National Consumer Rights Day: ಇಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ: ಈ ದಿನದ ಆಚರಣೆಯ ಇತಿಹಾಸ, ಮಹತ್ವದ ಕುರಿತ ಲೇಖನ
ಕನ್ನಡ ಸುದ್ದಿ  /  ಜೀವನಶೈಲಿ  /  National Consumer Rights Day: ಇಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ: ಈ ದಿನದ ಆಚರಣೆಯ ಇತಿಹಾಸ, ಮಹತ್ವದ ಕುರಿತ ಲೇಖನ

National Consumer Rights Day: ಇಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ: ಈ ದಿನದ ಆಚರಣೆಯ ಇತಿಹಾಸ, ಮಹತ್ವದ ಕುರಿತ ಲೇಖನ

ಪ್ರತಿವರ್ಷ ಡಿಸೆಂಬರ್‌ 24 ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾರುಕಟ್ಟೆ ಅಥವಾ ಖರೀದಿ ಸ್ಥಳದಲ್ಲಿ ಉಂಟಾಗುವ ಅನ್ಯಾಯಗಳ ಹೋರಾಟ ನಡೆಸಬಹುದು. ಹಾಗಾದರೆ ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.

ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ
ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ

ಗ್ರಾಹಕರು ಅಂದರೆ ನಾವೆಲ್ಲರೂ... ನಾವು ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಖರೀದಿದಾರನ ಯೋಗಕ್ಷೇಮದ ದೃಷ್ಟಿ ಗ್ರಾಹಕ ಹಕ್ಕುಗಳು ಅವಶ್ಯ. ಮಾರುಕಟ್ಟೆಯು ಕೆಲವು ನೈತಿಕತೆಗಳು ಹಾಗೂ ಮೌಲ್ಯಗಳ ಮೇಲೆ ನಡೆಯಬೇಕು. ಕೆಲವೊಮ್ಮೆ ಗ್ರಾಹಕರ ಹಕ್ಕುಗಳ ತಿಳಿದಿರದೇ ಇರುವುದು ಕೂಡ ನಮಗೆ ಒಳಿತಲ್ಲ. ಇದನ್ನು ಜನ ದುರುಪಯೋಗ ಪಡಿಸಿಕೊಳ್ಳಬಹುದು. ಹಕ್ಕುಗಳ ಬಗ್ಗೆ ತಿಳಿದುಕೊಳ್ಳವುದು ಗ್ರಾಹಕರಾಗಿ ನಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ನೈತಿಕ ಹರಿವನ್ನು ಸಕ್ರಿಯಗೊಳಿಸಲು ನಮಗೆ ಸಹಾಯ ಮಾಡುತ್ತದೆ. ಸರ್ಕಾರವು ಗ್ರಾಹಕರ ಹಕ್ಕುಗಳು ಮತ್ತು ಆ ಹಕ್ಕುಗಳ ರಕ್ಷಣೆಗೆ ಒತ್ತು ನೀಡುತ್ತಲೇ ಇರುತ್ತದೆ ಮತ್ತು ನಾಗರಿಕರನ್ನು ಒಳಗೊಳ್ಳಲು ಮತ್ತು ಅವರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತದೆ. ಗ್ರಾಹಕರು ಅಂದರೆ ನಾವು ಈ ಹಕ್ಕುಗಳ ಬಗ್ಗೆ ಶಿಕ್ಷಣ ಪಡೆಯುವುದು ಮತ್ತು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡುವುದು ಮುಖ್ಯವಾಗುತ್ತದೆ.

ಗ್ರಾಹಕ ಹಕ್ಕುಗಳ ದಿನ

ಪ್ರತಿವರ್ಷ ಡಿಸೆಂಬರ್‌ 24ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಭಾನುವಾರ ಅಂದರೆ ಇಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ.

ಇತಿಹಾಸ

1986ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಅಂಗೀಕರಿಸಲಾಯಿತು ಮತ್ತು ಡಿಸೆಂಬರ್‌ 24 ರಂದು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲಾಯಿತು. ಅಂದಿನಿಂದ ಈ ದಿನದ ನೆನಪಿನಲ್ಲಿ ಪ್ರತಿವರ್ಷ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ದೆಯ ದೋಷಪೂರಿತ ಸರಕುಗಳು, ಸೇವೆಯಲ್ಲಿ ನಿರ್ಲಕ್ಷ್ಯ, ವ್ಯಾಪಾರದಲ್ಲಿ ಮೋಸ, ವಂಚನೆ ಇವುಗಳಿಂದ ರಕ್ಷಿಸಲು ನೆರವಾಗುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ಡೆಯ ಆರು ಮೂಲಭೂತ ಹಕ್ಕುಗಳೆಂದರೆ ಸುರಕ್ಷತೆಯ ಹಕ್ಕು, ಆಯ್ಕೆ ಮಾಡುವ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಕೇಳುವ ಹಕ್ಕು, ಪರಿಹಾರ ಹುಡುಕುವ ಹಕ್ಕು ಮತ್ತು ಗ್ರಾಹಕ ಶಿಕ್ಷಣದ ಹಕ್ಕು.

ಮಹತ್ವ

ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನದ ಬಗ್ಗೆ ಪ್ರತಿವರ್ಷ ಗೊಂದಲ ಉಂಟಾಗುತ್ತದೆ. ಏಕೆಂದರೆ ಮಾರ್ಚ್‌ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಇದೆ. ಆದರೆ ನಮ್ಮ ರಾಷ್ಟ್ರಮಟ್ಟದಲ್ಲಿ ಈ ದಿನವನ್ನು ಇಂದು ಆಚರಿಸಲಾಗುತ್ತದೆ. ಅದೇನೆ ಇದ್ದರೂ ಈ ದಿನದ ಆಚರಣೆ ಉದ್ದೇಶ ಒಂದೇ.

ಈ ದಿನದಂದು ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ವ್ಯಾಪಾರ ಪದ್ಧತಿಗಳಲ್ಲಿನ ಅನ್ಯಾಯದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಇದು ಗ್ರಾಹಕರಿಗೆ ಶಿಕ್ಷಣವನ್ನು ನೀಡುತ್ತದೆ. ಗ್ರಾಹಕರಿಗೆ ಯಾವುದೇ ಅನ್ಯಾಯವಾದಲ್ಲಿ ನೀವು ಕನ್ಸ್ಯೂಮರ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ನಿಮಗಾದ ಅನ್ಯಾಯಕ್ಕೆ ನ್ಯಾಯ ಹಾಗೂ ಪರಿಹಾರ ಕೇಳಬಹುದು.

Whats_app_banner