New Year 2025: ಹೊಸ ವರ್ಷಕ್ಕೆ ಫಿಟ್ನೆಸ್‌ನತ್ತ ಗಮನಹರಿಸಲು ಬಯಸುವಿರಾ; ಹೃದಯದ ಆರೋಗ್ಯಕ್ಕೆ ಈ 5 ವ್ಯಾಯಾಮ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year 2025: ಹೊಸ ವರ್ಷಕ್ಕೆ ಫಿಟ್ನೆಸ್‌ನತ್ತ ಗಮನಹರಿಸಲು ಬಯಸುವಿರಾ; ಹೃದಯದ ಆರೋಗ್ಯಕ್ಕೆ ಈ 5 ವ್ಯಾಯಾಮ ಮಾಡಿ

New Year 2025: ಹೊಸ ವರ್ಷಕ್ಕೆ ಫಿಟ್ನೆಸ್‌ನತ್ತ ಗಮನಹರಿಸಲು ಬಯಸುವಿರಾ; ಹೃದಯದ ಆರೋಗ್ಯಕ್ಕೆ ಈ 5 ವ್ಯಾಯಾಮ ಮಾಡಿ

ಹೊಸ ವರ್ಷ2025ಸ್ವಾಗತಿಸಲು ಸಜ್ಜಾಗಿದ್ದೀರಾ?ಹೊಸ ವರ್ಷದಲ್ಲಿ ಫಿಟ್‌ನೆಸ್‌ನತ್ತ ಹೆಚ್ಚು ಗಮನಹರಿಸಲು ಬಯಸುವಿರಾ? ಹೊಸ ವ್ಯಾಯಾಮಗಳನ್ನು ಮಾಡಲು ಬಯಸುವವರು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲು ಕಾರ್ಡಿಯೋ ವ್ಯಾಯಾಮವನ್ನು ಪ್ರಾರಂಭಿಸುವುದು ಉತ್ತಮ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

New Year 2025: ಹೊಸ ವರ್ಷಕ್ಕೆ ಫಿಟ್ನೆಸ್‌ನತ್ತ ಗಮನಹರಿಸಲು ಬಯಸುವಿರಾ; ಹೃದಯದ ಆರೋಗ್ಯಕ್ಕೆ ಈ 5 ವ್ಯಾಯಾಮ ಮಾಡಿ
New Year 2025: ಹೊಸ ವರ್ಷಕ್ಕೆ ಫಿಟ್ನೆಸ್‌ನತ್ತ ಗಮನಹರಿಸಲು ಬಯಸುವಿರಾ; ಹೃದಯದ ಆರೋಗ್ಯಕ್ಕೆ ಈ 5 ವ್ಯಾಯಾಮ ಮಾಡಿ (PC: Canva)

2024 ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ. ಹೊಸವರ್ಷದ ಆಗಮನಕ್ಕೆ ಹಲವರು ಎದುರು ನೋಡುತ್ತಿರಬಹುದು. 2024ರಲ್ಲಿ ಸೋಮಾರಿಯಂತಿದ್ದು, 2025ರಲ್ಲಿ ಹುರುಪಿನಿಂದ ಫಿಟ್ನೆಸ್‍ನತ್ತ ಕಾಳಜಿ ವಹಿಸಬೇಕು ಎಂಬ ಬಗ್ಗೆ ಹಲವರು ಯೋಚಿಸುತ್ತಿರಬಹುದು. ಹೊಸ ವ್ಯಾಯಾಮಗಳನ್ನು ಮಾಡಲು ಬಯಸುವವರು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲು ಕಾರ್ಡಿಯೋ ವ್ಯಾಯಾಮವನ್ನು ಪ್ರಾರಂಭಿಸುವುದು ಉತ್ತಮ.

ನಾವು ಮಾಡುವ ವ್ಯಾಯಾಮದಿಂದ ರಕ್ತ ಸಂಚಾರ ವೇಗವಾಗುತ್ತದೆ. ಹೃದಯವು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ಮೊದಲು ಹೃದಯದ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದು ಉತ್ತಮ. ನೀವು ಇದೇ ಉತ್ಸಾಹವನ್ನು ಹೊಂದಿದ್ದರೆ ತಜ್ಞರು ನೀಡಿರುವ ಈ ಸಲಹೆಗಳನ್ನು ಅನುಸರಿಸಿ.

ಹೊಸ ವರ್ಷಕ್ಕೆ ಹೀಗಿರಲಿ ನಿಮ್ಮ ಫಿಟ್ನೆಸ್ ಗುರಿ

ಸಕ್ರಿಯರಾಗಿರಿ: ಉತ್ತಮ ಹೃದಯದ ಆರೋಗ್ಯಕ್ಕಾಗಿ, ದೈಹಿಕವಾಗಿ ಕ್ರಿಯಾಶೀಲರಾಗಿರುವುದು ಬಹಳ ಮುಖ್ಯ. ವಿವಿಧ ವ್ಯಾಯಾಮಗಳು ಅಥವಾ ದೈಹಿಕ ಚಟುವಟಿಕೆಗಳಿಗಾಗಿ ದೈನಂದಿನ ದಿನಚರಿಯ ಕನಿಷ್ಠ 30 ರಿಂದ 40 ನಿಮಿಷಗಳನ್ನು ಮೀಸಲಿಡಿ. ವಾಕಿಂಗ್, ಓಟ, ಯೋಗ, ಧ್ಯಾನ ಅಥವಾ ಈಜು ಮುಂತಾದ ವ್ಯಾಯಾಮಗಳನ್ನು ಮಾಡಬಹುದು. ಇದು ಹೃದಯಕ್ಕೆ ರಕ್ತದ ಹರಿವನ್ನು ಸುಧಾರಿಸಲು ಮತ್ತು ಹೃದಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸಮತೋಲಿತ ಆಹಾರ ಸೇವಿಸಿ: ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದರತ್ತ ಗಮನ ಹರಿಸಿ. ತರಕಾರಿ, ಹಣ್ಣು, ಧಾನ್ಯ ಮತ್ತು ನೇರ ಪ್ರೋಟೀನ್‌ಗಳನ್ನು ಸೇವಿಸುವುದು ಬಹಳ ಮುಖ್ಯ. ಈ ಆಹಾರಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಏಕೆಂದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಸಂಸ್ಕರಿತ ಆಹಾರವನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ.

ಧೂಮಪಾನ ಅಥವಾ ಮದ್ಯಪಾನ ದೂರವಿಡಿ: ಧೂಮಪಾನ ಅಥವಾ ಮದ್ಯಪಾನದಂತಹ ಅಭ್ಯಾಸಗಳು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆದು. ಇದು ರಕ್ತನಾಳಗಳನ್ನು ಗಂಭೀರವಾಗಿ ಹಾನಿಗೊಳಿಸಬಹುದು. ಈ ಅಭ್ಯಾಸಗಳು ವಿವಿಧ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಅತಿಯಾದ ಮದ್ಯಪಾನವು ರಕ್ತದೊತ್ತಡದ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಹೃದಯದ ಆರೋಗ್ಯಕ್ಕೆ ಇವೆರಡನ್ನೂ ದೂರವಿಡುವುದು ಉತ್ತಮ.

ಒತ್ತಡವನ್ನು ಕಡಿಮೆ ಮಾಡಿ: ನೀವು ಎದುರಿಸುವ ಒತ್ತಡವು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾದ ಒತ್ತಡದ ವ್ಯಾಯಾಮವು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕಾಲಾನಂತರದಲ್ಲಿ ನಿಮ್ಮ ಹೃದಯಕ್ಕೆ ಹಾನಿಕಾರಕವಾಗಬಹುದು. ನಿಮ್ಮ ಒತ್ತಡದ ಮಟ್ಟವನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಿ. ಉಸಿರಾಟದ ವ್ಯಾಯಾಮ ಮಾಡುವುದರಿಂದ ಒತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಆರೋಗ್ಯ ತಪಾಸಣೆ: ಹೃದಯದ ಆರೋಗ್ಯವನ್ನು ನಿರ್ಲಕ್ಷಿಸದೆ ಆಗಾಗ ಆರೋಗ್ಯ ತಪಾಸಣೆಗಳನ್ನು ಮಾಡುತ್ತಿರಿ. ಇದು ಬಹಳ ಮುಖ್ಯ, ವಿಶೇಷವಾಗಿ ಹೃದಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಗಂಭೀರ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಸಂಪೂರ್ಣವಾಗಿ ಉತ್ತಮವಾಗಿದ್ದೀರಿ ಎಂದು ಭಾವಿಸಿದರೂ ಸಹ ಆಗಾಗ ಆರೋಗ್ಯ ತಪಾಸಣೆಗಳನ್ನು ಪಡೆಯಿರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner