Healthy Food: ಅನ್ನದೊಂದಿಗೆ ಕೆಲವೊಂದು ಆಹಾರಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ; ತಜ್ಞರು ಹೇಳಿರುವ ಸಲಹೆ ಕೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Healthy Food: ಅನ್ನದೊಂದಿಗೆ ಕೆಲವೊಂದು ಆಹಾರಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ; ತಜ್ಞರು ಹೇಳಿರುವ ಸಲಹೆ ಕೇಳಿ

Healthy Food: ಅನ್ನದೊಂದಿಗೆ ಕೆಲವೊಂದು ಆಹಾರಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ; ತಜ್ಞರು ಹೇಳಿರುವ ಸಲಹೆ ಕೇಳಿ

ಅನ್ನದೊಂದಿಗೆ ಕೆಲವೊಂದು ಆಹಾರಗಳ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಆ ಐದು ಆಹಾರಗಳು ಯಾವುದು ಮತ್ತು ಅದರಿಂದ ಯಾವ ರೀತಿ ದೇಹದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ಅನ್ನದೊಂದಿಗೆ ಕೆಲವೊಂದು ಆಹಾರಗಳ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು
ಅನ್ನದೊಂದಿಗೆ ಕೆಲವೊಂದು ಆಹಾರಗಳ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು (Pixabay)

ನೀವು ಅನ್ನವನ್ನು ಇಷ್ಟಪಡುವವರಾದರೆ, ಇದರೊಂದಿಗೆ ಯಾವ ಯಾವ ಆಹಾರಗಳನ್ನು ತಿನ್ನುವುದರಿಂದ ನೀವು ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣದಂತಹ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತೀರಿ ಎನ್ನುವುದು ನಿಮಗೆ ಗೊತ್ತಾ. ಈ ತಪ್ಪಾದ ಆಹಾರ ಸಂಯೋಜನೆಗಳು ನಿಮ್ಮ ಶರೀರದಲ್ಲಿ ಹಲವಾರು ಕಾಯಿಲೆಗಳನ್ನು ಉಲ್ಬಣಗೊಳ್ಳುವುದಕ್ಕೂ ಕಾರಣವಾಗಬಹುದು. ಹಾಗಾದರೆ ವೈದ್ಯರು ಹೇಳಿರುವ ಆ ಐದು ಆಹಾರಗಳು ಯಾವುದು ಎನ್ನುವುದನ್ನು ತಿಳಿಯೋಣ.

ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ, ಜನರು ಬಹಳ ಇಷ್ಟಪಟ್ಟು ತಿನ್ನುವ ಆಹಾರವೇ ಅನ್ನ. ಹೋಟೆಲ್ ರೆಸ್ಟೋರೆಂಟ್‌‌‌‌ಗಳಲ್ಲಿ ಬಗೆ ಬಗೆಯ ಖಾದ್ಯಗಳು ಲಭ್ಯವಿದ್ದರೂ, ದಿನದಲ್ಲಿ ಒಂದು ಬಾರಿಯಾದರೂ ಊಟಕ್ಕೆ ಅನ್ನ ತಿನ್ನದಿದ್ದರೆ ಎಷ್ಟೋ ಜನಕ್ಕೆ ಊಟ ಪೂರ್ತಿಯಾದಂತೆ ಅನ್ನಿಸುವುದಿಲ್ಲ. ಅನ್ನ ಕಾರ್ಬೋಹೈಡ್ರೇಟ್ ಮತ್ತು ಪಿಷ್ಟ ಸಮೃದ್ಧ ಆಹಾರವಾಗಿದೆ. ಆದಾಗ್ಯೂ, ನೀವು ಅನ್ನವನ್ನು ಇತರ ತರಕಾರಿಗಳು ಮತ್ತು ಪ್ರೋಟೀನ್ ಜೊತೆಗೆ ಸೇವಿಸಿದರೆ, ಅದೊಂದು ಸಮತೋಲಿತ ಊಟವಾಗುತ್ತದೆ. ತಜ್ಞರ ಪ್ರಕಾರ, ಅನ್ನ ಶಕ್ತಿಯ ಉತ್ತಮ ಮೂಲವಾಗಿದೆ ಮತ್ತು ಅನೇಕ ಸೂಕ್ಷ್ಮ ಪೋಷಕಾಂಶಗಳು, ಇದು ಸರಿಯಾದ ಇತರ ಆಹಾರ ಪದಾರ್ಥಗಳೊಂದಿಗೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಇದೊಂದು ಉತ್ತಮ ಆಹಾರ. ಇಲ್ಲವಾದರೆ ಇದು ನಿಮ್ಮ ದೇಹಕ್ಕೆ ಹಾನಿಕಾರಕವೂ ಆಗಬಹುದು. ಹಾಗಾದರೆ ಅನ್ನದೊಂದಿಗೆ ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು? ಇಲ್ಲಿದೆ ಮಾಹಿತಿ..

ಅನ್ನ ಮತ್ತು ರೊಟ್ಟಿಯನ್ನು ಒಟ್ಟಿಗೆ ತಿನ್ನಬೇಡಿ

ಆರೋಗ್ಯ ತಜ್ಞರ ಪ್ರಕಾರ, ಅನ್ನ ಮತ್ತು ರೊಟ್ಟಿಯನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ವಾಸ್ತವವಾಗಿ, ಗ್ಲೈಸೆಮಿಕ್ ಸೂಚ್ಯಂಕ ಇವೆರಡರಲ್ಲಿ ಬಹಳ ಹೆಚ್ಚಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ಇದು ಮಧುಮೇಹ, ಸ್ಥೂಲಕಾಯದಂತಹ ಅಪಾಯವನ್ನು ಉಂಟು ಮಾಡಬಹುದು. ಜೊತೆಗೆ ಇವೆರಡನ್ನೂ ಒಟ್ಟಿಗೆ ಜೀರ್ಣಿಸಿಕೊಳ್ಳುವುದು ಸಹ ತುಂಬಾ ಕಷ್ಟ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ನೀವು ಅನುಭವಿಸಬೇಕಾಗಬಹುದು.

ಅನ್ನದೊಂದಿಗೆ ಆಲೂಗಡ್ಡೆ ಬೇಡ

ನಾವೆಲ್ಲರೂ ದಾಲ್ ಆಲೂ ರೈಸ್ ಮತ್ತು ಆಲೂಗಡ್ಡೆ ಪಲ್ಯ ತಿನ್ನಲು ಇಷ್ಟಪಡುತ್ತೇವೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಅನ್ನದೊಂದಿಗೆ ಆಲೂಗಡ್ಡೆಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವೆರಡೂ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌‌‌‌ಗಳನ್ನು ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದರಿಂದ, ಬೊಜ್ಜು ಮತ್ತು ಮಧುಮೇಹದಂತಹ ಕಾಯಿಲೆಗಳು ನಿಮ್ಮನ್ನು ಬಾಧಿಸಬಹುದು. ಹಾಗಾಗಿ ಇವೆರಡನ್ನೂ ಒಟ್ಟಿಗೆ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ. ನೀವು ಆರೋಗ್ಯವಂತರಾಗಿದ್ದರೆ ಅಪರೂಪಕ್ಕೊಮ್ಮೆ ಇದರ ಸೇವನೆ ತೊಂದರೆಯಿಲ್ಲ ಆದರೆ ಎಲ್ಲವೂ ಇತಿ ಮಿತಿಯಲ್ಲಿರಲಿ.

ಅನ್ನದೊಂದಿಗೆ ಹಣ್ಣುಗಳನ್ನು ತಿನ್ನಬೇಡಿ

ಕೆಲವರು ಅನ್ನ ತಿನ್ನುವ ಮೊದಲು ಅಥವಾ ನಂತರ ಹಣ್ಣುಗಳನ್ನು ತಿನ್ನುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ವಿಶೇಷವಾಗಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿಲ್ಲದಿದ್ದರೆ ನೀವು ಇದನ್ನು ಪ್ರಯತ್ನಿಸಬಾರದು. ವಾಸ್ತವವಾಗಿ ಅನ್ನ ಮತ್ತು ಹಣ್ಣುಗಳನ್ನು ಒಟ್ಟಿಗೆ ತಿನ್ನುವುದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳೂ ಉಂಟಾಗಬಹುದು.

ಅನ್ನ ಸೇವಿಸಿದ ನಂತರ ಚಹಾ ಕುಡಿಯಬೇಡಿ

ಕೆಲವರಿಗೆ ಆಹಾರ ಸೇವಿಸಿದ ತಕ್ಷಣ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಈ ಅಭ್ಯಾಸವು ನಿಮಗೆ ಒಳ್ಳೆಯದಲ್ಲ. ನಿಮ್ಮ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ನೀವು ಅನ್ನವನ್ನು ಸೇವಿಸಿದ್ದರೆ, ತಕ್ಷಣ ಚಹಾ ಕುಡಿಯುವುದನ್ನು ಕಡಿಮೆ ಮಾಡಿ. ಇಲ್ಲವಾದರೆ ಇದು ನಿಮ್ಮ ಹೊಟ್ಟೆಯಲ್ಲಿ ಉಬ್ಬರ, ಗ್ಯಾಸ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ದುರ್ಬಲ ಜೀರ್ಣಕ್ರಿಯೆ ಹೊಂದಿರುವ ಜನರು ಈ ಆಹಾರ ಸಂಯೋಜನೆಯನ್ನು ತಪ್ಪಾಗಿಯೂ ಪ್ರಯತ್ನಿಸಬಾರದು.

ನಮ್ಮಲ್ಲಿ ಬಹುತೇಕರು ಈ ಮೇಲಿನ ಆಹಾರ ಸಂಯೋಜನೆಯಳ್ಳಿ ಒಂದನ್ನಾದರೂ ಸೇವಿಸುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿದ್ದೀರಿ. ಇನ್ನಾದರೂ ಅನ್ನ ಸೇವಿಸುವಾಗ ಅದರ ಜೊತೆಗೆ ಯಾವ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎನ್ನುವುದು ನಿಮ್ಮ ಗಮನದಲ್ಲಿರಲಿ. ಒಮ್ಮೆಗೆ ಅಲ್ಲದಿದ್ದರೂ ನಿಧಾನವಾಗಿಯಾದರೂ ಇದಕ್ಕೆ ಕಡಿವಾಣ ಹಾಕುತ್ತಾ ಬನ್ನಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ ಎನ್ನುವುದು ನೆನಪಿನಲ್ಲಿರಲಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner