Monsoon pet care: ಮುದ್ದಿನ ನಾಯಿಗೂ ಶೀತ ಜ್ವರ ಬರಬಹುದು, ಮಳೆಗಾಲದಲ್ಲಿ ಸಾಕುಪ್ರಾಣಿಗಳ ಕಾಳಜಿ ವಹಿಸಿ, ಈ 5 ಆರೋಗ್ಯ ಸಲಹೆಗಳನ್ನು ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Monsoon Pet Care: ಮುದ್ದಿನ ನಾಯಿಗೂ ಶೀತ ಜ್ವರ ಬರಬಹುದು, ಮಳೆಗಾಲದಲ್ಲಿ ಸಾಕುಪ್ರಾಣಿಗಳ ಕಾಳಜಿ ವಹಿಸಿ, ಈ 5 ಆರೋಗ್ಯ ಸಲಹೆಗಳನ್ನು ಗಮನಿಸಿ

Monsoon pet care: ಮುದ್ದಿನ ನಾಯಿಗೂ ಶೀತ ಜ್ವರ ಬರಬಹುದು, ಮಳೆಗಾಲದಲ್ಲಿ ಸಾಕುಪ್ರಾಣಿಗಳ ಕಾಳಜಿ ವಹಿಸಿ, ಈ 5 ಆರೋಗ್ಯ ಸಲಹೆಗಳನ್ನು ಗಮನಿಸಿ

Monsoon pet care in Kannada: ಮಳೆಗಾಲದಲ್ಲಿ ಸಾಕುಪ್ರಾಣಿಗಳ ರಕ್ಷಣೆಗೆ ವಿಶೇಷ ಕಾಳಜಿವಹಿಸಬೇಕು. ಅವುಗಳಿಗೆ ತಾಜಾ ಆಹಾರ ನೀಡಬೇಕು. ಹೆಲ್ತ್‌ ಚೆಕಪ್‌ ಮಾಡಬೇಕು. ರೋಮ ಮತ್ತು ಚರ್ಮ ಗಮನಿಸುತ್ತ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವುಗಳನ್ನು ಆಕ್ಟಿವ್‌ ಆಗಿ ಇಡಬೇಕು.

ಮಳೆಗಾಲದಲ್ಲಿ ಸಾಕುಪ್ರಾಣಿಗಳ ಕಾಳಜಿ ವಹಿಸಿ, ಈ 5 ಆರೋಗ್ಯ ಸಲಹೆಗಳನ್ನು ಗಮನಿಸಿ
ಮಳೆಗಾಲದಲ್ಲಿ ಸಾಕುಪ್ರಾಣಿಗಳ ಕಾಳಜಿ ವಹಿಸಿ, ಈ 5 ಆರೋಗ್ಯ ಸಲಹೆಗಳನ್ನು ಗಮನಿಸಿ (Freepik)

ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದ ಬಿಡದೆ ಮಳೆ ಸುರಿಯುತ್ತಿದೆ. ಮಳೆಯಲ್ಲಿ ಮನುಷ್ಯರು ಮಾತ್ರವಲ್ಲದೆ ಸಾಕು ಪ್ರಾಣಿಗಳು ಥರಗುಟ್ಟುತ್ತಿವೆ. ಇದೇ ಸಮಯದಲ್ಲಿ ಮನೆಯಲ್ಲಿ ಸಾಕುವ ನಾಯಿ ಇತ್ಯಾದಿ ಸಾಕು ಪ್ರಾಣಿಗಳ ಆರೋಗ್ಯ ಹಾಳಾಗುತ್ತದೆ. ಸಾಕುಪ್ರಾಣಿಗಳನ್ನು ಜತನದಿಂದ ಸಾಕುತ್ತ ಇರುವವರು ಇವುಗಳನ್ನು ತಮ್ಮ ಮಕ್ಕಳಿಗಿಂತ ತುಸು ಹೆಚ್ಚೇ ಜತನದಿಂದ ನೋಡಿಕೊಳ್ಳುತ್ತಾರೆ. ಎಲ್ಲಾದರೂ ಇವುಗಳಿಗೆ ತುಸು ಆರೋಗ್ಯ ಏರುಪೇರಾದರೂ ಒದ್ದಾಡುತ್ತಾರೆ. ಸಾಕು ಪ್ರಾಣಿಗಳು ತುಂಬಾ ಸೂಕ್ಷ್ಮ. ತುಸು ಆರೋಗ್ಯ ಹೆಚ್ಚುಕಮ್ಮಿಯಾದರೂ ಗಂಭೀರ ಪರಿಣಾಮ ಉಂಟಾಗುತ್ತದೆ. ಈ ಪ್ರಾಣಿಗಳಿಗೆ ಮನೆಯಲ್ಲಿಯೇ ಸಿದ್ಧಪಡಿಸಿದ ತಾಜಾ ಆಹಾರ ನೀಡಬೇಕು. ಚರ್ಮದ ಕಾಳಜಿಗೆ ಹೆಚ್ಚಿನ ಗಮನ ನೀಡಬೇಕು. ವಿವಿಧ ಫಂಗಲ್‌ ಇನ್‌ಫೆಕ್ಷನ್‌ಗೆ ಒಳಗಾಗದಂತೆ ನೋಡಿಕೊಳ್ಳಬೇಕು. ಚರ್ಮ ಕೆಂಪಾಗದಂತೆ, ಚರ್ಮದಲ್ಲಿ ದದ್ದು ಆಗದಂತೆ ನೋಡಿಕೊಳ್ಳಬೇಕು.

"ಮಳೆಯ ಸಮಯದಲ್ಲಿ ವಾತಾವರಣ ಕೂಲ್‌ ಆಗಿರುತ್ತದೆ. ಹೊರಗಿನ ವಾತಾವರಣ ನೋಡಲು ಆಹ್ಲಾದಕರವಾಗಿರುತ್ತದೆ. ಈ ಮಳೆಗಾಲ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಮನುಷ್ಯರಿಗೆ ಶೀತ ನೆಗಡಿ ಗಂಟಲು ನೋವು ಜ್ವರ ಬರುವಂತೆ ಪ್ರಾಣಿಗಳ ಆರೋಗ್ಯವೂ ಕೆಡುತ್ತದೆ. ನಮ್ಮ ಸಾಕುಪ್ರಾಣಿಗಳು ಕಡಿಮೆ ರೋಗನಿರೋಧಕ ಶಕ್ತಿಯಿಂದ ಬಳಲುತ್ತವೆ. ಅಲರ್ಜಿಗಳು ಅವುಗಳಿಗೆ ಸಾಕಷ್ಟು ತೊಂದರೆ ಉಂಟುಮಾಡಬಹುದು. ಸಾಕುಪ್ರಾಣಿಗಳ ಆರೋಗ್ಯಕ್ಕೆ ಗಮನ ಹರಿಸಬೇಕು" ಎಂದು ಸ್ಪಾಟ್‌ ಸಹ ಸ್ಥಾಪಕಿ ಗರಿಮಾ ಕೌಶಲ್‌ ಹೇಳಿದ್ದಾರೆ. ಮಳೆಗಾಲದಲ್ಲಿ ಸಾಕು ಪ್ರಾಣಿಗಳ ಕಾಳಜಿ ಹೀಗಿರಲಿ ಎಂದು ಇವರು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

ತಾಜಾ ಆಹಾರ ನೀಡಿ

ಒಂದು ಬೌಲ್‌ನಲ್ಲಿ ಬೆಚ್ಚಗಿನ ತಾಜಾ ಆಹಾರವನ್ನು ನೀಡಿ. ಈ ಆಹಾರ ಪೋಷಕಾಂಶ ಭರಿತವಾಗಿರಲಿ. ತರಕಾರಿ, ಹಣ್ಣು ಹಂಪಲುಗಳನ್ನು ಒಳಗೊಂಡ ಆಹಾರ ನೀಡಿ. ಮಾಂಸ ನೀಡುವುದಾದರೆ ಅದನ್ನು ಚೆನ್ನಾಗಿ ಬೇಯಿಸಿ ನೀಡಿ.

ಮಂಕಾಗಲು ಬಿಡಬೇಡಿ

ಮಳೆಗಾಲ ಎಂದು ಅವುಗಳನ್ನು ಮೂಲೆ ಸೇರಿಸಬೇಡಿ. ವಾಕಿಂಗ್‌ ತಪ್ಪಿಸಬೇಡಿ. ಹೊರಗೆ ಮಳೆ ಸುರಿಯುತ್ತಿದ್ದಾರೆ ಒಳಗೆ ಸುತ್ತಾಡಿಸಿ. ಇಲ್ಲವಾದರೆ ನಿಮಗೆ ಮತ್ತು ನಿಮ್ಮ ನಾಯಿಗೆ ರೇನ್‌ಕೋಟ್‌ನಂತಹ ವ್ಯವಸ್ಥೆ ಮಾಡಿ. ಮಾನ್ಸೂನ್‌ನಲ್ಲಿ ಖುಷಿಯಾಗಿ ವಾಕ್‌ ಮಾಡಿಸಿ. ಇದರಿಂದ ಸಾಕುಪ್ರಾಣಿಗಳ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಆರೋಗ್ಯ ತಪಾಸಣೆ

ಹವಾಮಾನ ಬದಲಾಗುತ್ತ ಇರುತ್ತದೆ. ಸಾಕುಪ್ರಾಣಿಗಳಿಗೆ ಚಳಿ ಮತ್ತು ಜ್ವರ ಬರಬಹುದು. ಹೀಗಾಗಿ ಪೆಟ್‌ ಅನ್ನು ನಿಯಮಿತವಾಗಿ ವೈದ್ಯರ ತಪಾಸಣೆಗೆ ಒಳಪಡಿಸಿ.

ವ್ಯಾಕ್ಸಿನೇಷನ್‌ ಮತ್ತು ಪ್ರೊಬಯೋಟಿಕ್ಸ್‌

ನಿಮ್ಮ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ನೀಡುವ ಲಸಿಕೆಗಳನ್ನು ನೀಡಲು ತಪ್ಪಿಸಬೇಡಿ. ಪ್ರೊಬಯೋಟಿಕ್ಸ್‌ ಇರುವ ಆಹಾರ ನೀಡಿ. ಅವುಗಳ ಶಕ್ತಿ ಹೆಚ್ಚುವಂತೆ ಕಾಳಜಿವಹಿಸಿ.

ರೋಮ ಮತ್ತು ಚರ್ಮ ಪರಿಶೀಲನೆ

ಸಾಕುಪ್ರಾಣಿಗಳ ರೋಮ ಮತ್ತು ಚರ್ಮದಲ್ಲಿ ಏನಾದರೂ ಅನಾರೋಗ್ಯದ ಲಕ್ಷಣಗಳಿವೆಯೇ ಎಂದು ಪರಿಶೀಲಿಸಿ. ನಿಯಮಿತವಾಗಿ ಸಾಕುಪ್ರಾಣಿಗಳನ್ನು ಶುಚಿಗೊಳಿಸಿ. ಈ ಮಳೆಗಾಲದಲ್ಲಿ ಅವುಗಳು ಬೆಚ್ಚಗಿರುವಂತೆ, ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಿ.

Whats_app_banner