ಕನ್ನಡ ಸುದ್ದಿ  /  ಜೀವನಶೈಲಿ  /  National Doctors Day: ಜುಲೈ 1ರಂದೇ ರಾಷ್ಟ್ರೀಯ ವೈದ್ಯರ ದಿನ ಆಚರಿಸುವ ಉದ್ದೇಶವೇನು? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

National Doctors Day: ಜುಲೈ 1ರಂದೇ ರಾಷ್ಟ್ರೀಯ ವೈದ್ಯರ ದಿನ ಆಚರಿಸುವ ಉದ್ದೇಶವೇನು? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

ವೈದೋ ನಾರಾಯಣೋ ಹರಿಃ ಎಂಬ ನಾಣ್ನುಡಿ ಇದೆ. ಅಂದರೆ ವೈದ್ಯರು ದೇವರ ಸಮಾನ ಎಂದರ್ಥ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ನಮ್ಮನ್ನು ಗುಣಪಡಿಸಿ ನಮಗೆ ಮರುಜೀವ ನೀಡುವ ವೈದ್ಯರು ನಿಜಕ್ಕೂ ದೇವರ ಸಮಾನ. ನಮ್ಮ ಪಾಲಿಗೆ ದೇವರೇ ಆಗಿರುವ ವೈದ್ಯರನ್ನು ಗೌರವಿಸುವ ದಿನ ರಾಷ್ಟ್ರೀಯ ವೈದ್ಯರ ದಿನ. ಈ ದಿನ ಕುರಿತ ಇನ್ನಷ್ಟು ವಿವರ ಇಲ್ಲಿದೆ.

ಜುಲೈ 1ರಂದೇ ರಾಷ್ಟ್ರೀಯ ವೈದ್ಯರ ದಿನ ಆಚರಿಸುವ ಉದ್ದೇಶವೇನು? ಈ ದಿನದ ಇತಿಹಾಸ, ಮಹತ್ವ ಹೀಗಿದೆ
ಜುಲೈ 1ರಂದೇ ರಾಷ್ಟ್ರೀಯ ವೈದ್ಯರ ದಿನ ಆಚರಿಸುವ ಉದ್ದೇಶವೇನು? ಈ ದಿನದ ಇತಿಹಾಸ, ಮಹತ್ವ ಹೀಗಿದೆ

ವೈದ್ಯರು ಹಲವು ಬಾರಿ ರೋಗಿಗಳ ಪಾಲಿಗೆ ದೇವರ ರೂಪದಲ್ಲೇ ಕಾಣಿಸುತ್ತಾರೆ. ಅದೆಷ್ಟೋ ಜನರಿಗೆ ವೈದ್ಯರು ದೇವರೇ ಆಗಿರುವುದು ಅತಿಶಯೋಕ್ತಿಯಲ್ಲ. ಇವರು ಎಲ್ಲಾ ರೀತಿಯ ಕಾಯಿಲೆಗಳು, ರೋಗಗಳ ವಿರುದ್ಧ ಕೋಟೆ ಕಟ್ಟಿ, ಜನರು ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡುತ್ತಾರೆ. ನಾವು ಉತ್ತಮ ಜೀವನ ನಡೆಸುವಲ್ಲಿ ವೈದ್ಯರ ಪಾತ್ರ ಮಹತ್ವದ್ದು. ಅವರು ರೋಗಿಗಳಿಗೆ ಒಲವು ತೋರುತ್ತಾರೆ, ಭರವಸೆ ನೀಡುತ್ತಾರೆ, ಅಗತ್ಯ ಔಷಧಿಗಳನ್ನು ಒದಗಿಸುತ್ತಾರೆ ಮತ್ತು ಸಮಯಕ್ಕೆ ಸರಿಯಾಗಿ ರೋಗಿಯು ಗುಣಮುಖನಾಗುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಜನರ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಅವರು ಅಮೂಲ್ಯವಾದ ಪಾತ್ರವನ್ನು ವಹಿಸುತ್ತಾರೆ. ಸಮಾಜಕ್ಕೆ ಅವರ ನಿಸ್ವಾರ್ಥ ಸೇವೆಯನ್ನು ಪ್ರತಿದಿನ ಆಚರಿಸಬೇಕು ಮತ್ತು ಗೌರವಿಸಬೇಕು. ಹೀಗೆ ವೈದ್ಯರಿಗೆ ಗೌರವ ಸಲ್ಲಿಸಿ, ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ವೈದ್ಯರ ದಿನ ಯಾವಾಗ, ಈ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ.

ರಾಷ್ಟ್ರೀಯ ವೈದ್ಯರ ದಿನ ಯಾವಾಗ?

ಪ್ರತಿವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನ ಆಚರಿಸಲಾಗುತ್ತದೆ. ಈ ವರ್ಷ ಇಂದು ಅಂದರೆ ಸೋಮವಾರ ರಾಷ್ಟ್ರೀಯ ವೈದ್ಯರ ದಿನವಿದೆ.

ಟ್ರೆಂಡಿಂಗ್​ ಸುದ್ದಿ

ರಾಷ್ಟ್ರೀಯ ವೈದ್ಯರ ದಿನದ ಇತಿಹಾಸ

1882ರ ಜುಲೈ 1 ರಂದು, ಡಾ. ಬಿಧನ್ ಚಂದ್ರ ರಾಯ್ ಜನಿಸಿದರು. ಅವರು ಹೆಸರಾಂತ ವೈದ್ಯರಾಗಿದ್ದರು ಮತ್ತು ಪಶ್ಚಿಮ ಬಂಗಾಳ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅವರ ಕೊಡುಗೆಗಳನ್ನು ಈಗಲೂ ನೆನೆಯಲಾಗುತ್ತದೆ. 1991 ರಲ್ಲಿ ಭಾರತ ಸರ್ಕಾರವು ಪ್ರಸಿದ್ಧ ವೈದ್ಯರಾದ ಡಾ ಬಿದನ್ ಚಂದ್ರ ರಾಯ್ ಅವರ ಜನ್ಮದಿನದ ನೆನಪಿಗಾಗಿ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವೆಂದು ಘೋಷಿಸಿತು.

ರಾಷ್ಟ್ರೀಯ ವೈದ್ಯರ ದಿನದ ಮಹತ್ವ

ರಾಷ್ಟ್ರೀಯ ವೈದ್ಯರ ದಿನವು ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ಅವರ ದಣಿವರಿಯದ ಸೇವೆ, ಬದ್ಧತೆ ಮತ್ತು ಪ್ರತಿಯೊಬ್ಬರೂ ಉತ್ತಮ ಜೀವನವನ್ನು ನಡೆಸುವಂತೆ ಖಚಿತಪಡಿಸಿಕೊಳ್ಳುವಲ್ಲಿ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ವಿಶೇಷ ಸಂದರ್ಭವಾಗಿದೆ. ಇದು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ರೋಗಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂಶೋಧನೆಗಳನ್ನು ನಡೆಸುವ ಬಗ್ಗೆ ಚರ್ಚೆಗೆ ಜಾಗವನ್ನು ಸೃಷ್ಟಿಸುತ್ತದೆ. ಈ ದಿನದಂದು ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಸಮ್ಮೇಳನಗಳು, ವಿಚಾರ ಸಂಕಿರಣಗಳು, ಅಭಿನಂದನಾ ಸಮಾರಂಭಗಳು ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಶೇಷ ದಿನವನ್ನು ಆಚರಿಸಲು ಉತ್ತಮ ಮಾರ್ಗವೆಂದರೆ ವೈದ್ಯರ ನಿಸ್ವಾರ್ಥ ಸೇವೆಗಾಗಿ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವುದು.