ಕನ್ನಡ ಸುದ್ದಿ  /  ಜೀವನಶೈಲಿ  /  Mothers Day 2024: ಈ ಸಲ ಅಮ್ಮಂದಿರ ದಿನಕ್ಕೆ ನಿಮ್ಮ ಅಮ್ಮನಿಗೆ ಡಿಫ್ರೆಂಟ್‌ ಗಿಫ್ಟ್‌ ಕೊಡಬೇಕು ಅಂತಿದ್ರೆ ಇಲ್ಲಿದೆ 10 ಐಡಿಯಾ

Mothers Day 2024: ಈ ಸಲ ಅಮ್ಮಂದಿರ ದಿನಕ್ಕೆ ನಿಮ್ಮ ಅಮ್ಮನಿಗೆ ಡಿಫ್ರೆಂಟ್‌ ಗಿಫ್ಟ್‌ ಕೊಡಬೇಕು ಅಂತಿದ್ರೆ ಇಲ್ಲಿದೆ 10 ಐಡಿಯಾ

ತಾಯಿಯ ಪ್ರೀತಿ, ಮಮತೆ, ಅಮ್ಮನ ಅನನ್ಯತೆಯನ್ನು ಗೌರವಿಸಿ, ಆಧರಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ವಿಶ್ವ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಮ್ಮಂದಿರ ದಿನದಂದು ನಿಮ್ಮಮ್ಮಂಗೆ ಡಿಫ್ರೆಂಟ್‌ ಆಗಿರೋ ಗಿಫ್ಟ್‌ ಕೊಡಬೇಕು ಅಂತ ಯೋಚಿಸ್ತಾ ಈ ಐಡಿಯಾಗಳು ನಿಮಗೆ ಸಹಾಯವಾಗಬಹುದು.

ಅಮ್ಮಂದಿರ ದಿನಕ್ಕೆ ನಿಮ್ಮಮ್ಮಂಗೆ ಡಿಫ್ರೆಂಟ್‌ ಗಿಫ್ಟ್‌ ಕೊಡಬೇಕು ಅಂತಿದ್ರೆ ಇಲ್ಲಿದೆ ಐಡಿಯಾ
ಅಮ್ಮಂದಿರ ದಿನಕ್ಕೆ ನಿಮ್ಮಮ್ಮಂಗೆ ಡಿಫ್ರೆಂಟ್‌ ಗಿಫ್ಟ್‌ ಕೊಡಬೇಕು ಅಂತಿದ್ರೆ ಇಲ್ಲಿದೆ ಐಡಿಯಾ

ತಾಯಿ ನವಮಾಸಗಳ ಕಾಲ ನಮ್ಮನ್ನು ಹೊಟ್ಟೆಯಲ್ಲಿ ಹೊತ್ತು, ಹೆತ್ತು, ಸಾಕಿ ಸಲುಹುವ ದೇವತೆ. ಇಡೀ ಜಗತ್ತು ನಮ್ಮೆದುರು ತಿರುಗಿ ನಿಂತಾಗ ನಮ್ಮ ಜೊತೆ ನಿಲ್ಲುವ ಜೀವ ಒಂದಿದ್ದರೆ ಅದು ನಮ್ಮ ಅಮ್ಮ. ತನ್ನ ಕುಟುಂಬ, ಮಕ್ಕಳಿಗೆ ನಿಸ್ವಾರ್ಥವಾಗಿ ದುಡಿಯುವ ಜೀವವದು. ತಾಯಿ ಎಂದರೆ ಮಮತೆ, ತಾಯಿ ಎಂದರೆ ಪ್ರೀತಿ, ತಾಯಿ ಎಂದರೆ ತ್ಯಾಗ. ಇಂತಹ ಅನನ್ಯ ಭಾವದ ಅಮ್ಮನಿಗೆ ಗೌರವ ಸಲ್ಲಿಸುವ ಒಂದು ವಿಶೇಷ ದಿನ ಎಂದರೆ ಅದು ವಿಶ್ವ ಅಮ್ಮಂದಿರ ದಿನ. ಪ್ರತಿವರ್ಷ ಮೇ 8 ರಂದು ವಿಶ್ವ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 12ರಂದು ವಿಶ್ವ ಅಮ್ಮಂದಿರ ದಿನ ಅಥವಾ ತಾಯಂದಿರ ದಿನಾಚರಣೆ ಇದೆ. ಭಾರತ, ಅಮೆರಿಕ, ಲಂಡನ್‌ ಸೇರಿದಂತೆ ಹಲವು ದೇಶಗಳಲ್ಲಿ ಈ ದಿನದಂದು ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಈ ವರ್ಷ ಅಮ್ಮಂದಿರ ದಿನಕ್ಕೆ ನೀವು ಡಿಫ್ರೆಂಟ್‌ ಆಗಿರುವ ಗಿಫ್ಟ್‌ ನೀಡುವ ಮೂಲಕ ನಿಮ್ಮ ತಾಯಿಯನ್ನು ಖುಷಿ ಪಡಿಸಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಗಿಫ್ಟ್‌ ಐಡಿಯಾಗಳು. ಈ ಗಿಫ್ಟ್‌ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ನಿಮ್ಮ ತಾಯಿಯನ್ನು ಖುಷಿ ಪಡಿಸಬಹುದು.

ತಾಯಂದಿರ ದಿನದಂದು ನಿಮ್ಮ ಅಮ್ಮನಿಗೆ ಹೊಂದುವ ಅವರ ಆಸಕ್ತಿಯನ್ನು ಪರಿಗಣಿಸಿ ಗಿಫ್ಟ್‌ ನೀಡುವುದು ಬಹಳ ಮುಖ್ಯವಾಗುತ್ತದೆ. ಈ 10 ಗಿಪ್ಟ್‌ ಐಡಿಯಾಗಳಲ್ಲಿ ನಿಮಗೆ ಯಾವುದಾದರೂ ಮೆಚ್ಚುಗೆಯಾಗಬಹುದು.

ವೆಲ್‌ನೆಸ್‌ ಕಿಟ್‌

ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ನಿಮ್ಮ ತಾಯಿ ಹೆಲ್ತ್‌ ಕಾನ್ಸಿಯಸ್‌ ಆಗಿದ್ದರೆ ಇವರಿಗೆ ವೆಲ್‌ನೆಸ್‌ ಕಿಟ್‌ ಸಹಾಯವಾಗಬಹುದು. ಯೋಗ, ಧ್ಯಾನಕ್ಕೆ ನೆರವಾಗುವ ವಸ್ತುಗಳು ಹಾಗೂ ದೇಹವನ್ನು ಡಿಟಾಕ್ಸ್‌ ಮಾಡುವ ವಸ್ತುಗಳಿರುವ ಕಿಟ್‌ ನೀಡಬಹುದು. ಇದರಿಂದ ಅವರು ಖಂಡಿತ ಖುಷಿ ಪಡುತ್ತಾರೆ. ಇದರೊಂದಿಗೆ ಅವರಿಗೆ ಮನಸ್ಸು ಚೈತನ್ಯ ನೀಡುವ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗುವ ಮೂಲಕವು ಅವರ ಮಾನಸಿಕ ಆರೋಗ್ಯ ವೃದ್ಧಿಯಾಗುವಂತೆ ಮಾಡಬಹುದು.

ಆಭರಣಗಳು

ಆಭರಣ ಹೆಣ್ಣುಮಕ್ಕಳಿಗೆ ಇಷ್ಟವಾಗುವುದಿಲ್ಲ ಎಂಬ ಮಾತೇ ಇಲ್ಲ. ನಿಮ್ಮ ತಾಯಿ ಇತ್ತೀಚಿನ ದಿನಗಳಲ್ಲಿ ತೆಗೆದುಕೊಳ್ಳಬೇಕು ಎಂದು ಆಸೆ ಪಡುತ್ತಿರುವ ಆಭರಣವನ್ನು ನೀಡುವ ಮೂಲಕ ಸರ್ಪ್ರೈಸ್‌ ಮಾಡಬಹುದು. ಅಲ್ಲದೇ ಅವರ ಲಕ್ಕಿ ಸ್ಟೋನ್‌ ಇರುವ ಉಂಗುರ, ಪೆಂಡೆಂಟ್‌ ಇಂತಹವನ್ನು ಕೂಡ ನೀಡಬಹುದು. ಇದರಿಂದ ಅವರು ಸಖತ್‌ ಖುಷಿಯಾಗುತ್ತಾರೆ.

ನೆಚ್ಚಿನ ಪುಸ್ತಕಗಳು

ನಿಮ್ಮ ತಾಯಿ ಓದಿನ ಮೇಲೆ ಆಸಕ್ತಿ ಹೊಂದಿದವರಾಗಿದ್ದರೆ ಅವರಿಗೆ ಒಂದಿಷ್ಟು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು. ಅವರ ಆಸಕ್ತಿಯನ್ನು ಗಮನಿಸಿ, ಅದಕ್ಕೆ ತಕ್ಕ ಹಾಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ. ಇದು ಅವರಿಗೆ ಮನೆಯಲ್ಲಿ ಸಮಯ ಕಳೆಯಲು ಹೇಳಿ ಮಾಡಿಸಿದಂತಿರುತ್ತದೆ.

ಅಡುಗೆ ಪರಿಕರಗಳು

ನಿಮ್ಮ ತಾಯಿ ಹೆಚ್ಚು ಹೊತ್ತು ಅಡುಗೆಮನೆಯಲ್ಲಿ ಸಮಯ ಕಳೆಯುವವರಾದರೆ, ಬಗೆ ಬಗೆ ಖಾದ್ಯಗಳನ್ನು ತಯಾರಿಸುವುದು ಅವರಿಗೆ ಇಷ್ಟವಾದರೆ ಅವರಿಗಾಗಿ ನೀವು ಲೇಟೆಸ್ಟ್‌ ಟ್ರೆಂಡ್‌ನ ಅಡುಗೆ ಪರಿಕರಗಳನ್ನು ಗಿಫ್ಟ್‌ ಆಗಿ ನೀಡಬಹುದು. ನಿಮ್ಮ ಅಡುಗೆಮನೆಯಲ್ಲಿ ಇಲ್ಲದ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಗಿಫ್ಟ್‌ ಮಾಡಿ, ಅದರ ಬಳಕೆಯನ್ನು ಕಲಿಸುವ ಮೂಲಕ ತಾಯಿಯನ್ನು ಖುಷಿ ಪಡಿಸಬಹುದು.

ಗಾರ್ಡನ್‌ ಕಿಟ್‌

ಹೆಚ್ಚಿನ ಮಹಿಳೆಯರಿಗೆ ಗಾರ್ಡನಿಂಗ್‌ ಮಾಡುವುದು ಇಷ್ಟವಿರುತ್ತದೆ. ಮನೆಯ ಮುಂದೆ, ಟೆರೆಸ್‌ ಮೇಲೆ ಗಿಡಗಳನ್ನು ನೆಡುವ ಮೂಲಕ ಸಮಯ ಕಳೆಯುತ್ತಾರೆ. ನಿಮ್ಮಮ್ಮನ್ನಲ್ಲೂ ಇಂತಹ ಹವ್ಯಾಸ ಇದ್ದರೆ ನೀವು ಅವರಿಗೆ ಗಾರ್ಡನಿಂಗ್‌ ಕಿಟ್‌ ನೀಡಬಹುದು. ಕೈಗವಸು, ಮಣ್ಣು ಪಾತಿ ಮಾಡುವ ಸಾಮಗ್ರಿಗಳು, ಸ್ಪ್ರೇಬಾಟಲ್‌, ಗಿಡಗಳ ಬೀಜಗಳು ಮುಂತಾದ ಸಾಮಗ್ರಿಗಳಿರುವ ಕಿಟ್‌ ನೀಡುವ ಮೂಲಕ ಖುಷಿ ಪಡಿಸಬಹುದು.

ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು

ಇಂದಿನ ಅಮ್ಮಂದಿರು ಸ್ಮಾರ್ಟ್‌ ಜಗತ್ತಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಮನೆಯಲ್ಲೇ ಇದ್ದರೂ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಬಳಸುವ ಬಯಕೆ ಹೊಂದಿರುತ್ತಾರೆ. ಅಂತಹವರಿಗಾಗಿ ಸ್ಮಾನ್‌ಫೋನ್‌, ಲ್ಯಾಪ್‌ಟಾಪ್‌, ಸಾರ್ಟ್‌ವಾಚ್‌ ಇಂತಹ ಪರಿಕರಗಳನ್ನ ಗಿಫ್ಟ್‌ ಆಗಿ ನೀಡಬಹುದು.

ಐತಿಹಾಸಿಕ ತಾಣಗಳಿಗೆ ಪ್ರವಾಸ ಕರೆದೊಯ್ಯುವುದು

ನಿಮ್ಮ ಅಮ್ಮ ಪ್ರವಾಸಪ್ರೇಮಿಯಾಗಿದ್ದರೆ ಅಥವಾ ಐತಿಹಾಸಿಕ ತಾಣಗಳನ್ನು ನೋಡುವುದು ಅವರಿಗೆ ಇಷ್ಟವಾದರೆ ಅಂತಹ ಸ್ಥಳಗಳಿಗೆ ಪ್ರವಾಸ ಆಯೋಜಿಸಬಹುದು.

ಬ್ಯೂಟಿ ಪ್ರಾಡಕ್ಟ್‌ಗಳು

ನಿಮ್ಮ ತಾಯಿ ಸೌಂದರ್ಯ ಆರಾಧಕರಾಗಿದ್ದರೆ ಅವರಿಗೆ ಬ್ಯೂಟಿ ಪ್ರಾಡಕ್ಟ್‌ಗಳನ್ನು ನೀಡಿದರೆ ಹೆಚ್ಚು ಖುಷಿಯಾಗಿ ಇರುತ್ತಾರೆ. ಮಸಾಜ್‌, ಫೇಶಿಯಲ್‌, ಅರೋಮಾಥೆರಪಿ ಉತ್ಪನ್ನಗಳನ್ನು ನೀಡಬಹುದು. ಇದರಿಂದ ಅವರು ಖುಷಿಯಾಗುತ್ತಾರೆ.

ಫೋಟೊಗಳು

ತಾಯಿಯ ವಿವಿಧ ಭಂಗಿಯ ಫೋಟೊಗಳನ್ನು ನೀವು ಸೆರೆ ಹಿಡಿದಿದ್ದರೆ, ಅದನ್ನು ಫ್ರೇಮ್‌ ಹಾಕಿಸಿ ಅವರಿಗೆ ಸರ್ಪ್ರೈಸ್‌ ರೂಪದಲ್ಲಿ ಗಿಫ್ಟ್‌ ನೀಡಬಹುದು. ತಾಯಿ ಹಾಗೂ ಕುಟುಂಬದವರು ಎಲ್ಲರೂ ಇರುವ ದೊಡ್ಡ ಫೋಟೊವನ್ನು ವಾಲ್‌ಫ್ರೇಮ್‌ ಆಗಿಸಬಹುದು.

ಕರಕುಶಲ ವಸ್ತುಗಳು

ನಿಮ್ಮ ತಾಯಿಗೆ ಮನೆ ಅಲಂಕಾರ ಮಾಡುವುದು ನೆಚ್ಚಿನ ಹವ್ಯಾಸವಾದ್ರೆ ನೀವು ಅವರಿಗೆ ಕರಕುಶಲ ವಸ್ತುಗಳನ್ನು ಗಿಫ್ಟ್‌ ಆಗಿ ನೀಡಬಹುದು.

ಈ ಎಲ್ಲವೂ ಡಿಫ್ರೆಂಟ್‌ ಐಡಿಯಾಗಳಿದ್ದು ಈ ವರ್ಷದ ಅಮ್ಮಂದಿರ ದಿನಕ್ಕೆ ಈಗಲೇ ಪ್ಲಾನ್‌ ಮಾಡಿ ಈ ಗಿಫ್ಟ್‌ಗಳನ್ನು ನಿಮ್ಮ ತಾಯಿಗೆ ನೀಡಿ, ಅಮ್ಮಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ.

 

ವಿಭಾಗ