Okra Gravy Recipe: ಹೊಸ ವಿಧಾನದಲ್ಲಿ ರುಚಿಯಾದ ಬೆಂಡೆಕಾಯಿ ಗೊಜ್ಜು ಮಾಡೋದನ್ನ ಕಲಿಯಿರಿ...ಇದಕ್ಕೆ ತೆಂಗಿನಕಾಯಿ ಕೂಡಾ ಬೇಕಾಗಿಲ್ಲ!
ಬೆಂಡೆಕಾಯಿ, ಕೆಲವರಿಗೆ ಬಹಳ ಇಷ್ಟದ ತರಕಾರಿ, ಕೆಲವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದರಿಂದ ರುಚಿಯಾದ ಗ್ರೇವಿ ತಯಾರಿಸಿದರೆ ಖಂಡಿತ ಇಷ್ಟವಿಲ್ಲದವರೂ ಒಮ್ಮೆ ರುಚಿ ನೋಡುತ್ತಾರೆ. ತೆಂಗಿನಕಾಯಿ ಇಲ್ಲದೆ, ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸದೆ, ಸುಲಭವಾಗಿ, ರುಚಿಯಾದ ಬೆಂಡೆಕಾಯಿ ಗ್ರೇವಿಯನ್ನು ಹೊಸ ವಿಧಾನದಲ್ಲಿ ನೀವೂ ತಯಾರಿಸಿ.
ಅನ್ನ, ಚಪಾತಿ, ರೊಟ್ಟಿ ಅಥವಾ ದೋಸೆಗೆ ಏನಾದರೂ ಗ್ರೇವಿ ತಯಾರಿಸಬೇಕು ಎಂದರೆ ಕಾಯಿ ತುರಿದು, ಮಸಾಲೆ ರುಬ್ಬಿ ಅದನ್ನು ತಯಾರಿಸುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ. ಆದರೆ ಕೆಲವೊಂದು ಅಡುಗೆಗಳನ್ನು ಕಾಯಿ ಇಲ್ಲದೆ, ಗಂಟೆ ಗಟ್ಟಲೆ ರುಬ್ಬದೆ, ಹೆಚ್ಚಿನ ಮಸಾಲೆ ಕೂಡಾ ಇಲ್ಲದೆ ರುಚಿಯಾಗಿ ತಯಾರಿಸಬಹುದು.
ಬೆಂಡೆಕಾಯಿ, ಕೆಲವರಿಗೆ ಬಹಳ ಇಷ್ಟದ ತರಕಾರಿ, ಕೆಲವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದರಿಂದ ರುಚಿಯಾದ ಗ್ರೇವಿ ತಯಾರಿಸಿದರೆ ಖಂಡಿತ ಇಷ್ಟವಿಲ್ಲದವರೂ ಒಮ್ಮೆ ರುಚಿ ನೋಡುತ್ತಾರೆ. ತೆಂಗಿನಕಾಯಿ ಇಲ್ಲದೆ, ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸದೆ, ಸುಲಭವಾಗಿ, ರುಚಿಯಾದ ಬೆಂಡೆಕಾಯಿ ಗ್ರೇವಿಯನ್ನು ಹೊಸ ವಿಧಾನದಲ್ಲಿ ನೀವೂ ತಯಾರಿಸಿ. ಅದನ್ನು ತಯಾರಿಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಬೆಂಡೆಕಾಯಿ ಗ್ರೇವಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ - 1/4 ಕೆಜಿ
ಟೊಮ್ಯಾಟೋ - 4
ಈರುಳ್ಳಿ - 3
ಎಣ್ಣೆ - 1/2 ಕಪ್
ಜೀರ್ಗೆ - 1 ಟೀ ಸ್ಪೂನ್
ಅರಿಶಿನ - 1/2 ಸ್ಪೂನ್
ಅಚ್ಚ ಖಾರದ ಪುಡಿ - 2 ಸ್ಪೂನ್
ಧನಿಯಾ ಪುಡಿ - 1 1/2 ಸ್ಪೂನ್
ಗರಂ ಮಸಾಲೆ ಪುಡಿ - 1 ಸ್ಪೂನ್
ಫ್ರೆಷ್ ಕ್ರೀಮ್ - 2 ಸ್ಪೂನ್
ಸಕ್ಕರೆ - 1 ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲು ಬೆಂಡೆಕಾಯನ್ನು ತೊಳೆದು ನೀರು ಸೋರಲು ಬಿಟ್ಟು, ಸಣ್ಣದಾಗಿ ಕತ್ತರಿಸಿಕೊಳ್ಳಿ
ಟೊಮ್ಯಾಟೋ ತುಂಡುಗಳನ್ನು ನೀರು ಸೇರಿಸದೆ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಪ್ಯೂರಿ ಮಾಡಿಕೊಳ್ಳಿ
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಬೆಂಡೆಕಾಯಿ ಹಾಗೂ ಸ್ವಲ್ಪ ಉಪ್ಪು ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಿರಿ
ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರ್ಗೆ, ಈರುಳ್ಳಿ (2) ಕ್ಯೂಬ್ಸ್ ಸೇರಿಸಿ ಹುರಿದು ಒಂದು ಪ್ಲೇಟ್‌ಗೆ ತೆಗೆದಿಡಿ
ಅದೇ ಬಾಣಲೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ (1) ಸೇರಿಸಿ ಹುರಿಯಿರಿ
ನಂತರ ಟೊಮ್ಯಾಟೋ ಪ್ಯೂರಿ ಸೇರಿಸಿ ಅವಶ್ಯಕತೆ ಇರುವಷ್ಟು ನೀರು ಸೇರಿಸಿ ಹಸಿ ವಾಸನೆ ಹೋಗುವರೆಗೂ ಕುಕ್ ಮಾಡಿ
ಇದರೊಂದಿಗೆ ಅರಿಶಿನ, ಅಚ್ಚ ಕಾರದ ಪುಡಿ(ರೆಡ್ ಚಿಲ್ಲಿ ಪೌಡರ್), ಧನಿಯಾ ಪುಡಿ, ಗರಂ ಮಸಾಲೆ ಪುಡಿ ಸೇರಿಸಿ ಮಿಕ್ಸ್ ಮಾಡಿ
ಈ ಮಿಶ್ರಣ ಚೆನ್ನಾಗಿ ಕುಕ್ ಆಗಿ ಎಣ್ಣೆ ಬಿಟ್ಟ ನಂತರ ಉಪ್ಪು, ಮೊದಲೇ ಫ್ರೈ ಮಾಡಿಕೊಂಡ ಬೆಂಡೆಕಾಯಿ, ಈರುಳ್ಳಿ ಕ್ಯೂಬ್ಸ್ ಸೇರಿಸಿ ಮಿಕ್ಸ್ ಮಾಡಿ
ಮಿಶ್ರಣ ಗಟ್ಟಿಯಾದರೆ ಸ್ವಲ್ಪ ನೀರು ಸೇರಿಸಿ, ಜೊತೆಗೆ ಸಕ್ಕರೆ , ಫ್ರೆಷ್ ಕ್ರೀಮ್ ಸೇರಿಸಿ ಮಿಕ್ಸ್ ಮಾಡಿ 3 ನಿಮಿಷ ಕುಕ್ ಮಾಡಿ ಸ್ಟೋವ್ ಆಫ್ ಮಾಡಿದರೆ ರುಚಿಯಾದ ಬೆಂಡೆಕಾಯಿ ಗ್ರೇವಿ ರೆಡಿ.
ಗಮನಿಸಿ: ಫ್ರೆಷ್ ಕ್ರೀಮ್ ಇಲ್ಲದಿದ್ದರೆ ಹಾಲಿನ ಕೆನೆಯನ್ನು ವಿಸ್ಕ್ ಮಾಡಿ ಅದನ್ನೇ ಬಳಸಬಹುದು.
ರೆಸಿಪಿ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ವಿಭಾಗ