Kannada News  /  Lifestyle  /  National Brothers Day Date History Wishes Quotes How To Celebrate Brother Love Sister Relationship News In Kannada Rst
ರಾಷ್ಟ್ರೀಯ ಸಹೋದರರ ದಿನ ಮೇ 24
ರಾಷ್ಟ್ರೀಯ ಸಹೋದರರ ದಿನ ಮೇ 24

National Brothers Day: ಸಹೋದರರ ದಿನದ ಆಚರಣೆಗೂ ಇದೆ ಇತಿಹಾಸ; ಈ ದಿನವನ್ನು ಹೀಗೆ ಸಂಭ್ರಮಿಸಿ

24 May 2023, 15:24 ISTReshma
24 May 2023, 15:24 IST

National Brothers Day: ಇಂದು ರಾಷ್ಟ್ರೀಯ ಸಹೋದರರ ದಿನ. ಪ್ರತಿ ವರ್ಷ ಮೇ 24 ರಂದು ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಸಹೋದರರ ಪ್ರೀತಿ, ಮಮತೆ, ಕಾಳಜಿ, ರಕ್ಷಣಾ ಮನೋಭಾವವನ್ನು ನೆನೆಯುವ ಈ ದಿನದ ಆಚರಣೆ ನಿಜಕ್ಕೂ ಅರ್ಥಪೂರ್ಣ. ಈ ದಿನದ ಆಚರಣೆಯ ಕುರಿತ ಇತಿಹಾಸ, ಮಹತ್ವದ ಕುರಿತ ಲೇಖನ ಇಲ್ಲಿದೆ.

ಅಣ್ಣಾ... ಎನ್ನುವ ಭಾವನೆಯೇ ಸುರಕ್ಷತೆಯನ್ನು ಮೂಡಿಸುವಂತದ್ದು. ಜಗತ್ತಿನಲ್ಲಿ ಅಣ್ಣನ ಪ್ರೀತಿಯಲ್ಲಿ ಕಾಳಜಿಯೂ ಬೆರೆತಿರುತ್ತದೆ. ಅಣ್ಣನ ಬೈಗುಳದಲ್ಲೂ ತಂಗಿಯ ಮೇಲಿನ ಮಮಕಾರವಿರುತ್ತದೆ. ಅಣ್ಣನನ್ನು ಪಡೆಯುವುದು ಪ್ರತಿ ತಂಗಿಗೂ ದೇವರು ನೀಡುವ ಆಶೀರ್ವಾದ ಎನ್ನಬಹುದು. ತಮ್ಮನೂ ಹಾಗೆ. ಪ್ರೀತಿ, ಮಮತೆಯ ಕಡಲು.

ಬಾಲ್ಯದಲ್ಲಿ ನಮ್ಮೆಲ್ಲಾ ಕ್ರೈಮ್‌ಗೂ ಸಹೋದರರೇ ಸಾಥಿ. ನಮ್ಮ ಮನಸ್ಸನ್ನು ಯಾರೂ ಅರ್ಥ ಮಾಡಿಕೊಳ್ಳದೇ ಇದ್ದಾಗ ಸಹೋದರರು ಅರ್ಥ ಮಾಡಿಕೊಳ್ಳುತ್ತಾರೆ, ನಮ್ಮ ಬೇಸರಕ್ಕೆ ಹೆಗಲಾಗುವವರು ಸಹೋದರರೇ. ಜೀವನದ ಅತಿ ದೊಡ್ಡ ದುಃಖ, ಸಂಕಟ, ನೋವಿನಲ್ಲಿ ನಾನಿದ್ದೇನೆ ಎಂದು ಧೈರ್ಯ ಹೇಳುತ್ತಾ ಜೊತೆ ನಿಲ್ಲುವವರು ಸಹೋದರರೇ. ಬಾಲ್ಯದಿಂದ ಮುಪ್ಪಿನವರೆಗೆ ರಕ್ಷಕರಾಗಿ ನಿಲ್ಲುವ ಸಹೋದರರ ಬಗ್ಗೆ ಬರೆಯುತ್ತಾ ಹೋದರೆ ಪದಗಳೇ ಸಿಗುವುದಿಲ್ಲ. ಅಂದ ಹಾಗೆ ಇಂದು ಸಹೋದರರ ದಿನ. ಸಹೋದರರನ್ನು ನೆನೆಯಲು, ಸಹೋದರರನ್ನು ಸಂಭ್ರಮಿಸಲು, ಅವರಿಗೆ ಉಡುಗೊರೆ ನೀಡಿ ಖುಷಿಪಡಿಸಲು ಇಂದು ಸುದಿನ. ಸಹೋದರ ದಿನದ ಕುರಿತ ಇನ್ನಷ್ಟು ಆಸಕ್ತಿಕರ ವಿಷಯಗಳು ಇಲ್ಲಿವೆ ನೋಡಿ.

ಸಹೋದರದ ದಿನದ ಇತಿಹಾಸ ಮತ್ತು ಮಹತ್ವ

2005ರ ಮೇ 24ರಂದು ಮೊದಲ ಬಾರಿ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗಿತ್ತು. ಈ ದಿನದ ಆಚರಣೆ ಹಾಗೂ ಇತಿಹಾಸದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲದೇ ಇದ್ದರೂ, ಅಲಹಾಬಾದ್‌ನ ಸಿ. ಡೇನಿಯಲ್‌ ರೋಡ್ಸ್‌ ಸಹೋದರರು ಈ ದಿನದ ಆಚರಣೆಗೆ ಕಾರಣರಾದರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

2023ರ ವಿಶ್ವ ಸಹೋದರರ ದಿನ

2023ರಲ್ಲಿ ಮೇ 24ರಂದು ವಿಶ್ವ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಬುಧವಾರ ಅಂದರೆ ಇಂದು ಸಹೋದರರ ದಿನಾಚರಣೆಯಿದೆ.

ವಿಶ್ವ ಸಹೋದರ ದಿನದ ಆಚರಣೆ ಹೀಗಿರಲಿ

ಸರ್ಪ್ರೈಸ್‌ ವಿಸಿಟ್‌: ನೀವು ನಿಮ್ಮ ಸಹೋದರ ಕಡೆ ಪಟ್ಟಣದಲ್ಲಿ ವಾಸವಿದ್ದರೆ, ನೀವು ಕೆಲಸ ಮುಗಿಸಿ ನೇರವಾಗಿ ಅವರಿರುವ ಜಾಗಕ್ಕೆ ತೆರಳಿ ವಿಶ್‌ ಮಾಡಿ ಅವರನ್ನು ಖುಷಿಪಡಿಸಿ. ಸಾಧ್ಯವಾದರೆ ಸಣ್ಣ ಉಡುಗೊರೆ ತೆಗೆದುಕೊಂಡು ಹೋಗಿ.

ನೆನಪಿನ ಹಾದಿಯಲ್ಲಿ ಸಾಗಿ: ಜೀವನದ ಅತ್ಯಂತ ಸುಮಧುರ ಕ್ಷಣ ಎನ್ನಿಸುವ ಬಾಲ್ಯದ ದಿನಗಳನ್ನು ಅಣ್ಣನೊಂದಿಗೆ ಸೇರಿ ಮೆಲುಕು ಹಾಕಿ. ನಿಮ್ಮ ಹೃದಯಕ್ಕೆ ಹತ್ತಿರವಾದ ನೆನೆಪುಗಳನ್ನು ನೆನಪಿಸಿಕೊಳ್ಳಿ. ಆ ಕ್ಷಣಗಳಿಗೆ ಈ ದಿನದ ಆಚರಣೆಯ ಸಂಭ್ರಮಕ್ಕೆ ಜೊತೆಯಾಗಬಹುದು.

ಒಟ್ಟಿಗೆ ಡಿನ್ನರ್‌ ಮಾಡಿ: ರಾತ್ರಿ ಊಟವನ್ನು ಒಟ್ಟಿಗೆ ಆಯೋಜಿಸಿ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾ ಸುಂದರ ಕ್ಷಣಗಳನ್ನು ಮೆಲುಕು ಹಾಕಿ. ನಾಳೆ ಎನ್ನುವುದು ಇಲ್ಲ ಎನ್ನುವಷ್ಟು ಖುಷಿಯಿಂದ ದಿನವನ್ನು ಸಂಭ್ರಮಿಸಿ.

ಕರೆ ಮಾಡಿ ಮಾತನಾಡಿ: ನಿಮ್ಮ ಸಹೋದರ ನಿಮ್ಮಿಂದ ದೂರವಿದ್ದರೆ, ಕರೆ ಮಾಡಿ ಮಾತನಾಡಿ. ಸಹೋದರರ ದಿನದ ವಿಶ್‌ ತಿಳಿಸಿ. ನಿಮ್ಮ ಮನಸ್ಸಿಗೆ ಅನ್ನಿಸಿದ ಮಾತುಗಳನ್ನು ಅವರೊಂದಿಗೆ ಹಂಚಿಕೊಳ್ಳಿ.

ಇದನ್ನೂ ಓದಿ

Costly Mango: ವಿಶ್ವದಲ್ಲೇ ದುಬಾರಿ ಮಿಯಾಝಕಿ ಮಾವಿನಹಣ್ಣು; ನೇರಳೆಬಣ್ಣದ ಈ ಹಣ್ಣು ಕೆಜಿಗೆ 2.70 ಲಕ್ಷ ಅಂದ್ರೆ ನಂಬಲೇಬೇಕು

Miyazaki Mango: ಕೆಂಪು, ಹಳದಿ ಬಣ್ಣದ ಮಾವಿನಹಣ್ಣಗಳನ್ನು ನಾವು ತಿಂದಿರುತ್ತೇವೆ. ಆದರೆ ನೇರಳೆ ಬಣ್ಣದ ಮಾವಿನಹಣ್ಣಿನ ಬಗ್ಗೆ ನಿಮಗೆ ಗೊತ್ತಾ? ವಿಶ್ವದಲ್ಲೇ ಅತ್ಯಂತ ದುಬಾರಿ ಎನ್ನಿಸಿರುವ ಈ ಮಾವಿನಹಣ್ಣಿನ ಹೆಸರು ಮಿಯಾಝಕಿ. ಇದರ ಕೆಜಿಗೆ 2.70 ಲಕ್ಷ. ಈ ಹಣ್ಣಿನ ಕುರಿತು ಇನ್ನಷ್ಟು ಕುತೂಹಲಕಾರಿ ಅಂಶಗಳು ತಿಳಿಯಬೇಕು ಎಂದರೆ ಈ ಸ್ಟೋರಿ ನೋಡಿ

ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಹಣ್ಣುಗಳ ರಾಜ ಮಾವಿನಹಣ್ಣು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇದರ ರಸಭರಿತ ಸ್ವಾದವನ್ನು ಸವಿಯದವರೇ ಇಲ್ಲ ಎನ್ನಬಹುದು. ನಾವೆಲ್ಲರೂ ಹಲವು ಬಗೆಯ, ವಿವಿಧ ರುಚಿಯ ಮಾವಿನಹಣ್ಣುಗಳನ್ನು ಸವಿದಿರುತ್ತೇವೆ. ಮಾವಿನ ಹಣ್ಣಿನ ದರದ ವಿಷಯಕ್ಕೆ ಬಂದಾಗ ಕೆಜಿ 200, 300, 400 ಅಬ್ಬಾಬ್ಬ ಅಂದ್ರೆ 600 ರೂಪಾಯಿ ಮಾವಿನಹಣ್ಣನ್ನು ನಾವು ತಿಂದಿರಬಹುದು. ಅಲ್ಲದೆ ಅದನ್ನೇ ಅತ್ಯಂತ ದುಬಾರಿ ಹಣ್ಣು ಅಂದುಕೊಂಡಿರಬಹುದು. ಆದರೆ ಸತ್ಯ ಅದಲ್ಲ, ಇಲ್ಲಿದೆ ನೋಡಿ ನಿಜವಾದ ಸತ್ಯ.

ವಿಭಾಗ