Kannada News  /  Lifestyle  /  Navratri Colours 2022: Know The Colour For Each Day Of The Festival
Navratri colours 2022: ನವರಾತ್ರಿಗೆ ಯಾವ ದಿನ, ಯಾವ ಬಣ್ಣ?
Navratri colours 2022: ನವರಾತ್ರಿಗೆ ಯಾವ ದಿನ, ಯಾವ ಬಣ್ಣ?

Navratri colours 2022: ನವರಾತ್ರಿ ಹಬ್ಬಕ್ಕೆ ಯಾವ ದಿನ, ಯಾವ ಬಣ್ಣ? 9 ದಿನಕ್ಕೆ ಒಂಬತ್ತು ಬಣ್ಣದ ಡ್ರೆಸ್‌ ಸಿದ್ಧವಾಗಿಟ್ಟುಕೊಳ್ಳಿ

21 September 2022, 12:24 ISTPraveen Chandra B
  • Share on Twitter
  • Share on FaceBook
21 September 2022, 12:24 IST

ನವರಾತ್ರಿಯು ಬಣ್ಣಗಳ ಹಬ್ಬವು ಹೌದು. ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿದಿನ ಒಂದೊಂದು ಬಣ್ಣದ ಉಡುಗೆ ತೊಟ್ಟು ಹೋಗುವ ಸಂಭ್ರಮವೇ ಬೇರೆ. ಇದರೊಂದಿಗೆ ಮನೆಯಲ್ಲಿ ದೇವಿಯ ಮೂರ್ತಿಯ ಅಲಂಕಾರ ಮಾಡುವಾಗಲೂ ಈ ಬಣ್ಣ ನೆನಪಿನಲ್ಲಿಟ್ಟುಕೊಳ್ಳಬಹುದು.

ನವರಾತ್ರಿಯು ಬಣ್ಣಗಳ ಹಬ್ಬವು ಹೌದು. ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿದಿನ ಒಂದೊಂದು ಬಣ್ಣದ ಉಡುಗೆ ತೊಟ್ಟು ಹೋಗುವ ಸಂಭ್ರಮವೇ ಬೇರೆ. ಇದರೊಂದಿಗೆ ಮನೆಯಲ್ಲಿ ದೇವಿಯ ಮೂರ್ತಿಯ ಅಲಂಕಾರ ಮಾಡುವಾಗಲೂ ಈ ಬಣ್ಣ ನೆನಪಿನಲ್ಲಿಟ್ಟುಕೊಳ್ಳಬಹುದು. ವಿಶೇಷವಾಗಿ, ಈ ನವರಾತ್ರಿಗೆ ಒಂಬತ್ತು ಬಣ್ಣದ ಸೀರೆಯನ್ನು ಮಹಿಳೆಯರು ಸಿದ್ಧವಾಗಿಟ್ಟುಕೊಂಡಿರಬಹುದು. ಯಾವುದಾದರೂ ಬಣ್ಣದ ಸೀರೆ ಇಲ್ಲದೆ ಇದ್ದರೆ ಅಥವಾ ಹಳತಾಗಿದ್ದರೆ ಹೊಸ ಸೀರೆ ಖರೀದಿಸಲು ಹೊರಡಬಹುದು. ನವರಾತ್ರಿಯ ಒಂಬತ್ತು ದಿನಕ್ಕೆ ಒಂಬತ್ತು ಬಣ್ಣಗಳು ಯಾವುವು ಎಂದು ನೋಡೋಣ.

ಟ್ರೆಂಡಿಂಗ್​ ಸುದ್ದಿ

ನವರಾತ್ರಿ ದಿನ 1: ಬಿಳಿ ಬಣ್ಣ

ಶಾಂತಿ ಮತ್ತು ಶುದ್ಧತೆಯ ಪ್ರತೀಕವಾದ ಬಿಳಿಯ ಬಣ್ಣದಿಂದ ನವರಾತ್ರಿ ಆರಂಭವಾಗುತ್ತದೆ. ಮೊದಲ ದಿನ ದುರ್ಗಾ ದೇವಿಗೆ ಬಿಳಿ ಬಣ್ಣದ ಸೀರೆಯ ಅಲಂಕಾರ ಮಾಡಲಾಗುತ್ತದೆ. ನೀರೆಯರೂ ಬಿಳಿ ಬಣ್ಣದ ಸೀರೆ ಉಡಲು ಸಿದ್ಧವಾಗಬಹುದು. ಪುರುಷರು ಬಿಳಿ ಬಣ್ಣದ ಅಂಗಿ ಮತ್ತು ಧೋತಿ ಸಿದ್ಧವಾಗಿಟ್ಟುಕೊಳ್ಳಿ.

ನವರಾತ್ರಿ ದಿನ 2: ಕೆಂಪು ಬಣ್ಣ

ಎರಡನೇ ದಿನ ಕೆಂಪು ಬಣ್ಣ. ಪ್ರೀತಿ ಮತ್ತು ಕರುಣೆಯ ಸಂಕೇತವೂ ಹೌದು. ತಾಯಿ ಬ್ರಹ್ಮಚಾರಿಣಿಯನ್ನು ಈ ದಿನ ಕೆಂಪು ಸೀರೆಯಿಂದ ಅಲಂಕರಿಸಲಾಗುತ್ತದೆ. ಕೆಂಪು ಸೀರೆ, ಕೆಂಪು ಅಂಗಿಯನ್ನು ತೊಟ್ಟು ಈ ದಿನ ಸಂಭ್ರಮಿಸಿ. ಆಫೀಸ್‌ನಲ್ಲಿ ಎಲ್ಲರೂ ಒಂದೇ ಬಣ್ಣದಲ್ಲಿ ಫೋಟೊ ತೆಗೆದುಕೊಳ್ಳುವ ಸಂಭ್ರಮವೇ ಬೇರೆ.

ನವರಾತ್ರಿ ದಿನ 3: ರಾಯಲ್‌ ಬ್ಲೂ

ಮೂರನೇ ದಿನ ರಾಜಗಾಂಭೀರ್ಯದ ನೀಲಿ ಬಣ್ಣವಿದೆ. ಈ ಬಣ್ಣ ಶ್ರೀಮಂತಿಕೆಯ ಸಂಕೇತವೂ ಹೌದು. ನೀಲಿಯ ಇನ್ನಷ್ಟು ಗಾಢ ಬಣ್ಣಕ್ಕೆ ರಾಯಲ್‌ ಬ್ಲೂ ಎಂದು ಕರೆಯುತ್ತಾರೆ. ಈ ದಿನ ಮೂರನೇ ದಿನ ದುರ್ಗಾಮಾತೆಯನ್ನು ಚಂದ್ರಘಂಟೆ ರೂಪದಲ್ಲಿ ಪೂಜಿಸಲಾಗುತ್ತದೆ. ಚಂದ್ರಘಂಟೆ ದೇವಿಯು ಅರ್ಧ ಚಂದ್ರನ ತಿಲಕವನ್ನು ಹಣೆಯಲ್ಲಿ ಧರಿಸಿರುತ್ತಾಳೆ.

ನವರಾತ್ರಿ ದಿನ 4: ಹಳದಿ

ಕೂಷ್ಮಾಂಡದೇವಿಯನ್ನು ಪೂಜಿಸುವ ಈ ದಿನದಂದು ದೇವಿಯನ್ನು ಹಳದಿ ಬಣ್ಣದ ಸೀರೆಯಲ್ಲಿ ಅಲಂಕರಿಸಲಾಗುತ್ತದೆ. ಈ ದಿನ ಚತುರ್ಥಿಯಾಗಿದ್ದು, ಯೆಲ್ಲೊ ಬಣ್ಣದ ಸಂಭ್ರಮ ಕಾಣಿಸುತ್ತದೆ. ಈ ಬಣ್ಣದ ಉಡುಗೆ ನಿಮ್ಮಲ್ಲಿ ಇದೆ ಅಲ್ವಾ?

ನವರಾತ್ರಿ ದಿನ 5: ಹಸಿರು

ಐದನೇ ದಿನಕ್ಕೆ ಹಸಿರು ಬಣ್ಣದ ಸೊಬಗು. ನಿಸರ್ಗವನ್ನು ಸೂಚಿಸುವ ಈ ಬಣ್ಣವು ಪ್ರಗತಿ, ಫಲವಂತಿಕೆ, ಶಾಂತಿಯ ಬಣ್ಣವೂ ಹೌದು. ಈ ದಿನ ದುರ್ಗಾ ಮಾತೆಯನ್ನುಸ್ಕಂದಾ ಮಾತೆಯಾಗಿ ಪೂಜಿಸಲಾಗುತ್ತದೆ. ಹಸಿರು ಹೊಸ ಆರಂಭದ ಸಂಕೇತವೂ ಹೌದು. ಪರಿಸರ ದಿನಕ್ಕೆ ಖರೀದಿಸಿದ್ದ ಹಸಿರು ಉಡುಗೆ ರೆಡಿಯಾಗಿಟ್ಟುಕೊಳ್ಳಿ.

ನವರಾತ್ರಿ ದಿನ 6: ಕಂದು

ಆರನೇ ದಿನ ಕಂದು ಬಣ್ಣ. ಅಂದು ದೇವಿ ಕ್ಯಾತ್ಯಾಯಿನಿಯನ್ನು ಪೂಜಿಸಲಾಗುತ್ತದೆ. ಭಾವನಾತ್ಮಕತೆಯ ಸಮತೋಲನದ ಸಂಕೇತ ಈ ಬಣ್ಣ.

ನವರಾತ್ರಿ ದಿನ 7: ಕಿತ್ತಳೆ ಬಣ್ಣ

ಕಾಲ್‌ರಾತ್ರಿಯನ್ನು ಆರೇಂಜ್‌ ಬಣ್ಣದಲ್ಲಿ ಪೂಜಿಸಲಾಗುತ್ತದೆ. ಕಿತ್ತಳೆ ಬಣ್ಣದ ಉಡುಗೆ ಹೆಣ್ಮಕ್ಕಳಲ್ಲಿಯಂತೂ ಇದ್ದೇ ಇರಬಹುದು. ಪುರುಷರಲ್ಲಿಯೂ ಈ ಬಣ್ಣದ ಟೀಶರ್ಟ್‌, ಅಂಗಿ ಇರಬಹುದು. ಇಲ್ಲದಿದ್ದರೆ ಖರೀದಿಸಿ ಆಫೀಸ್‌, ಕಾಲೇಜಿಗೆ ತೊಟ್ಟುಕೊಂಡು ಹೋಗಿ.

ನವರಾತ್ರಿ ದಿನ 8: ಪಿಕಾಕ್‌ ಗ್ರೀನ್‌

ಮಹಾಗೌರಿಯನ್ನು ಆ ದಿನ ಪಿಕಾಕ್‌ ಹಸಿರು ಬಣ್ಣದಲ್ಲಿ ಅಲಂಕರಿಸಲಾಗುತ್ತದೆ. ಇದು ಯೂನಿಕ್‌ ಆದ ಬಣ್ಣವಾಗಿದೆ.

ನವರಾತ್ರಿ ದಿನ 9: ಗುಲಾಬಿ ಬಣ್ಣ

ಪಿಂಕ್‌ ಕಲರ್‌ ಬಹುತೇಕ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಹೆಣ್ಣು ಮಕ್ಕಳಿಗೆ ಇದು ಅತ್ಯಂತ ಪ್ರಿಯವಾದ ಬಣ್ಣ. ನವರಾತ್ರಿಯ ಒಂಬತ್ತನೇ ದಿನ ಸಿದ್ಧಿ ದಾತ್ರಿ ದೇವಿಯನ್ನು ಗುಲಾಬಿ ಬಣ್ಣದ ಸೀರೆಯಲ್ಲಿ ಅಲಂಕರಿಸಲಾಗುತ್ತದೆ.