ಕನ್ನಡ ಸುದ್ದಿ  /  Lifestyle  /  Navratri Maha Navami 2022: Date, Puja Timing, Rituals, Significance Of Navami

Navratri Maha Navami 2022: ನವರಾತ್ರಿ ಮಹಾನವಮಿ ದಿನಾಂಕ, ಪೂಜಾ ಸಮಯ, ಆಚರಣೆ ಹೇಗೆ? ಮತ್ತು ನವಮಿಯ ಮಹತ್ವ

ಈ ವರ್ಷ ನವರಾತ್ರಿ ಹಬ್ಬವು ಸೆಪ್ಟೆಂಬರ್‌ 26ರಂದು ಆರಂಭವಾಗಿ, ಅಕ್ಟೋಬರ್‌ 5ರಂದು ದಸರಾ ಹಬ್ಬದೊಂದಿಗೆ ಪೂರ್ಣಗೊಳ್ಳಲಿದೆ. ಹೀಗಾಗಿ, ಅಕ್ಟೋಬರ್‌ 4ರಂದು ಮಹಾನವಮಿ ಇರುತ್ತದೆ. ನಾಳೆ, ಕರ್ನಾಟಕದ ಬಹುತೇಕ ಕಡೆ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

Navratri Maha Navami 2022: ನವರಾತ್ರಿ ಮಹಾನವಮಿ ದಿನಾಂಕ, ಪೂಜಾ ಸಮಯ, ಆಚರಣೆ ಹೇಗೆ?
Navratri Maha Navami 2022: ನವರಾತ್ರಿ ಮಹಾನವಮಿ ದಿನಾಂಕ, ಪೂಜಾ ಸಮಯ, ಆಚರಣೆ ಹೇಗೆ?

ನವರಾತ್ರಿ ಹಬ್ಬದ ಕೊನೆಯ ದಿನ ಮಹಾ ನವಮಿ ಆಚರಿಸಲಾಗುತ್ತದೆ. ಇದು ಅಶ್ವಿನಿ ತಿಂಗಳ ಶುಕ್ಲ ಪಕ್ಷದ ಒಂಬತ್ತನೇ ದಿನ ಬರುತ್ತದೆ. ಈ ದಿನವನ್ನೂ ನವರಾತ್ರಿ ಉಪವಾಸದ ಪಾರಣ ದಿನವೆಂದೂ ಕರೆಯಲಾಗುತ್ತದೆ. ಕನ್ಯಾ ಪೂಜಾನ್‌ ಅಥವಾ ಕುಮಾರಿ ಪೂಜೆಯನ್ನು ಮನೆಯಲ್ಲಿ ಕೈಗೊಂಡು, ದುರ್ಗಾ ಮಾತೆ ಸಿದ್ಧಿದಾತ್ರಿಯ ಒಂಬತ್ತನೇ ಅವತಾರವನ್ನು ಪೂಜಿಸಿ ಭಕ್ತರು ಉಪವಾಸ ಕೊನೆಗೊಳಿಸುತ್ತಾರೆ.

ಹಲ್ವಾ, ಪೂರಿ ಮತ್ತು ಕಡಲೆ ಇತ್ಯಾದಿ ರುಚಿಕರ ಪ್ರಸಾದವನ್ನು ಅಂದು ಸಿದ್ಧಪಡಿಸಲಾಗುತ್ತದೆ. ಇದನ್ನು ದೇವಿಗೆ ನೈವೇದ್ಯವಾಗಿ ನೀಡಲಾಗುತ್ತದೆ. ಕನ್ಯಾ ಪೂಜಾ ಸಮಯದಲ್ಲಿ ಮನೆಯ ಪುಟ್ಟ ಹೆಣ್ಣು ಮಕ್ಕಳಿಗೆ ಈ ಪ್ರಸಾದವನ್ನು ನೀಡಲಾಗುತ್ತದೆ. ನವಮಿಯಂದು ದೇವಿಯನ್ನು ಮಹಿಷಾಮರ್ಧಿನಿಯಾಗಿಯೂ ಪೂಜಿಸಲಾಗುತ್ತದೆ. ಮಹಿಷಾಸುರನನ್ನು ಮರ್ದಿಸಿದ ಹಿಂದಿನ ದಿನವಾಗಿದೆ. ಕರ್ನಾಕದಲ್ಲಿ ಆಯುಧ ಪೂಜೆಗೆ ಮಂಡಕ್ಕಿ, ಸಿಹಿತಿಂಡಿಗಳು ಸೇರಿದಂತೆ ಹಲವು ತಿಂಡಿತಿನಿಸುಗಳು ಇರುತ್ತವೆ.

ನವರಾತ್ರಿ ಮಹಾನವಮಿ ದಿನಾಂಕ (NAVRATRI MAHA NAVAMI DATE 2022)

ಈ ವರ್ಷ ನವರಾತ್ರಿ ಹಬ್ಬವು ಸೆಪ್ಟೆಂಬರ್‌ 26ರಂದು ಆರಂಭವಾಗಿ, ಅಕ್ಟೋಬರ್‌ 5ರಂದು ದಸರಾ ಹಬ್ಬದೊಂದಿಗೆ ಪೂರ್ಣಗೊಳ್ಳಲಿದೆ. ಹೀಗಾಗಿ, ಅಕ್ಟೋಬರ್‌ 4ರಂದು ಮಹಾನವಮಿ ಇರುತ್ತದೆ. ನಾಳೆ, ಕರ್ನಾಟಕದ ಬಹುತೇಕ ಕಡೆ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಮಹಾ ನವಮಿ ಆಚರಣೆ ಹೇಗೆ?

ದೇಶದ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ನವರಾತ್ರಿ ಮಹಾನವಮಿಯನ್ನು ಆಚರಿಸಲಾಗುತ್ತದೆ. ಉತ್ತರ ಮತ್ತು ಪೂರ್ವ ಭಾರತದಲ್ಲಿ ಕ್ಯನ್ಯಾ ಪೂಜನಾ ಪ್ರಮುಖವಾಗಿದೆ. ಅಲ್ಲಿ ಒಂಬತ್ತು ಚಿಕ್ಕ ಹುಡುಗಿಯರನ್ನು ಅಥವಾ ಪುಟಾಣಿ ಹೆಣ್ಣು ಮಕ್ಕಳನ್ನು ದುರ್ಗೆಯ ಒಂಬತ್ತು ಅವತಾರಗಳಾಗಿ ಪೂಜಿಸಲಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ ಪವಿತ್ರ ಸ್ನಾನದ ಮೂಲಕ ಈ ದಿನವನ್ನು ಆರಂಭಿಸಲಾಗುತ್ತದೆ. ಅಂದು ಶೋಡೋಪಚಾರ ಪೂಜೆಯನ್ನೂ ಕೈಗೊಳ್ಳಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಈ ದಿನ ಸರಸ್ವತಿಗೆಗೆ ಸಮರ್ಪಿಸಲಾಗುತ್ತದೆ. ಶಾಲೆಗಳಲ್ಲಿ ಶಾರದಾ ಪೂಜೆ ನಡೆಸಲಾಗುತ್ತದೆ. ಪುಸ್ತಕಗಳು, ಉಪಕರಣಗಳು, ವಾಹನಗಳನ್ನು ಪೂಜಿಸುವ ಆಯುಧ ಪೂಜೆಯನ್ನು ನಡೆಸಲಾಗುತ್ತದೆ.

ನವರಾತ್ರಿಯ ಒಂಬತ್ತನೇ ದಿನದಂದು ತಾಯಿ ಸಿದ್ಧಿಧಾತ್ರಿಯನ್ನು ನವದುರ್ಗೆಯಾಗಿ ಪೂಜಿಸಲಾಗುತ್ತದೆ. ತನ್ನ ಭಕ್ತರಿಗೆ ಸಿದ್ಧಿ ಕರುಣಿಸುವ ದೇವಿ ಎಂದು ಈಕೆಯನ್ನು ಪರಿಗಣಿಸಲಾಗಿದೆ. ಈಕೆಯು ನಾಲ್ಕು ಕರಗಳನ್ನು ಹೊಂದಿದ್ದಾಳೆ. ಈ ಕೈಗಳಲ್ಲಿ ಗದೆ, ಚಕ್ರ, ಶಂಖ ಮತ್ತು ತಾವರೆ ಹೂವನ್ನು ಹಿಡಿದಿದ್ದಾಳೆ. ಈಕೆ ಸಿಂಹದ ಮೇಲೆ ಸಂಚರಿಸುತ್ತಾಳೆ. ಶಿವನು ಈಕೆಗೆ ಎಲ್ಲಾ ಸಿದ್ಧಿಗಳನ್ನು ನೀಡಿದ್ದಾನೆ ಎಂದು ಹೇಳಲಾಗಿದೆ. ಈಕೆಯನ್ನು ಪೂಜಿಸುವುದರಿಂದ ವಿದ್ಯೆ, ಬುದ್ಧಿ ಮತ್ತು ಸಿದ್ಧಿಗಳು ದೊರಕುತ್ತವೆ.

ಪೂಜಾ ಸಮಯ

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಆಯುಧ ಪೂಜೆ ಕೈಗೊಳ್ಳಲು ಇದೇ ಸೂಕ್ತ ಸಮಯ ಎಂದು ಪರಿಗಣಿಸುವುದು ಕಡಿಮೆ. ಮನೆಯಲ್ಲಿ ವಾಹನ ಪೂಜಿಸುವವರು ಬೆಳಗ್ಗಿನ ಹೊತ್ತು ಆಯುಧ ಪೂಜೆ ಕೈಗೊಳ್ಳಬಹುದು. ಹೀಗಿದ್ದರೂ, ನವಮಿ ಪೂಜೆಗೆ ಸೂಕ್ತ ಸಮಯ ತಿಳಿಯಲು ಬಯಸುವವರಿಗೆ ಈ ಮುಂದಿನ ಸಮಯವನ್ನು ಪರಿಗಣಿಸಬಹುದು.

ತಿಥಿ: ಮಹಾ ನವಮಿ ತಿಥಿಯು ಅಕ್ಟೋಬರ್‌ 3ರ ಸಂಜೆ 4:37 ಗಂಟೆಗೆ ಆರಂಭವಾಗಿ, ಅಕ್ಟೋಬರ್‌ 4ರ ಅಪರಾಹ್ನ 2.20ಕ್ಕೆ ಕೊನೆಗೊಳ್ಳುತ್ತದೆ.

ಪೂಜಾ ಸಮಯ: ನವಮಿಯ ಪೂಜೆ ಸಮಯವು ಅಕ್ಟೋಬರ್‌ 3ರಂದು ಸಂಜೆ 3:07 ಗಂಟೆಯಿಂದ ಅಕ್ಟೋಬರ್‌ 4ರ ಮಧ್ಯಾಹ್ನ 12:50 ಗಂಟೆಯವರೆಗೆ ಇರುತ್ತದೆ.

ವಿಭಾಗ