Motivation: ನಮಗೇನು ಬೇಕು ಎನ್ನುವುದನ್ನು ತಿಳಿದುಕೊಂಡರೆ ಮಿಕ್ಕಿದ್ದು ಹಿಂಬಾಲಿಸುತ್ತದೆ! ರಂಗಸ್ವಾಮಿ ಮೂಕನಹಳ್ಳಿ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  Motivation: ನಮಗೇನು ಬೇಕು ಎನ್ನುವುದನ್ನು ತಿಳಿದುಕೊಂಡರೆ ಮಿಕ್ಕಿದ್ದು ಹಿಂಬಾಲಿಸುತ್ತದೆ! ರಂಗಸ್ವಾಮಿ ಮೂಕನಹಳ್ಳಿ ಅಂಕಣ

Motivation: ನಮಗೇನು ಬೇಕು ಎನ್ನುವುದನ್ನು ತಿಳಿದುಕೊಂಡರೆ ಮಿಕ್ಕಿದ್ದು ಹಿಂಬಾಲಿಸುತ್ತದೆ! ರಂಗಸ್ವಾಮಿ ಮೂಕನಹಳ್ಳಿ ಅಂಕಣ

ರಂಗಸ್ವಾಮಿ ಮೂಕನಹಳ್ಳಿ ಬರಹ: ನಾವು ಏನು ಯೋಚಿಸುತ್ತೇವೆ ಅದೇ ಆಗುತ್ತೇವೆ ಎನ್ನುತ್ತದೆ ಒಂದು ನಾಣ್ನುಡಿ . ಹೌದು ನಮ್ಮೆಲ್ಲಾ ಒಟ್ಟುಚಿಂತನೆಗಳ ಮೊತ್ತವೇ ನಾವು . ನಮ್ಮನ್ನು ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆ , ಊಹಿಸಿಕೊಳ್ಳುತ್ತೇವೆ ಬದುಕು ಹಾಗೆಯೇ ರೂಪುಗೊಳ್ಳುತ್ತದೆ.

Motivation: ನಮಗೇನು ಬೇಕು ಎನ್ನುವುದನ್ನು ತಿಳಿದುಕೊಂಡರೆ ಮಿಕ್ಕಿದ್ದು ಹಿಂಬಾಲಿಸುತ್ತದೆ! ರಂಗಸ್ವಾಮಿ ಮೂಕನಹಳ್ಳಿ ಅಂಕಣ
Motivation: ನಮಗೇನು ಬೇಕು ಎನ್ನುವುದನ್ನು ತಿಳಿದುಕೊಂಡರೆ ಮಿಕ್ಕಿದ್ದು ಹಿಂಬಾಲಿಸುತ್ತದೆ! ರಂಗಸ್ವಾಮಿ ಮೂಕನಹಳ್ಳಿ ಅಂಕಣ

ರಂಗಸ್ವಾಮಿ ಮೂಕನಹಳ್ಳಿ ಬರಹ: ನಾವು ಏನು ಯೋಚಿಸುತ್ತೇವೆ ಅದೇ ಆಗುತ್ತೇವೆ ಎನ್ನುತ್ತದೆ ಒಂದು ನಾಣ್ನುಡಿ . ಹೌದು ನಮ್ಮೆಲ್ಲಾ ಒಟ್ಟುಚಿಂತನೆಗಳ ಮೊತ್ತವೇ ನಾವು . ನಮ್ಮನ್ನು ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆ , ಊಹಿಸಿಕೊಳ್ಳುತ್ತೇವೆ ಬದುಕು ಹಾಗೆಯೇ ರೂಪುಗೊಳ್ಳುತ್ತದೆ. ಇದನ್ನು ಸರಳ ಕನ್ನಡದಲ್ಲಿ ಮನಸ್ಸಿನಂತೆ ಮಹಾದೇವ ಎಂದಿದ್ದಾರೆ. ಸಂಸ್ಕೃತ ಸುಭಾಷಿತದಲ್ಲಿ ಯದ್ಭಾವಂ ತದ್ಭವತಿ ಎಂದಿದ್ದಾರೆ. ಯಾವ ಭಾವ , ಯೋಚನೆಯಿದೆಯೋ ಹಾಗೆ ಆಗುತ್ತದೆ ಎನ್ನುವುದು ಅರ್ಥ.

ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಸದಾ ಬದಲಾವಣೆ ಆಗುತ್ತಿರುತ್ತದೆ , ನಿತ್ಯವೂ ನೊರೆಂಟು ಘಟನೆಗಳು ಜರುಗುತ್ತವೆ. ಇವೆಲ್ಲವೂ ನಮ್ಮ ಯೋಚನೆಯ , ನಿರ್ಧಾರಗಳ ಫಲ. ಒಳ್ಳೆಯ ಯೋಚನೆಯ ಫಲಿತಾಂಶಒಳಿತನ್ನೂ ಕೆಟ್ಟ ಯೋಚನೆಗಳ ಫಲ ಕೆಡುಕನ್ನುನೀಡುತ್ತವೆ. ಹಿಂದಿನ ಅಧ್ಯಾಯವನ್ನು ಮತ್ತೊಮ್ಮೆ ಓದಿನೋಡಿ , ಅಲ್ಲಿ ಇಂದಿನ ನಮ್ಮ ಪರಿಸ್ಥಿತಿಗೆ ಬೇರಾರೂ ಕಾರಣವಲ್ಲ , ನಾವೇ ಕಾರಣಕರ್ತರು ಎಂದು ಹೇಳಲಾಗಿದೆ. ನಾವು ಎಂದರೆ ಯಾರು ? ನಮ್ಮ ಚಿಂತನೆಗಳೇ ನಾವು . ಹೀಗಾಗಿ ನಮ್ಮ ಚಿಂತನೆಗಳನ್ನು ನಿಯಂತ್ರಿಸುವುದರ ಮೂಲಕ ನಮ್ಮ ಬದುಕನ್ನು ಕೂಡ ನಿಯಂತ್ರಿಸಬಹುದು.

ನಮ್ಮ ಯೋಚನೆಗಳಿಗೆ , ಚಿಂತನೆಗಳಿಗೆ ಇರುವ ತಾಕತ್ತಿನ ಅರಿವು ನಮಗಾದರೆ ನಾವು ಎಂದಿಗೂ ಋಣಾತ್ಮಕ ಚಿಂತನೆಗಳನ್ನು ಮಾಡುವುದಿಲ್ಲ. ಧನಾತ್ಮಕ ಯೋಚನೆಯಿಂದ ಮಿರಾಕಲ್ ಸೃಷ್ಟಿಯಾಗುತ್ತದೆ. ವೈದ್ಯಕೀಯ ವಿಜ್ಞಾನವನ್ನು ಒಮ್ಮೆ ಗಮನಿಸಿ ನೋಡಿ . ಹತ್ತಿಪತ್ತು ಸಂಖ್ಯೆಯ ಇಲಿಗಳ ಮೇಲಿನ ಪ್ರಯೋಗ ಇದನ್ನು ಸಿದ್ಧಪಡಿಸಿದೆ. ಒಳ್ಳೆಯ ಮಾತು , ಒಳ್ಳೆಯ ವಾತಾವರದಲ್ಲಿದ್ದ ಇಲಿಗಳಿಗೂ , ಋಣಾತ್ಮಕ ವಾತಾವರಣದಲಿದ್ದ ಇಲಿಗಳಿಗೂ ಒಂದೇ ಆಹಾರವನ್ನು ನೀಡಲಾಗುತ್ತದೆ. ಧನಾತ್ಮಕ ಪರಿಸರದಲ್ಲಿನ ಇಲಿಗಳು ಹೆಚ್ಚು ಖುಷಿಯಿಂದ , ಆರೋಗ್ಯದಿಂದ ಇರುವುದು ಕಂಡು ಬಂದಿದೆ.

ನಿತ್ಯವೂ ನಾವು ಆಡುವ ಮಾತು , ನಡೆದು ಕೊಳ್ಳುವರೀತಿ ಅಭ್ಯಾಸವಾಗಿ ಬದಲಾಗುತ್ತದೆ. ಅಭ್ಯಾಸಗಳುನಿಧಾನವಾಗಿ ನಮ್ಮ ಪರಿಚಯವಾಗುತ್ತವೆ , ನಮ್ಮಪರಿಚಯ ನಮ್ಮ ಚಿಂತೆನಗಳನ್ನು ಜಗತ್ತಿಗೆ ಪ್ರಚುರಪಡಿಸುತ್ತವೆ. ಹೀಗಾಗಿ ನಾವು ನಿತ್ಯವೂ ನಮ್ಮ ಅಭ್ಯಾಸಗಳನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಬದುಕನ್ನು ಖಂಡಿತ ಬದಲಿಸಿಕೊಳ್ಳಬಹುದು.

ಧನಾತ್ಮಕ ಚಿಂತನೆಗಳಿಂದ ಎಲ್ಲವೂ ಸಾಧ್ಯ ಎನ್ನುವುದನ್ನು ಅವಹೇಳನ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಎಲ್ಲವೂ ಕೇವಲ ಯೋಚನೆ , ಚಿಂತನೆಗಳಿಂದ ಸಾಧಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ವಾದ ಇವರದು. ಹೊಟ್ಟೆ ತುಂಬಿದೆ ಎನ್ನುವ ಭಾವನೆಯಿಂದ ಎಷ್ಟು ದಿನ ಊಟ ಮಾಡದೆ ಇರಲು ಸಾಧ್ಯ? ನನಗೆ ಸಮಸ್ಯೆಗಳು ಇಲ್ಲ , ಅಥವಾಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ಧನಾತ್ಮಕ ಯೋಚನೆಯಿಂದ ಸಮಸ್ಯೆ ಪರಿಹಾರವಾಗುತ್ತದೆಯೇ ? ಎನ್ನುವ ಪ್ರಶೆಗಳನ್ನು ಕೇಳುತ್ತಾರೆ. ಗಮನಿಸಿ, ಚಿಂತನೆಗಳಿಗೆ ಜೀವ ಕೊಟ್ಟಾಗ ಮಾತ್ರ ಮೇಲೆ ಹೇಳಿದ ಚಮತ್ಕಾರ ನಡೆಯುತ್ತದೆ. ಇದನ್ನು ಕನ್ನಡದ ಒಂದು ನಾಣ್ನುಡಿ ಚೆನ್ನಾಗಿ ವಿವರಿಸುತ್ತದೆ. ದೇವರು ಕೊಟ್ಟಜೋಳಿಗೆ ಎಂದು ಮರಕ್ಕೆ ನೇತು ಹಾಕಿ ನಿದ್ದೆ ಮಾಡಿದರೆಧವಸ ಧಾನ್ಯಗಳು ಸಿಗುವುದಿಲ್ಲ ಎನ್ನುತ್ತದೆ ಆ ಮಾತು. ಸ್ವತಃ ದೇವರೇ ಜೋಳಿಗೆ ಕೊಟ್ಟಿದ್ದರೂ ಕೂಡ ಅದನ್ನು ಹಿಡಿದು ಭಿಕ್ಷೆಗೆ ಊರೂರು ಸುತ್ತಬೇಕಾದ್ದು ಕರ್ತವ್ಯ. ಕೆಲಸವನ್ನು ಸರಿಯಾಗಿ ಮಾಡದೆ ವಿತಂಡವಾದದಿಂದ ಯಾವುದೇ ಪ್ರಯೋಜವಿಲ್ಲ.

ನಂಬಿಕೆ , ಧನಾತ್ಮಕತೆ ಎಲ್ಲವೂ ಬದುಕಿಗೆ ಬೇಕು , ಅವೆಲ್ಲವುಗಳ ಜೊತೆಗೆ ನಿತ್ಯ ಜೀವನಕ್ಕೆ ಬೇಕಾಗುವ ಸಾಮಾನ್ಯ ಜ್ಞಾನ ಮತ್ತು ರಿಯಾಲಿಟಿಗಳ ಅರಿವು ಕೂಡ ಮುಖ್ಯ. ಯಾವ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಯಾರೂ ಹೇಳಿಕೊಡಲು ಸಾಧ್ಯವಿಲ್ಲ. ಅದನ್ನು ನಾವೇ ಕಲಿಯಬೇಕು.

ಬದುಕಿನ ಪ್ರಥಮ ಇಪ್ಪತ್ತು ವರ್ಷಗಳು ನನಗೇನು ಬೇಕು ಎನ್ನುವುದು ನನಗೆ ಗೊತ್ತಿರಲಿಲ್ಲ. ಬದುಕಿನಿಂದ ಏನು ಬಯಸಬೇಕು ಗೊತ್ತಿರಲಿಲ್ಲ. ಸದಾ ಬೇಸರ , ಜಿಗುಪ್ಸೆ ಎನ್ನುವ ಪದಗಳ ಜೊತೆಯಲ್ಲಿ ನನ್ನ ಜೀವನ ಸಾಗುತ್ತಿತ್ತು. ನನ್ನ ಕಣ್ಣಿಗೆ ಜಗತ್ತೆಲ್ಲವೂ ಶತ್ರುಗಳಂತೆ , ನನ್ನ ವಿರುದ್ಧ ಪಿತೂರಿ ಮಾಡುತ್ತಿರುವಂತೆ ಅನ್ನಿಸುತ್ತಿತ್ತು. ನನ್ನೆಲ್ಲಾ ಸೋಲುಗಳಿಗೆ ಬೇರೆಯವರೇ ಕಾರಣ , ಈ ಸಮಾಜ ಪಟ್ಟಭದ್ರ ಹಿತಾಸಕ್ತಿಗಳಿಂದ ತುಂಬಿ ಹೋಗಿದೆ , ಎಲ್ಲರೂ ಅವರವರಿಗೆ ಬೇಕಾದವರಿಗೆ ಸಹಾಯ ಮಾಡುತ್ತಾರೆ , ಹೀಗಾಗಿ ಅವರ ಬದುಕು ಹಸನಾಗಿದೆ ಎನ್ನುವ ಚಿಂತನೆಯಲ್ಲಿ ಮುಳುಗಿದ್ದೆ. ನನ್ನ ೨೩ ವಯಸ್ಸಿನಲ್ಲಿ ' ಬದುಕಲು ಕಲಿಯಿರಿ ' ಎನ್ನುವ ಪುಸ್ತಕ ಓದಲು ಸಿಕ್ಕಿತು. ಅದು ಬದುಕನ್ನು ಬದಲಿಸಿತು. ನಾವು ಚಿಂತಿಸುವ ರೀತಿ ಬದಲಾಯಿಸಿಕೊಳ್ಳುವುದರಿಂದ ಬದುಕನ್ನು ಬದಲಾಯಿಸಿಕೊಳ್ಳಬಹುದು ಎನ್ನುವುದನ್ನು ಆ ಪುಸ್ತಕ ಕಲಿಸಿತು. ಬರಿ ಪುಸ್ತಕ ಓದುವುದರಿಂದ ಬದಲಾವಣೆ ಸಾಧ್ಯವಿಲ್ಲ. ಅಲ್ಲಿನ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ.

ನನ್ನ ಮಗಳು ವರ್ಷದ ಮಗುವಾಗಿದ್ದ ಸಮಯದಿಂದ ಅವಳ ಕಿವಿಯಲ್ಲಿ ಐದು ಧನಾತ್ಮಕ ಪದಗಳನ್ನು ಹೇಳುತ್ತಾ ಬಂದೆವು. ಇಂದಿಗೆ ಅವುಗಳನ್ನು ಅವಳೇ ಜಪಿಸುತ್ತಾಳೆ. ಈ ಮಂತ್ರಗಳನ್ನು ನಿಮಗೂ ಹೇಳುವೆ . ಅದು ಕೇವಲ ತುಟಿಯ ಮೇಲಿನ ಶಬ್ದಗಳಾಗಿರದೆ, ಮನಸ್ಸಿನಿಂದ ಬಂದವಾಗಿರಲಿ .

  1. ಐ ಆಮ್ ದಿ ಬೆಸ್ಟ್ .
  2. ಟುಡೇ ಇಸ್ ಮೈ ಡೇ
  3. ಐ ಕ್ಯಾನ್ ಡು ಇಟ್
  4. ಐ ಆಮ್ ದಿ ವಿನ್ನರ್
  5. ಗಾಡ್ , ಯುವರ್ ವಿಥ್ ಮಿ

ನಂಬಿಕೆಯಿಲ್ಲದೆ ಮೇಲಿನ ಮಂತ್ರಗಳ ಉಚ್ಚಾರಣೆಯಿಂದ ಯಾವುದೇ ಪ್ರಯೋಜನವಿಲ್ಲ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಈ ಮಂತ್ರೋಪದೇಶ ತಪ್ಪದೆ ಮಾಡಿ .

ಹೋಗುವಮುನ್ನ: ನಮ್ಮ ಚಿಂತನೆಗಳನ್ನು ಬದಲಾಯಿಸಿಕೊಳ್ಳುವುದರ ಮೂಲಕ ಬದುಕನ್ನು ಬದಲಾಯಿಸಿಕೊಳ್ಳಬಹುದು . ಧನಾತ್ಮಕತೆ ಎಂದರೆ ರಿಯಾಲಿಟಿಯನ್ನು ಒಪ್ಪಿಕೊಂಡು ಬದಲಾವಣೆಗೆ ಚಿಂತಿಸುವುದು . ಯೋಚನೆ -ಭಾವನೆ -ಬದಲಾವಣೆ -ಕಾರ್ಯ ತತ್ಪರತೆ ಇವೆ ಧನಾತ್ಮಕತೆ .

  • ಬರಹ: ರಂಗಸ್ವಾಮಿ ಮೂಕನಹಳ್ಳಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner