Success Stories: ಸೋಲು ಬಂದಾಗ ಎದೆಗುಂದಬೇಡಿ, ಈ 5 ಸ್ಪೂರ್ತಿದಾಯಕ ಯಶೋಗಾಥೆಗಳನ್ನು ಓದಿ ಸ್ಪೂರ್ತಿ ಪಡೆಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Success Stories: ಸೋಲು ಬಂದಾಗ ಎದೆಗುಂದಬೇಡಿ, ಈ 5 ಸ್ಪೂರ್ತಿದಾಯಕ ಯಶೋಗಾಥೆಗಳನ್ನು ಓದಿ ಸ್ಪೂರ್ತಿ ಪಡೆಯಿರಿ

Success Stories: ಸೋಲು ಬಂದಾಗ ಎದೆಗುಂದಬೇಡಿ, ಈ 5 ಸ್ಪೂರ್ತಿದಾಯಕ ಯಶೋಗಾಥೆಗಳನ್ನು ಓದಿ ಸ್ಪೂರ್ತಿ ಪಡೆಯಿರಿ

How to overcome failure?: ಸೋಲು ಎನ್ನುವುದು ಯಶಸ್ಸಿಗೆ ದಾರಿ. ವೈಫಲ್ಯಕ್ಕೆ ಅಂಜಬಾರದು. ಜಗತ್ತಿನಲ್ಲಿ ಸೋಲಿನಿಂದ ಯಶಸ್ಸಿನತ್ತ ತಿರುಗಿದ ಐದು ಪ್ರಮುಖ ವ್ಯಕ್ತಿಗಳ ಸಕ್ಸಸ್‌ ಸ್ಟೋರಿ ಇಲ್ಲಿದೆ. ಸಾಧನೆಯ ಹಾದಿಯಲ್ಲಿರುವ ನಿಮಗಿದು ಸ್ಪೂರ್ತಿಯಾಗಬಹುದು.

 ಸ್ಪೂರ್ತಿದಾಯಕ ಯಶೋಗಾಥೆಗಳನ್ನು ಓದಿ
ಸ್ಪೂರ್ತಿದಾಯಕ ಯಶೋಗಾಥೆಗಳನ್ನು ಓದಿ

ಯಶಸ್ಸು ಪಡೆಯಲು ನನಗೆ 17 ವರ್ಷ ಮತ್ತು 114 ದಿನಗಳು ಬೇಕಾಯಿತು ಎಂದು ಲಿಯಾನ್‌ ಮೆಸ್ಸಿ ಹೇಳಿದ್ದಾನೆ. ಆದರೆ, ಈಗಿನ ಯುವ ತಲೆಮಾರಿನ ಕೆಲವರು ಕೆಲವೊಂದು ಸೋಲು ಕಂಡಾಗಲೇ ಹಿಂಜರಿಯುತ್ತಾರೆ. ಈ ಜಗತ್ತಿನಲ್ಲಿ ಯಶಸ್ಸು ಪಡೆದ ವ್ಯಕ್ತಿಗಳನ್ನೊಮ್ಮೆ ನೋಡಿ. ಯಾರೂ ಒಂದೇ ರಾತ್ರಿ ಕಳೆದು ಬೆಳಗಾಗುವಾಗ ಯಶಸ್ಸು ಪಡೆದಿರುವುದಲ್ಲ. ಅವರ ಯಶಸ್ಸಿನ ಹಿಂದೆ ನೂರಾರು ವೈಫಲ್ಯಗಳ ಕತೆ ಇರುತ್ತದೆ. ಸೋಲಿನಿಂದ ಕಂಗೆಟ್ಟವರು ಯಶಸ್ಸಿನತ್ತ ಸಾಗಲು ಹಿಂಜರಿಯಬಾರದು. ಈ ಮುಂದೆ ನೀಡಿದ ಐದು ಸಕ್ಸಸ್‌ ಸ್ಟೋರಿಗಳನ್ನೊಮ್ಮೆ ಓದಿ. ಸ್ಪೂರ್ತಿ ಹೊಂದಿರಿ.

ಥಾಮಸ್‌ ಎಡಿಸನ್‌

ಇವರ ಕತೆಯನ್ನು ನೀವು ಈಗಾಗಲೇ ಕೇಳಿರಬಹುದು. ಆದರೂ, ಸೋಲಿಗೆ ಹೆದರಬಾರದು ಎನ್ನುವುದಕ್ಕೆ ಸದಾ ನನಪಾಗೋ ವ್ಯಕ್ತಿ ಇವರು. ಬಲ್ಬ್‌ ಕಂಡು ಹಿಡಿದು ಜಗತ್ತಿಗೆ ಹೊಸ ಬೆಳಕು ನೀಡಿದ ವ್ಯಕ್ತಿ. ಇವರು ಒಂದು ಬಲ್ಬ್‌ ಕಂಡುಹಿಡಿಯುವ ಮೊದಲು 1000ಕ್ಕೂ ಹೆಚ್ಚು ಬಾರಿ ವೈಫಲ್ಯ ಕಂಡಿದ್ದಾರೆ.

ಥಾಮಸ್‌ ಎಡಿಸನ್‌ ವಿದ್ಯಾರ್ಥಿಯಾಗಿದ್ದಾಗ ಶಾಲೆಯಲ್ಲಿ ಪ್ರತಿನಿತ್ಯ ದೂರು. ಇವನ ಟೀಚರ್‌ ಇವನ ಅಮ್ಮನಲ್ಲಿ ಹೇಳುತ್ತಿದ್ದರಂತೆ, "ನಿಮ್ಮ ಮಗ ಓದುವುದರಲ್ಲಿ ಚುರುಕಿಲ್ಲ. ಈತ ಯಶಸ್ಸು ಪಡೆಯುವುದು ಸಾಧ್ಯವಿಲ್ಲ" ಎಂದು. ಈತನ ಮಿದುಳು ತುಂಬಾ ಸ್ಲೋ, ಈತನಿಗೆ ಬೋಧನೆ ಮಾಡುವುದು ವ್ಯರ್ಥ ಎಂದು ಹೇಳುತ್ತಿದ್ದರು. ಆದರೆ, ಹಲವು ಶತಮಾನಗಳ ಕಾಲ ನೆನಪಿಟ್ಟುಕೊಳ್ಳುವಂತಹ ಅನ್ವೇಷಣೆಯನ್ನು ಇದೇ ಥಾಮಸ್‌ ಎಡಿಸನ್‌ ಮಾಡಿರೋದು ಈಗ ಇತಿಹಾಸ. ಸಾವಿರ ಬಾರಿ ಬಲ್ಬ್‌ ಕಂಡುಹಿಡಿಯಲು ಸೋತರೂ ಇವರು ಹಿಂಜರಿಯಲಿಲ್ಲ. ಯಶಸ್ಸು ಪಡೆಯಲು ಬಯಸುವವರು ಇದನ್ನು ನೆನಪಿಟ್ಟುಕೊಳ್ಳಿ.

ಜೆ.ಕೆ. ರೋಲಿಂಗ್‌

ಥಾಮಸ್‌ ಎಡಿಸನ್‌ ಅವರು ಸೋಲುಗಳ ರಾಜ ಆಗಿದ್ದರು. ಆದರೆ, ರೋಲಿಂಗ್‌ ಅವರು ರಿಜೆಕ್ಷನ್‌ ಅಥವಾ ನಿರಾಕರಣೆಗಳ ಮಹಾರಾಣಿ. ನಿಮಗೆ ಹ್ಯಾರಿ ಪಾಟರ್‌ ಕತೆ ಗೊತ್ತಿರಬಹುದು. ಆ ಕತೆ, ಪುಸ್ತಕ ಬರೆದಿರುವುದು ಜೆಕೆ ರೋಲಿಂಗ್‌. ಈಕೆ ತನ್ನ ಪುಸ್ತಕ ಪ್ರಕಟಿಸಲು ಸಾಕಷ್ಟು ಪ್ರಯತ್ನಿಸಿದ್ದಳು. ಇವರು ಹಲವು ಪಬ್ಲಿಷರ್‌ಗಳನ್ನು ಭೇಟಿಯಾಗಿದ್ದರು. ಕಡಿಮೆಯೆಂದರೂ 12 ಪ್ರಕಾಶಕರು ಇವರ ಪುಸ್ತಕವನ್ನು ರಿಜೆಕ್ಟ್‌ ಮಾಡಿದ್ದರು. ಆದರೆ, ಬಳಿಕ ಈ ಪುಸ್ತಕ ಜಗತ್ತಿನ ಬೆಸ್ಟ್‌ ಸೆಲ್ಲರ್‌ ಪುಸ್ತಕವಾಗಗಿ ಹೊರಹೊಮ್ಮಿದ್ದು ಇತಿಹಾಸ.

ವಾಲ್‌ ಡಿಸ್ನಿ

ನಿಮ್ಮಲ್ಲಿ ಕ್ರಿಯೆಟಿವಿಟಿ ಇಲ್ಲ ಎಂದು ಹೇಳಿದ ನ್ಯೂಸ್‌ಪೇಪರ್‌ ವಾಲ್‌ ಡಿಸ್ನಿ ಎಂಬ ವ್ಯಕ್ತಿಯನ್ನು ಉದ್ಯೋಗದಿಂದ ತೆಗೆದುಹಾಕಿತ್ತು. ಇದು ವಾಲ್‌ ಡಿಸ್ನಿಯ ಜೀವನದಲ್ಲಿ ಟರ್ನಿಂಗ್‌ ಪಾಯಿಂಟ್‌. ತನ್ನ ಕಣ್ಣಿಗೆ ಬಿದ್ದ ಇಲಿಯನ್ನೇ ಜಗತ್ತಿನ ಪ್ರಮುಖ ಕಾರ್ಟೂನ್‌ ಕ್ಯಾರೆಕ್ಟರ್‌ ಆಗಿ ಪರಿವರ್ತಿಸಿದ ವ್ಯಕ್ತಿ ಇವರು. ಮಿಕ್ಕಿ ಮೌಸ್‌ ಈಗ ತುಂಬಾ ಫೇಮಸ್‌. ಡಿಸ್ನಿಗೆ 22 ಅಕಾಡೆಮಿ ಪ್ರಶಸ್ತಿಗಳು ಬಂದಿವೆ. ಇತಿಹಾಸದಲ್ಲಿಯೇ ಅತ್ಯಧಿಕ ಬಾರಿ ಆಸ್ಕರ್‌ಗೆ ನಾಮಿನೇಟೆಡ್‌ ಆದ ವ್ಯಕ್ತಿ ಇವರು. ದಿನಪತ್ರಿಕೆಯು ಇವರನ್ನು ಕೆಲಸದಿಂದ ತೆಗೆದಾಗ ಸಾಕಷ್ಟು ಕಷ್ಟವಾಗಿತ್ತು. ಆ ವೈಫಲ್ಯವೇ ಹೊಸ ಯಶಸ್ಸಿಗೆ ದಾರಿಯಾಯಿತು.

ಜಾನ್‌ ಕೋಮ್‌

ವಾಟ್ಸಪ್‌ ಬಳಸುವ ನಮಗೆಲ್ಲ ಜಾನ್‌ ಕೋಮ್‌ ಗೊತ್ತಿರಬೇಕು. ಆತನ ವಾಟ್ಸಪ್‌ ಸಹ ಸ್ಥಾಪಕ, ಈತ ಕೂಡ ಹಲವು ರಿಜೆಕ್ಷನ್‌ಗಳನ್ನು ಕಂಡವ. ಉಕ್ರೇನ್‌ನ ಸಣ್ಣ ಗ್ರಾಮದಲ್ಲಿ ಜನಿಸಿದ ಜಾನ್‌ ಕೋಮ್‌ ಕಷ್ಟದಲ್ಲಿಯೇ ಜೀವನ ಆರಂಭಿಸಿದ. ಈತನಿಗೆ ಫೇಸ್‌ಬುಕ್‌ ಕೆಲಸ ನೀಡಲು ನಿರಾಕರಿಸಿತ್ತು. ಬಳಿಕ ಈತ ತನ್ನ ಸ್ನೇಹಿತ ಆಕ್ಟನ್‌ ಜತೆ ಸೇರಿಕೊಂಡು ವಾಟ್ಸಪ್‌ ಎಂಬ ಆಪ್‌ ಅಭಿವೃದ್ಧಿಪಡಿಸಿದ. ಪ್ರತಿತಿಂಗಳು ವಾಟ್ಸಪ್‌ ಬಳಿಇಕೆದಾರರ ಸಂಖ್ಯೆ 1.2 ಶತಕೋಟಿ ಹೆಚ್ಚುತ್ತ ಹೋಯಿತು. ಫೇಸ್‌ಬುಕ್‌ ಕಂಪನಿಗೆ ಈ ಆಪ್‌ ಅನ್ನು ಕಡೆಗಣಿಸಲು ಸಾಧ್ಯವಾಗಿಲ್ಲ. ಈ ಆಪ್‌ ಅನ್ನು ಕೆಲವು ವರ್ಷಗಳ ಹಿಂದೆ 19ಶತಕೋಟಿ ಡಾಲರ್‌ಗೆ ಫೇಸ್‌ಬುಕ್‌ ಖರೀದಿಸಿತ್ತು. ಒಂದು ಸಮಯದಲ್ಲಿ ಉದ್ಯೋಗ ನೀಡಲು ನಿರಾಕರಿಸಿದ ಕಂಪನಿಯೇ ಈ ಆಪ್‌ ಅನ್ನು ಖರೀದಿಸಿದ್ದು ನಿಜಕ್ಕೂ ಅಚ್ಚರಿ.

ಬೇರ್‌ ಗ್ರೀಲ್ಸ್‌

ಮ್ಯಾನ್‌ ವರ್ಸಸ್‌ ವೈಲ್ಡ್‌ ಶೋ ಮೂಲಕ ಪ್ರಖ್ಯಾತಿ ಗಳಿಸಿದ ಬೇರ್‌ ಗ್ರೀಲ್ಸ್‌ ಬದುಕಿನಲ್ಲಿ ಹಲವು ಬಗೆಯ ಸೋಲುಗಳನ್ನು ಅನುಭವಿಸಿದವರು. ಇವರ ಪೂರ್ಣ ಹೆಸರು ಎಡ್ವರ್ಡ್ ಮೈಕೆಲ್ ಗ್ರಿಲ್ಸ್. ಬಾಲ್ಯದಲ್ಲಿ ಬೇರ್ ಗ್ರಿಲ್ಸ್ ಸ್ಕೈಡೈವಿಂಗ್ ಕಲಿತರು. ಮತ್ತು ಕರಾಟೆಯಲ್ಲಿ ಕಪ್ಪು ಬೆಲ್ಟ್ ಪಡೆದರು. ಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಬೆಟ್ಟ, ಶಿಖರಗಳನ್ನು ಹತ್ತುವುದು ಸೇರಿದಂತೆ ಹಲವು ಸಾಹಸಗಳನ್ನು ಮಾಡಿ ಜನಪ್ರಿಯತೆ ಪಡೆದರು. ತನ್ನ 23ನೇ ವಯಸ್ಸಿನಲ್ಲಿಯೇ ಮೌಂಟ್‌ ಎವರೆಸ್ಟ್‌ ಹತ್ತಿದರು. ಪ್ಯಾರಚ್ಯೂಟ್‌ ಅಪಘಾತದಲ್ಲಿ ಗಾಯಗೊಂಡು ಒಂದು ತಿಂಗಳಲ್ಲಿಯೇ ಈ ಸಾಧನೆ ಮಾಡಿದರು. ಪ್ಯಾರಾಚ್ಯೂಟ್‌ ಅಪಘಾತದಿಂದ ತನ್ನ ಜೀವನ ಮುಗಿಯಿತು ಎಂದುಕೊಳ್ಳದೆ ಹಠದಿಂದ ಸಾಧನೆ ಮಾಡಿದರು.

ಸ್ನೇಹಿತರೇ, ಯಶಸ್ಸು ಪಡೆಯುವ ಹಾದಿಯಲ್ಲಿ ಸೋಲುಗಳು ಎದುರಾಗುತ್ತವೆ. ವೈಫಲ್ಯಗಳನ್ನು ಸಾಧನೆಯ ಹಾದಿಯಲ್ಲಿರುವ ಮೆಟ್ಟಿಲು ಎಂದು ತಿಳಿದುಕೊಂಡು ಸಾಧನೆ ಮಾಡಿ. ಶುಭವಾಗಲಿ.

Whats_app_banner