New Year 2024: ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿವೆ 10 ವಿಭಿನ್ನ ಐಡಿಯಾಗಳು
New Year Welcome Ideas: ಈ ವರ್ಷದ ಕಹಿನೆನಪುಗಳನ್ನು ಮರೆತು ಹೊಸ ವಿಶ್ವಾಸ-ನಂಬಿಕೆ-ಭರವಸೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಪ್ಲಾನ್ ಮಾಡುತ್ತಿದ್ಧಾರೆ ಜನರು. 2024 ಅನ್ನು ಸ್ವಲ್ಪ ಡಿಫೆರೆಂಟ್ ಆಗಿ ವೆಲ್ಕಮ್ ಮಾಡಿ. ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿವೆ 10 ವಿಭಿನ್ನ ಐಡಿಯಾಗಳು
ಹೊಸ ವರ್ಷವನ್ನು ವೆಲ್ಕಮ್ ಮಾಡಲು ಇಡೀ ಜಗತ್ತೇ ಸಜ್ಜಾಗಿದೆ. ಈ ವರ್ಷದ ಕಹಿನೆನಪುಗಳನ್ನು ಮರೆತು ಹೊಸ ವಿಶ್ವಾಸ-ನಂಬಿಕೆ-ಭರವಸೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಪ್ಲಾನ್ ಮಾಡುತ್ತಿದ್ಧಾರೆ ಜನರು. 2024 ಅನ್ನು ಸ್ವಲ್ಪ ಡಿಫೆರೆಂಟ್ ಆಗಿ ವೆಲ್ಕಮ್ ಮಾಡಿ. ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿವೆ 10 ವಿಭಿನ್ನ ಐಡಿಯಾಗಳು
ಬಲೂನ್: ಹಲವು ಬಲೂನ್ಗಳನ್ನು ಊದಿ ನೇತುಹಾಕಿ. ಡಿ.31ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಅವುಗಳನ್ನು ಎಲ್ಲರೂ ಸೇರಿ ಒಟ್ಟಿಗೆ ಒಡೆದು ಹ್ಯಾಪಿ ನ್ಯೂ ಇಯರ್ ಎಂದು ಜೋರಾಗಿ ಕೂಗಿ.
ಆಕಾಶಬುಟ್ಟಿ: ನಿಮ್ಮ ಪ್ರೀತಿ ಪಾತ್ರರ ಜೊತೆ ಆಕಾಶದೀಪ ಅಥವಾ ಆಕಾಶದೀಪವನ್ನು ಹಾರಿಸಿ. ಇದು ನಿಮ್ಮ ಮುಖದಲ್ಲಿ ನಗು ತರಿಸುತ್ತಾ ಹೊಸ ವರ್ಷವನ್ನು ವೆಲ್ಕಮ್ ಮಾಡಲು ಉತ್ತಮ ಐಡಿಯಾ ಆಗಿದೆ. ಸಮುದ್ರ ತೀರದಲ್ಲಿ ಆಕಾಶಬುಟ್ಟಿ ಹಾರಿಸಿದರೆ ಅದರ ವೈಬ್ ಮತ್ತಷ್ಟು ಹೆಚ್ಚುತ್ತದೆ.
ಪ್ರೇಮನಿವೇದನೆ: ಇಷ್ಟು ದಿನ ನೀವು ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದ ವ್ಯಕ್ತಿಗೆ ಡಿ.31ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಪ್ರಪೋಸ್ ಮಾಡಿ. ಅವರಿಂದ ಏನೇ ಉತ್ತರ ಬಂದರೂ ಸ್ವಾಗತಿಸಿ. ಒಪ್ಪುತ್ತಾರೆ ಎಂಬುದು ಖಚಿತವಾಗಿದ್ದರೆ ಲೈವ್ ಆಗಿಯೇ ಒಂದು ರೋಸ್ ಅಥವಾ ನಿಮ್ಮ ಬಜೆಟ್ನ ಏನಾದ್ರೂ ಗಿಫ್ಟ್ ನೀಡಿ ಪ್ರಪೋಸ್ ಮಾಡಿ.
ಪಟಾಕಿ: ಡಿ.31ರ ಮಧ್ಯರಾತ್ರಿ 12 ಗಂಟೆಗೆ ಪರಿಸರ-ಸ್ನೇಹಿ ಪಟಾಕಿಗಳನ್ನು ಹೊಡೆದು ಹೊಸ ವರ್ಷವನ್ನು ಬರಮಾಡಿಕೊಳ್ಳಬಹುದು. ಚೀನಾದವರ ಪ್ರಕಾರ ಪಟಾಕಿ ಹೊಡಯುವುದು ದುಷ್ಟಶಕ್ತಿಗಳನ್ನು ಓಡಿಸುತ್ತದೆ.
ಡಿನ್ನರ್: ರಾತ್ರಿ ಸ್ಪೆಷಲ್ ಡಿನ್ನರ್ ಆಯೋಜನೆ ಮಾಡಿ ಬಗೆ ಬಗೆಯ ಆಹಾರಗಳನ್ನು ಸವಿಯುತ್ತಾ ಕೂಲ್ ಡ್ರಿಂಕ್ಸ್ ಕುಡಿಯುತ್ತಾ ಎಂಜಾಯ್ ಮಾಡಿ.
ಮ್ಯೂಸಿಕ್-ಡ್ಯಾನ್ಸ್: ಹೊಸ ವರ್ಷದ ಪಾರ್ಟಿಯಲ್ಲಿ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳಿ.
ಬಣ್ಣ: ನೀವು ಪಾರ್ಟಿ ಆಯೋಜನೆ ಮಾಡಿದ್ದರೆ ಎಲ್ಲ ಅತಿಥಿಗಳಿಗೆ ಒಂದೇ ಬಣ್ಣದ ಉಡುಪು ಧರಿಸಿ ಬರಲು ಹೇಳಿ. ಕೇಕ್, ಬಲೂನ್ ಹೀಗೆ ಎಲ್ಲವೂ ಅದೇ ಬಣ್ಣದಾಗಿರಲಿ. ಇದು ಒಳ್ಳೆ ವೈಬ್ ನೀಡುತ್ತದೆ. ಹೆಚ್ಚಾಗಿ ಜನರು ಹೊಸ ವರ್ಷದ ಎಂಜಾಯ್ಮೆಂಟ್ಗೆ ಕಪ್ಪು ಬಣ್ಣದ ಬಟ್ಟೆ ಆಯ್ಕೆ ಮಾಡುತ್ತಾರೆ.
12 ದ್ರಾಕ್ಷಿ: ಸ್ಪೇನ್ ಮತ್ತು ಸ್ಪ್ಯಾನಿಷ್ ಪ್ರಭಾವ ಹೊಂದಿರುವ ಇತರ ದೇಶಗಳಲ್ಲಿ ಡಿ.31ರ ಮಧ್ಯರಾತ್ರಿ 12 ಗಂಟೆಗೆ 12 ದ್ರಾಕ್ಷಿ ಹಣ್ಣನ್ನು ತಿನ್ನುವ ಸಂಪ್ರದಾಯವಿದೆ. 12 ದ್ರಾಕ್ಷಿಗಳು ಮುಂಬರುವ 12 ಸಮೃದ್ಧ ತಿಂಗಳುಗಳನ್ನು ಸಂಕೇತಿಸುತ್ತವೆ.
ಐಸ್ಕ್ರೀಮ್: ಸ್ವಿಟ್ಜರ್ಲೆಂಡ್‌ನಲ್ಲಿ, ಜನರು ಕೇವಲ ರುಚಿಗಾಗಿ ಮಾತ್ರವಲ್ಲ ಸಮೃದ್ಧಿ ಮತ್ತು ಅದೃಷ್ಟದ ವರ್ಷವನ್ನು ತರಲು ಐಸ್ ಕ್ರೀಮ್ ಅನ್ನು ತಿಂದು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ.
ಟೋಪಿ: ಹೊಸ ವರ್ಷದ ಪಾರ್ಟಿ ವೇಳೆ ಮಕ್ಕಳಿದ್ದರೆ ಅವರಿಗೆ ಬಗೆಬಗೆಯ ಹ್ಯಾಟ್ ಧರಿಸಲು ಹೇಳಿ.