New Year: 2023 ಅನ್ನು ಮೆಲುಕು ಹಾಕಿದ್ರೆ ನಿಮ್ಮ ಬದುಕಿನಲ್ಲಿ ಏನೆಲ್ಲಾ ನಡೀತು; ವೈರಲ್‌ ಆಯ್ತು ಪ್ರಶ್ನೆಗಳ ಸರಮಾಲೆ ಇರುವ ರಿಪೋರ್ಟ್‌ ಕಾರ್ಡ್
ಕನ್ನಡ ಸುದ್ದಿ  /  ಜೀವನಶೈಲಿ  /  New Year: 2023 ಅನ್ನು ಮೆಲುಕು ಹಾಕಿದ್ರೆ ನಿಮ್ಮ ಬದುಕಿನಲ್ಲಿ ಏನೆಲ್ಲಾ ನಡೀತು; ವೈರಲ್‌ ಆಯ್ತು ಪ್ರಶ್ನೆಗಳ ಸರಮಾಲೆ ಇರುವ ರಿಪೋರ್ಟ್‌ ಕಾರ್ಡ್

New Year: 2023 ಅನ್ನು ಮೆಲುಕು ಹಾಕಿದ್ರೆ ನಿಮ್ಮ ಬದುಕಿನಲ್ಲಿ ಏನೆಲ್ಲಾ ನಡೀತು; ವೈರಲ್‌ ಆಯ್ತು ಪ್ರಶ್ನೆಗಳ ಸರಮಾಲೆ ಇರುವ ರಿಪೋರ್ಟ್‌ ಕಾರ್ಡ್

ವರ್ಷಗಳು ಹಳೆಯದಾಗಬೇಕು. ಹೊಸ ವರ್ಷಗಳು ಮತ್ತೆ ಮತ್ತೆ ಬರುತ್ತಿರಬೇಕು. ಅದೇ ಪ್ರಕೃತಿ ನಿಯಮ. ನಾವು ಇದೀಗ ಮತ್ತೊಮ್ಮೆ ಮತ್ತೊಂದು ಹೊಸ ವರ್ಷದ ಹೊಸ್ತಿಲಿನಲ್ಲಿ ಬಂದು ನಿಂತಿದ್ದೇವೆ. ಈ ಸಂದರ್ಭದಲ್ಲಿ ಕಳೆದು ಹೋಗುತ್ತಿರುವ ಈ 2023 ಎಂಬ ಸುಂದರ ವರ್ಷವನ್ನೊಮ್ಮೆ ಮೆಲುಕು ಹಾಕದಿದ್ದರೆ ಹೇಗೆ?

ವೈರಲ್‌ ಕಾರ್ಡ್‌ ಹೀಗಿದೆ ನೋಡಿ
ವೈರಲ್‌ ಕಾರ್ಡ್‌ ಹೀಗಿದೆ ನೋಡಿ

ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡೋಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಹೊಸ ವರ್ಷ ಆರಂಭಗೊಂಡಾಗ ಇರುವ ಹುಮ್ಮಸ್ಸು, ಏನನ್ನೋ ಸಾಧಿಸಬೇಕು ಎನ್ನುವ ಛಲ ವರ್ಷದ ಕೊನೆಯವರೆಗೂ ಇರುವುದು ಬಹಳ ಕಡಿಮೆ. ಹೊಸ ವರ್ಷ ಎದುರಾದಂತೆಲ್ಲ ಈ ವರ್ಷ ನಾನು ಹೀಗೆ ಮಾಡುತ್ತೇನೆ ಹಾಗೆ ಮಾಡುತ್ತೇನೆ ಅಂತಾ ನಮಗೆ ನಾವು ಶಪಥ ತೊಟ್ಟುಕೊಳ್ಳುತ್ತೇವೆ. ಚಾಲೆಂಜ್​ ಹಾಕಿಕೊಳ್ಳುತ್ತೇವೆ. ಇನ್ನೂ ಕೆಲವು ಸಾರಿ ನಮಗೆ ತಿಳಿಯದಂತೆ ಅನಿರೀಕ್ಷಿತ ಘಟನೆಗಳು ನಮ್ಮ ಜೀವನದಲ್ಲಿ ಜರುಗಿಬಿಟ್ಟುರುತ್ತವೆ. ಇದು ಒಳ್ಳೆಯ ರೀತಿಯಿಂದಲೂ ಆಗಿರಬಹುದು . ಕೆಟ್ಟ ರೀತಿಯಿಂದಲೂ ಆಗಿರಬಹುದು.

ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಇಡೀ ವರ್ಷ ನೀವು ಏನೇನು ಮಾಡಿದ್ದೀರಿ..? ನಿಮ್ಮ ಜೀವನದಲ್ಲಿ ಏನೆಲ್ಲ ಘಟನೆಗಳು ಘಟಿಸಿವೆ ಎಂಬುದರ ಬಗ್ಗೆ ರಿಪೋರ್ಟ್ ಕಾರ್ಡ್​ ಒಂದು ವೈರಲ್​ ಆಗುತ್ತಿದೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಸೇರಿದಂತೆ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುತ್ತಿರುವ ಅನೇಕರು ಈ ರಿಪೋರ್ಟ್ ಕಾರ್ಡ್​ನ್ನು ಶೇರ್​ ಮಾಡುತ್ತಿದ್ದಾರೆ.

2023 ಎಂಬ ಈ ಒಂದು ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನೆಲ್ಲ ಘಟನೆ ಘಟಿಸಿತು..? ನೀವು ಏನೇನು ಮಾಡಿದ್ದೀರಿ..? ಈ ಎಲ್ಲದರ ಕುರಿತಂತೆ ಈ ರಿಪೋರ್ಟ್ ಕಾರ್ಡ್​ನಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಇವುಗಳಲ್ಲಿ ನೀವು ಯಾವುದೆಲ್ಲ ಮಾಡಿದ್ದೀರಿ..? ಅಥವಾ ನಿಮ್ಮ ಜೀವನದಲ್ಲಿ ಈ ವರ್ಷ ಈ ಎಲ್ಲಾ ಘಟನೆಗಳು ನಡೆದಿವೆಯೇ ಎಂಬುದನ್ನು ನೀವು ಪರಾಮರ್ಶಿಸಿಕೊಳ್ಳಬೇಕು. ಯಾವೆಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದು ಇರುತ್ತದೆಯೋ ಆ ಪ್ರಶ್ನೆಗಳ ಎದುರು ನೀವು ಸರಿ ಎಂದು ಬರೆದುಕೊಳ್ಳಬೇಕು. ನೋಡೋಣ.ಈ ರಿಪೋರ್ಟ್ ಕಾರ್ಡ್​ನಲ್ಲಿ ನೀವೆಷ್ಟು ಅಂಕಗಳನ್ನು ಪಡೆದುಕೊಳ್ಳುತ್ತೀರಿ ಅಂತಾ:

ಹಾಗಾದರೆ ಆ ಪ್ರಶ್ನೆಗಳೇನು ಎಂಬುದನ್ನು ನೋಡೋಣ ಅಲ್ವೇ..?

ಯಾರಾದರೂ ನಿಮ್ಮ ಹೃದಯ ಘಾಸಿಗೊಳಿಸಿದ್ದಾರೆಯೇ..?

ಒಬ್ಬರೇ ಎಲ್ಲಾದರೂ ಪ್ರವಾಸ ಕೈಗೊಂಡಿದ್ದೀರೇ..?

ಹೊಸ ಹೊಸ ತಿನಿಸುಗಳ ರುಚಿ ಸವಿದಿದ್ದೀರೇ..?

ಹೊಸ ಸ್ನೇಹಿತರನ್ನು ಮಾಡಿಕೊಂಡಿದ್ದೀರೇ..?

24 ಗಂಟೆಗಳ ಕಾಲ ಎಚ್ಚರಿದ್ದೀರೇ..?

ಪ್ರೀತಿಯಲ್ಲಿ ಬಿದ್ದಿದ್ದೀರೇ..?

ಟ್ಯಾಟೂ ಹಾಕಿಸಿಕೊಂಡಿದ್ದೀರೇ..?

ಯಾವುದಾದರೂ ಪುಸ್ತಕ ಓದಿ ಮುಗಿಸಿದ್ದೀರೇ..?

ಕನ್ಸರ್ಟ್​ಗಳಿಗೆ ತೆರಳಿದ್ದೀರೇ..?

ಮೂಗು ಅಥವಾ ಕಿವಿ ಹೀಗೆ ಎಲ್ಲಾದರೂ ಚುಚ್ಚಿಸಿಕೊಂಡಿದ್ದೀರೇ?

ತೂಕ ಏರಿಕೆಯಾಗಿದೆಯೇ..?

ತೂಕ ಇಳಿಕೆಯಾಗಿದೆಯೇ..?

ಹೊಸ ಹೊಸ ಸ್ಥಳಗಳಿಗೆ ಪ್ರಯಾಣಿಸಿದ್ದೀರೇ..?

ಒಬ್ಬರೇ ಅತ್ತಿದ್ದೀರೇ..?

ಪ್ರೀತಿಪಾತ್ರರ ಜೊತೆಯಲ್ಲಿ ಅತ್ತಿದ್ದೀರೇ..?

ಕ್ಯಾರಿಯೋಕೆಗಳಿಗೆ ತೆರಳಿದ್ದೀರೇ..?

ನೃತ್ಯ ಮಾಡಿದ್ದೀರೇ..?

ಜೀವನದಲ್ಲಿ ಏನಾದರೂ ಮಹತ್ವದ ನಿರ್ಧಾರ ಕೈಗೊಂಡಿದ್ದೀರೇ..?

ಪ್ರೀತಿಪಾತ್ರರನ್ಯಾರಾದರೂ ಕಳೆದುಕೊಂಡಿದ್ದೀರೇ..?

ತುಂಬಾ ನಕ್ಕಿದ್ದೀರೇ..?

ಮದ್ಯಪಾನ ಮಾಡಿದ್ದೀರೇ..?

ಪಾರ್ಟಿ ಮಾಡಿದ್ದೀರೇ..?

ಒಬ್ಬರೇ ಸಿನಿಮಾ ವೀಕ್ಷಿಸಲು ತೆರಳಿದ್ದೀರೇ?

ದುಃಖಿಸಿದ್ದೀರೇ..?

ನಿಮ್ಮ ಕನಸಿನ ವಸ್ತುವನ್ಯಾವುದಾದರೂ ಖರೀದಿಸಿದ್ದೀರೇ?

10ಕ್ಕೂ ಅಧಿಕ ಸಿನಿಮಾಗಳನ್ನು ವೀಕ್ಷಿಸಿದ್ದೀರೇ..?

ಯಾರದ್ದೂ ಸಹಾಯವಿಲ್ಲದೇ ಎನನ್ನಾದರೂ ಸರಿ ಮಾಡಿದ್ದೀರೇ?

ಸಮುದ್ರಕ್ಕೆ ಭೇಟಿ ನೀಡಿದ್ದೀರೇ?

ಮೌಂಟೇನ್​ಗಳಿಗೆ ತೆರಳಿದ್ದೀರೇ..?

ಸೂರ್ಯಾಸ್ತ ವೀಕ್ಷಿಸಿದ್ದೀರೇ?

ಸೂರ್ಯಾಸ್ತವನ್ನು ನೋಡಿದ್ದೀರೇ..?

ಅಡುಗೆ ಮಾಡುವ ಕೌಶಲ್ಯವನ್ನು ಸುಧಾರಿಸಿಕೊಂಡಿದ್ದೀರೇ?

ಕೂದಲಿಗೆ ಬಣ್ಣ ಹಾಕಿದ್ದೀರೇ?

ಹೊಸದನ್ನೇನಾದರೂ ಕಲಿತಿದ್ದೀರೇ..?

ಕ್ರೀಡಾ ಚಟುವಟಕೆಯನ್ನು ವೀಕ್ಷಿಸಿದ್ದೀರೇ?

ಕುಟುಂಬಸ್ಥರೊಂದಿಗೆ ಒಳ್ಳೆಯ ಸಮಯ ಕಳೆದಿದ್ದೀರೇ..?

ನಿಮ್ಮ ಮನಸ್ಸಿಗೆ ನೀವು ಉತ್ತರ ಕೊಟ್ಟುಕೊಳ್ಳುತ್ತಾ ಬಂದಿದ್ದೀರಿ ಅಲ್ವೇ..? ಒಂದು ವರ್ಷದ ಮೆಲುಕನ್ನು ಕೂಡ ನಿಮಗೆ ಅರಿವಿಲ್ಲದಂತೆ ಹಾಕಿದ್ದೀರಿ ಅಲ್ವೇ..? ಒಂದು ವರ್ಷ ನಿಮ್ಮ ಜೀವನದಲ್ಲಿ ಎಷ್ಟೆಲ್ಲ ಹೊಸತನಗಳನ್ನು ತಂದಿದೆ, ಎಷ್ಟೆಲ್ಲ ಪಾಠವನ್ನು ಕಲಿಸಿದೆ, ಎಷ್ಟೆಲ್ಲ ಮುನ್ನುಡಿಗಳನ್ನು ಬರೆದಿದೆ. ಎಂಬೆಲ್ಲ ಪ್ರಶ್ನೆಗೆ ಉತ್ತರ ಹುಡುಕಿಕೊಂಡಿದ್ದೀರಿ ಅಲ್ವೇ.?

Whats_app_banner