Monsoon Health Tips 2023: ಮಾನ್ಸೂನ್ ಹೆಲ್ತ್ ಟಿಪ್ಸ್; ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗಗಳನ್ನು ತಡೆಗಟ್ಟುವುದು ಹೇಗೆ
ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾದಂತ ರೋಗಗಳನ್ನು ತಡೆಗಟ್ಟುವುದು ಹೇಗೆ, ಮುನ್ನಚ್ಚರಿಕೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರು: ಮುಂಗಾರು (Monsoon 2023) ಆರಂಭವಾಗಿದ್ದು, ದೇಶದ ಪ್ರಮುಖ ನಗರಗಳು ಸೇರಿ ಶೇಕಡಾ 80 ರಷ್ಟು ಪ್ರದೇಶದಲ್ಲಿ ಮಳೆಯಾಗುತ್ತಿದೆ. ಸಾಮಾನ್ಯವಾಗಿ ಮುಂಗಾರನ್ನು ಬಹುತೇಕ ಜನರು ಇಷ್ಟ ಪಡುತ್ತಾರೆ. ಈ ವೇಳೆ ಹಲವು ಕಡೆ ಪ್ರವಾಸಗಳನ್ನು ಕೈಗೊಳ್ಳುತ್ತಾರೆ.
ಮಳೆಗಾಲದಲ್ಲಿ ತಾಜಾ ಗಾಳಿ ಸಿಗುತ್ತದೆ. ಇದು ಒಳ್ಳೆಯ ಬೆಳವಣಿಯಾಗಿದ್ದರೂ ತಾಜಾ ಗಾಳಿಯ ಜೊತೆ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಬರುತ್ತವೆ. ಶೀತ, ಕೆಮ್ಮು, ಜ್ವರ ಸೇರಿದಂತೆ ಹಲವು ರೋಗಗಲು ಕಾಣಿಸಿಕೊಳ್ಳುತ್ತವೆ.
ಆರ್ದ್ರತೆಯಿಂದ ಮಳೆಗಾಲಕ್ಕೆ ಹವಾಮಾನ ಬದಲಾದಂತೆ ದೇಹವೂ ಅದಕ್ಕೆ ತಕ್ಕಂತೆ ಬದಲಾವಣೆ ಆಗುತ್ತದೆ. ಕೆಮ್ಮು ಮತ್ತು ಶೀತ ದೇಹದ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಆಗಿವೆ. ಆದರೆ ಕಾಲರಾ, ಚಿಕೂನ್ ಗುನ್ಯಾ, ಮಲೇರಿಯಾ ಮುಂತಾದ ಮಾರಣಾಂತಿಕ ಗಂಭೀರ ಕಾಯಿಲೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ಡೆಂಗ್ಯೂ: ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುವ ರೋಗವೆಂದರೆ ಡೆಂಗ್ಯೂ. ಇದು ಸೊಳ್ಳೆಗಳಿಂದ ಹರಡುತ್ತದೆ. ನಿಂತ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡಲಿದ್ದು, ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಬರುತ್ತದೆ. ಹೀಗಾಗಿ ಸೊಳ್ಳೆಗಳಿಂದ ದೂರ ಇರಬೇಕು. ಡೆಂಗ್ಯೂವಿನ ಸಾಮಾನ್ಯ ಲಕ್ಷಗಳೆಂದರೆ ಅಧಿಕ ಜ್ವರ, ದದ್ದುಗಳು, ತಲೆನೋವು, ಕಡಿಮೆ ಪ್ಲೇಟ್‌ಲೆಟ್‌ಗಳು ಹಾಗೂ ಗ್ರಂಥಿಗಳು ಊದಿಕೊಳ್ಳುವುದು.
ಚಿಕೂನ್ ಗುನ್ಯಾ: ನಿಂತ ನೀರಿನಲ್ಲಿ ವಾಸಿಸುವ ಸೊಳ್ಳೆಗಳಿಂದ ಚಿಕೂನ್‌ಗುನ್ಯಾ ಉಂಟಾಗುತ್ತದೆ. ಮನೆಗಳ ಮುಂದೆ ನಿಂತ ನೀರು, ಚರಂಡಿ, ನೀರಿನ ಪೈಪ್‌ಗಳು ಇತ್ಯಾದಿಗಳಲ್ಲಿ ಸೊಳ್ಳೆಗಳ ಮೂಲಕ ಹರಡುತ್ತದೆ. ಚಿಕೂನ್‌ಗುನ್ಯೂ ನೇರವಾಗಿ ಕೀಲುಗಳ ಮೇಲೆ ದಾಳಿ ಮಾಡುತ್ತದೆ. ಆಯಾಸ, ಶೀತ, ಅಧಿಕ ಜ್ವರ ರೋಗದ ಇತರೆ ಲಕ್ಷಣಗಳಾಗಿವೆ.
ಮಲೇರಿಯಾ: ಮಲೇರಿಯಾ ಕೂಡ ನಿಂತ ನೀರಿನಲ್ಲಿ ಉತ್ಪಾತ್ಪಿಯಾಗುವ ಸೊಳ್ಳೆಗಳಿಂದ ಕಾಣಿಸಿಕೊಳ್ಳುವ ರೋಗವಾಗಿದೆ. ಅಧಿಕ ಜ್ವರ, ಇಡೀ ದೇಹ ನೋವಿನಿಂದ ಬಳಲುವುದು, ದೇಹ ತೆಳುವಾಗುವುದು, ಬೆವರುವುದು, ಚಳಿ, ತೀವ್ರ ರಸ್ತಹೀನತೆ ಈ ರೋಗದ ಪ್ರಮುಖ ಲಕ್ಷಣಗಳು. ಈ ರೋಗಗಳ ಜೊತೆಗೆ ಹೊಟ್ಟೆಯ ಸೋಂಕು, ಕಾಲರಾ, ಟೈಫಾಯಿಡ್, ವೈರಲ್ ಫೀವರ್, ಅತಿಸಾರ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ.
ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ರೋಗಗಳನ್ನು ತಡೆಗಟ್ಟುವುದು ಹೇಗೆ?
ಮಳೆಗಾಲದಲ್ಲಿ ಸಾಮಾನ್ಯವಾಗಿ ಹವಾಮಾನ ಬದಲಾಗುವುದರಿಂದ ಕೆಲವೊಮ್ಮೆ ಮನುಷ್ಯನ ದೇಹ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ವಾತಾವರಣಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತದೆ. ಮಾನ್ಸೂನ್ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕುತ್ತದೆ.
- ಮನೆ ಮುಂದೆ ನಿಂತ ನೀರಿದ್ದರೆ ಮೊದಲು ಅದನ್ನು ತೆಗೆದುಹಾಕಿ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು
- ಸೊಳ್ಳೆಗಳು ಮನೆಗೆ ಬಾರದಂತೆ ಸೊಳ್ಳೆ ಪರದೆಗಳನ್ನು ಅವಳಡಿಸಿ, ಸೊಳ್ಳೆ ಕಚ್ಚದಂತೆ ನಿವಾರಕ ಕ್ರೀಮ್‌ಗಳನ್ನು ಹಚ್ಚಿಕೊಳ್ಳಿ
- ಬೇಯಿಸಿದ ಆಹಾರವನ್ನು ಸೇವಿಸಿ. ವಿಶೇಷವಾಗಿ ಕುದಿಸಿದ ಶುದ್ದ ಬಿಸಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು
- ಹಣ್ಣು ಅಥವಾ ತರಕಾರಿಗಳನ್ನು ಬಿಸಿ ನೀರಿನಿಂದ ತೊಳೆದು ಬಳಸಿ. ಬೇಯಿಸಿದ ತರಾಕಾರಿ ಸೇವಿಸಿ
- ಮಕ್ಕಳು ಹೊರಗಡೆ ಯಿಂದ ಬಂದರೆ ಅವರ ಕೈಕಾಲು ಚೆನ್ನಾಗಿ ತೊಳೆಯಿರಿ, ಇಲ್ಲವೇ ಕೈಕಾಲು ತೊಳೆಯುವಂತೆ ಸೂಚಿಸಿ
- ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರ ಸೇವಿಸುವುದನ್ನು ತಪ್ಪಿಸಿದರೆ ಉತ್ತಮ, ಮನೆಯಲ್ಲಿ ತಯಾರಿಸಿದ ಆಹಾರವನ್ನು ಯಾವುದೇ ಕಾರಣಕ್ಕೂ ತೆರೆದಿಡಬೇಡಿ
- ಕೊಬ್ಬಿನಾಂಶ ಹಾಗೂ ಎಣ್ಣೆಯಿಂದ ಮಾಡಿದ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ
- ವಿಶೇಷವಾಗಿ ಡೈರಿ ಉತ್ಪನ್ನಗಳನ್ನು ತಿನ್ನಬೇಡಿ. ಇವುಗಳಲ್ಲಿ ಬ್ಯಾಕ್ಟೀರಿಯಾಗಳು, ಇತರೆ ಸೂಕ್ಷ್ಮಜೀವಿಗಳು ಇರುವ ಸಾಧ್ಯತೆ ಇರುತ್ತದೆ.
- ಯಾವುದೇ ರೋಗಗಳು ಬಾರದಂತೆ ಯೋಗ, ಧ್ಯಾನದ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ಇದನ್ನೂ ಓದಿ: ಮುಂಗಾರು ಮಳೆಯ ಸಮಯ, ಶಾಲಾ ವಿದ್ಯಾರ್ಥಿಗಳು ಮಳೆಗಾಲದಲ್ಲಿ ವಹಿಸಬೇಕಾದ ಎಚ್ಚರಿಕೆಗಳೇನು?