ಹೊಸ ವರ್ಷದ ಪ್ರವಾಸಕ್ಕೆ ಹೇಳಿ ಮಾಡಿಸಿದ ಭಾರತದ ಪ್ರಸಿದ್ಧ ತಾಣಗಳಿವು; ಈ ನ್ಯೂ ಇಯರ್‌ಗೆ ಪ್ಲಾನ್ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ವರ್ಷದ ಪ್ರವಾಸಕ್ಕೆ ಹೇಳಿ ಮಾಡಿಸಿದ ಭಾರತದ ಪ್ರಸಿದ್ಧ ತಾಣಗಳಿವು; ಈ ನ್ಯೂ ಇಯರ್‌ಗೆ ಪ್ಲಾನ್ ಮಾಡಿ

ಹೊಸ ವರ್ಷದ ಪ್ರವಾಸಕ್ಕೆ ಹೇಳಿ ಮಾಡಿಸಿದ ಭಾರತದ ಪ್ರಸಿದ್ಧ ತಾಣಗಳಿವು; ಈ ನ್ಯೂ ಇಯರ್‌ಗೆ ಪ್ಲಾನ್ ಮಾಡಿ

2024 ಅಂತ್ಯವಾಗಿ 2025ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸಾಮಾನ್ಯವಾಗಿ ಹೊಸ ವರ್ಷದ ಸಂದರ್ಭದಲ್ಲಿ ಪ್ರವಾಸ ಆಯೋಜಿಸುತ್ತಾರೆ. ಇಯರ್‌ ಎಂಡ್ ಎಂಜಾಯ್ ಮಾಡುತ್ತಾ, ಹೊಸ ವರ್ಷವನ್ನು ಸ್ವಾಗತಿಸುವ ಖುಷಿಯೇ ಬೇರೆ. ಈ ವರ್ಷ ನೀವು ಪ್ರವಾಸ ಮಾಡುವ ಯೋಚನೆ ಇದ್ದರೆ ಭಾರತದ ಈ ತಾಣಗಳನ್ನು ಗಮನಿಸಿ.

ಹೊಸ ವರ್ಷ 2025
ಹೊಸ ವರ್ಷ 2025 (PC: Canva)

ಹೊಸ ವರ್ಷ ಬಂದೇ ಬಿಟ್ಟಿದೆ. ವರ್ಷಾಂತ್ಯದಲ್ಲಿ ಸಾಮಾನ್ಯವಾಗಿ ಬಹುತೇಕರು ಪ್ರವಾಸ ಆಯೋಜಿಸುತ್ತಾರೆ. ನೀವು ಪ್ರವಾಸಪ್ರೇಮಿಯಾಗಿದ್ದು, ಈ ಹೊಸ ವರ್ಷವನ್ನು ಸುಂದರ ಪ್ರವಾಸಿ ತಾಣಗಳಲ್ಲಿ ನಿಮ್ಮ ಹೊಸ ವರ್ಷ ಬೆಳಗನ್ನು ಆರಂಭಿಸಬೇಕು ಎಂದರೆ ನೀವು ವಿದೇಶಗಳಿಗೆ ಹೋಗಬೇಕು ಅಂದೇನಿಲ್ಲ.

ಭಾರತದಲ್ಲಿ ಹೊಸ ವರ್ಷದ ಪ್ರವಾಸಕ್ಕೆ ಹೇಳಿ ಮಾಡಿಸಿದ ಅದ್ಭುತ ತಾಣಗಳಿವೆ. ಈ ತಾಣಗಳಿಗೆ ನೀವು ಟ್ರಿಪ್ ಪ್ಲಾನ್ ಮಾಡಿದ್ರೆ ವರ್ಷಾಂತ್ಯವನ್ನು ಎಂಜಾಯ್ ಮಾಡುವ ಜೊತೆಗೆ ಹೊಸ ವರ್ಷದ ಸೊಬಗನ್ನೂ ಸವಿಯಬಹುದು. ಅಂತಹ ತಾಣಗಳು ಯಾವುದು ನೋಡಿ, ಈಗಲೇ ನಿಮ್ಮ ಟಿಕೆಟ್ ಬುಕ್ ಮಾಡಿ.

ಗೋವಾ

ಹೊಸ ವರ್ಷದ ಆಚರಣೆಗೆ ಗೋವಾಕ್ಕಿಂತ ಬೆಸ್ಟ್ ಜಾಗ ಇನ್ನೊಂದಿಲ್ಲ. ಗೋವಾವು ನಿಮಗೆ ವಿದೇಶದ ವೈಬ್ ಕೊಡುವುದು ಸುಳ್ಳಲ್ಲ. ಇಲ್ಲಿನ ಕಡಲತೀರಗಳು ಹೊಸ ವರ್ಷವನ್ನು ಸ್ವಾಗತಿಸಲು ಅದ್ಧೂರಿಯಾಗಿ ಸಿಂಗಾರಗೊಂಡಿರುತ್ತವೆ. ಪಾರ್ಟಿ, ಲೈವ್ ಮ್ಯೂಸಿಕ್, ಆಕಾಶದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಗೋವಾದಲ್ಲಿ ನಿಮಗೆ ಹೊಸ ವರ್ಷವನ್ನು ಅದ್ಭುತವಾಗಿ ಸ್ವಾಗತಿಸಲು ಬೆಸ್ಟ್ ಕ್ಷಣಗಳಾಗಿರುತ್ತವೆ.

ಉದಯ್‌ಪುರ

ರಾಜಸ್ಥಾನದ ಉದಯ್‌ಪುರ ಕೂಡ ಹೊಸ ವರ್ಷವನ್ನು ಆಚರಿಸಲು ಅತ್ಯುತ್ತಮ ತಾಣವಾಗಿದೆ. ಸರೋವರಗಳ ನಗರ ಎಂದೇ ಕರೆಸಿಕೊಳ್ಳುವ ಉದಯ್‌ಪುರದಲ್ಲಿ ಇಯರ್‌ಎಂಡ್‌ ಜೊತೆಗೆ ಹೊಸ ವರ್ಷವನ್ನೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ‌

ಮನಾಲಿ

ಚಳಿಗಾಲದಲ್ಲಿ ಮನಾಲಿ ಪ್ರವಾಸ ನಿಮಗೆ ಜೀವನದ ಅದ್ಭುತ ಕ್ಷಣಗಳನ್ನು ಎದುರುಗೊಳ್ಳುವಂತೆ ಮಾಡುವುದು ಸುಳ್ಳಲ್ಲ. ಅದರಲ್ಲಿ ವರ್ಷಾಂತ್ಯ ಹಾಗೂ ಹೊಸ ವರ್ಷದ ಪ್ರವಾಸಕ್ಕೆ ಈ ತಾಣ ಹೇಳಿಸಿ ಮಾಡಿಸಿದ್ದು. ಇಲ್ಲಿನ ಸುಂದರ ಬೆಟ್ಟ ಗುಡ್ಡಗಳು, ಮಂಜಿನ ವಾತಾವರಣದ ಮನಾಲಿಯ ಪ್ರಾಕೃತಿಕ ಸೊಬಗಿನಲ್ಲಿ ಹೊಸ ವರ್ಷ ಆಚರಿಸುವುದು ನಿಜಕ್ಕೂ ಅದ್ಭತ ಅನುಭವ ನೀಡುತ್ತದೆ.

ಮೆಕ್ಲಿಯೋಡ್‌ಗಂಜ್

ಹಿಮಾಚಲ ಪ್ರದೇಶದಲ್ಲಿರುವ ಈ ತಾಣವು ಹೊಸ ವರ್ಷವನ್ನು ಆಚರಿಸಲು ಹೇಳಿ ಮಾಡಿಸಿದ್ದು. ಇಲ್ಲಿನ ಸುಂದರ ಭೂದೃಶ್ಯಗಳು ನಿಮ್ಮ ಕಣ್ಮನ ಸೆಳೆಯುತ್ತವೆ. ಮೆಕ್ಲಿಯೋಡ್‌ಗಂಜ್ ವರ್ಷವು ಅಂತ್ಯಗೊಂಡಾಗ ಟಿಬೆಟಿಯನ್ ಸಂಪ್ರದಾಯಗಳು ಮತ್ತು ಜಾಗತಿಕ ಆಚರಣೆಗಳೊಂದಿಗೆ ಝೇಂಕರಿಸುತ್ತದೆ. ಇಲ್ಲಿ ಇಯರ್‌ ಎಂಡ್ ಹಾಗೂ ವರ್ಷಾಂತ್ಯವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.

ದೆಹಲಿ

ಹೊಸ ವರ್ಷಾಚರಣೆಯ ಸೊಬಗು ಸವಿಯಲು ರಾಷ್ಟ್ರ ರಾಜಧಾನಿ ದೆಹಲಿಗೂ ಭೇಟಿ ನೀಡಬಹುದು. ಹೊಸ ವರ್ಷವನ್ನು ಸ್ವಾಗತಿಸಲು ಹಾಗೂ ಹಳೆ ವರ್ಷಕ್ಕೆ ಗುಡ್‌ಬಾಯ್ ಹೇಳಲು ಇಲ್ಲಿನ ಹೋಟೆಲ್‌, ಪಬ್‌, ಕ್ಲಬ್‌ಗಳು ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಐಕಾನಿಕ್ ಇಂಡಿಯಾ ಗೇಟ್ ಮತ್ತು ಐತಿಹಾಸಿಕ ಹೆಗ್ಗುರುತುಗಳು ವರ್ಣರಂಜಿತ ದೀಪಗಳಿಂದ ಮಿನುಗುತ್ತವೆ. ಇದರೊಂದಿಗೆ ಇಲ್ಲಿನ ಬೀದಿ ಬದಿಯ ಆಹಾರದ ಸೊಬಗನ್ನೂ ನೀವು ಸವಿಯಬಹುದು.

ಬೆಂಗಳೂರು

ನೀವು ಕರ್ನಾಟಕದ ಬಿಟ್ಟು ಹೊರಗಡೆ ಹೋಗಲು ಮನಸ್ಸು ಮಾಡುವುದಿಲ್ಲ ಎಂದರೆ ಹೊಸ ವರ್ಷಾಚರಣೆಗೆ ಬೆಂಗಳೂರಿಗಿಂತ ಉತ್ತಮ ತಾಣವಿಲ್ಲ. ಇಲ್ಲಿನ ಎಂಜಿರೋಡ್‌, ಬ್ರಿಗೇಡ್‌ ರೋಡ್‌, ಇಂದಿರಾನಗರ, ಕೋರಮಂಗಲ ಮುಂತಾದ ಕಡೆ ಹೊಸ ವರ್ಷದ ದಿನಗಳು ಹಾಗೂ ವರ್ಷಾಂತ್ಯವು ಹೊಸ ವೈಬ್ ಸೃಷ್ಟಿಸುವುದು ಸುಳ್ಳಲ್ಲ. ಈ ಸಮಯದಲ್ಲಿ ನಗರದ ಬೀದಿಗಳು ವಿದ್ಯುದೀಪಗಳಿಂದ ಅಲಂಕೃತವಾಗಿರುವುದನ್ನು ಕಾಣಬಹುದು.

ಕೊಲ್ಕತ್ತಾ

ಸಿಟಿ ಆಫ್ ಜಾಯ್ ಎಂದೇ ಕರೆಸಿಕೊಳ್ಳುವ ಕೊಲ್ಕತ್ತಾ ಕೂಡ ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಹೊಸ ವರ್ಷದ ಸಂದರ್ಭ ಇಲ್ಲಿನ ಬೀದಿ ಬೀದಿಗಳನ್ನು ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಇದರೊಂದಿಗೆ ಕೊಲ್ಕತ್ತಾ ಆಹಾರಗಳ ರುಚಿಯನ್ನೂ ನೀವು ಸವಿದು, ಇಲ್ಲಿನ ಹೊಸ ವರ್ಷದ ಸಂದರ್ಭಕ್ಕೆ ಸಾಕ್ಷಿಯಾಗಬಹುದು.

ಅಂಡಮಾನ್, ನಿಕೋಬಾರ್

ಹೊಸ ವರ್ಷಾಚರಣೆಯನ್ನು ಭಿನ್ನವಾಗಿ ಆಚರಿಸುವ ಆಸೆಯಿದ್ದರೆ ನೀವು ಅಂಡಮಾನ್‌ ನಿಕೋಬಾರ್‌ಗೆ ಭೇಟಿ ನೀಡಬಹುದು. ಅಲ್ಲಿನ ಸುಂದರ ಕಡಲತೀರಗಳಲ್ಲಿ ಆಚರಣೆ ಸೂಪರ್ ಆಗಿರುತ್ತೆ. ಹೊಸ ವರ್ಷದ ಪ್ರವಾಸ ಪ್ಲಾನ್ ಇದ್ದರೆ ನಿಮ್ಮ ಲಿಸ್ಟ್‌ಗೆ ಅಂಡಮಾನ್ ನಿಕೋಬರ್‌ಗೆ ಮೊದಲ ಸ್ಥಾನವಿರಲಿ.

Whats_app_banner