New Year 2024: ಹೊಸ ವರ್ಷಕ್ಕೆ ಮನೆಯಲ್ಲೇ ಪಾರ್ಟಿ ಅರೇಂಜ್‌ ಮಾಡಿದ್ದೀರಾ; ಈ 5 ವಿಷಯಗಳನ್ನು ನೆನಪಿನಲ್ಲಿಡಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year 2024: ಹೊಸ ವರ್ಷಕ್ಕೆ ಮನೆಯಲ್ಲೇ ಪಾರ್ಟಿ ಅರೇಂಜ್‌ ಮಾಡಿದ್ದೀರಾ; ಈ 5 ವಿಷಯಗಳನ್ನು ನೆನಪಿನಲ್ಲಿಡಿ

New Year 2024: ಹೊಸ ವರ್ಷಕ್ಕೆ ಮನೆಯಲ್ಲೇ ಪಾರ್ಟಿ ಅರೇಂಜ್‌ ಮಾಡಿದ್ದೀರಾ; ಈ 5 ವಿಷಯಗಳನ್ನು ನೆನಪಿನಲ್ಲಿಡಿ

ಹೊರಗೆ ಹೋಗಿ ಹೊಸ ವರ್ಷದ ಪಾರ್ಟಿ ಮಾಡುವ ಬದಲಿಗೆ ಮನೆಯಲ್ಲೇ ಪಾರ್ಟಿ ಅರೇಂಜ್‌ ಮಾಡಿ. ಅದಕ್ಕೂ ಮುನ್ನ ಕೆಲವೊಂದು ವಿಚಾರಗಳನ್ನು ಗಮನದಲ್ಲಿಡಿ.

ಹೊಸ ವರ್ಷ 2024
ಹೊಸ ವರ್ಷ 2024 (PC: Pixabay )

New Year 2024: ಹೊಸ ವರ್ಷದ ಹಿಂದಿನ ದಿನ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಒಟ್ಟಿಗೆ ಕಾಲ ಕಳೆಯಲು ಎಲ್ಲರೂ ಇಷ್ಟಪಡುತ್ತಾರೆ. ಹೊರಗಡೆ ಹೋಗಿ ಪಾರ್ಟಿಗಳಲ್ಲಿ ಭಾಗವಹಿಸಲು ಇಷ್ಟಪಡುತ್ತಾರೆ. ಆದರೆ ಹೊಸ ವರ್ಷದ ಮುನ್ನಾದಿನದ ಟಿಕೆಟ್‌ಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡುವ ಬದಲು, ನೀವು ಮನೆಯಲ್ಲೇ ಇದ್ದು ಪಾರ್ಟಿಯನ್ನು ಮಾಡಬಹುದು. ಮನೆಯಲ್ಲೇ ಪಾರ್ಟಿ ಆಯೋಜನೆ ಮಾಡುವ ಮುನ್ನ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಡಿ.

ಥೀಮ್‌ ಆಯ್ಕೆ ಮಾಡಿ

ಮನೆಯಲ್ಲೇ ಪಾರ್ಟಿ ಆಯೋಜಿಸಲು ನಿರ್ಧರಿಸಿದ್ದರೆ ಮೊದಲೇ ಥೀಮ್‌ ಫೈನಲ್‌ ಮಾಡಿಕೊಳ್ಳಿ. ನಿಮ್ಮ ಮೇಕಪ್‌, ಮ್ಯೂಸಿಕ್‌, ರೆಸಿಪಿಯನ್ನು ಅರೇಂಜ್‌ ಮಾಡಲು ಈ ಥೀಮ್‌ ನೆರವಾಗುತ್ತದೆ. ನೀವು ಕಾಸ್ಟ್ಯೂಮ್‌ ಪಾರ್ಟಿ ಅರೇಂಜ್‌ ಮಾಡಿದ್ದರೆ ಡಿಸ್ಕೋ, ವಿಂಟರ್ ವಂಡರ್ಲ್ಯಾಂಡ್, ರೆಟ್ರೋ ಹಾಗೂ ಇನ್ನಿತರ ಥೀಮ್‌ಗಳನ್ನು ಪ್ರಯತ್ನಿಸಬಹುದು.

ಸೂಕ್ತ ಬಜೆಟ್‌ ಫಿಕ್ಸ್‌ ಮಾಡಿ ಅದಕ್ಕೆ ಸ್ಟಿಕ್‌ ಆನ್‌ ಆಗಿ

ಪಾರ್ಟಿ ಆಯೋಜಿಸಲು ನಿಮಗೆ ಮೊದಲು ಬೇಕಾಗಿರುವುದು ಬಜೆಟ್‌ ಪ್ಲಾನ್‌ ಮಾಡುವುದು. ನಿಮ್ಮ ಮೇಕಪ್‌, ಪಾರ್ಟಿ ವಸ್ತುಗಳು, ಅಡುಗೆ, ಊಟ ತಿಂಡಿ ಹಾಗೂ ಇನ್ನಿತರ ವಸ್ತುಗಳಿಗೆ ಮೊದಲೇ ಖರ್ಚು ವೆಚ್ಚ ಎಷ್ಟಾಗಬಹುದು ಯೋಚನೆ ಮಾಡಿ. ಅದಕ್ಕೆ ತಕ್ಕಂತೆ ಮೊದಲೇ ಬಜೆಟ್‌ ಪ್ಲ್ಯಾನ್‌ ಮಾಡಿ. ಪದೇ ಪದೇ ಬಜೆಟ್‌ ಬದಲಿಸಬೇಡಿ. ಪಾರ್ಟಿಗೆ ಎಷ್ಟು ಜನರು ಬರ್ತಿದ್ದಾರೆ ಅನ್ನೋದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಎಲ್ಲದಕ್ಕೂ ಒಂದು ಸ್ಪ್ರೆಡ್‌ ಶೀಟ್‌ ರಚಿಸಿದರೆ ನಿಮಗೆ ಸಹಾಯವಾಗುತ್ತದೆ.

ಪಾರ್ಟಿಗೂ ಮುನ್ನ ಸಿದ್ದತೆ ಗಮನಿಸಿ

ಎಲ್ಲಾ ಸಿದ್ಧತೆ ಆಗಿದೆಯೇ ಗಮನಿಸಿಕೊಳ್ಳಿ. ಪಾರ್ಟಿಗೆ ಮುನ್ನ ನೀವು ಮೊದಲೇ ಡಿಸೈಡ್‌ ಮಾಡಿದ ಡ್ರಿಂಕ್ಸ್‌, ಸ್ನಾಕ್ಸ್‌, ಫುಡ್‌ ಎಲ್ಲವೂ ಅರೇಂಜ್‌ ಆಗಿದೆಯೇ ಗಮನಿಸಿಕೊಳ್ಳಿ. ಅತಿಥಿಗಳು ಬಂದಾಗ ಆತುರಾತುರವಾಗಿ ಅರೇಂಜ್‌ ಮಾಡಲು ಹೋಗಬೇಡಿ. ಒಂದು ವೇಳೆ ನೀವು ಕಾಕ್ಟೈಲ್‌ ಪಾರ್ಟಿ ಅರೇಂಜ್‌ ಮಾಡಿದ್ದರೆ. ಸಿಟ್ರಸ್‌ ಹೋಳುಗಳು, ಬೆರೀಸ್‌, ಅಲಿವ್ಸ್‌, ಕಾಕ್ಟೈಲ್‌ ಸಿರಪ್‌, ರೋಸ್‌ಮೆರಿ ಸ್ಪ್ರಿಂಗ್ಸ್‌, ದಾಲ್ಚಿನಿಯಿಂದ ಗಾರ್ನಿಶ್‌ ಮಾಡಿ.

ಪಾರ್ಟಿಗೆ ರೆಡಿ ಆಗಿ

ನೀವು ಪಾರ್ಟಿಗೆ ಸಿಂಪಲ್‌ ಆಗಿ ಡ್ರೆಸ್‌ ಆಗಲಿದ್ದೀರೋ, ಗ್ರ್ಯಾಂಡ್‌ ಆಗಿ ಅಲಂಕಾರ ಮಾಡಿಕೊಳ್ಳಲಿದ್ದೀರೋ ಯಾವುದೇ ಆದರೂ ಅದಕ್ಕೆ ತಯಾರಿ ಅಗತ್ಯ. ಅದು ಮಾಡದಿದ್ದರೂ ನಡೆಯುತ್ತೆ ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ. ಮನೆಗೆ ಬಂದ ಗೆಸ್ಟ್‌ಗಳಿಗೆ ಏನಾದರೂ ಸಣ್ಣ ಉಡುಗೊರೆ ನೀಡಿ. ನಿಮ್ಮೊಂದಿಗೆ ಕಳೆದ ಈ ಹೊಸ ವರ್ಷದ ಪಾರ್ಟಿಯನ್ನು ನಿಮ್ಮ ಗೆಸ್ಟ್‌ಗಳು ಎಂದಿಗೂ ನೆನಪಿನಲ್ಲಿಡುವಂತೆ ಮಾಡಿ.

ಟೈಮಿಂಗ್‌ ಬಗ್ಗೆ ಗಮನ ಕೊಡಿ

ರಾತ್ರಿ 12 ಗಂಟೆಗೆ ನೀವು ಹೊಸ ವರ್ಷವನ್ನು ಸ್ವಾಗತಿಸಬೇಕು. ಆದ್ದರಿಂದ ಗೆಸ್ಟ್‌ಗಳನ್ನು ರಾತ್ರಿ 9 ಗಂಟೆಗೆ ಹಾಜರಿರಲು ಹೇಳಿ. ಅವರಿಗೆ ತಿಂಡಿ, ಕಾಕ್ಟೈಲ್‌ ಸರ್ವ್‌ ಮಾಡಿ. ಅವರೊಂದಿಗೆ ಕಷ್ಟ ಸುಖಗಳನ್ನು ಹಂಚಿಕೊಳ್ಳಿ. ಮೊದಲೇ ಮೋಜು ಮಸ್ತಿ ಮಾಡಿ 12 ಗಂಟೆಗೆ ಪಾರ್ಟಿ ಮಾಡುವ ಸಮಯದಲ್ಲಿ ದಣಿವು ಅಂತ ಕೂರಬೇಡಿ. ಕೊನೆಯ 10 ನಿಮಿಷ ಟಿವಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೌಂಟ್‌ ಡೌನ್‌ ಆರಂಭಿಸಿ ಇಡಿ.

ಈ ಎಲ್ಲಾ ಟಿಪ್ಸ್‌ ಫಾಲೋ ಮಾಡುವ ಮೂಲಕ ಈ ವರ್ಷದ ಪಾರ್ಟಿಯನ್ನು ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಿ.

Whats_app_banner