2025ರ ಶುಭಾಶಯಗಳು: ನಿಮ್ಮ ತ್ಯಾಗಕ್ಕೆ ಬೆಲೆ ಕಟ್ಟಲಾಗದು; ಹೊಸ ವರ್ಷಕ್ಕೆ ನಿಮ್ಮ ತಂದೆ-ತಾಯಿಗೆ ಹೀಗೆ ಶುಭ ಕೋರಿ
New Year 2025 Wishes: ಯಾವುದೇ ಶುಭ ಸಮಾರಂಭ ಇರಲಿ, ಖುಷಿಯ ವಿಚಾರವಾಗಲಿ ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವುದು, ಶುಭಾಶಯ ಕೋರುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದೆ. ನೀವು ನಿಮ್ಮ ತಂದೆ-ತಾಯಿಗೆ ಶುಭಾಶಯ ಕೋರಬೇಕು ಎಂದುಕೊಂಡಲ್ಲಿ ಇಲ್ಲಿ ಕೆಲವು ಸುಂದರ ಸಾಲುಗಳಿವೆ.
2025ರ ಶುಭಾಶಯಗಳು: ದಿನಗಳು ಕಳೆಯುತ್ತಿವೆ, ವರ್ಷಗಳು ಉರುಳುತ್ತಿವೆ. ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದೇವೆ ಎನಿಸುತ್ತಿದೆ. ಅಷ್ಟರಲ್ಲಿ ಒಂದು ವರ್ಷ ಮುಗಿದು ಹೊಸ ವರ್ಷ ಬರುತ್ತಿದೆ. 2025 ನ್ನು ಸ್ವಾಗತಿಸಲು ಇನ್ನು 2 ದಿನಗಳಷ್ಟೇ ಬಾಕಿ ಉಳಿದಿದೆ. ಹಿಂದೂಗಳಿಗೆ ಹೊಸ ವರ್ಷ ಎಂದರೆ ಅದು ಯುಗಾದಿ, ಆದರೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ 1ನ್ನು ಕೂಡಾ ಹೊಸ ವರ್ಷವನ್ನಾಗಿ ಆಚರಿಸುತ್ತಾ ಬರಲಾಗಿದೆ.
ಹೊಸ ವರ್ಷ ಬರುತ್ತಿದ್ದಂತೆ ಪಾರ್ಟಿ, ಪ್ರವಾಸ, ರೆಸ್ಯುಲೂಷನ್ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಪ್ಲ್ಯಾನ್ ಮಾಡಲಾಗುತ್ತದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಿಸಲು ಈಗಲೇ ತಯಾರಿ ನಡೆದಿದೆ. ಡಿಸೆಂಬರ್ 31 ಮಧ್ಯರಾತ್ರಿ 12 ದಾಟುತ್ತಿದ್ದಂತೆ ಜನರು ಪಟಾಕಿ ಸಿಡಿಸಿ ಹರ್ಷೋದ್ಗಾರದಿಂದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹೊಸ ಹೊಸ ಕನಸುಗಳು, ಗುರಿಗಳನ್ನು ಇಟ್ಟುಕೊಂಡು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ನಿಮ್ಮ ಬದುಕಲ್ಲಿ ಸಂತೋಷವೇ ತುಂಬಿರಲಿ ಎಂದು ಆತ್ಮೀಯರಿಗೆ ಹಾರೈಸುತ್ತಾರೆ. ಹಾಗಾದರೆ ಈ ಹೊಸ ವರ್ಷಕ್ಕೆ ಮೊದಲು ಯಾರಿಗೆ ಶುಭ ಕೋರಬೇಕು ಎಂದುಕೊಂಡಿದ್ದೀರ?
ಹೊಸ ವರ್ಷಕ್ಕೆ ನಿಮ್ಮ ಪ್ರೀತಿಯ ಅಪ್ಪ-ಅಮ್ಮನಿಗೆ ಈ ರೀತಿ ಶುಭ ಕೋರಿ
- ಹೊಸ ವರ್ಷದ ಶುಭಾಶಯಗಳು ಅಪ್ಪ-ಅಮ್ಮ. ಮುಂಬರುವ ವರ್ಷಗಳಲ್ಲಿ ನಿಮ್ಮಿಬ್ಬರ ಸಂತೋಷ ಇನ್ನಷ್ಟು ಹೆಚ್ಚಾಗಲಿ. ಎಂದಿಗೂ ಇದೇ ರೀತಿ ಆರೋಗ್ಯವಾಗಿರಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
- ವಿಶ್ವದ ಬೆಸ್ಟ್ ಅಪ್ಪ-ಅಮ್ಮನಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ನೀವೇ ಎಲ್ಲಾ, ನೀವಿಲ್ಲದೆ ನಮ್ಮ ಬದುಕು ಇಲ್ಲ, ಎಂದಿಗೂ ನಮ್ಮ ಜೊತೆ ಇದೇ ರೀತಿ ಜೊತೆಯಾಗಿದ್ದು ಕೈ ಹಿಡಿದು ನಡೆಸಿ.
- ನಿಮ್ಮ ಆಶೀರ್ವಾದ, ಬೆಂಬಲ ಮುಂದೆಯೂ ಹೀಗೆ ಇರಲಿ, ನಿಮ್ಮ ತ್ಯಾಗಕ್ಕೆ ಸದಾ ಋಣಿ. ನೀವು ಎಂದೆಂದಿಗೂ ನಗು ನಗುತ್ತಾ ಇರಬೇಕೆಂದು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು ಮಮ್ಮಿ ಡ್ಯಾಡಿ.
- ನನ್ನ ಪ್ರೀತಿಯ ಹೆತ್ತವರಿಗೆ ಹೊಸ ವರ್ಷದ ಶುಭಾಶಯಗಳು. ಸದಾ ನನಗೆ ಪ್ರೇರಣೆ ಮತ್ತು ಸ್ಫೂರ್ತಿಯ ಚಿಲುಮೆಯಾಗಿದ್ದೀರಿ, ನಿಮಗೆ ಮಗಳಾಗಿ/ಮಗನಾಗಿ ಜನಿಸಿದ್ದಕ್ಕೆ ಹೆಮ್ಮ ಪಡುತ್ತೇನೆ. ಆ ದೇವರಿಗೆ ಧನ್ಯವಾದಗಳು.
- ಏಳೇಳು ಜನ್ಮಕ್ಕೂ ನೀವೇ ನನ್ನ ತಂದೆ ತಾಯಿಯಾಗಿ ದೊರೆಯಬೇಕೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ, ಈ ಹೊಸ ವರ್ಷ ನಿಮಗೆ ಇನ್ನಷ್ಟು ಉತ್ತಮ ಆರೋಗ್ಯ, ಸಮೃದ್ಧಿ ತರಲಿ
ಇದನ್ನೂ ಓದಿ: 2025ರ ಶುಭಾಶಯಗಳು: ಇಂಥ ನೂರಾರು ಹೊಸ ವರ್ಷ ನಿನ್ನ ಬಾಳಲ್ಲಿ ಬರಲಿ, ಹೊಸ ವರ್ಷಕ್ಕೆ ನಿಮ್ಮ ಪ್ರೀತಿಯ ಸಹೋದರಿಗೆ ಈ ರೀತಿ ಶುಭ ಕೋರಿ
- ನಮ್ಮ ಜೀವನಕ್ಕೆ ನೀವು ಮಾಡಿದ ತ್ಯಾಗ, ನಮಗಾಗಿ ನೀವು ಪಟ್ಟ ಕಷ್ಟ ಈ ವರ್ಷವೇ ಕೊನೆಯಾಗಲಿ, 2025 ಹೊಸ ವರ್ಷ ನಿಮ್ಮ ಬದುಕಲ್ಲಿ ಹೊಸ ಹರ್ಷ ತರಲಿ ಪ್ರೀತಿಯ ಅಪ್ಪ-ಅಮ್ಮನಿಗೆ ಹೊಸ ವರ್ಷದ ಶುಭ ಹಾರೈಕೆಗಳು.
- ಅಮ್ಮನ ವಾತ್ಸಲ್ಯ, ಅಪ್ಪನ ಅಪರಿಮಿತ ಪ್ರೀತಿಯೇ ನಮಗೆ ಎಂದೆಂದಿಗೂ ಶ್ರೀರಕ್ಷೆ, ನಿಮ್ಮ ಆಶೀರ್ವಾದ, ಪ್ರೋತ್ಸಾಹ, ಬೆಂಬಲ ಎಂದಿಗೂ ನನ್ನ ಜೊತೆಯಾಗಿರಲಿ, ಹೊಸ ವರ್ಷದ ಶುಭ ಹಾರೈಕೆಗಳು ಮೈ ಡಿಯರ್ ಅಪ್ಪ ಅಮ್ಮ.
- ನೀವು ಪಟ್ಟ ಕಷ್ಟ, ನೋವು ಇಂದಿಗೇ ಕೊನೆಯಾಗಲಿ, ಮುಂಬರುವ ವರ್ಷಗಳು ನಮ್ಮೆಲ್ಲರ ಜೀವನದಲ್ಲಿ ಸಂತೋಷ ತರಲಿ, ನಿಮ್ಮ ನಗುವಲ್ಲಿ ನನ್ನ ನಗುವಿದೆ, 2025 ಎಲ್ಲರಿಗೂ ಒಳ್ಳೆಯದಾಗಲಿ, ನಿಮ್ಮ ಆರೋಗ್ಯ ಸುಧಾರಿಸಲಿ. ಹ್ಯಾಪಿ ನ್ಯೂ ಇಯರ್.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.