ಈ ಲಕ್ಷಾಧಿಪತಿಗಳಿಗೆ ಶೋಕಿ ಬದುಕು ಬೇಕಿಲ್ಲ; ಸೆಕೆಂಡ್‌ ಹ್ಯಾಂಡ್‌ ಖರೀದಿ, ಅಪರೂಪಕ್ಕೆ ಶಾಪಿಂಗ್‌- ಏನಿದು ಹೊಸ ಟ್ರೆಂಡ್‌?
ಕನ್ನಡ ಸುದ್ದಿ  /  ಜೀವನಶೈಲಿ  /  ಈ ಲಕ್ಷಾಧಿಪತಿಗಳಿಗೆ ಶೋಕಿ ಬದುಕು ಬೇಕಿಲ್ಲ; ಸೆಕೆಂಡ್‌ ಹ್ಯಾಂಡ್‌ ಖರೀದಿ, ಅಪರೂಪಕ್ಕೆ ಶಾಪಿಂಗ್‌- ಏನಿದು ಹೊಸ ಟ್ರೆಂಡ್‌?

ಈ ಲಕ್ಷಾಧಿಪತಿಗಳಿಗೆ ಶೋಕಿ ಬದುಕು ಬೇಕಿಲ್ಲ; ಸೆಕೆಂಡ್‌ ಹ್ಯಾಂಡ್‌ ಖರೀದಿ, ಅಪರೂಪಕ್ಕೆ ಶಾಪಿಂಗ್‌- ಏನಿದು ಹೊಸ ಟ್ರೆಂಡ್‌?

ಒಂದೆಡೆ ಜನರು ಫ್ಯಾಷನ್‌, ವೈರಲ್‌ ಟ್ರೆಂಡ್‌, ನೆಕ್ಸ್ಟ್‌ ಡೇ ಡೆಲಿವರಿ, ದುಬಾರಿ ಖರ್ಚು ಎಂದು ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೆಲವು ಮಿಲಿಯನೇರ್‌ಗಳು ಮತ್ತು ಹೆಚ್ಚು ಆದಾಯ ಹೊಂದಿರುವವರು ಕಡಿಮೆ ಖರ್ಚಿನ ಬದುಕಿಗೆ ಹಾಯ್‌ ಹೇಳುತ್ತಿದ್ದಾರೆ.

ಈ ಲಕ್ಷಾಧಿಪತಿಗಳಿಗೆ ಶೋಕಿ ಬದುಕು ಬೇಕಿಲ್ಲ; ಸೆಕೆಂಡ್‌ ಹ್ಯಾಂಡ್‌ ಖರೀದಿ, ಅಪರೂಪಕ್ಕೆ ಶಾಪಿಂಗ್‌- ಏನಿದು ಹೊಸ ಟ್ರೆಂಡ್‌?
ಈ ಲಕ್ಷಾಧಿಪತಿಗಳಿಗೆ ಶೋಕಿ ಬದುಕು ಬೇಕಿಲ್ಲ; ಸೆಕೆಂಡ್‌ ಹ್ಯಾಂಡ್‌ ಖರೀದಿ, ಅಪರೂಪಕ್ಕೆ ಶಾಪಿಂಗ್‌- ಏನಿದು ಹೊಸ ಟ್ರೆಂಡ್‌?

ಒಂದೆಡೆ ಜನರು ಫ್ಯಾಷನ್‌, ವೈರಲ್‌ ಟ್ರೆಂಡ್‌, ನೆಕ್ಸ್ಟ್‌ ಡೇ ಡೆಲಿವರಿ, ದುಬಾರಿ ಖರ್ಚು ಎಂದು ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೆಲವು ಮಿಲಿಯನೇರ್‌ಗಳು ಮತ್ತು ಹೆಚ್ಚು ಆದಾಯ ಹೊಂದಿರುವವರ ನಡೆ ಇದಕ್ಕಿಂತ ವ್ಯತಿರಿಕ್ತವಾಗಿದೆ. ಹಣ ಇದೆ ಎಂದು ವಿಲಾಸಿ ಬದುಕು ಸಾಗಿಸುವ ಬದಲು "ಕಡಿಮೆ ಅನುಭೋಗದ ಜೀವನಶೈಲಿ" ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮನಿಕಂಟ್ರೋಲ್‌ ವರದಿ ಮಾಡಿದೆ. ಕಡಿಮೆ ಖರ್ಚು ಮಾಡುತ್ತ ದೀರ್ಘಕಾಲದ ಹಣಕಾಸು ಗುರಿಗಳತ್ತ ಗಮನ ಹರಿಸುತ್ತಿದ್ದಾರೆ.

ಟಿಕ್‌ಟಾಕ್‌, ಇನ್‌ಸ್ಟಾಗ್ರಾಂನಂತಹ ಸೋಷಿಯಲ್‌ ಮೀಡಿಯಾದಿಂದಾಗಿ ಈ ಟ್ರೆಂಡ್‌ ಈಗ ವ್ಯಾಪಕವಾಗಿ ಹಬ್ಬುತ್ತಿದೆ. ಇವರು ಬ್ಯಾಚ್‌ ಕುಕ್ಕಿಂಗ್‌ (ಒಂದೇ ಬಾರಿ ಬಲ್ಕ್‌ ಆಗಿ ಅಡುಗೆ ರೆಡಿ ಮಾಡಿ ಇಡುವುದು) , ಸೆಕೆಂಡ್‌ ಹ್ಯಾಂಡ್‌ ಖರೀದಿ, ಅನಗತ್ಯ ಖರೀದಿಯನ್ನು ತಪ್ಪಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಫಾರ್ಚ್ಯೂನ್‌ ನಿಯತಕಾಲಿಕೆಯು ಒಂದಿಷ್ಟು ಜನರನ್ನು ಸಂದರ್ಶಿಸಿ ಸಾಕಷ್ಟು ವಿವರ ಪಡೆದುಕೊಂಡಿದೆ. ಬ್ಯಾಂಕ್‌ ಬ್ಯಾಲೆನ್ಸ್‌ ಉತ್ತಮಗೊಳ್ಳುವುದರ ಜತೆಗೆ ಫ್ಲೆಕ್ಸಿಬಲ್‌ ವರ್ಕಿಂಗ್‌ ಮತ್ತು ಬೇಗನೇ ನಿವೃತ್ತಿಯಾಗುವಂತಹ ಕನಸುಗಳು ಸಾಧ್ಯವಾಗಲಿದೆ ಎಂದು ಈ ರೀತಿಯ ಜೀವನಶೈಲಿ ನಡೆಸುವವರು ಫಾರ್ಚ್ಯೂನ್‌ಗೆ ತಿಳಿಸಿದ್ದಾರೆ.

ಉದಾಹರಣೆ 1

ಮನಿಕಂಟ್ರೋಲ್‌ ವರದಿಯು ಉಲ್ಲೇಖಿಸಿದ 39 ವರ್ಷ ವಯಸ್ಸಿನ ಲೇಖಕಿ ಮತ್ತು ಉದ್ಯಮಿ ಶಾಂಗ್ ಸಾವೇದ್ರಾ ಜೀವನಶೈಲಿ ಹೇಗಿದೆ ನೋಡಿ. ಇವರು ತನ್ನ ಬಾಲ್ಯದಿಂದಲೇ ಮಿತವ್ಯಯದ ಪಾಠ ಕಲಿತುಕೊಂಡಿದ್ದಾರಂತೆ. ಹಲವು ದಶಲಕ್ಷ ಡಾಲರ್‌ ನಿವ್ವಳ ಸಂಪತ್ತು ಹೊಂದಿದ್ದರೂ  ಲಾಸ್ ಏಂಜಲೀಸ್‌ನಲ್ಲಿ ನಾಲ್ಕು ಬೆಡ್‌ರೂಮ್‌ಗಳ ಮನೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಆಕೆಯ ಪತಿ 16 ವರ್ಷ ಹಳೆಯದಾದ ಸೆಕೆಂಡ್ ಹ್ಯಾಂಡ್ ಕಾರು ಹೊಂದಿದ್ದಾರೆ. ಅಲ್ಡಿಯಂತಹ ಬಜೆಟ್ ಸೂಪರ್‌ಮಾರ್ಕೆಟ್‌ಗಳಲ್ಲಿ ಶಾಪಿಂಗ್ ಮಾಡುತ್ತಾರೆ. ಫ್ರೋಜನ್‌ ಗ್ರಾಸರಿ ಖರೀದಿಸಿ ಹಣ ಉಳಿಸುತ್ತಾರಂತೆ.

ಇವರು ತಮ್ಮ ಇಬ್ಬರು ಮಕ್ಕಳಿಗಾಗಿ ಹೆಚ್ಚು ಖರ್ಚು ಮಾಡುವುದಿಲ್ಲವಂತೆ.  ಇವರು ಹ್ಯಾಂಡ್‌ ಮಿ ಡೌನ್‌ ಬಟ್ಟೆ ಧರಿಸುತ್ತಾರೆ. ಅಂದರೆ, ಅಣ್ಣ ಬಳಸಿದ ಡ್ರೆಸ್ ಬಳಿಕ ತಮ್ಮ ಬಳಸುವುದು. ಫೇಸ್‌ಬುಕ್‌ ಮಾರ್ಕೆಟ್‌ಪ್ಲೇಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್‌ ಮಾರಾಟಕ್ಕೆ ದೊರಕುವ ಆಟಿಕೆಗಳನ್ನು ಮಕ್ಕಳಿಗೆ ಖರೀದಿಸುತ್ತಾರೆ. ದುಬಾರಿ ಡಿಸ್ನಿಲ್ಯಾಂಡ್‌ನಂತಹ ಖರ್ಚು ಬಿಟ್ಟು ಉಚಿತವಾಗಿ ಮನರಂಜನೆ ನೀಡುವ ಚಟುವಟಿಕೆಗಳನ್ನು ಮಾಡುತ್ತಾರೆ.

ಇದೇ ಸಮಯದಲ್ಲಿ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಾರೆ. ನ್ಯೂಯಾರ್ಕ್‌ನಲ್ಲಿ ಇವರು ಖಾಸಗಿ ಆಸ್ತಿ ಹೊಂದಿದ್ದಾರೆ. ಅಂದರೆ, ಇವರು ತಮ್ಮ ಹಣವನ್ನು ಅನಗತ್ಯ ವಿಷಯಗಳಿಗೆ ದುಂದುವೆಚ್ಚ ಮಾಡದೆ ಶಿಕ್ಷಣ ಮತ್ತು ಭವಿಷ್ಯದಲ್ಲಿ ಲಾಭ ತರುವಂತಹ ಸ್ವತ್ತುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇವರು ಉದ್ಯಮಿಯಾಗುವ ಮೊದಲು ಕಾರ್ಪೊರೇಟ್‌ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಕರಿಯರ್‌ ಆರಂಭದಲ್ಲಿ ಗಂಡ-ಹೆಂಡತಿ ನಡುವೆ ಒಬ್ಬರ ವೇತನವನ್ನು ಸಂಪೂರ್ಣ ಉಳಿಸಿದ್ದಾರೆ. ಬಾಡಿಗೆ ಮನೆಯಲ್ಲಿಯೇ ಇದ್ದುಕೊಂಡು ಖರ್ಚಿನ ಮೇಲೆ ನಿಗಾ ಇಟ್ಟಿದ್ದಾರೆ.

ಉದಾಹರಣೆ 2

36 ವರ್ಷ ವಯಸ್ಸಿನ ವೈಯಕ್ತಿಕ ಹಣಕಾಸು ತಜ್ಞ ಮತ್ತು ಸಂಶೋಧಕರಾದ ಅನ್ನಿ ಕೋಲ್ ಅವರು ಮಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಹೀಗಿದ್ದರೂ ಕಡಿಮೆ ಖರ್ಚಿನ ಜೀವನಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತನ್ನ ಮಾಸಿಕ ಮನೆಯ ಖರ್ಚನ್ನು 4,000 ಡಾಲರ್‌ಗಿಂತ ಕಡಿಮೆ ಮಾಡಿಕೊಂಡಿದ್ದಾರೆ. ತನ್ನ ಕಾರನ್ನು ಮಾರಾಟ ಮಾಡಿದ್ದಾರೆ. ವರ್ಷಕ್ಕೆ ಮೂರು ಬಾರಿ ಮಾತ್ರ ಬಟ್ಟೆ ಖರೀದಿಸುತ್ತಾರೆ. ರಜಾ ದಿನಗಳಲ್ಲಿ ದುಬಾರಿ ಖರ್ಚು ಮಾಡುವುದಿಲ್ಲ. ಹೈಕಿಂಗ್‌, ಈಜು ಮುಂತಾದ ಉಚಿತ ಚಟುವಟಿಕೆಗಳ ಮೂಲಕ ರಜಾ ದಿನಗಳನ್ನು ಆನಂದಿಸಿದ್ದಾರೆ.

ಇವು ಉದಾಹರಣೆಯಷ್ಟೇ. ಸಾಕಷ್ಟು ಲಕ್ಷಾಧಿಪತಿಗಳು, ಕೋಟ್ಯಧಿಪತಿಗಳು ಈಗ ಇಂತಹ ಜೀವನಶೈಲಿಯನ್ನು ಇಷ್ಟಪಡುತ್ತಿದ್ದಾರೆ. ತಮ್ಮ ಜೀವನಶೈಲಿಯ ಕುರಿತು ಸೋಷಿಯಲ್‌ ಮೀಡಿಯಾದಲ್ಲಿಯೂ ಪ್ರಚಾರ ಮಾಡುತ್ತಿದ್ದಾರೆ. ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎನ್ನುವ ಕಾಲದಲ್ಲಿ ಈ ಮಿಲಿಯನೇರ್‌ಗಳು ಹೊಸ ಟ್ರೆಂಡ್‌ಗೆ ನಾಂದಿ ಹಾಡುತ್ತಿದ್ದಾರೆ.

Whats_app_banner