ಮಕ್ಕಳ ಲಂಚ್‌ಬಾಕ್ಸ್‌ಗೆ ಏನ್ ಮಾಡ್ಲೀ ಅಂತ ಯೋಚನೆ ಮಾಡುವ ಅಮ್ಮಂದಿರೇ ಇದನ್ನೊಮ್ಮೆ ಓದಿ; ನಿಮ್ಮ ಮಕ್ಕಳಿಗೆ ಇದೇ ರೀತಿ ಬುತ್ತಿ ರೆಡಿ ಮಾಡಿ
ಮಕ್ಕಳ ಲಂಚ್ ಬಾಕ್ಸ್ ರೆಡಿ ಮಾಡುವುದು ಅಮ್ಮಂದಿರಿಗೊಂದೆ ತಲೆಬಿಸಿಯ ವಿಚಾರ ಎಷ್ಟೇ ಕ್ರಿಯೇಟಿವ್ ಆಗಿ ಅಥವಾ ಎಷ್ಟೇ ರುಚಿಕರವಾಗಿ ತಿಂಡಿ ಮಾಡಿ ಬಾಕ್ಸ್‌ಗೆ ಹಾಕಿಕೊಟ್ಟರೂ ಮಕ್ಕಳು ತಿನ್ನೋದೆ ಇಲ್ಲ ಎನ್ನುವುದು ಅವರ ಕಂಪ್ಲೇಂಟ್. ಆದರೆ ಇನ್ನು ಕೆಲವರಿಗೆ ದಿನವೂ ಏನು ಹೊಸತು ಮಾಡಲಿ ಎಂಬ ಚಿಂತೆ. ಅದಕ್ಕೆಲ್ಲ ಉತ್ತರವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ನೀವು ನಿಮ್ಮ ಮಕ್ಕಳಿಗೆ ಲಂಚ್ ಬಾಕ್ಸ್ ಪ್ಯಾಕ್ ಮಾಡಲು ಹೆಣಗಾಡುತ್ತಿದ್ದೀರಾ? ಯಾವ ರೀತಿ ಮಾಡಿಕೊಟ್ಟರೆ ಅವರಿಗೆ ಇಷ್ಟ ಆಗಬಹುದು ಎಂದು ಯೋಚನೆ ಮಾಡಿ ಸಾಕಾಯ್ತಾ? ಹಾಗಾದ್ರೆ ತಲೆಬಿಸಿ ಬೇಡ. ಮಕ್ಕಳ ಲಂಚ್ ಬಾಕ್ಸ್ ರೆಡಿ ಮಾಡುವುದು ಅಮ್ಮಂದಿರಿಗೊಂದೆ ತಲೆಬಿಸಿಯ ವಿಚಾರ ಎಷ್ಟೇ ಕ್ರಿಯೇಟಿವ್ ಆಗಿ ಅಥವಾ ಎಷ್ಟೇ ರುಚಿಕರವಾಗಿ ತಿಂಡಿ ಮಾಡಿ ಬಾಕ್ಸ್‌ಗೆ ಹಾಕಿಕೊಟ್ಟರೂ ಮಕ್ಕಳು ತಿನ್ನೋದೆ ಇಲ್ಲ ಎನ್ನುವುದು ಅವರ ಕಂಪ್ಲೇಂಟ್. ಆದರೆ ಇನ್ನು ಕೆಲವರಿಗೆ ದಿನವೂ ಏನು ಹೊಸತು ಮಾಡಲಿ ಎಂಬ ಚಿಂತೆ. ಅದಕ್ಕೆಲ್ಲ ಉತ್ತರವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಮಕ್ಕಳು ಎಂದರೆ ಅವರದ್ದಿನ್ನು ಬೆಳೆಯುವ ಹಂತ. ಹಾಗಾಗಿ ಉತ್ತಮ ಪೋಷಕಾಂಶ ತುಂಬಿರುವ ಆಹಾರ ನೀಡಿ ಅವರನ್ನು ಬೆಳೆಸಬೇಕಾಗುತ್ತದೆ. ಪ್ರೋಟೀನ್, ಮತ್ತು ವಿಟಮಿನುಗಳನ್ನು ಒಳಗೊಂಡ ಆಹಾರ ನೀಡುವುದು ಅತ್ಯಂತ ಮುಖ್ಯ. ಅವರಿಗೆ ಈ ರೀತಿ ಹೆಲ್ದಿಯಾಗಿರುವ ಸ್ನ್ಯಾಕ್ಸ್ ಮಾಡಿಕೊಡಿ.
ಸುಮ್ಮನೆ ತಿನ್ನಲು ಈ ರೀತಿ ಮಾಡಿಕೊಡಿ
ಕಡಲೆಕಾಳುಗಳನ್ನು ನೀರಿನಲ್ಲಿ 4-6 ಗಂಟೆಗಳ ಕಾಲ ನೆನೆಸಿ. ನಂತರ, ಇದನ್ನು ತೆಗೆದು ಹಸಿ ಮೆಣಸು, ಉಪ್ಪು, ಸಕ್ಕರೆ ಮತ್ತು ಅರಶಿನ ಹಾಕಿ ಸ್ವಲ್ಪ ಬಾಡಿಸಿ ಪಲ್ಯದ ರೀತಿ ಮಾಡಿಕೊಡಿ. ನೀವು ಇದನ್ನು ಹೆಸರು ಕಾಳು ಬಳಸಿಕೂಡ ಮಾಡಬಹುದು. ಪಲ್‌ಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಸಣ್ಣ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಬಾಕ್ಸ್‌ನಲ್ಲಿ ಹಾಕಿ. ಇನ್ನು ಕೆಲವೊಮ್ಮೆ ನೀವು ಪೂರ್ತಿ ಹಣ್ಣನ್ನು ಕೊಟ್ಟು ಕಳಿಸಿದರೆ ಅವರು ಅದನ್ನು ಅಷ್ಟಾಗಿ ತಿನ್ನುವುದಿಲ್ಲ.
ಇವುಗಳನ್ನು ನೀವು ಮಾಡಿಕೊಡಬಹುದು
ಮೊಸರನ್ನ
ಚಿತ್ರನ್ನ
ಕಾಳಿನ ಪಲ್ಯ
ಹಣ್ಣುಗಳು
ಪಂಚಾಮೃತ
ಹಸಿ ತರಕಾರಿ ಸಲಾಡ್
ಪಡ್ಡು
ರವಾ ದೋಸೆ
ನೀರು ದೋಸೆ
ಪಲ್ಯಗಳು
ಚಿಕ್ಕ ಸ್ವೀಟ್ಸ್ - ಸೈಡ್ಸ್
ರವೆ, ಮೊಸರು, ಮತ್ತು ಉಪ್ಪನ್ನು ಒಂದು ಬಟ್ಟಲಿನಲ್ಲಿ ಹಾಕಿ. ಉತ್ತಮವಾಗಿ ಮಿಶ್ರಣ ಮಾಡಿ ಬಹುಬೇಗ ದೋಸೆ ಮಾಡಬಹುದು. ಇದು ನಿಮಗೂ ಸುಲಭವಾಗುತ್ತದೆ.
ಯಾವತರದ ಲಂಚ್‌ಬಾಕ್ಸ್ ಬೆಸ್ಟ್?
ಸಾಧ್ಯವಾದಷ್ಟು ಪ್ಲಾಸ್ಟಿಕ್ ಲಂಚ್‌ಬಾಕ್ಸ್ ಅವೈಡ್ ಮಾಡಿ, ಸ್ಟೀಲ್ ಬಾಕ್ಸ್ ಕೊಡಿ ತಯಾರಿಕೆಯಲ್ಲಿ ಹೆಚ್ಚುವರಿ ಎಣ್ಣೆ ಅಥವಾ ತುಪ್ಪ ಬಳಸಬೇಡಿ ಇದು ಅವರ ಬ್ಯಾಗ್‌ಗೆ ಅಂಟಿಕೊಳ್ಳುತ್ತದೆ. ಆಗ ಅವರಿಗೆ ಅದು ಇಷ್ಟ ಆಗೋದಿಲ್ಲ. ಅಷ್ಟೊಂದು ಎಣ್ಣೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಕುಡಿಯುವ ನೀರಿನ ಬಾಟಲಿಯನ್ನು ಜೊತೆಗೆ ಕಳಿಸುವುದನ್ನು ಮರೆಯದಿರಿ