Monday Motivation: ದಿನಕ್ಕೊಂದು ಸ್ಫೂರ್ತಿಯ ಮಾತು; ಹೇಡಿತನ ವೈಫಲ್ಯಕ್ಕೆ ಕಾರಣವಾದರೆ, ಧೈರ್ಯ ಅವಕಾಶ ಕಲ್ಪಿಸುತ್ತೆ
Monday Motivation: ಹೇಡಿತನದಿಂದ ಎಷ್ಟೋ ಮಂದಿ ತಮ್ಮ ಜೀವನದ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದರೆ ಇದನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಭಯವನ್ನ ದೂರ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.

ಭಯ, ಹೇಡಿತನ ಮನುಷ್ಯನನ್ನು ಊನಗೊಳಿಸಿದರೆ ಆತ್ಮಸ್ಥೈರ್ಯ ಆದೇ ವ್ಯಕ್ತಿಯನ್ನ ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಬದಲಾಗುವುದು ತುಂಬಾ ಒಳ್ಳೆಯದು, ಪ್ರತಿಯೊಂದು ಸಂದರ್ಭದಲ್ಲೂ ಹಾಗೆ ಬದಲಾಗುತ್ತಾ ಹೋದರೆ ನಿಮಗೆ ಗೊತ್ತಿಲ್ಲದಂತೆಯೇ ಬಹಳಷ್ಟು ಕಳೆದುಕೊಳ್ಳುತ್ತೀರಿ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಲ್ಲಿ ಧೈರ್ಯ ತುಂಬಲು ಪ್ರಯತ್ನಿಸಿದನು. ಅಸಹನೆ ಬಿಡಬೇಕು, ಹೇಡಿತನ ಸರಿಯಲ್ಲ ಎಂದು ಧೈರ್ಯ ತುಂಬಿದರು. ಇಂತಹ ಹೇಡಿತನ ಇರುವುದು ನೀಚ ಹೃದಯಗಳಲ್ಲಿ ಮಾತ್ರ ಎಂದು ಹೇಳಿದನು. ಹೇಡಿತನ ಬಿಟ್ಟು ದಿಟ್ಟ ಹೆಜ್ಜೆ ಇಡಬೇಕು. ಎಂತಹ ಪರಿಸ್ಥಿತಿ ಎದುರಾದರೂ ಹೋರಾಡಬೇಕು. ಆದರೆ ಓಡಿ ಹೋಗಬಾರದು ಎಂಬುದು ಗೀತೆಯ ಸಂದೇಶವಾಗಿದೆ.
ಎಷ್ಟೇ ಕಷ್ಟ ಬಂದರೂ ಕೆಳಗೆ ಬೀಳದೆ ಎದ್ದು ನಿಲ್ಲು. ಏನನ್ನಾದರೂ ಮಾಡಲು ಬಂದಾಗ, ಭಯ, ಹೇಡಿತನವನ್ನು ಸಂಪೂರ್ಣವಾಗಿ ಬಿಡಿ. ಯಶಸ್ಸು ನಿಮಗೆ ಎಷ್ಟು ವೇಗವಾಗಿ ಬರುತ್ತದೆ ಎಂದು ನಿಮಗೆ ಮಾತ್ರ ತಿಳಿಯುತ್ತದೆ. ಅದರಲ್ಲಿ ಸಿಗುವ ಖುಷಿಯೇ ಬೇರೆ. ನೀವು ಕಷ್ಟಗಳಿಂದಾಗಿ ಓಡಿಹೋಗಲು ಪ್ರಾರಂಭಿಸಿದರೆ, ಕಷ್ಟಗಳು ನಿಮ್ಮನ್ನು ಬೆನ್ನಟ್ಟಿ ಬರುತ್ತವೆ. ಪಲಾಯನ ಮಾಡುವುದನ್ನು ಬಿಟ್ಟು ಸ್ವಲ್ಪ ಹೊತ್ತು ನಿಂತು ಯೋಚಿಸಿ ನೋಡು. ಪರಿಹಾರಗಳನ್ನು ಹುಡುಕುತ್ತಿದ್ದಂತೆ ಕಷ್ಟಗಳನ್ನು ನಿಮ್ಮ ಬಿಟ್ಟು ಓಡಿ ಹೋಗುತ್ತವೆ. ಅಸೂಯೆ ಕಣ್ಣುಗಳಿಗೆ ಯಾವುದೇ ಕಾರಣಕ್ಕೂ ಹೆದರಬೇಡಿ. ಆ ಭಯವೇ ನಿಮ್ಮ ಹೇಡಿಗಳನ್ನಾಗಿ ಮಾಡುತ್ತದೆ.
ಹೇಡಿತನ ಬದಿಗೊತ್ತಿ ಧೈರ್ಯವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಮುನ್ನಡೆಯಿರಿ
ಧೈರ್ಯವಾಗಿರುವ ಜೊತೆಗೆ ನಿಮ್ಮ ಗೆಲುವಿಗೆ ಬೇಕಾಗಿರುವ ಎಲ್ಲ ಕಾರ್ಯತಂತ್ರಗಳನ್ನು ರೂಪಿಸಿ, ತಾಳ್ಮೆಯಿಂದಿರಿ, ಭಯ, ಹೇಡಿತನ್ನು ಬದಿಗೊತ್ತಿ ಧೈರ್ಯವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಮುನ್ನಡೆಯಿರಿ. ಕಷ್ಟಗಳೆಲ್ಲ ನೋಡ ನೋಡುತ್ತಿದ್ದಂತೆ ಹಾರಿ ಹೋಗುತ್ತವೆ. ಆ ಬಳಿಕ ನೀವು ಯಶಸ್ಸಿನ ಹಾದಿಯಲ್ಲಿ ಸಾಗುತ್ತೀರಿ. ಕೆಲವರು ತಾವು ಹೇಡಿಯಂತೆ ಆಗುವುದರ ಜೊತೆಗೆ ಇತರರನ್ನು ಹೇಡಿಗಳನ್ನಾಗಿ ಮಾಡುವ ಪ್ರಯತ್ನ, ಮಾತುಗಳನ್ನಾಡುತ್ತಾರೆ. ನಮ್ಮಿಂದ ಬರುವ ಪ್ರತಿಯೊಂದು ಆಲೋಚನೆಯು ಇನ್ನೊಬ್ಬ ವ್ಯಕ್ತಿಗೆ ಬೆಳಕಾಗಿರಬೇಕೇ ಹೊರತು ಕತ್ತಲೆಯಾಗಬಾರದು.
ಇತರರೊಂದಿಗೆ ಎಂದಿಗೂ ನಾಚಿಕೆ ಪದಗಳನ್ನು ಮಾತನಾಡಬೇಡಿ. ಅಲ್ಲದೆ ಅವರ ಹೇಡಿತನದ ಮಾತುಗಳಿಗೆ ಕಿವಿಗೊಡಬೇಡಿ. ಅವು ನಮ್ಮ ಜೀವನದ ಹಾದಿಯಲ್ಲಿ ದೊಡ್ಡ ಅಡೆತಡೆಗಳನ್ನು ಉಂಟುಮಾಡುತ್ತವೆ. ಇತರರರು ಹೇಡಿಗಳಾಗಿದ್ದರೆ, ನೀವು ಹೇಡಿಗಳ ಗುಂಪಿನ ನಾಯಕರಾಗುತ್ತೀರಿ. ಅದಕ್ಕಿಂತ ಹೆಚ್ಚಿಗೆ ಸಾಧಿಸಲು ಏನೂ ಇಲ್ಲ. ನಿಮ್ಮ ಹೇಡಿತನ ನಿಮ್ಮ ವೈಫಲ್ಯಕ್ಕೆ ಅಡಿಪಾಯ ಹಾಕುತ್ತದೆ. ನಿಮ್ಮ ಧೈರ್ಯ ಗೆಲುವಿನ ಮೊದಲ ಮೆಟ್ಟಿಲು. ನಿಮ್ಮದು ಮೊದಲ ಹೆಜ್ಜೆ ಮಾತ್ರವಲ್ಲ, ನಿಮ್ಮ ಯಸ್ಸಿನ ಕೊನೆಯ ಹೆಜ್ಜೆಯೂ ಹೌದು. ಆದರೆ ಎಲ್ಲೂ, ಯಾವುದೇ ಸಂದರ್ಭದಲ್ಲೂ ಭಯ ಮತ್ತು ಹೇಡಿತನವನ್ನು ಊಹಿಸಬಾರದು.
ಕೆಲವು ಭಯಗಳ ಹಿಂದೆ ಜವಾಬ್ದಾರಿಗಳೂ ಕಟ್ಟಿಕೊಂಡಿರುತ್ತವೆ. ಆ ಜವಾಬ್ದಾರಿಗಳಿಗೆ ತಾಳ್ಮೆಯಿಂದಿರಬೇಕು. ಕೆಲವೊಮ್ಮೆ ಆ ತಾಳ್ಮೆ ಹೇಡಿತನದಂತೆ ಕಾಣಿಸಬಹುದು. ಆದರೆ ಅಂತಹ ತಾಳ್ಮೆ ಮತ್ತು ಸಹನೆ ಸಹ ಅಗತ್ಯವಾಗಿದೆ. ಅದರ ಬಗ್ಗೆ ನಾಚಿಕೆ ಪಡುವ ಅಗ್ಯವಿಲ್ಲ. ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ನೀವು ಮಾಡುವ ಕೆಲಸದಲ್ಲಿ ಬೇರೆಯವರು ಏನು ಮಾತನಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳಬಾರದು.
(This copy first appeared in Hindustan Times Kannada website. To read more like this please logon to kannada.hindustantimes.com )

ವಿಭಾಗ