New Year 2025 Resolution: ಹೃದಯದ ಆರೋಗ್ಯಕ್ಕೆ ಪಂಚ ಸೂತ್ರಗಳು, ಹೊಸ ವರ್ಷದಲ್ಲಿ ಹೃದಯದ ಕಾಳಜಿ ಮರಿಬೇಡಿ
ಹೊಸ ವರ್ಷ ಬಂದಿದೆ. ಈ ವರ್ಷ ಹಾಗೆ ಇರುತ್ತೇನೆ,ಹೀಗೆ ಇರುತ್ತೇನೆ,ಅದನ್ನು ಮಾಡುತ್ತೇನೆ,ಜಿಮ್ ಹೋಗುತ್ತೇನೆ ಎಂದೆಲ್ಲಾ ಹಲವು ರೀತಿಯ ಸಂಕಲ್ಪಗಳನ್ನು ನೀವು ಮಾಡಿರುತ್ತೀರಿ. ಅದರ ಜತೆಗೇ ನಿಮ್ಮ ಆರೋಗ್ಯ,ಹೃದಯದ ಕುರಿತು ಕೂಡ ತುರ್ತಾಗಿ ಕಾಳಜಿ ವಹಿಸಬೇಕು. ಹೃದಯದ ಆರೋಗ್ಯಕ್ಕೆ ನಾವು ಮಾಡಬೇಕಿರುವುದು ಏನು?ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
![ಹೃದಯದ ಆರೋಗ್ಯಕ್ಕೆ ಪಂಚ ಸೂತ್ರಗಳು, ಹೊಸ ವರ್ಷದಲ್ಲಿ ಹೃದಯದ ಕಾಳಜಿ ಮರಿಬೇಡಿ ಹೃದಯದ ಆರೋಗ್ಯಕ್ಕೆ ಪಂಚ ಸೂತ್ರಗಳು, ಹೊಸ ವರ್ಷದಲ್ಲಿ ಹೃದಯದ ಕಾಳಜಿ ಮರಿಬೇಡಿ](https://images.hindustantimes.com/kannada/img/2024/12/31/550x309/healthy_heart_1735640785624_1735640797987.png)
ಹೃದಯದ ಕುರಿತು ಕಾಳಜಿ ವಹಿಸುತ್ತೇನೆ ಮತ್ತು ಆರೋಗ್ಯಕ್ಕೆ ಪೂರಕವಾದ ಅಭ್ಯಾಸಗಳನ್ನೇ ಕೈಗೊಳ್ಳುತ್ತೇನೆ ಎನ್ನುವುದು ನಿಮ್ಮ ಈ ವರ್ಷದ ಹೊಸ ಸಂಕಲ್ಪವಾಗಿರಲಿ. ಹೃದಯ ಸಂಬಂಧಿ ಕಾಯಿಲೆಗಳಿಂದ 2024ರಲ್ಲಿ ಹೆಚ್ಚಿನ ಯುವಜನತೆ ಅಕಾಲ ಮರಣಕ್ಕೆ ತುತ್ತಾಗಿದ್ದಾರೆ. ಹಾಗಿರುವಾಗ, ಹೃದಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು ಎನ್ನುವ ಈ ಸಮಯದಲ್ಲಿ, ನೀವೇನು ಮಾಡಬಹುದು? ಹೃದಯದ ಆರೈಕೆ ಹೇಗೆ? ಇಲ್ಲಿ ಹೇಳಿರುವ ಕೆಲವೊಂದು ಅಭ್ಯಾಸಗಳನ್ನು ನೀವು ರೂಢಿಸಿಕೊಂಡರೆ, ಆರೋಗ್ಯವಂತ ಹೃದಯ ನಿಮ್ಮದಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡ ನೀವು ದೂರವಿರಿಸಬಹುದು.
ಹೃದಯದ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ಮಾಡಿಕೊಳ್ಳಿ
ಸಮತೋಲಿತ ಆಹಾರ: ಬಹುತೇಕ ಆರೋಗ್ಯ ಸಮಸ್ಯೆಗಳು ಆಹಾರದಿಂದಲೇ ಬರುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿದೆ. ತಿನ್ನುವ ಆಹಾರ ಉತ್ತಮವಾಗಿದ್ದರೆ ಮತ್ತು ಸಮತೋಲನದಿಂದ ಕೂಡಿದ್ದರೆ, ನಮ್ಮ ಹೃದಯದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು. ಅದಕ್ಕಾಗಿ ತಾಜಾ ಹಣ್ಣು, ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನವನ್ನು ತ್ಯಜಿಸಬೇಕು. ಈ ನಿರ್ಧಾರವನ್ನು ಹೊಸ ವರ್ಷದ ಮೊದಲ ದಿನವೇ ಕೈಗೊಳ್ಳಿ ಮತ್ತು ವರ್ಷಪೂರ್ತಿ ಪಾಲಿಸಿ.
ಬೊಜ್ಜಿನ ನಿಯಂತ್ರಣ: ಉತ್ತಮ ಹೃದಯದ ಆರೋಗ್ಯಕ್ಕಾಗಿ ದೇಹತೂಕವನ್ನು ಕಾಪಾಡಿಕೊಳ್ಳಬೇಕು. ವೈದ್ಯರ ಪ್ರಕಾರ ಆರೋಗ್ಯವಂತ ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್, ಅಂದರೆ ಬಿಎಂಐ 18.5 ಮತ್ತು 24.9 ರಷ್ಟು ಇರಬೇಕು. ಅದಕ್ಕಿಂತ ಹೆಚ್ಚು ಇದ್ದರೆ, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಬರಬಹುದು. ಅಧಿಕ ದೇಹತೂಕ, ಬೊಜ್ಜು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಬಿಪಿ ಮತ್ತು ಕೊಲೆಸ್ಟ್ರಾಲ್: ಹೃದಯ ಸಂಬಂಧಿ ಕಾಯಿಲೆಗಳಿಗೆ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ ಇದ್ದರೆ, ಹೃದಯಕ್ಕೆ ಹೆಚ್ಚಿನ ಭಾರ ಬೀಳುತ್ತದೆ. ಹೃದಯಕ್ಕೆ ಒತ್ತಡ ಹೆಚ್ಚಾದರೆ ಹೃದಯಾಘಾತ ಉಂಟಾಗಬಹುದು. ಹೀಗಾಗಿ ಕಾಲಕಾಲಕ್ಕೆ ಬಿಪಿ, ಕೊಲೆಸ್ಟ್ರಾಲ್ ತಪಾಸಣೆ ಮಾಡಿಸುವುದು ಉತ್ತಮ.
ವ್ಯಾಯಾಮಕ್ಕೆ ಸಮಯ ಕೊಡಿ: ಇಂದಿನ ಜೀವನಶೈಲಿ, ಕೆಲಸದ ಒತ್ತಡದ ನಡುವೆ, ವ್ಯಾಯಾಮ, ನಡಿಗೆಗೆ, ಜಿಮ್‌ಗೆ ಸಮಯ ಕೊಡಲು ಜನರಿಗೆ ಸಾಧ್ಯವಾಗುತ್ತಿಲ್ಲ. ಆದರೆ, ದೇಹ, ಹೃದಯದ ಉತ್ತಮ ಆರೋಗ್ಯಕ್ಕೆ ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಅಗತ್ಯ. ಯೋಗ, ಸೈಕ್ಲಿಂಗ್, ಧ್ಯಾನ, ಈಜು ಹೀಗೆ ವಿವಿಧ ರೀತಿಯಲ್ಲಿ ನೀವು ವ್ಯಾಯಾಮ ಮಾಡುವುದರಿಂದ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನಿಯತವಾಗಿ ಆರೋಗ್ಯ ತಪಾಸಣೆ: ಬಹಳಷ್ಟು ಜನರು ಆರೋಗ್ಯ ಕೈಕೊಟ್ಟಾಗಲೇ ಆರೋಗ್ಯ ತಪಾಸಣೆಯ ಮೊರೆ ಹೋಗುತ್ತಾರೆ. ಆದರೆ, ಹಾಗೆ ಮಾಡುವ ಬದಲು ನಿಯತವಾಗಿ ಆರೋಗ್ಯ ತಪಾಸಣೆ, ರಕ್ತದೊತ್ತಡ ಪರೀಕ್ಷೆಗಳನ್ನು ಮಾಡಿಸಿ, ನಿಮ್ಮ ವೈದ್ಯರಲ್ಲಿ ಮೆಡಿಕಲ್ ರಿಪೋರ್ಟ್ ತೋರಿಸಿ, ಅವರ ಸಲಹೆ ಪಡೆಯಿರಿ. ಹೀಗೆ ಮಾಡುವುದರಿಂದ, ನಿಮ್ಮ ಆರೋಗ್ಯದ ಕುರಿತು ನಿಗಾ ವಹಿಸಬಹುದು.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ಇದನ್ನೂ ಓದಿ: ಹೃದಯದ ಆರೋಗ್ಯಕ್ಕಾಗಿ 6 ಸೂಪರ್ ಫುಡ್ಗಳು
![Whats_app_banner Whats_app_banner](https://kannada.hindustantimes.com/static-content/1y/wBanner.png)