ಮುದ್ದು ಮಗುವಿಗೆ ಹೊಸ ಹೆಸರು ಇಡಬೇಕಾ? ರುವಾನ್ ರಿಂದ ಭುವಿಕ್ ವರೆಗೆ, 2024ರಲ್ಲಿ ತುಂಬಾ ಟ್ರೆಂಡಿಂಗ್ ಹೆಸರುಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಮುದ್ದು ಮಗುವಿಗೆ ಹೊಸ ಹೆಸರು ಇಡಬೇಕಾ? ರುವಾನ್ ರಿಂದ ಭುವಿಕ್ ವರೆಗೆ, 2024ರಲ್ಲಿ ತುಂಬಾ ಟ್ರೆಂಡಿಂಗ್ ಹೆಸರುಗಳಿವು

ಮುದ್ದು ಮಗುವಿಗೆ ಹೊಸ ಹೆಸರು ಇಡಬೇಕಾ? ರುವಾನ್ ರಿಂದ ಭುವಿಕ್ ವರೆಗೆ, 2024ರಲ್ಲಿ ತುಂಬಾ ಟ್ರೆಂಡಿಂಗ್ ಹೆಸರುಗಳಿವು

2024ರಲ್ಲಿ ಟ್ರೆಂಡಿಂಗ್ ನಲ್ಲಿರುವ ಮಕ್ಕಳಿಗೆ ಇಡಬಹುದಾದ ಹೆಸರುಗಳ ಪಟ್ಟಿ ಇಲ್ಲಿದೆ. ಈ ಹಿಂದೂ ಹೆಸರುಗಳು ಮತ್ತು ಅವುಗಳ ಅರ್ಥವನ್ನೂ ಇಲ್ಲಿ ನೀಡಲಾಗಿದೆ. ನಿಮ್ಮ ಮಗುವಿಗೆ ಹೊಂದುವಂತಹ ಹೊಸ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಿ.

ನಿಮ್ಮ ಪುಟ್ಟ ಕಂದನಿಗೆ ಇಡಬಹುದಾದ 2024ರ ಟ್ರೆಂಡಿಂಗ್ ಹೆಸರುಗಳ ಪಟ್ಟಿ ಇಲ್ಲಿದೆ.
ನಿಮ್ಮ ಪುಟ್ಟ ಕಂದನಿಗೆ ಇಡಬಹುದಾದ 2024ರ ಟ್ರೆಂಡಿಂಗ್ ಹೆಸರುಗಳ ಪಟ್ಟಿ ಇಲ್ಲಿದೆ.

ಮನೆಗೆ ಪುಟ್ಟ ಕಂದನ ಆಗಮನವಾಗುತ್ತಿದ್ದಂತೆ ಪೋಷಕರು ತಮ್ಮ ಮಗುವಿಗೆ ಯಾವ ರೀತಿಯ ಹೆಸರು ಇಡಬೇಕು ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಸಂಬಂಧಿಕರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಹೀಗೆ ತಮ್ಮಗೆ ಗೊತ್ತಿರುವವರಿಂದ ಸಲಹೆಗಳನ್ನ ಪಡೆಯುತ್ತಾರೆ. ಅಂತಿಮವಾಗಿ ಎಲ್ಲರೂ ಇಷ್ಟ ಪಡುವಂತ ಹೆಸರುಗಳನ್ನು ಇಡುತ್ತಾರೆ. ಇನ್ನೇನು 2024ರ ಹಳೆಯ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷಕ್ಕೆ ಕಾಲಿಡಲು ಇನ್ನ ಕೆಲವೇ ದಿನಗಳು ಬಾಕಿ ಇವೆ. ಈ ವೇಳೆ ಮಕ್ಕಳಿಗೆ ಇಡಬಹುದಾದ ಹೊಸ ಹೆಸರು ಹಾಗೂ 2024 ರಲ್ಲಿ ತುಂಬಾ ಟ್ರೆಂಡಿಂಗ್ ನಲ್ಲಿರುವ ಹೆಸರುಗಳ ಬಗ್ಗೆ ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬಹಳ ಎಚ್ಚರಿಕೆಯಿಂದ ಹೆಸರಿಡಲು ಇಷ್ಟಪಡುತ್ತಾರೆ. ಮಗುವಿನ ಹೆಸರು ಅವರ ವ್ಯಕ್ತಿತ್ವದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ ಪೋಷಕರು ತಮ್ಮ ಮಗುವಿಗೆ ಅರ್ಥಪೂರ್ಣ ಮತ್ತು ಅನನ್ಯ ಹೆಸರನ್ನು ಹುಡುಕುತ್ತಾರೆ. ನಿಮ್ಮ ಮಗು 2024 ರಲ್ಲಿ ಜನಿಸಿದ್ದರೆ ಮತ್ತು ನಿಮ್ಮ ಮಗುವಿಗೆ ಈ ವರ್ಷ ಟ್ರೆಂಡಿಂಗ್ ನಲ್ಲಿರುವ ಪ್ರಸಿದ್ಧ ಹೆಸರುಗಳನ್ನು ನೀವು ಹುಡುಕುತ್ತಿದ್ದರೆ, ನಿಮ್ಮ ಹುಡುಕಾಟಕ್ಕೆ ಬ್ರೇಕ್ ಹಾಕಿ. 2024 ರಲ್ಲಿ ಮಕ್ಕಳಿಗೆ ಇಡಬಹುದಾದ ಈ ಹಿಂದೂ ಹೆಸರುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಇದಕ್ಕೆ ಕಾರಣವೆಂದರೆ ಈ ಎಲ್ಲಾ ಹಿಂದೂ ಹೆಸರುಗಳು ವಿಶೇಷ ಮತ್ತು ಸುಂದರವಾದ ಅರ್ಥವನ್ನು ಹೊಂದಿವೆ. ನಿಮ್ಮ ಮಕ್ಕಳಿಗೆ ಈ ಹೆಸರುಗಳನ್ನು ಸಹ ನೀವು ಇಷ್ಟಪಡಬಹುದು.

2024 ರಲ್ಲಿ ಟ್ರೆಂಡಿಂಗ್ ನಲ್ಲಿರುವ ಹೆಸರುಗಳು ಮತ್ತು ಅವುಗಳ ಅರ್ಥ

ಅರಿನ್: ಶತ್ರುಗಳಿಲ್ಲದ ವ್ಯಕ್ತಿ

ರುವಾನ್: ಆಶೀರ್ವದಿಸಲ್ಪಟ್ಟ ಅಥವಾ ದೇವರಿಂದ ಪಡೆದವನು

ಅವಿಯಾನ್: ಒಳ್ಳೆಯ ಮತ್ತು ಅದೃಷ್ಟಶಾಲಿ

ಇಶಾಂಕ್: ಹಿಮಾಲಯದ ಅಧಿಪತಿ

ಈಶ್ವರ್: ದೇವರಂತೆ ಆಕರ್ಷಕ ಮುಖ ಹೊಂದಿರುವವನು

ಅಭಿಕ್: ಪ್ರೀತಿ ಮತ್ತು ನಿರ್ಭೀತ ಎಂದರ್ಥ

ಅಗಸ್ತ್ಯ: ಋಗ್ವೇದದ ಲೇಖಕ ಋಷಿ

ಇಕ್ಷಾನ್: ಇಕ್ಷಾನ್ ಎಂದರೆ ದೃಷ್ಟಿ ಎಂದರ್ಥ

ಭುವಿಕ್: ಈ ಹೆಸರು ಸ್ವರ್ಗದ ಸಂಕೇತವಾಗಿದೆ

2024 ರಲ್ಲಿ ಟ್ರೆಂಡಿಂಗ್ ನಲ್ಲಿರುವ ಹೆಣ್ಣುಮಕ್ಕಳ ಹೆಸರುಗಳು

ಅರಿಕಾ: ಸುಂದರವಾಗಿರು, ಸೌಂದರ್ಯವನ್ನ ಹೊಂದಿರುವ ಅರ್ಥವನ್ನು ಕೊಡುತ್ತದೆ

ಅರ್ವಿ: ಈ ಹೆಸರಿನ ಅರ್ಥ ಶಾಂತಿ

ಇಪ್ಸಿತಾ: ದೇವರಿಂದ ಆಶೀರ್ವಾದವನ್ನು ಹೊಂದಿರುವವಳು

ಮನಸ್ವಿನಿ: ಈ ಹೆಸರಿನ ಅರ್ಥ ಬುದ್ಧಿವಂತ ಮತ್ತು ಉನ್ನತ ಮನಸ್ಸಿನವರು

Whats_app_banner