AI -Technology ಎಂದರೆ ಅದೊಂದು ಕಬ್ಬಿಣದ ಕಡಲೆ ಎಂದುಕೊಂಡವರು ಈಗ ಕನ್ನಡದಲ್ಲಿ ಓದಿ ಅರ್ಥ ಮಾಡಿಕೊಳ್ಳಬಹುದು, ಇಲ್ಲಿದೆ ಪುಸ್ತಕದ ವಿವರ-must read book for those who think technology is too tough artificial intelligence book in kannada smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ai -Technology ಎಂದರೆ ಅದೊಂದು ಕಬ್ಬಿಣದ ಕಡಲೆ ಎಂದುಕೊಂಡವರು ಈಗ ಕನ್ನಡದಲ್ಲಿ ಓದಿ ಅರ್ಥ ಮಾಡಿಕೊಳ್ಳಬಹುದು, ಇಲ್ಲಿದೆ ಪುಸ್ತಕದ ವಿವರ

AI -Technology ಎಂದರೆ ಅದೊಂದು ಕಬ್ಬಿಣದ ಕಡಲೆ ಎಂದುಕೊಂಡವರು ಈಗ ಕನ್ನಡದಲ್ಲಿ ಓದಿ ಅರ್ಥ ಮಾಡಿಕೊಳ್ಳಬಹುದು, ಇಲ್ಲಿದೆ ಪುಸ್ತಕದ ವಿವರ

Artificial Intelligence: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ದರೆ ಇದೀಗ ಕನ್ನಡದಲ್ಲಿ ಈ ವಿಷಯವನ್ನು ತಿಳಿದುಕೊಳ್ಳ ಬಹುದು. ಲೇಖಕ ಮಧು ವೈಎನ್‌ ಅವರು ಬರೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪುಸ್ತಕದಲ್ಲಿ ಏನಿದೆ? ಏನಿಲ್ಲ? ಎಂಬ ವಿಚಾರ ಇಲ್ಲಿದೆ ಗಮನಿಸಿ.

'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್,
'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್,

ನೀವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದು, ಎಲ್ಲವೂ ಇಂಗ್ಲೀಷ್‌ನಲ್ಲೇ ಇದೆ, ಇದನ್ನು ಓದಲು ಕಷ್ಟ ಎಂದು ಸುಮ್ಮನಾಗಿದ್ದರೆ. ಆ ವಿಷಯದ ಬಗ್ಗೆ ಆಸಕ್ತಿ ಇದ್ದೂ ಈ ವರೆಗೆ ಹೆಚ್ಚಿನ ಗಮನಕೊಡದೇ ಇದ್ದರೆ, ಇದೀಗ ನಿಮಗೆ ಎಂದೇ ಈ ಪುಸ್ತಕ ತಯಾರಾಗಿದೆ. ನೀವೀಗ ಕನ್ನಡದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಸರಳವಾಗಿ ಓದಿ ತಿಳಿದುಕೊಳ್ಳಬಹುದು.

ಒಳಗೇನಿದೆ?

ಇದನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು ಮೊದಲ ಭಾಗ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಎರಡನೆಯ ಭಾಗ ಇನ್ನಿತರ ತಂತ್ರಜ್ಞಾನ(ವಿಪಿಎನ್, ಫಿಂಗರ್ ಪ್ರಿಂಟ್, ಸ್ಯಾಟಲೈಟ್ ಫೋನ್, ಇ-ಸಿಮ್ ) ಮತ್ತು ಮೂರನೆಯ ಭಾಗದಲ್ಲಿ ಸಾಫ್ಟವೇರಿನಲ್ಲಿ ಎದುರಿಸುವ ಆಸಕ್ತಿಕರ ಆರ್ಕಿಟೆಕ್ಚರಲ್ ಸಮಸ್ಯೆಗಳ(ಛಿದ್ರ ಮೆದುಳಿನ ಪ್ರಾಬ್ಲಂ, ಖೈದಿಗಳ ಗೊಂದಲ, ಸೈನ್ಯಾಧಿಕಾರಿಗಳ ಪ್ರಾಬ್ಲಂ) ವಿವರಣೆಗಳನ್ನು ಒಳಗೊಂಡಿದೆ.

ಯಾಕೆ ಓದಬೇಕು?

ಬಹುಪಾಲು ಮಂದಿಗೆ ತಂತ್ರಜ್ಞಾನವೆಂದರೆ ದೂರದ ಬೆಟ್ಟದಂತೆ. ಕೆಲವರಿಗೆ ನುಣ್ಣಗೆ, ಕೆಲವರಿಗೆ ಕರಿಗತ್ತಲ ಘೇಂಡಾಮೃಗ. ಅದು ನುಣ್ಣಗೂ ಇಲ್ಲ, ಘೇಂಡಾಮೃಗವೂ ಅಲ್ಲವೆಂಬ ಅರಿವು ಮೂಡಿಸುವ ಪ್ರಯತ್ನ ಈ ಪುಸ್ತಕ. ಕ್ಲಿಷ್ಟವಾದ ತಂತ್ರಜ್ಞಾನ ಸಂಗತಿಗಳನ್ನು ಸುಲಿದ ಬಾಳೆಹಣ್ಣಿನಂದದಿ ಪ್ರಸ್ತುತಪಡಿಸಿ ಅದರೆಡೆ ಒಲವು ಮೂಡಿಸುವ ಪ್ರಯತ್ನ. ಹಗಲಿಡೀ ಮೈಮುರಿದು ದುಡಿದು ಇಳಿಸಂಜೆ ಊರ ಮುಂದಿನ ಅರಳಿಕಟ್ಟೆಯ ಮೇಲೆ ವಿರಾಮದಿಂದ ಕುಳಿತಾಗ ಮೂಡುವ ಲೋಕಜ್ಞಾನದ ಸಂವಾದ.

ಯಾರು ಓದಬೇಕು?

ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು, ಹಿರಿಯರು, ಕಿರಿಯರು, ಖುದ್ದು ಟೆಕ್ಕಿಗಳೂ ಓದಬಹುದೆಂದು ನನ್ನ ನಂಬಿಕೆ. ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವೆಂದರೆ ಬೆನ್ನು ತೋರಿಸಿ ಓಡುವರೆಲ್ಲರೂ ಓದಬೇಕು. 120 ಪುಟಗಳ ಪುಟ್ಟ, 29 ಅಧ್ಯಾಯಗಳ ದಟ್ಟ ಪುಸ್ತಕ. ಬನ್ನಿ, ಈ ಮೂಲಕ 'ಓದಿನ ಸುಖ' ಅನುಭವಿಸಿ.

ಲೇಖಕ ಮಧು ವೈಎನ್ ಪೋಸ್ಟ್

ನಿಮಗೆ ಗೊತ್ತೇ?

ಈ ಪುಸ್ತಕದ ಕವರ್ ಪುಟ ಮತ್ತು ಬೆನ್ನುಪುಟದ ಎರಡೂ ಚಿತ್ರಗಳು ಆರ್ಟಿಫೀಶಿಯಲ್ ಇಂಟೆಲಿಜೆನ್ಸಿನಿಂದ ಸೃಷ್ಟಿಸಿದಂಥವು. ಪುಸ್ತಕದ ಒಳಗೆ ಪ್ರತಿ ಅಧ್ಯಾಯಕ್ಕೊಂದು ಚಂದದ ಚಿತ್ರವಿದೆ, ಅದೂ ಸಹ ಎಐ ಕೃಪೆ!

ಪುಸ್ತಕ ಎಲ್ಲಿ ಸಿಗುತ್ತದೆ?

ಪುಸ್ತಕ ವಿತರಕರು ಕೃಷ್ಣ ಚೆಂಗಾಡಿ, ಅಮೂಲ್ಯ ಪುಸ್ತಕ ಮಳಿಗೆ (ವಿಜಯನಗರ, ಬೆಂಗಳೂರು). ಪುಸ್ತಕ ಮಾರಾಟಗಾರರು ಮತ್ತು ಗ್ರಾಹಕರ ಪ್ರತಿಗಳಿಗಾಗಿ ಕೃಷ್ಣ ಅವರನ್ನು ಸಂಪರ್ಕಿಸಿ: 9448676770

ಹೊಸ ಪುಸ್ತಕ 'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸರಳಗನ್ನಡದಲ್ಲಿ' ಓದಲು ಸಿದ್ಧವಾಗಿದೆ. ನಾಳೆಯಿಂದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಆಸಕ್ತರು ಇಂದಿನಿಂದ Amazon ಮೂಲಕ ಖರೀದಿಸಬಹುದು. ಪುಸ್ತಕ ಮಳಿಗೆಗಳ ಆನ್‌ಲೈನ್ ಲಿಂಕ್‌ಗಳು ಇಲ್ಲಿವೆ ಗಮನಿಸಿ.

ಆಮೆಜಾನ್: https://amzn.in/d/gFtgIqN

ಅಮೂಲ್ಯ: https://wa.me/p/8167575689998050/919448676770

ವಾಟ್ಸಾಪ್: 09620796770

ಬೀಟೆಲ್: https://beetlebookshop.com/

ಈ ಎಲ್ಲೆಡೆ ಪುಸ್ತಕ ಲಭ್ಯವಿದೆ.

mysore-dasara_Entry_Point