ಕನ್ನಡ ಸುದ್ದಿ / ಜೀವನಶೈಲಿ /
New Year 2024:ಅಯ್ಯೋ ನಾನು ಸಿಂಗಲ್ ಅಂತ ಬೇಜಾರಾಗ್ಬೇಡಿ, ನೀವೂ ಹೊಸ ವರ್ಷವನ್ನು ಖುಷ್‌ಖುಷಿಯಾಗಿ ಸೆಲಬ್ರೇಟ್ ಮಾಡಬಹುದು, ಇಲ್ಲಿವೆ ಐಡಿಯಾಗಳು
New Year 2024: ಹೊಸ ವರ್ಷವನ್ನು ಆಚರಿಸೋಕೆ ನಿಮಗೆ ಸೂಕ್ತ ಪಾರ್ನ್ನರ್ ಸಿಗದಿದ್ದಲ್ಲಿ ಸಿಂಗಲ್ ಅಂತ ಚಿಂತೆ ಮಾಡಬೇಡಿ. ನೀವು ಒಬ್ಬಂಟಿಯಾಗಿದ್ದುಕೊಂಡೇ ಹೊಸ ವರ್ಷ ಆಚರಿಸಬಹುದು.
ಸಿಂಗಲ್ ಆಗಿ ಹೊಸ ವರ್ಷ ಆಚರಿಸಲು ಟಿಪ್ಸ್ (PC: Freepik)
2024 ಸ್ವಾಗತಿಸಲು ಜನರು ತಮ್ಮ ಕುಟುಂಬದವರು , ಸ್ನೇಹಿತರು, ಸಂಗಾತಿಯೊಂದಿಗೆ ಪ್ಲಾನ್ ಮಾಡುತ್ತಿದ್ದಾರೆ. ಈಗಾಗಲೇ ಕೆಲವರು ಎಲ್ಲಾ ಪ್ಲ್ಯಾನ್ ಮಾಡಿದ್ದಾರೆ. ಆದರೆ ಇನ್ನೂ ಸಿಂಗಲ್ ಆಗಿರುವವರು, ಜೊತೆ ಇಲ್ಲದೆ ಹೇಗಪ್ಪಾ ಹೊಸ ವರ್ಷ ಆಚರಿಸೋದು ಅಂತ ಯೋಚನೆ ಮಾಡ್ತಿದ್ದಾರೆ. ಡೋಂಟ್ ವರಿ ನೀವು ಸಿಂಗಲ್ ಆಗಿದ್ರೆ ಏನಂತೆ? ನೀವೊಬ್ರೇ ಸಿಂಗಲ್ ಆಗಿ ಹೊಸ ವರ್ಷ ಆಚರಿಸಬಹುದು. ಅದಕ್ಕಾಗಿ ಇಲ್ಲಿ ಕೆಲವೊಂದು ಟಿಪ್ಸ್ ಇವೆ.
- ಮನೆಯಲ್ಲೇ ನಿಮಗಾಗಿ ಸ್ಪಾ ಅರೇಂಜ್ ಮಾಡಿಕೊಳ್ಳಿ. ಕ್ಯಾಂಡಲ್ಸ್, ನಿಮ್ಮಿಷ್ಟದ ಮ್ಯೂಸಿಕ್ ಜೊತೆ ಬಬಲ್ ಬಾತ್ ಮಾಡಿ. ಸ್ಕಿನ್ ಕೇರ್ ಮಾಡಿ, ಕಳೆದ ವರ್ಷದ ಕಹಿ ನೆನಪುಗಳನ್ನು ಮರೆತು ಹೊಸ ವರ್ಷದ ಸಿಹಿ ನಾಳೆಗಳನ್ನು ಸ್ವಾಗತಿಸಿ.
- ನಿಮಗಿಷ್ಟವಾದ ಸಿನಿಮಾ ನೋಡಿ. ಬಹಳ ದಿನಗಳಿಂದ ನೀವು ಯಾವುದಾದರೂ ಸಿನಿಮಾ ನೋಡಬೇಕು ಎಂದುಕೊಂಡಿದ್ದಲ್ಲಿ ಆ ಸಿನಿಮಾಗಳನ್ನು ಲಿಸ್ಟ್ ಮಾಡಿ. ನಿಮಗಿಷ್ಟವಾದ ತಿಂಡಿಗಳನ್ನು ಆರ್ಡರ್ ಮಾಡಿ, ಅಥವಾ ನೀವೇ ತಯಾರಿಸಿ, ನಿಮ್ಮಷ್ಟದ ತಿಂಡಿ ಸವಿಯುತ್ತಾ, ನಿಮ್ಮಿಷ್ಟದ ಸಿನಿಮಾ ನೋಡುತ್ತಾ ಹೊಸ ವರ್ಷವನ್ನು ಸ್ವಾಗತಿಸಿ.
- ಹೊಸ ವರ್ಷದಂದು ನಿಮಗೆ ಹೊರಗಡೆ ಹೋಗಲು ಇಷ್ಟವಿಲ್ಲವೆಂದರೆ, ಆನ್‌ಲೈನ್ ಹೊಸ ವರ್ಷದ ಸೆಲಬ್ರೇಷನ್ ಅಥವಾ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಇದರಿಂದ ನೀವು ಒಂಟಿ ಎಂಬ ಭಾವನೆ ತೊಲಗುತ್ತದೆ.
- ನೀವು ಸಿಂಗಲ್ ಆಗಿದ್ದಲ್ಲಿ ಹೊಸ ವರ್ಷವನ್ನು ಹೊಸ ರೆಸಿಪಿ ತಯಾರಿಸುವ ಮೂಲಕ ವೆಲ್‌ಕಮ್ ಮಾಡಿ. ಅದು ಸವಾಲಿನದ್ದೇ ಆಗಿರಲಿ, ಯಾವ ರೆಸಿಪಿ ಮಾಡಬೇಕೆಂದು ನಿರ್ಧರಿಸಿ ಮೊದಲೇ ಎಲ್ಲಾ ಸಾಮಗ್ರಿಗಳನ್ನು ತಂದಿಡಿ.
- ಪೆನ್ ಪುಸ್ತಕ ತೆಗೆದುಕೊಂಡು ಹಿಂದಿನ ವರ್ಷದ ನೆನಪುಗಳು ಹಾಗೂ ಭವಿಷ್ಯದ ಕನಸನ್ನು ಪಟ್ಟಿ ಮಾಡಿ. ಎಲ್ಲವೂ ಸಕಾರಾತ್ಮಕವಾಗಿರಲಿ. ಹೊಸ ಭರವಸೆಯ ಗುರಿ ಮುಟ್ಟಲು ಇದು ಅತ್ಯುತ್ತಮ ಆಯ್ಕೆ ಆಗಿದೆ.
- ಒಂದು ವೇಳೆ ನಿಮಗೆ ಮನೆಯಲ್ಲೇ ಇದ್ದು ಬೋರ್ ಎನಿಸಿದಲ್ಲಿ ಸೋಲೋ ಟ್ರಿಪ್ ಹೋಗಿ ಬನ್ನಿ. ನಿಮ್ಮದೇ ಸ್ವಂತ ವಾಹನ ಇದ್ದರೆ ನೈಟ್ ಔಟ್ ಹೋಗಿ ಬನ್ನಿ. ಯಾವುದಾದರೂ ದೇವಸ್ಥಾನ, ರೆಸ್ಟೋರೆಂಟ್‌ಗೆ ಹೋಗಿ ಬನ್ನಿ, ನ್ಯೂ ಇಯರ್ ಪಾರ್ಟಿಯಲ್ಲೂ ಭಾಗವಹಿಸಬಹುದು.
- ಹೊಸ ವರ್ಷಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸಿ, ಅವರ ಕಷ್ಟ ಸುಖದಲ್ಲಿ ಭಾಗಿಯಾಗಿ, ಹೊಸ ವರ್ಷದ ವಿನಿಮಯ ಮಾಡಿಕೊಳ್ಳಿ. ಇನ್ನೂ ಆಪ್ತರಿಗೆ ವಿಡಿಯೋ ಕಾಲ್ ಮಾಡಿ. ನೀವು ಇದ್ದಲಿಂದಲೇ ಅವರ ಜೊತೆ ಹೊಸ ವರ್ಷದ ಪಾರ್ಟಿಯಲ್ಲಿ ಭಾಗವಹಿಸಿ.
ಸೋಲೋ ಎಂದರೆ ನೀವು ಒಬ್ಬಂಟಿ ಎಂದು ಅರ್ಥವಲ್ಲ, ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಪ್ರೀತಿಪಾತ್ರರಿರುತ್ತಾರೆ. ಸ್ನೇಹಿತರು , ಕುಟುಂದವರು ಇದ್ದೇ ಇರುತ್ತಾರೆ. ಒಂದು ವೇಳೆ ನಿಮಗೆ ಹೊಸ ವರ್ಷ ಆಚರಿಸಲು ಪಾರ್ಟ್ನರ್ ಸಿಗದಿದ್ದಲ್ಲಿ ಈ ರೀತಿ ಸಿಂಗಲ್ ಆಗಿ ಸೆಲಬ್ರೇಟ್ ಮಾಡಬಹುದು.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.