ನೀವು ಯೋಗಾಸನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ತಪ್ಪು ಮಾಡಿದರೆ ಏನಾಗುತ್ತದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
Common Mistake in Yoga: ನೀವು ನಿತ್ಯ ಯೋಗಾಸನ ಮಾಡುವವರಾಗಿದ್ದು, ಯೋಗ ಮಾಡುವಾಗ ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡುತ್ತಿರಬಹುದು. ಆದರೆ ಯಾವ ತಪ್ಪುಗಳನ್ನು ಮಾಡಬಾರದು? ಮಾಡಿದರೆ ಏನಾಗುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ದೇಹ ಮತ್ತು ಮನಸ್ಸನ್ನು ಸಮನ್ವಯಗೊಳಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಯೋಗಾಸನವನ್ನು ನಿತ್ಯ ಮಾಡುವವರು ಇದ್ದಾರೆ. ಇನ್ನು ಇದರ ಬದಲಾಗಿ ದೇಹ ದಂಡನೆ ಮಾಡಿ ಕಠಿಣ ವ್ಯಾಯಾಮ ಮಾಡುವವರೂ ಇದ್ದಾರೆ. ಆದರೆ ಯೋಗಾಸನ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಅದು ಜೀವಕ್ಕೆ ಅಷ್ಟೊಂದು ಅಪಾಯವನ್ನೇನೋ ಉಂಟು ಮಾಡುವುದಿಲ್ಲ. ಆದರೆ ನೀವು ಮಾಡುತ್ತಿರುವ ವಿಧಾನ ಸರಿಯೂ ಆಗಿರುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ಮಾಡುವ ಕೆಲವು ತಪ್ಪುಗಳನ್ನು ನಾವಿಲ್ಲಿ ನಿಡಿದ್ದೇವೆ ಗಮನಿಸಿ. ಈ ತಪ್ಪುಗಳನ್ನು ನೀವು ಮಾಡಬೇಡಿ. ಮಾಡದೆ ಇರಲು ಪ್ರಯತ್ನ ಮಾಡಿ.
ತಪ್ಪು ರೀತಿಯಲ್ಲಿ ಆಸನಗಳನ್ನು ಮಾಡಿದರೆ ಹೆಚ್ಚಿನ ಫಲಿತಾಂಶ ಬರುವುದಿಲ್ಲ. ಹಾಗಾದರೆ ದಿನನಿತ್ಯ ಯೋಗಾಭ್ಯಾಸ ಮಾಡುವವರು ಮಾಡದ ಸಾಮಾನ್ಯ ತಪ್ಪುಗಳೇನು ಎಂಬುದನ್ನು ನೋಡೋಣ.
ವಾರ್ಮ್‌ಅಪ್ : ಯೋಗಾಭ್ಯಾಸ ಮಾಡುವ ಮೊದಲು ದೇಹವನ್ನು ಬೆಚ್ಚಗಾಗಿಸಿಕೊಳ್ಳಬೇಕು. ಇದರಿಂದ ದೇಹದ ಭಾಗಗಳು ಕ್ರಿಯಾಶೀಲವಾಗುತ್ತವೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ರೀತಿ ಮಾಡದೆ ನೀವು ಒಂದೇ ಸಾರಿ ಯೋಗ ಮಾಡಲು ಆರಂಭಿಸುವುದು ತಪ್ಪಾಗುತ್ತದೆ. ಯೋಗ ಮಾಡುವ ಮುನ್ನ ಕೆಲವು ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡಿಕೊಂಡು ದೇಹವನ್ನು ಅಣಿಯಾಗಿಸಿಕೊಳ್ಳಬೇಕು. ಚಿಕ್ಕ ಜಾಗಿಂಗ್ ನಿಂತಲ್ಲೇ ಮಾಡಿದರೂ ಆಗುತ್ತದೆ. ಆದರೆ ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ. ಕಷ್ಟಕರವಾದ ಯೋಗಾಸನಗಳನ್ನು ನೇರವಾಗಿ ಅಭ್ಯಾಸ ಮಾಡುವುದರಿಂದ ಇಲ್ಲದ ಸಮಸ್ಯೆಗಳು ಬರುತ್ತವೆ.
ಉಸಿರಾಟದ ಮೇಲೆ ಏಕಾಗ್ರತೆಯ ಇರಲಿ: ಯೋಗಾಭ್ಯಾಸದಲ್ಲಿ ಉಸಿರಾಟದ ಸಮತೋಲನ ಬಹಳ ಮುಖ್ಯ. ಆದರೆ ಅನೇಕರು ಈ ಬಗ್ಗೆ ಗಮನ ಹರಿಸುವುದಿಲ್ಲ. ಉಸಿರನ್ನು ಯಾವ ಸಂದರ್ಭದಲ್ಲಿ ಒಳಕ್ಕೆ ಮತ್ತು ಯಾವ ಸಂದರ್ಭದಲ್ಲಿ ಹೊರಕ್ಕೆ ಹಾಕಬೇಕು ಎಂಬುದನ್ನು ನೀವು ಟ್ರೇನರ್ ಹತ್ತಿ ಕೇಳಿ ತಿಳಿದುಕೊಳ್ಳಿ. ಆ ಪ್ರಕಾರವೇ ಆಸನವನ್ನು ಮಾಡಿ. ಇದು ತುಂಬಾ ಮುಖ್ಯವಾದ ವಿಚಾರ.
ಒಂದೇ ದಿನ ಎಲ್ಲವನ್ನೂ ಮಾಡಲು ಪ್ರಯತ್ನಿಸುವುದು:
ಅಭ್ಯಾಸವಿಲ್ಲದೆ ಯೋಗದ ಆಸನಗಳನ್ನು ಅಭ್ಯಾಸ ಮಾಡುವುದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗುತ್ತದೆ. ನೀವು ಹೊಸದಾಗಿ ಯೋಗಾಸನ ಮಾಡಲು ಆರಂಭಿಸಿದ್ದೀರಾ ಎಂದಾದರೆ ತುಂಬಾ ಕಷ್ಟಪಟ್ಟು ಅದರಲ್ಲಿ ಪರಿಪೂರ್ಣತೆಯನ್ನು ತರಲು ಹೋಗಬಾರದು. ಆದಷ್ಟು ದಿನ ಪ್ರಯತ್ನಪಟ್ಟು ಆ ನಂತರದಲ್ಲಿ ಕ್ರಮೇಣ ನಿಮ್ಮ ದೇಹ ಅದಕ್ಕೆ ಒಗ್ಗಿಕೊಂಡು ನಂತರದಲ್ಲಿ ತನ್ನಿಂದ ತಾನೇ ಆ ಪರಿಪೂರ್ಣತೆ ಬರುತ್ತದೆ. ಅಲ್ಲಿಯ ವರೆಗೂ ನೀವು ಕಾಯಬೇಕಾಗುತ್ತದೆ.
ಸಮತೋಲನ ಬೇಕು
ನೀವು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದರೆ, ನಿಮಗೆ ಗಾಯವಾಗುತ್ತದೆ. ಹಾಗಾಗಿ ಈ ತಪ್ಪು ಮಾಡಬೇಡಿ. ಮೊದಲು ದೇಹವನ್ನು ಬ್ಯಾಲೆನ್ಸ್ ಮಾಡಲು ಕಲಿಯಿರಿ. ಆ ನಂತರದಲ್ಲಿ ಕಠಿಣವಾದ ಆಸನಗಳನ್ನು ಮಾಡಲು ಪ್ರಯತ್ನ ಮಾಡಿ.
ಮಣಿಕಟ್ಟಿನ ಮೇಲೆ ಭಾರ ಹಾಕುವುದು: ನೀವು ಯಾವುದಾದರೂ ಒಂದು ಕಠಿಣವಾದ ಆಸನ ಮಾಡಲು ಪ್ರಯತ್ನ ಮಾಡಿ ನಿಮ್ಮ ಮಣಿಕಟ್ಟಿನ ಮೆಲೆ ಹೆಚ್ಚಿನ ಭಾರವನ್ನು ಹಾಕಿದರೆ ನೋವು ಆರಂಭವಾಗುತ್ತದೆ. ನಿಮ್ಮ ದೇಹದ ಎಲ್ಲಾ ಭಾರವನ್ನು ಅದರ ಮೇಲೆ ಬಿಡಬಾರದು. ನಿಮಗೆ ನಿಮ್ಮ ಮೇಲೆ ಸಮತೋಲನ ಇದೆ ಎಂದಾದರೆ ಮಾತ್ರ ನೀವು ಮಾಡಬೇಕು.
ಯೋಗ ಮ್ಯಾಟ್ : ಪ್ರಕೃತಿಯ ಮಡಿಲಲ್ಲಿ, ಶಾಂತಿಯುತ ವಾತಾವರಣದಲ್ಲಿ ಮಾಡುವಾಗ ನೆಲಕ್ಕೆ ಮಾಡಲು ಸಾಧ್ಯವಿಲ್ಲ ಏನಾದರು ಚುಚ್ಚುತ್ತದೆ ಎಂಬ ಕಾರಣಕ್ಕೆ ಯೋಗಾ ಮ್ಯಾಟ್ ಬಳಸುತ್ತಾರೆ. ಆದರೆ ಕೆಲವರು ಮನೆಯಲ್ಲಿ ಮಾಡುವಾಗ ಯೋಗ ಮ್ಯಾಟ್ ಬಳಕೆ ಮಾಡುವುದಿಲ್ಲ. ಇನ್ನು ಕೆಲವರು ದಪ್ಪನೆಯ ಮ್ಯಾಟ್ ಬಳಕೆ ಮಾಡುವುದಿಲ್ಲ. ಈ ರೀತಿ ಮಾಡುವುದು ತಪ್ಪು. ಸರಿಯಾದ ಯೋಗ ಮ್ಯಾಟ್ ಬಳಕೆ ಮಾಡಬೇಕು.

ವಿಭಾಗ