ಈ ತರಕಾರಿ ಹಾಗೂ ಸೊಪ್ಪುಗಳನ್ನು ಎಂದಿಗೂ ಬೇಯಿಸದೆ ತಿನ್ನಬೇಡಿ; ಬರ್ಗರ್ ಇಷ್ಟಪಡುವವರಿಗಂತು ಇದರ ಬಗ್ಗೆ ತಿಳಿದಿರಲೇಬೇಕು
ಬರ್ಗರ್‌ನಲ್ಲಿ ಬಳಕೆ ಮಾಡುವ ಬಹುತೇಕ ಹಸಿ ತರಕಾರಿಗಳನ್ನು ಬೇಯಿಸದೇ ತಿನ್ನಬಾರದು. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವೂ ಬರ್ಗರ್ ಪ್ರಿಯರಾಗಿದ್ದರೆ, ಆರ್ಡರ್ ಮಾಡುವಾಗ ಇವುಗಳನ್ನು ಸೇರಿಸದೇ ಇರಲು ತಿಳಿಸಿ. ಅಥವಾ ಮನೆಯಲ್ಲೇ ಬೇರೆ ರೀತಿ ಬರ್ಗರ್ ಮಾಡಿ ತಿನ್ನಿ.
ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೌಷ್ಟಿಕತಜ್ಞರು ಮತ್ತು ಆಹಾರ ತಜ್ಞರು ಆಹಾರದಲ್ಲಿ ಹೆಚ್ಚು ತರಕಾರಿಯನ್ನು ತಿನ್ನಲು ಸಲಹೆ ನೀಡುತ್ತಾರೆ. ಸಸ್ಯಾಹಾರಿ ಜೀವನಶೈಲಿ ರೂಢಿಸಿಕೊಂಡ ಕೆಲವರು ಹಸಿ ತರಕಾರಿಗಳನ್ನು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಕೆಲವು ತರಕಾರಿಗಳನ್ನು ಬೇಯಿಸಿಯೇ ತಿನ್ನಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ಯಾವುದನ್ನು ಬೇಯಿಸಿ ತಿನ್ನಬೇಕು ಮತ್ತು ಯಾವ ತರಕಾರಿಯನ್ನು ಬೇಯಿಸದೆಯೇ ತಿನ್ನಬಹುದು ಎಂಬ ಅಂಶವನ್ನು ತಿಳಿದುಕೊಳ್ಳಿ.
ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ
ಅನೇಕ ಜನರು ಸಲಾಡ್‌ಗಳು, ಬರ್ಗರ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳಲ್ಲಿ ಎಲೆಕೋಸನ್ನು ಕಚ್ಚಾ ಬಳಸುತ್ತಾರೆ. ಆದರೆ ಇದನ್ನು ಹಸಿಯಾಗಿ ತಿನ್ನಬಾರದು. ಹಸಿ ಎಲೆಕೋಸು E.coli ಅಥವಾ salmonella ನಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಕಾರಣ ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಕೇವಲ ರುಚಿಯ ಬಗ್ಗೆ ಮಾತ್ರ ನೀವು ಗಮನಕೊಡಬೇಡಿ. ಬ್ರೊಕೋಲಿಯನ್ನು ಹಲವರು ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಇದನ್ನೂ ಸಹ ನೀವು ಹಸಿಯಾಗಿ ತಿನ್ನಬಾರದು. ಇದು ನಿಮ್ಮ ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಕನಿಷ್ಠ ಇದನ್ನು ಕಡಿಮೆ ಎಣ್ಣೆಯಲ್ಲಿ ಒಮ್ಮೆಯಾದರೂ ಹುರಿದುಕೊಳ್ಳಬೇಕು.
ಕ್ಯಾಪ್ಸಿಕಂ
ಸಲಾಡ್ ಮತ್ತು ಸ್ಯಾಂಡ್‌ವಿಚ್‌ಗಳಲ್ಲಿ ಹಸಿ ಕ್ಯಾಪ್ಸಿಕಂ ಬಳಕೆ ಮಾಡಲಾಗುತ್ತದೆ. ಇವುಗಳನ್ನೂ ಸಹ ಹಸಿಯಾಗೇ ತಿನ್ನುತ್ತಾರೆ. ಅದರಲ್ಲೂ ಬೇರೆ ಬೇರೆ ಬಣ್ಣಗಳ ಕ್ಯಾಪ್ಸಿಕಂ ದೊರೆಯುತ್ತದೆ. ಅವುಗಳನ್ನು ಕಟ್ ಮಾಡಿಕೊಂಡು ಅಲಂಕಾರಕ್ಕಾಗಿ ಬಳಸುತ್ತಾರೆ. ಹೀಗೆ ಬಳಸಿದಾಗ ಅದನ್ನು ಹಸಿಯಾಗೇ ತಿನ್ನುತ್ತಾರೆ. ಇದನ್ನೂ ಸಹ ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಲೆಟ್ಟಸ್ (Lettuce): ಈ ಎಲೆಗಳನ್ನೂ ಸಹ ಬರ್ಗರ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಹಸಿಯಾಗಿ ಬಳಕೆ ಮಾಡಲಾಗುತ್ತದೆ. ಆದರೆ ಇವುಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕರವಲ್ಲ. ಜೀರ್ಣಾಂಗದ ಸಮಸ್ಯೆ ಇದ್ದವರು ಇವುಗಳನ್ನು ಹಸಿಯಾಗಿ ತಿಂದರೆ ನಂತರ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ನಾನು ಬನ್ ತಿಂದಿರುವ ಕಾರಣಕ್ಕೆ ಹೊಟ್ಟೆ ನೋವು ಬಂದಿದೆ ಎಂದು ಕೆಲವರು ಅಂದುಕೊಳ್ಳುತ್ತಾರೆ.
ಸೌತೆಕಾಯಿ ತಿನ್ನಬಹುದು
ಇದು ಸುಲಭವಾಗಿ ಜೀರ್ಣವಾಗುತ್ತದೆ. ನೀರಿನ ಅಂಶ ಇದರಲ್ಲಿ ಹೆಚ್ಚಾಗಿ ಇರುತ್ತದೆ. ಆ ಕಾರಣಕ್ಕಾಗಿ ನೀವು ಈ ತರಕಾರಿಯನ್ನು ತಿನ್ನಬಹುದು. ಸವತೆ ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ಸ್ಯಾಲಡ್ ತಿನ್ನಲೇಬೇಕು ಎಂಬ ಆಸೆ ಇದ್ದರೆ ಸವತೆ ಹಾಗೂ ಪಾಲಕ್ ಸೊಪ್ಪುಗಳನ್ನು ಬಳಕೆ ಮಾಡಿ ಸಲಾಡ್ ಮಾಡಿಕೊಂಡು ತಿನ್ನಿ. ನಮ್ಮ ಭಾರತೀಯ ಸಾಂಪ್ರದಾಯಿಕ ತರಕಾರಿಗಳ ಬಳಕೆ ಹೆಚ್ಚಾಗಿ ಮಾಡಿ.
ಇದನ್ನೂ ಓದಿ: ಆಯುರ್ವೇದದ ಪ್ರಕಾರ ಈ ಆಹಾರಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬಾರದು, ಕರುಳಿನ ಸಮಸ್ಯೆಗಳು ಕಾಡಬಹುದು
ವಿಭಾಗ