Long Weekends: 2025ರ ಲಾಂಗ್ ವೀಕೆಂಡ್‌ಗಳ ಪಟ್ಟಿ ಇಲ್ಲಿದೆ, ಪ್ರವಾಸ ಹೋಗ್ಬೇಕು ಅನ್ನೋರು ಗಮನಿಸಿ, ಈಗಲೇ ಪ್ಲಾನ್ ಮಾಡಿ
ಹೊಸ ವರ್ಷ ಆರಂಭವಾಗಿ ಎರಡು ದಿನಗಳು ಕಳೆದಿವೆ. 2025ರಲ್ಲಿ ಸಾಕಷ್ಟು ಟ್ರಿಪ್ ಮಾಡಬೇಕು ಅಂತ ನೀವು ಯೋಚ್ನೆ ಮಾಡಿದ್ರೆ ಈ ಸ್ಟೋರಿ ಓದಲೇಬೇಕು. ಇದರಲ್ಲಿ 2025ರ ಲಾಂಗ್ ವೀಕೆಂಡ್‌ಗಳ ಪಟ್ಟಿಯನ್ನು ನೀಡಲಾಗಿದೆ. ಸರಿಯಾಗಿ ಪ್ಲಾನ್ ಮಾಡಿದ್ರೆ ಖಂಡಿತ ನೀವು ಹಲವು ಬಾರಿ ಪ್ರವಾಸ ಹೋಗಿ ಬರಬಹುದು.
ಪ್ರತಿ ಬಾರಿಯೂ ಹೊಸ ವರ್ಷ ಬಂದಾಗ ಈ ವರ್ಷ ಯಾವೆಲ್ಲಾ ದಿನ ರಜೆಗಳಿವೆ ಅಂತ ಕ್ಯಾಲೆಂಡರ್ ಮೇಲೆ ಕಣ್ಣು ಹಾಯಿಸೋದು ಸಹಜ. ಕ್ಯಾಲೆಂಡರ್‌ನಲ್ಲಿ ಕೆಂಪು ಬಣ್ಣದ ರಜಾ ದಿನಗಳು ಕಂಡರೆ ಮನಸ್ಸಿಗೆ ಏನೋ ಖುಷಿ. ಅದರಲ್ಲೂ ಲಾಂಗ್ ವೀಕೇಂಡ್‌ಗಳು ಬಂದ್ರಂತೂ ಅದರ ಖುಷಿಯೇ ಬೇರೆ. ಈ ದಿನಗಳಲ್ಲಿ ಸ್ನೇಹಿತರು, ಕುಟುಂಬದವರ ಜೊತೆ ಸೇರಿ ಎಂಜಾಯ್ ಮಾಡಬಹುದು.
3,4 ದಿನಗಳು ಒಟ್ಟಿಗೆ ರಜೆ ಸಿಕ್ಕರೆ ಟ್ರಿಪ್ ಮಾಡೋಕೆ ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು ಅಲ್ವಾ? 2025ರಲ್ಲಿ ಬರುವ ಲಾಂಗ್ ವೀಕೆಂಡ್‌ಗಳ ಪಟ್ಟಿ ಇಲ್ಲಿದೆ. ನೀವು ಈ ವರ್ಷ ಸಖತ್ ಆಗೇ ಟ್ರಿಪ್ ಮಾಡ್ಬೇಕು ಅಂತ ಅಂದುಕೊಳ್ತಾ ಇದ್ರೆ ಈ ಪಟ್ಟಿ ಒಮ್ಮೆ ಗಮನಿಸಿ. ಈಗಲೇ ಸ್ನೇಹಿತರ ಜೊತೆ ಅಥವಾ ಕುಟುಂಬದವರ ಜೊತೆ ಮಾತಾನಾಡಿ ಟ್ರಿಪ್ ಪ್ಲಾನ್ ಸಿದ್ಧ ಮಾಡಿ. 2024ರಲ್ಲಿ ನೀವು ನೋಡಬೇಕು ಅಂದುಕೊಂಡಿದ್ದು, ಹೋಗಲು ಸಾಧ್ಯವಾಗದ ಜಾಗಗಳಿಗೆಲ್ಲಾ ಈ ವರ್ಷ ಹೋಗಿ ಬಂದು ಬಿಡಿ.
2025ರ ಲಾಂಗ್ ವೀಕೆಂಡ್‌ಗಳು
- ಜನವರಿಯಲ್ಲಿ 11 ತಾರೀಕಿನಿಂದ ಲಾಂಗ್ ವೀಕೆಂಡ್ ಪ್ರಾರಂಭವಾಗುತ್ತದೆ. ಅಂದರೆ ಜನವರಿ 11, 12 ಶನಿವಾರ ಮತ್ತು ಭಾನುವಾರ. ಜನವರಿ 13ಕ್ಕೆ ನೀವು ರಜೆ ಹಾಕಿಕೊಂಡರೆ ಜನವರಿ 14 ಮಕರ ಸಂಕ್ರಾಂತಿ ಕಾರಣ ರಜೆ ಇರುತ್ತದೆ. ಈ ರಜೆ ಸೇರಿ ಒಟ್ಟು 4 ದಿನಗಳ ರಜೆ ಆಗುತ್ತದೆ. ಈ ಲಾಂಗ್ ವೀಕೆಂಡ್ ಇನ್ನು ಹೆಚ್ಚು ಸಮಯ ಇಲ್ಲ. ಈಗಲೇ ಪ್ಲಾನ್ ಮಾಡಿ.
ಇದನ್ನೂ ಓದಿ: ಗಣರಾಜ್ಯೋತ್ಸವ ಭಾಷಣ 2025: ವಿದ್ಯಾರ್ಥಿಗಳಿಗಾಗಿ ಜನವರಿ 26ರ ರಿಪಬ್ಲಿಕ್ ಡೇ ಮಾದರಿ ಭಾಷಣ ಇಲ್ಲಿದೆ ನೋಡಿ - ಫ್ರೆಬುವರಿಯಲ್ಲಿ ಯಾವುದೇ ಲಾಂಗ್ ವೀಕೆಂಡ್ ಇಲ್ಲ
- ಮಾರ್ಚ್‌ನಲ್ಲಿ ಸಾಕಷ್ಟು ರಜಾದಿನಗಳಿವೆ. ಮಾರ್ಚ್ 14 ಹೋಳಿ ಹಬ್ಬ. ಇದು ಶುಕ್ರವಾರ ಬರುತ್ತದೆ. ಮಾರ್ಚ್ 15, 16 ಶನಿವಾರ, ಭಾನುವಾರ. ಇದರಿಂದ ನಿಮಗೆ 3 ದಿನ ಒಟ್ಟಿಗೆ ರಜೆ ಸಿಗುತ್ತದೆ. ಈ ಸಮಯದಲ್ಲಿ ಒಂದು ದಿನ ಎಕ್ಸ್ಟ್ರಾ ರಜೆ ತೆಗೆದುಕೊಂಡರೆ ನಾಲ್ಕು ದಿನ ರಜೆ ಎಂಜಾಯ್ ಮಾಡಬಹುದು. ಹಾಗೆ ಮಾರ್ಚ್ 29 ಹಾಗೂ 30 ಶನಿವಾರ, ಭಾನುವಾರ. ಮಾರ್ಚ್ 31 ಸೋಮವಾರ ಈದ್ ಇಲ್ ಫಿತ್ರ್. ಈ ಸಮಯದಲ್ಲೂ 3 ದಿನ ಒಟ್ಟಿಗೆ ರಜೆ ಬರುತ್ತದೆ.
- ಏಪ್ರಿಲ್‌ನಲ್ಲೂ ಕೂಡ 2 ಲಾಂಗ್ ವೀಕೆಂಡ್‌ಗಳಿವೆ. ಮೊದಲನೆಯದು ಏಪ್ರಿಲ್ 10 ಗುರುವಾರದಂದು ಮಹಾವೀರ್ ಜಯಂತಿ. ಏಪ್ರಿಲ್ 11 ಶುಕ್ರವಾರದಂದು ರಜೆ ತೆಗೆದುಕೊಂಡರೆ ಏಪ್ರಿಲ್ 12, 13 ಶನಿವಾರ, ಭಾನುವಾರ. ಇದರಿಂದ 4 ದಿನಗಳ ಲಾಂಗ್ ವೀಕೆಂಡ್ ಆಗುತ್ತದೆ. ಏಪ್ರಿಲ್ 18 ಶುಕ್ರವಾರ ಗುಡ್ ಫ್ರೈಡೆ, ಏಪ್ರಿಲ್ 19, 20 ಶನಿವಾರ, ಭಾನುವಾರ. ಇದು ಏಪ್ರಿಲ್‌ನಲ್ಲಿ ಬರುವ ಎರಡನೇ ಲಾಂಗ್ ವೀಕೆಂಡ್.
- ಮೇ ತಿಂಗಳಲ್ಲಿ ಒಂದು ಬಾರಿ ಲಾಂಗ್ ವೀಕೆಂಡ್ ಬರುತ್ತದೆ. ಮೇ 10 ಹಾಗೂ 11 ಶನಿವಾರ, ಭಾನುವಾರ. ಮೇ 12 ಬುದ್ಧ ಪೂರ್ಣಿಮಾ. ಆ ದಿನ ಸರ್ಕಾರಿ ರಜೆ ಇರುತ್ತದೆ.
ಇದನ್ನೂ ಓದಿ: New Year 2025: ಹೊಸ ವರ್ಷದಂದು ಪೋಷಕರು ಮಕ್ಕಳಿಗೆ ನೀಡಲೇಬೇಕಾದ 5 ಭರವಸೆಗಳಿವು; ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತೆ - ಆಗಸ್ಟ್‌ನಲ್ಲೂ ಲಾಂಗ್ ವೀಕೆಂಡ್ ಬರುತ್ತದೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣ, ಈ ಬಾರಿ ಆಗಸ್ಟ್ 15 ಶುಕ್ರವಾರ ಬಂದಿದೆ. ಆಗಸ್ಟ್ 16 ಶನಿವಾರ ಕೃಷ್ಣಜನ್ಮಾಷ್ಟಮಿ. ಆಗಸ್ಟ್ 17 ಭಾನುವಾರ. ಈ ಸಮಯದಲ್ಲಿ ನೀವು ಸರಿಯಾಗಿ ಪ್ಲಾನ್ ಮಾಡಿದ್ರೆ ಖಂಡಿತ ಬೆಸ್ಟ್ ಟ್ರಿಪ್ ಪ್ಲಾನ್ ಮಾಡಬಹುದು.
- ಸೆಪ್ಟೆಂಬರ್ 5 ಶುಕ್ರವಾರದಂದು ಈದ್-ಎ-ಮಿಲಾದ್ ಹಾಗೂ ಓಣಂ ಇದೆ. ಸೆಪ್ಟೆಂಬರ್ 6 ಶನಿವಾರ, ಸೆಪ್ಟೆಂಬರ್ 7 ಭಾನುವಾರ. ಈ ಮೂರು ದಿನಗಳು ಒಟ್ಟಿಗೆ ಸೇರಿ ಲಾಂಗ್ ವೀಕೆಂಡ್ ಆಗುತ್ತವೆ.
- ಅಕ್ಟೋಬರ್‌ನಲ್ಲಿ ಲಾಂಗ್ ವೀಕೆಂಡ್‌ಗಳ ಸಂಖ್ಯೆ ಹೆಚ್ಚಿದೆ. ಅಕ್ಟೋಬರ್ 1 ಮಹಾನವಮಿ, ಇದು ಬುಧವಾರ ಬರುತ್ತದೆ. ಅಕ್ಟೋಬರ್ 2 ಗಾಂಧಿ ಜಯಂತಿ ಗುರುವಾರ. ಅಕ್ಟೋಬರ್ 3 ಶುಕ್ರವಾರ ನೀವು ರಜೆ ತೆಗೆದುಕೊಂಡರೆ ಅಕ್ಟೋಬರ್ 4 ಹಾಗೂ 5 ಶನಿವಾರ ಬರುತ್ತದೆ. ಈ ಸಮಯದಲ್ಲಿ ನೀವು 5 ದಿನಗಳ ಕಾಲ ಟ್ರಿಪ್ ಪ್ಲಾನ್ ಮಾಡಬಹುದು. ಇದೇ ತಿಂಗಳು 18, 19, 20 ದೀಪಾವಳಿ ವಾರಾಂತ್ಯ, ಇದು ಶನಿವಾರ ಭಾನುವಾರ ಸೋಮವಾರ ಬರುತ್ತದೆ.
- ಡಿಸೆಂಬರ್ ಕ್ರಿಸ್‌ಮಸ್ ಸಮಯದಲ್ಲೂ ಈ ಬಾರಿ ಲಾಂಗ್ ವೀಕೆಂಡ್ ಬರುತ್ತದೆ. 2024ರಲ್ಲಿ ಇಯರ್ ಎಂಡ್ ಟ್ರಿಪ್ ಹೋಗೋಕೆ ಆಗಿಲ್ಲ ಬೇಸರ ಮಾಡುತ್ತಿರುವವರು ಮುಂದಿನ ವರ್ಷ ಪ್ಲಾನ್ ಮಾಡಿ. 2025ರಲ್ಲಿ ಕ್ರಿಸ್ಮಸ್ ಗುರುವಾರ ಬರುತ್ತದೆ. ಶುಕ್ರವಾರ ಡಿಸೆಂಬರ್ 26ಕ್ಕೆ ರಜೆ ಹಾಕಿದರೆ ಡಿಸೆಂಬರ್ 27 ಹಾಗೂ 28 ಶನಿವಾರ ಬರುತ್ತದೆ. ಈ ಸಮಯದಲ್ಲಿ ಒಂದೆರಡು ಎಕ್ಸ್ಟ್ರಾ ರಜೆ ಹಾಕಿದ್ರೆ ನೀವು ಐದಾರು ದಿನಗಳ ಲಾಂಗ್ ಟ್ರಿಪ್ ಪ್ಲಾನ್ ಮಾಡಬಹುದು.
ಇದನ್ನೂ ಓದಿ: Generation Beta: 2025ರಿಂದ ಹೊಸ ಜಮಾನ; ಜನರೇಷನ್ ಬೀಟಾಕ್ಕೆ ಸ್ವಾಗತ, ಆಲ್ಫಾಕ್ಕೆ ಗುಡ್‌ಬೈ; ಏನಿದು ಬೀಟಾ ಜನರೇಷನ್
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope