ಕನ್ನಡ ಸುದ್ದಿ  /  Lifestyle  /  Never Do These Things After Your Meals

After Meals: ಊಟದ ತಕ್ಷಣ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಕೆಲವರು ಊಟದ ತಕ್ಷಣ ಸ್ನಾನ ಮಾಡುತ್ತಾರೆ. ಮತ್ತೆ ಕೆಲವರು ಹಣ್ಣುಗಳನ್ನು ತಿನ್ನುತ್ತಾರೆ. ಹೀಗೆ ಮಾಡುವುದು ಒಳ್ಳೆಯದಾ? ಈ ಬಗ್ಗೆ ಇಲ್ಲದೆ ಮಾಹಿತಿ.

ಊಟದ ನಂತರ ಏನು ಮಾಡಬಾರದು?
ಊಟದ ನಂತರ ಏನು ಮಾಡಬಾರದು?

ಆರೋಗ್ಯವಾಗಿರಲು ಉತ್ತಮ ಗುಣಮಟ್ಟದ ಆಹಾರ ಸೇವಿಸಬೇಕು. ಇದರೊಂದಿಗೆ ನಮ್ಮ ಜೀವನಶೈಲಿಯೂ ಉತ್ತಮವಾಗಿರಬೇಕು. ಆಹಾರದ ವಿಷಯದಲ್ಲಿ ಸಾಕಷ್ಟು ಶಿಸ್ತು ಪಾಲಿಸಬೇಕು. ಬೆಳಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಊಟದವರೆಗೆ ಹೆಚ್ಚು ಜಾಗರೂಕರಾಗಿರಬೇಕು. ಒಂದು ವೇಳೆ ಆಹಾರದ ವಿಚಾರವಾಗಿ ನಿರ್ಲಕ್ಷ್ಯ ಅಥವಾ ಅಜಾಗರೂಕತೆ ತೋರಿದರೆ, ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಆಹಾರದ ವಿಚಾರವಾಗಿ ಯಾವುದಾದರೂ ಗೊಂದಲವಿದ್ದರೆ, ತಜ್ಞರ ಅಭಿಪ್ರಾಯ ಕೇಳುವುದು ಉತ್ತಮ. ಊಟದ ಮೊದಲು ಮತ್ತು ನಂತರ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ಈ ಬಗ್ಗೆ ನಿಮಗೆ ತಿಳಿಯದಿದ್ದರೆ ಪೌಷ್ಟಿಕತಜ್ಞರು ನೀಡಿದ ಸಲಹೆ ಇಲ್ಲಿವೆ. ಕೆಲವರು ತಿಂದ ತಕ್ಷಣ ಸ್ನಾನ ಮಾಡುತ್ತಾರೆ. ಮತ್ತೆ ಕೆಲವರು ಹಣ್ಣುಗಳನ್ನು ತಿನ್ನುತ್ತಾರೆ. ಹೀಗೆ ಮಾಡುವುದು ಒಳ್ಳೆಯದಾ? ಈ ಬಗ್ಗೆ ಇಲ್ಲದೆ ಮಾಹಿತಿ.

ಊಟದ ತಕ್ಷಣ ಸ್ನಾನ ಮಾಡಬೇಡಿ

ಊಟವಾದ ತಕ್ಷಣ, ಚಯಾಪಚಯ ಕ್ರಿಯೆಗೆ ಅಗತ್ಯವಿರುವಂತೆ ಹೊಟ್ಟೆಯ ಸುತ್ತಲೂ ರಕ್ತವು ಧಾವಿಸುತ್ತದೆ. ಇಂತಹ ಸಮಯದಲ್ಲಿ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಬದಲಾಗುತ್ತದೆ. ತಾಪಮಾನವು ಸಾಮಾನ್ಯ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದಲೇ ಊಟವಾದ ತಕ್ಷಣ ಸ್ನಾನ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ.

ವ್ಯಾಯಾಮ ಮಾಡಬೇಡಿ

ತಿಂದ ಬಳಿಕ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಊಟವಾದ ತಕ್ಷಣ ತೀವ್ರವಾದ ವ್ಯಾಯಾಮ ಮಾಡುವುದರಿಂದ ಜೀರ್ಣ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಇದು ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿಗೆ ಕಾರಣವಾಗಬಹುದು.

ಮುಂದಕ್ಕೆ ಅಥವಾ ಕೆಳಕ್ಕೆ ಬಾಗುವುದನ್ನು ಕೂಡಾ ತಪ್ಪಿಸಿ. ಹೀಗೆ ಮಾಡುವುದರಿಂದ ಆಸಿಡ್ ರಿಫ್ಲಕ್ಸ್ ಉಂಟಾಗುತ್ತದೆ.

ಹಣ್ಣುಗಳನ್ನು ಸೇವಿಸಬೇಡಿ

ಊಟದ ನಂತರ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ. ಅಲ್ಲದೆ ಊಟದ ಜೊತೆ ಜೊತೆಗೂ ಹಣ್ಣು ಹಂಪಲುಗಳನ್ನು ತಿನ್ನಬೇಡಿ. ಏಕೆಂದರೆ ಇದು ನಾವು ತಿನ್ನುವ ಹಣ್ಣುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಹಣ್ಣು ಮತ್ತು ಆಹಾರದ ಜೀರ್ಣಕ್ಕೆ ಬೇಕಾಗುವ ಸಮಯಗಳಲ್ಲಿ ವ್ಯತ್ಯಾಸವಿರುತ್ತದೆ. ಹೀಗಾಗಿ ಇದು ಸಮತೋಲನ ತಪ್ಪಲು ಕಾರಣವಾಗುತ್ತದೆ.

ಕಾಫಿ ಕುಡಿಯಬೇಡಿ

ಕಾಫಿಯಲ್ಲಿ ಫೀನಾಲಿಕ್ ಸಂಯುಕ್ತಗಳಿರುತ್ತವೆ. ಇದು ಆಹಾರದಿಂದ ಕಬ್ಬಿಣದಂತಹ ಕೆಲವು ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುವಂತೆ ಮಾಡುತ್ತದೆ.

ಮದ್ಯಪಾನ ಅಥವಾ ಧೂಮಪಾನ ಮಾಡಬೇಡಿ. ಇವುಗಳನ್ನು ಯಾವಾಗ ಸೇವಿಸಿದರೂ, ಆರೋಗ್ಯಕ್ಕೆ ಹಾನಿಕಾರಕ. ಊಟದ ನಂತರ ಅವುಗಳನ್ನು ಸೇವಿಸುವುದರಿಂದ ಆರೋಗ್ಯದ ಅಪಾಯ ಮತ್ತಷ್ಟು ಹೆಚ್ಚಾಗುತ್ತವೆ.

ಟಿವಿ ನೋಡುತ್ತಾ ಊಟ ಮಾಡಬೇಡಿ

ಹೀಗೆ ತಿನ್ನುವುದರಿಂದ ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬ ಅರಿವು ನಮಗೆ ಇರುವುದಿಲ್ಲ. ಮತ್ತೊಂದೆಡೆ ಏನು ತಿನ್ನುತ್ತಿದ್ದೇವೆ ಎಂಬುದು ಕೂಡಾ ಕೆಲವೊಬ್ಬರಿಗೆ ಗೊತ್ತಾಗುವುದಿಲ್ಲ. ಹೀಗೆ ಮಾಡುವುದರಿಂದ ತೂಕ ಹೆಚ್ಚಾಗುವುದು, ಬೊಜ್ಜು ಮುಂತಾದ ಸಮಸ್ಯೆಗಳು ಎದುರಾಗುತ್ತವೆ.

ಮೊಬೈಲ್‌ ದೂರವಿಡಿ

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ. ಫೋನ್‌ ನೋಡುವುದರಿಂದ ನಿಮ್ಮ ಏಕಾಗ್ರತೆ ಊಟಕ್ಕಿಂತ ಜಾಸ್ತಿ ಅದರಲ್ಲೇ ಇರುತ್ತದೆ. ಏನು ತಿಂದರೂ ನೀವು ಆಹಾರದ ಕಡೆ ಗಮನ ಕೊಡಲು ಆಗುವುದಿಲ್ಲ. ಇದಲ್ಲದೆ, ನಾವು ಎಷ್ಟು ಆಹಾರವನ್ನು ತೆಗೆದುಕೊಳ್ಳುತ್ತೇವೆ ಎಂಬುದು ನಮಗೆ ತಿಳಿಯುವುದಿಲ್ಲ.

ಆಹಾರವನ್ನು ದೀರ್ಘಕಾಲ ಮೆಲ್ಲುತ್ತಾ ತಿನ್ನಬಾರದು. ಹಾಗಂತ ಗಬಗಬನೆ ತಿಂದು ತೇಗಬಾರದು. ಇದು ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಹಾರವನ್ನು ಚೆನ್ನಾಗಿ ಅಗಿದು ನುಂಗಬೇಕು.

ಆಹಾರವನ್ನು ಜೀರ್ಣಿಸಿಕೊಳ್ಳಲು ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು. ವಿಶೇಷವಾಗಿ ಜೀರ್ಣಕಾರಿ ಸಮಸ್ಯೆ ಇರುವವರಿಗೆ ಅಥವಾ ತಡವಾಗಿ ತಿನ್ನುವವರಿಗೆ ಇದು ತುಂಬಾ ಉಪಯುಕ್ತವಾಗಿದೆ.

ವಿಭಾಗ