New Year 2025: ಹೊಸ ವರ್ಷಕ್ಕೆ ತೆಗೆದುಕೊಳ್ಳಬಹುದಾದ 50 ರೆಸಲ್ಯೂಷನ್ ಐಡಿಯಾಗಳು, ನಿಮ್ಮ ಸಂಕಲ್ಪ ಏನು?
New year resolutions 2025: 2025ನೇ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷ ಬಂದಾಗ ಎಲ್ಲರೂ ಒಂದಿಷ್ಟು ನಿರ್ಣಯಗಳನ್ನು ಮಾಡುತ್ತಾರೆ. ಆ ಮೂಲಕ ಮುಂದಿನ ವರ್ಷವನ್ನು ಸಂತೋಷವಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹೊಸ ವರ್ಷಕ್ಕೆ ತೆಗೆದುಕೊಳ್ಳಬಹುದಾದ ಬೆಸ್ಟ್ ನಿರ್ಣಯಗಳ ಪಟ್ಟಿ ಇಲ್ಲಿದೆ, ನಿಮ್ಮ ರೆಸಲ್ಯೂಷನ್ ಏನು?
New year resolutions 2025: ಹೊಸ ವರ್ಷವನ್ನು ಹೊಸ ನಿರೀಕ್ಷೆಯಿಂದ ಸ್ವಾಗತಿಸುವುದು ವಾಡಿಕೆ. ಹೊಸ ವರ್ಷ ಬರುತ್ತಿದೆ ಎಂದಾಗ ನಾವು ಮುಂದಿನ ವರ್ಷಕ್ಕಾಗಿ ಒಂದಿಷ್ಟು ನಿರ್ಣಯಗಳನ್ನು ಮಾಡುತ್ತೇವೆ. ಈ ವರ್ಷ ಮಾಡಲು ಸಾಧ್ಯವಾಗದ್ದನ್ನು ಮುಂದಿನ ವರ್ಷದಲ್ಲಿ ಮಾಡಬೇಕು ಎನ್ನುವ ಸಂಕಲ್ಪದ ಜೊತೆಗೆ ಹೊಸದಾಗಿ ಇನ್ನೊಂದಿಷ್ಟು ರೆಸಲ್ಯೂಷನ್‌ಗಳನ್ನು ಸೇರಿಸಿಕೊಳ್ಳುತ್ತೇವೆ.
ಕೆಲವರಿಗೆ ಹೊಸ ವರ್ಷಕ್ಕೆ ಏನಪ್ಪಾ ರೆಸಲ್ಯೂಷನ್ ತೆಗೆದುಕೊಳ್ಳಲಿ, ನನ್ನಿಂದಾಗುವ ನಿರ್ಣಯ ಅಥವಾ ಸಂಕಲ್ಪಗಳು ಯಾವುವು ಎಂಬ ಗೊಂದಲವಿರುತ್ತದೆ. ಅಂಥವರಿಗಾಗಿ 50 ನ್ಯೂ ಇಯರ್ ರೆಸಲ್ಯೂಷನ್ ಐಡಿಯಾಗಳನ್ನು ಇಲ್ಲಿ ನೀಡಿದ್ದೇವೆ. ಇದು ನಾವು ಸಾಧಿಸಲು ಅಥವಾ ಅನುಸರಿಸಲು ಸಾಧ್ಯವಾಗುವಂತಹ ನಿರ್ಣಯಗಳು. ನೀವು ಈ ಪಟ್ಟಿಯನ್ನೊಮ್ಮೆ ಗಮನಿಸಿ. ಇದರಲ್ಲಿ ನಿಮಗೆ ಸೂಕ್ತವಾದದ್ದನ್ನು ಆಯ್ದುಕೊಂಡು 2025ರಲ್ಲಿ ಇದನ್ನು ಸಾಧಿಸುವ ಗುರಿ ಇರಿಸಿಕೊಳ್ಳಿ, ಆ ಮೂಲಕ ಹೊಸ ವರ್ಷವನ್ನು ಆನಂದದಿಂದ ಸ್ವಾಗತಿಸಿ.
ಹೊಸ ವರ್ಷಕ್ಕೆ ಮಾಡಬಹುದಾದ ಸಂಕಲ್ಪಗಳ ಪಟ್ಟಿ
1. ಡೈರಿ ಬರೆಯುವ ಅಭ್ಯಾಸ. ಹೊಸ ವರ್ಷದಿಂದ ಡೈರಿ ಬರೆಯಲು ಶುರು ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ. ನಿಮ್ಮ ನೋವು, ಖುಷಿ, ಸಂತಸದ ಕ್ಷಣಗಳಿಗೆ ಅಕ್ಷರರೂಪ ಕೊಡಲು ಶುರು ಮಾಡಿ.
2. ಕುಟುಂಬದವರಿಗೆ ಸಮಯ ನೀಡುವುದು: ಇತ್ತೀಚಿನ ಬ್ಯುಸಿ ಲೈಫ್‌ನಲ್ಲಿ ನಾವು ಮಾಡದೇ ಇರುವ ಕೆಲಸವಿದು. ಆದರೆ ಇದು ಅತ್ಯಮೂಲ್ಯ. ಈ ವರ್ಷ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡು ಸಂಕಲ್ಪ ಮಾಡಿ.
3. ಹಣಕಾಸು ನಿರ್ವಹಣೆಯ ಅಭ್ಯಾಸ: ಹಣಕಾಸು ನಿರ್ವಹಣೆ ಪ್ರತಿಯೊಬ್ಬರು ಬದುಕಿಗೂ ಅವಶ್ಯ. ಹಣಕಾಸಿನ ನಿರ್ವಹಣೆಯಲ್ಲಿ ಸೋತರೆ ಬದುಕಿನಲ್ಲಿ ಸೋತಂತೆ, ಹಾಗಾಗಿ 2025ರಲ್ಲಿ ಆಯ–ವ್ಯಯಗಳ ಲೆಕ್ಕಾಚಾರದ ಹಾಗೂ ಉಳಿತಾಯದ ಮೇಲೆ ಗಮನ ಹರಿಸುವ ನಿರ್ಣಯ ಮಾಡಿ.
4. ಸಂತೋಷದಿಂದ ಇರುವುದು: ಬದುಕಿನಲ್ಲಿ ನೋವು, ದುಃಖ, ಬೇಸರ ಎಲ್ಲವೂ ಸಹಜ. ಆದರೆ ಅದು ತಾತ್ಕಾಲಿಕ. ಹಾಗಾಗಿ ಎಲ್ಲ ಕ್ಷಣದಲ್ಲೂ ಖುಷಿಯಿಂದಲೇ ಇದ್ದು ಬದುಕನ್ನು ಕಳೆಯುವ ಪ್ರಯತ್ನ ಮಾಡಿ.
5. ಹೊಸ ಅಡುಗೆ ಕಲಿಯುವುದು
6. ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳುವುದು
7. ಮನೆ ಹಾಗೂ ವೈಯಕ್ತಿಕ ಸ್ವಚ್ಛತೆಗೆ ಗಮನ ಕೊಡುವುದು ಹಾಗೂ ಅದಕ್ಕಾಗಿ ದಿನ ಮೀಸಲಿರಿಸುವುದು
8. ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳಿಗೆ ಗುಡ್‌ಬೈ ಹೇಳುವುದು
9. ಸಮರ್ಪಕ ನಿದ್ದೆಗೆ ಪ್ರಾಮುಖ್ಯ ನೀಡುವುದು
10. ಸ್ವಯಂ ಸೇವಾ ಸಂಘಗಳಿಗೆ ಸೇರುವುದು
11. ಗಾರ್ಡನಿಂಗ್ ಮಾಡುವುದು
12. ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಆರೋಗ್ಯದ ತಪಾಸಣೆ ಮಾಡಿಸುವುದು ಹಾಗೂ ಆರೋಗ್ಯ ರಕ್ಷಣೆಯ ಮೇಲೆ ಗಮನ ಹರಿಸುವುದು
13. ಮೆದುಳಿಗೆ ಕೆಲಸ ಕೊಡುವುದು
14. ಲಿಫ್ಟ್ ಬಳಸದೇ ಮೆಟ್ಟಲನ್ನೇ ಬಳಸುತ್ತೇನೆ ಎಂಬ ಶಪಥ. ಇದು ಆರೋಗ್ಯಕ್ಕೂ ಮುಖ್ಯ
15. ಯೋಗ, ಧ್ಯಾನ, ವ್ಯಾಯಾಮಕ್ಕೆ ಆದ್ಯತೆ ಕೊಡುವುದು
16. ರಜಾದಿನಗಳಲ್ಲಿ ಟ್ರಿಪ್‌ಗೆ ಹೋಗುವುದು
17. ವಾರಕ್ಕೆ 2 ರಿಂದ 3 ಸಿನಿಮಾ ನೋಡುವುದು
18. ಸಂಗಾತಿಯೊಂದಿಗೆ ಸಮಯ ಕಳೆಯುವ ಸಂಕಲ್ಪ. ಇದು ನಿಮ್ಮ ಬಂಧವನ್ನು ಗಟ್ಟಿಯಾಗಿಸುತ್ತದೆ
19. ಮನುಷ್ಯ ಆರೋಗ್ಯಕ್ಕೆ ಅತಿ ಅಗತ್ಯವಾಗಿರುವ ನೀರು ಕುಡಿಯುವುದು. ಹೆಚ್ಚು ಹೆಚ್ಚು ನೀರು ನಿರ್ಣಯ ಕೂಡ ಮಾಡಬಹುದು.
20. ಸ್ನೇಹಿತರ ಜೊತೆ ಕಾಲ ಕಳೆಯುವುದು
21. ಹೊಸ ಕೆಲಸಕ್ಕೆ ಸೇರುವುದು
22. ಧನಾತ್ಮಕವಾಗಿರುವುದು
23. ಜಿಮ್ ಸೇರಿ ದೇಹ ಫಿಟ್ ಆಗಿ ಇರಿಸಿಕೊಳ್ಳುವುದು
24. ತೂಕ ಇಳಿಕೆ, ಇದು ಇಂದಿನ ಜಮಾನಕ್ಕೆ ಬಹಳ ಅನಿವಾರ್ಯ.
25. ಸ್ಟೈಲಿಶ್ ಆಗಿ ಕಾಣಿಸುವ ಸಂಕಲ್ಪ.
26. ಹೊಸ ಕೌಶಲಗಳನ್ನು ಕಲಿಯುವುದು
27. ಮನೆಯವರ ಜೊತೆ ಎಂಜಾಯ್ ಮಾಡುವುದು, ಇದಕ್ಕಾಗಿ ಮನೆಯನ್ನ ಸೆಟ್‌ಅಪ್ ಮಾಡುವುದು.
28. ಕೆಟ್ಟ ಆಲೋಚನೆಗಳಿಂದ ದೂರ ಇರುವುದು
29. ಮನೆಯಲ್ಲಿರುವ ಅನಗತ್ಯ ವಸ್ತುಗಳನ್ನು ಹೊರ ಹಾಕಿ ಮನೆಯ ಅಂದ ಹೆಚ್ಚಿಸುವುದು
30. ಅಡುಗೆಮನೆಯನ್ನು ಜೋಡಿಸುವುದು
31. ವಾರ್ಡ್‌ರೋಬ್‌ನಲ್ಲಿರುವ ಹಳೆ ಬಟ್ಟೆಗಳನ್ನ ಹೊರ ಹಾಕಿ ಹೊಸತನ್ನು ಜೋಡಿಸುವುದು
32. ಹೊಸ ಹೊಸ ಹವ್ಯಾಸಗಳನ್ನು ಕಲಿಯುವುದು
33. ನಿಮಗೊಂದು ಹೊಸ ರೂಪ ಕೊಟ್ಟುಕೊಳ್ಳುವುದು.
34. ಚರ್ಮದ ಕಾಳಜಿಗೆ ಒಂದಿಷ್ಟು ಹಣ ವ್ಯಯಿಸುವುದು
35. ಪ್ರವಾಸಕ್ಕೆ ಹೋಗುವುದು
36. ಪ್ರತಿದಿನ ತಪ್ಪದೇ ವಾಕಿಂಗ್ ಮಾಡುವುದು
37. ಪ್ರತಿದಿನ ಬೆಳಗೆದ್ದು ಧ್ಯಾನ ಮಾಡುವುದು
38. ರಾತ್ರಿ ಸರಿಯಾದ ಸಮಯಕ್ಕೆ ಮಲಗುವುದು
39. ಟಾಕ್ಸಿಕ್ ಸ್ನೇಹಿತರಿಂದ ದೂರ ಉಳಿಯುವುದು
40. ಕ್ಷಣ ಕ್ಷಣ ಸುದ್ದಿಗಳಿಗೆ ಅಪ್‌ಡೇಟ್ ಆಗುವುದು, ನ್ಯೂಸ್ ಪೇಪರ್, ನ್ಯೂಸ್ ವೆಬ್‌ಸೈಟ್ ಓದುವ ಹವ್ಯಾಸ ರೂಢಿಸಿಕೊಳ್ಳುವುದು
41. ಮೊಬೈಲ್ ಫೋನ್ ಬಳಕೆಗೆ ಕಡಿವಾಣ ಹಾಕುವುದು.
42. ಸ್ಕ್ರೀನ್ ಟೈಮ್ ಮಿತಗೊಳಿಸುವುದು. ಅಂದ್ರೆ ಮೊಬೈಲ್, ಟಿವಿ ಕಡಿಮೆ ನೋಡುವುದು.
43. ಪೋಷಕರಿಗೆ ಸಮಯ ಕೊಡುವುದು
44. ಒತ್ತಡ ಮುಕ್ತವಾಗುವ ಕೆಲಸಗಳನ್ನು ಮಾಡುವುದು
45. ತಿಂಗಳಿಗೊಂದು ಪುಸ್ತಕ ಓದುವುದು
46. ಹೊಸ ಭಾಷೆ ಕಲಿಯುವುದು
47. ಪ್ರತಿದಿನ ಕೃತಜ್ಞತಾ ಭಾವ ರೂಢಿಸಿಕೊಳ್ಳುವುದು
48. ತಂತ್ರಜ್ಞಾನ ಜಗತ್ತಿಗೆ ತಕ್ಕಂತೆ ಅಪ್‌ಡೇಟ್ ಆಗುವುದು
49. ಸಾಮಾಜಿಕ ಸೇವೆಗೆ ಗಮನ ಕೊಡುವುದು
50. ವಾರಕ್ಕೊಮ್ಮೆಯಾದ್ರೂ ಸ್ನೇಹಿತರನ್ನು ಭೇಟಿ ಮಾಡುವುದು