this please logon to kannada.hindustantimes.com).
ವಿಭಾಗ