New Year Goa Trip: ಹೊಸವರ್ಷಕ್ಕೆ ಗೋವಾಗೆ ಟ್ರಿಪ್ ಹೋಗ್ತಿದ್ದೀರಾ? ಈ ಸ್ಥಳಗಳನ್ನ ಮಿಸ್​ ಮಾಡಬೇಡಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year Goa Trip: ಹೊಸವರ್ಷಕ್ಕೆ ಗೋವಾಗೆ ಟ್ರಿಪ್ ಹೋಗ್ತಿದ್ದೀರಾ? ಈ ಸ್ಥಳಗಳನ್ನ ಮಿಸ್​ ಮಾಡಬೇಡಿ

New Year Goa Trip: ಹೊಸವರ್ಷಕ್ಕೆ ಗೋವಾಗೆ ಟ್ರಿಪ್ ಹೋಗ್ತಿದ್ದೀರಾ? ಈ ಸ್ಥಳಗಳನ್ನ ಮಿಸ್​ ಮಾಡಬೇಡಿ

New Year 2024 Trip: ಡಿಸೆಂಬರ್‌–ಜನವರಿ ಎಂದರೆ ಗೋವಾಕ್ಕೆ ಹೊಸ ಚೈತನ್ಯ ಬಂದಂತೆ. ಅಲ್ಲಿನ ಕ್ರಿಸ್‌ಮಸ್‌ ಆಚರಣೆ, ನ್ಯೂ ಇಯರ್‌ ಪಾರ್ಟಿಗಳು ಎಲ್ಲರನ್ನೂ ಆಕರ್ಷಿಸುವುದು ಸುಳ್ಳಲ್ಲ. ಚಳಿಗಾಲದಲ್ಲಿ ಬೀಚ್‌ ಮೇಲೆ ನಡೆದಾಡುತ್ತಾ, ಅಲ್ಲಿನ ಪಾರ್ಟಿ ಎಂಜಾಯ್‌ ಮಾಡಲು ಗೋವಾ ಅದ್ಭುತ ತಾಣವಾಗಿದೆ.

ಹೊಸ ವರ್ಷ ಆಚರಿಸಲು ಗೋವಾ ಬೆಸ್ಟ್ (istockphoto)
ಹೊಸ ವರ್ಷ ಆಚರಿಸಲು ಗೋವಾ ಬೆಸ್ಟ್ (istockphoto)

ಡಿಸೆಂಬರ್‌ ಬಂತೆಂದರೆ ಎಲ್ಲರ ಬಾಯಲ್ಲೂ ನಾವು ಕೇಳುವ ಸಾಮಾನ್ಯ ಮಾತು ಎಂದರೆ ನ್ಯೂ ಇಯರ್‌ಗೆ ಎಲ್ಲಿಗೆ ಟ್ರಿಪ್‌ ಪ್ಲಾನ್‌ ಮಾಡಿದ್ದೀರಾ ಎಂದು. ಇಯರ್‌ ಎಂಡ್‌ ಟ್ರಿಪ್‌ಗಳೆಂದರೆ ಕೆಲವರಿಗೆ ಎಲ್ಲಿಲದ ಖುಷಿ. ಅದರಲ್ಲೂ ಬೀಚ್‌, ಚರ್ಚ್‌ನಂತಹ ಊರುಗಳೆಂದರೆ ಸಾಕು, ಆಸಕ್ತಿ ಇನ್ನೂ ಹೆಚ್ಚು. ಡಿಸೆಂಬರ್‌–ಜನವರಿ ಎಂದರೆ ಗೋವಾಕ್ಕೆ ಹೊಸ ಚೈತನ್ಯ ಬಂದಂತೆ. ಅಲ್ಲಿನ ಕ್ರಿಸ್‌ಮಸ್‌ ಆಚರಣೆ, ನ್ಯೂ ಇಯರ್‌ ಪಾರ್ಟಿಗಳು ಎಲ್ಲರನ್ನೂ ಆಕರ್ಷಿಸುವುದು ಸುಳ್ಳಲ್ಲ. ಚಳಿಗಾಲದಲ್ಲಿ ಬೀಚ್‌ ಮೇಲೆ ನಡೆದಾಡುತ್ತಾ, ಅಲ್ಲಿನ ಪಾರ್ಟಿ ಎಂಜಾಯ್‌ ಮಾಡಲು ಗೋವಾ ಅದ್ಭುತ ತಾಣವಾಗಿದೆ. ಈ ಸಂದರ್ಭದಲ್ಲಿ ಇಡೀ ಗೋವಾ ರಾಜ್ಯವೇ ಸಂತೋಷ, ಸಡಗರದಲ್ಲಿ ತೇಲುತ್ತಿರುತ್ತದೆ. ಅಲ್ಲಿ ನಡೆಯುವ ಅದ್ಧೂರಿ ಪಾರ್ಟಿಗಳು, ಹಿನ್ನೆಲೆ ಸಂಗೀತ, ವಿವಿಧ ಕೇಕ್‌, ಚಾಕಲೇಟ್‌ಗಳು ಹೊಸ ಲೋಕವನ್ನೇ ಸೃಷ್ಟಿಸಿರುತ್ತವೆ.

ಗೋವಾ ತನ್ನ ಸ್ಥಳೀಯ ಸಂಗೀತ, ನೃತ್ಯ, ಮನರಂಜನೆಗಳಿಗೂ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಲ್ಲಿನ ನ್ಯೂ ಇಯರ್‌ ಪಾರ್ಟಿಗಳಲ್ಲಿ ಅದನ್ನು ಕಾಣಬಹುದಾಗಿದೆ. ನ್ಯೂ ಇಯರ್‌ ಆಚರಿಸಲು ನೀವು ಗೋವಾಕ್ಕೆ ಪ್ರವಾಸ ಹೋಗಬೇಕೆಂದುಕೊಂಡಿದ್ದರೆ ಅಲ್ಲಿನ ಕೆಲವು ಬೆಸ್ಟ್‌ ಸ್ಥಳಗಳಿಗೂ ಭೇಟಿ ನೀಡಿ.

ಚರ್ಚ್‌ಗಳು:

ಗೋವಾ ಎಂದರೆ ಸಾಕು ಅಲ್ಲಿ ನೀವು ಅತ್ಯಂತ ಹಳೆಯ ಚರ್ಚ್​ಗಳಿಂದ ಹಿಡಿದು ಈಗಿನ ಹೊಸ ಚರ್ಚ್‌ಗಳವರೆಗೂ ನೋಡಬಹುದು. ಅದರಲ್ಲೂ ಕ್ರಿಸ್‌ಮಸ್‌ ಮತ್ತು ನ್ಯೂ ಇಯರ್‌ ಸಂದರ್ಭದಲ್ಲಂತೂ ಇನ್ನಷ್ಟು ಸುಂದರವಾಗಿ ಅಲಂಕಾರಗೊಂಡು ನಿಮ್ಮ ಕಣ್ಮನ ತಣಿಸುತ್ತವೆ. ಅಲ್ಲಿನ ಆತಿಥ್ಯವೂ ಬಹಳ ವಿಶೇಷವಾಗಿರುತ್ತದೆ. ನೀವು ಗೋವಾಕ್ಕೆ ಟ್ರಿಪ್‌ ಹೋಗಿದ್ದೇ ಆದರೆ ಅಲ್ಲಿನ ಎರಡು ಪ್ರಧಾನ ಚರ್ಚ್​ಗಳಾದ ದಿ ಬೆಸಿಲಿಕಾ ಆಫ್ ಬೊಮ್ ಜೀಸಸ್ ಮತ್ತು ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ ಇವುಗಳಿಗೆ ಖಂಡಿತ ಭೇಟಿ ಕೊಡಿ. ಗೋವಾದಲ್ಲಿ ಪ್ರಸಿದ್ಧಿ ಪಡೆದುಕೊಂಡ ಇತರೆ ಚರ್ಚ್‌ಗಳೆಂದರೆ ತ್ರೀ ಕಿಂಗ್ಸ್ ಚರ್ಚ್, ಮೇ ಡಿ ಡ್ಯೂಸ್ ಚರ್ಚ್, ಅವರ್ ಲೇಡಿ ಆಫ್ ಹೆಲ್ಪ್ ಚರ್ಚ್.

ಓಲ್ಡ್‌ ಗೋವಾ:

ಹೆಸರೇ ಹೇಳುವಂತೆ ಇಲ್ಲಿ ಗೋವಾದ ಅತ್ಯಂತ ಹಳೆಯ ಕಟ್ಟಡಗಳಿವೆ. ನ್ಯೂ ಇಯರ್‌ ಮತ್ತು ಕ್ರಿಸ್‌ಮಸ್‌ಗಂತೂ ಇದು ಆಕರ್ಷಣೀಯ ತಾಣವಾಗಿದೆ. ಇಲ್ಲಿನ ಹ್ಯಾರಿ ಸೇಂಟ್‌ ಚರ್ಚ್‌ಗೆ ಪ್ರಪಂಚದಾದ್ಯಂತ ಜನರು ಬಂದು ಭೇಟಿ ನೀಡುತ್ತಾರೆ. ಅಲ್ಲಿ ಅಸ್ಸಿಸಿಯ ಫ್ರಾನ್ಸಿಸ್ ಮತ್ತು ಪೋಪ್ ಅವರ ಮರಣದ ಅವಶೇಷಗಳನ್ನು ಕಾಣಬಹುದಾಗಿದೆ. ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೀಯ ಕಟ್ಟಡವೆಂದರೆ ಸೇಂಟ್‌ ಚಾಪೆಲ್‌.

ಅಂಜುನಾ ಬೀಚ್‌:

ಉತ್ತರ ಗೋವಾದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಬೀಚ್‌ ಎಂದರೆ ಅಂಜುನಾ ಬೀಚ್‌. ನ್ಯೂ ಇಯರ್‌ನಲ್ಲಿ ಇಲ್ಲಿ ಆಚರಿಸುವು ನೈಟ್‌ ಪಾರ್ಟಿಗಳು ಪ್ರಮುಖ ಆಕರ್ಷಣೆ ಪಡೆದುಕೊಂಡಿದೆ.

ಬಾಗಾ ಬೀಚ್‌:

ಇದು ನೈಟ್‌ ಪಾರ್ಟಿಗೆ ಹೆಸರುವಾಸಿಯಾದ ಬೀಚ್‌. ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಮುನ್ನಾದಿನ ಇಲ್ಲಿ ಆಚರಣೆ ಜೋರಾಗಿಯೇ ಇರುತ್ತದೆ. ಮಧ್ಯರಾತ್ರಿಯಲ್ಲಿ ಬೀಚ್‌ನಲ್ಲಿ ಸಿಡಿಸುವ ಪಟಾಕಿಗಳನ್ನು ನೋಡುವುದರ ಸಲುವಾಗಿಯೇ ಹಲವಾರು ಜನರು ಭೇಟಿ ನೀಡುತ್ತಾರೆ.

ದಕ್ಷಿಣ ಗೋವಾ:

ಇನ್ನು ದಕ್ಷಿಣ ಗೋವಾದಲ್ಲಿ ಹೇಳುದಾದರೆ ಕ್ಯಾಲಂಗುಟ್‌, ಕೊಲ್ವಾ ಮತ್ತು ಬೊಗ್ಮಾಲೊ ಬೀಚ್‌ಗಳು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ನೀವು ಗೋವಾದಲ್ಲಿ ಎಲ್ಲಿ ಬೇಟಿ ನೀಡಬೇಕು ಎಂದುಕೊಂಡಿದ್ದೀರೋ ಅದಕ್ಕೆ ತಕ್ಕಂತೆ ಪ್ಲಾನ್‌ ಮಾಡಿ. ಹತ್ತಿರದ ಸ್ಥಳಗಳನ್ನು ನೋಡಿಕೊಂಡು ಬನ್ನಿ. ಹೊಸ ವರ್ಷವನ್ನು ಸಂತೋಷ, ಸಡಗರದಿಂದ ಬರಮಾಡಿಕೊಳ್ಳಿ.

Whats_app_banner