Travel Guide: 2025 ರಲ್ಲಿ ಭಾರತ ಸುತ್ತುವ ಪ್ಲಾನ್ ಇದೆಯಾ?ನಿಮಗಾಗಿ ಇಲ್ಲಿದೆ ಉಪಯುಕ್ತ ಮಾಹಿತಿ
Travel Guide: ಪ್ರತಿ ವರ್ಷವೂ ಹಲವರು ಹೊಸ ಹೊಸ ರೆಸಲ್ಯೂಷನ್ ಮಾಡಿಕೊಳ್ಳುತ್ತಾರೆ. ಒಂದು ವೇಳೆ ನೀವು 2025ರಲ್ಲಿ ಭಾರತವನ್ನು ಸುತ್ತಿಬರುವ ಪ್ಲಾನ್ ಮಾಡಿಕೊಂಡಲ್ಲಿ ನಿಮಗಾಗಿ ಇಲ್ಲಿ ಕೆಲವೊಂದು ಉಪಯುಕ್ತ ಟಿಪ್ಸ್ ಇವೆ.
2025 ಬಂದೇ ಬಿಡ್ತು, ಇಷ್ಟು ಬೇಗ ಒಂದು ವರ್ಷ ಕಳೆದುಹೋಯ್ತಾ ಎನ್ನಿಸುತ್ತಿದೆ. ಇನ್ನು 2 ದಿನಗಳು ಕಳೆದರೆ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ 1 ರಂದು ವಿಶ್ವಾದ್ಯಂತ ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗುತ್ತಿದೆ. ಪಾರ್ಟಿ, ಮೋಜು, ಮಸ್ತಿಗೆ ಎಲ್ಲಾ ಸಿದ್ಧತೆ ನಡೆದಿದೆ.
ಇನ್ನು ಹೊಸ ವರ್ಷ ಎಂದರೆ ಸಾಮಾನ್ಯವಾಗಿ ಏನಾದರೂ ರೆಸಲ್ಯೂಷನ್ ಇದ್ದೇ ಇರುತ್ತದೆ. ಅಡುಗೆ ಕಲಿಯುವುದು, ಜಿಮ್‌ಗೆ ಹೋಗುವುದು, ಕೋಪ ಕಡಿಮೆ ಮಾಡಿಕೊಳ್ಳುವುದು, ಧೂಮಪಾನ-ಮಧ್ಯಪಾನ ತ್ಯಜಿಸುವುದು, ವೇಗವಾಗಿ ವಾಹನ ಚಾಲನೆ ಮಾಡದೆ ಇರುವುದು, ಹೆಚ್ಚು ಸಿಹಿ ತಿನ್ನದೆ ಇರುವುದು, ಪರೀಕ್ಷೆಯಲ್ಲಿ ಪಾಸಾಗುವುದು ಸೇರಿದಂತೆ ಜನರು ಹೊಸ ಹೊಸ ರೆಸಲ್ಯೂಷನ್‌ಗಳನ್ನು ಮಾಡುತ್ತಾರೆ, ಅದರಲ್ಲಿ ಕೆಲವರು ಯಶಸ್ವಿಯಾದರೆ, ಕೆಲವರು ಪ್ರಯತ್ನ ಕೂಡಾ ಮಾಡುವುದಿಲ್ಲ. ಹಾಗೇ ಮುಂದಿನ ವರ್ಷ ದೇಶ ಸುತ್ತಬೇಕೆಂದು ಕೆಲವರು ಪ್ಲಾನ್ ಮಾಡುತ್ತಾರೆ. ಇಷ್ಟು ದಿನಗಳು ಎಲ್ಲೂ ಹೋಗಲಿಲ್ಲ, ಇನ್ನು ದೇಶವನ್ನು ಸುತ್ತಬೇಕು, ನಮ್ಮ ಭಾರತವನ್ನು ಎಕ್ಸ್‌ಪ್ಲೋರ್ ಮಾಡಬೇಕೆಂದು ಹಲವರಿಗೆ ಆಸೆ ಇರುತ್ತದೆ.
2025ರಲ್ಲಿ ದೇಶ ಸುತ್ತಬೇಕೆಂದು ಪ್ಲಾನ್ ಮಾಡಿದ್ದರೆ ನಿಮಗಾಗಿ ಇಲ್ಲಿದೆ ಟಿಪ್ಸ್
- ಮೊದಲಿಗೆ ನೀವು ಯಾವ ರಾಜ್ಯವನ್ನು ಎಕ್ಸ್‌ಪ್ಲೋರ್ ಮಾಡಬೇಕೆಂದುಕೊಂಡಿದ್ದೀರಿ ಅದನ್ನು ನಿರ್ಧರಿಸಿ, ಪದೇ ಪದೆ ನಿಮ್ಮ ಪ್ಲಾನ್ ಬದಲಿಸುವುದು ನಿಮ್ಮ ಇಡೀ ಟ್ರಾವೆಲ್ ಮೂಡ್ ಹಾಳು ಮಾಡಬಹುದು.
- ನೀವು ನಿರ್ಧರಿಸಿದಂತ ರಾಜ್ಯಕ್ಕೆ ಯಾವ ಸಮಯದಲ್ಲಿ ಹೋಗುವುದು ಸೂಕ್ತ ಎಂಬುದನ್ನು ತಿಳಿದುಕೊಳ್ಳಿ, ಉದಾಹರಣೆಗೆ ನೀವು ಕಾಶ್ಮೀರ, ಹಿಮಾಚಲ ಪ್ರದೇಶದಂಥ ಸ್ಥಳಗಳಿಗೆ ಹೋಗಬೇಕೆನಿಸಿದರೆ ಅಲ್ಲಿನ ಸ್ನೋ ಫಾಲ್ ನೋಡಲು ನೀವು ನವೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಹೋಗಿ ಬರಬೇಕು. ಮೈಸೂರು ದಸರಾ ನೋಡಬೇಕೆಂದರೆ ಅಕ್ಟೋಬರ್‌ನಲ್ಲಿ ಯೋಜನೆ ಹಾಕಿಕೊಳ್ಳಬೇಕು.
- ನೀವು ಸೋಲೋ ಟ್ರಿಪ್ ಹೋಗಲು ಬಯಸುತ್ತಿದ್ದೀರ ಅಥವಾ, ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ನಿಮ್ಮೊಂದಿಗೆ ಬರಲಿದ್ದಾರಾ? ಎಷ್ಟು ಜನ ಬರಲಿದ್ದಾರೆ ಎಂಬುದನ್ನು ನಿರ್ಧರಿಸಿ.
- ನೀವು ಹೇಗೆ ಟ್ರಾವೆಲ್ ಮಾಡಬೇಕೆಂದುಕೊಂಡಿದ್ದೀರಿ ಎಂಬುದನ್ನು ಪ್ಲಾನ್ ಮಾಡಿ, ಉದಾಹರಣೆಗೆ ನಿಮ್ಮ ಸ್ವಂತ ವಾಹನ, ಬಸ್, ರೈಲು ಅಥವಾ ವಿಮಾನ ಯಾವುದರಲ್ಲಿ ನೀವು ಟ್ರಾವೆಲ್ ಮಾಡಬೇಕೆಂದುಕೊಂಡಿದ್ದೀರ ಎಂಬುದನ್ನು ಮೊದಲೇ ನಿರ್ಧರಿಸಿ. ಅದಕ್ಕೆ ತಕ್ಕಂತೆ ನಿಮ್ಮ ಬಜೆಟ್ ಹೊಂದಿಸಿಕೊಳ್ಳಿ. ಸ್ವಂತ ವಾಹನವಾದರೆ ಹೊರಡುವ ಮುನ್ನ ತಪಾಸಣೆ ಮಾಡಿಸಿ ಒಳ್ಳೆ ಕಂಡಿಷನ್‌ನಲ್ಲಿ ಇದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ.
- ವಿಮಾನ, ರೈಲು ಅಥವಾ ಬಸ್ ಆದರೆ ಕೆಲವು ದಿನಗಳ ಮುಂಚೆಯೇ ಟಿಕೆಟ್‌ಗಳನ್ನು ಬುಕ್ ಮಾಡಿ, ನಿಮ್ಮ ಆಧಾರ್, ಎಟಿಎಂ, ಹಣ, ಡಿಎಲ್, ಟಿಕೆಟ್ ಸೇರಿದಂತೆ ಅಗತ್ಯ ದಾಖಲೆಗಳು ಎಲ್ಲವನ್ನೂ ಒಂದು ಕಡೆ ತೆಗೆದಿಟ್ಟುಕೊಳ್ಳಿ.
- ನೀವು ಹೋಗುತ್ತಿರುವ ರಾಜ್ಯಗಳ ಬಗ್ಗೆ ಮೊದಲೇ ತಿಳಿದುಕೊಳ್ಳಿ, ಅಲ್ಲಿ ವಾತಾವರಣ ಹೇಗಿದೆ ಎಂಬುದು ನಿಮಗೆ ಮೊದಲೇ ಗೊತ್ತಿದ್ದರೆ ಮಕ್ಕಳು, ವಯಸ್ಸಾದವರನ್ನು ಕರೆದೊಯ್ಯುವಾಗ ನಿಮಗೆ ಪ್ಲಾನ್ ಮಾಡಲು ಸಹಾಯವಾಗಬಹುದು.
- ನೀವು ಹೋಗುವ ಸ್ಥಳಗಳ ಆಹಾರ ಪದ್ಧತಿಯನ್ನು ತಿಳಿದುಕೊಳ್ಳಿ, ಅಲ್ಲಿನ ಆಹಾರ ನಿಮಗೆ ಹೊಂದುವುದಿಲ್ಲವಾದರೆ ನಿಮಗೆ ಹೊಂದುವಂತಹ ಸ್ನಾಕ್ಸ್, ರೆಡಿ ಟು ಈಟ್ ಪದಾರ್ಥಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.
- ಅನಾವಶ್ಯಕವಾಗಿ ಹೆಚ್ಚು ಲಗ್ಗೇಜ್ ಕೊಂಡೊಯ್ಯಬೇಡಿ, ತೀರಾ ಅಗತ್ಯವಿರುವುದನ್ನು ಮೊದಲೇ ಪಟ್ಟಿ ಮಾಡಿ ಎಲ್ಲವನ್ನೂ ನಿಮ್ಮ ಸೂಟ್‌ಕೇಸ್‌ನಲ್ಲಿ ಸಿದ್ಧಮಾಡಿ ಇಟ್ಟುಕೊಳ್ಳಿ. ಹೊರಡುವ ದಿನ ಗಡಿಬಿಡಿ ಮಾಡಿಕೊಳ್ಳಬೇಡಿ.
ಇದನ್ನೂ ಓದಿ: ಟ್ರಾವೆಲ್ ಬ್ಯಾಗ್‌ನಲ್ಲಿ ಎಲ್ಲಾ ವಸ್ತುಗಳನ್ನು ಇಡೋಕೆ ಜಾಗ ಆಗ್ತಿಲ್ವಾ? ನಾವು ಹೇಳಿದಂತೆ ಅರೇಂಜ್ ಮಾಡಿದ್ರೆ ಎಲ್ಲವೂ ಸುಲಭ
- ನೀವು ಉಳಿದುಕೊಳ್ಳುವ ಹೋಟೆಲ್‌ಗಳ ಬಗ್ಗೆ ಆನ್‌ಲೈನ್‌ನಲ್ಲಿ ಮೊದಲೇ ವಿಚಾರಿಸಿಕೊಂಡು ಬುಕ್ ಮಾಡಿಕೊಳ್ಳಿ, ಏನೂ ಪ್ಲಾನ್ ಇಲ್ಲದೆ ಹೋಗಿ ಅಲ್ಲಿ ರೂಮ್ ಸಿಗದೆ ಕಷ್ಟ ತಂದುಕೊಳ್ಳಬೇಡಿ.
- ಒಂದು ವೇಳೆ ನೀವು ಸ್ವಂತ ವಾಹನ ಚಲಾಯಿಸಿಕೊಂಡು ಹೋಗುವುದಾದರೆ ಪ್ರತಿಗಂಟೆಗೊಮ್ಮೆ 15 ನಿಮಿಷ ಬ್ರೇಕ್ ತೆಗೆದುಕೊಳ್ಳಿ, ಗಾಡಿಯಿಂದ ಇಳಿದು ಅದೇ ಸ್ಥಳದಲ್ಲಿ ವಾಕ್ ಮಾಡಿ, ನಿಮ್ಮೊಂದಿಗೆ ವಾಹನ ಚಾಲನೆ ಮಾಡಲು ಬರುವವರೊಂದಿಗೆ ರೈಡಿಂಗ್ ಹಂಚಿಕೊಳ್ಳಿ. ಆದಷ್ಟು ರಾತ್ರಿ ಟ್ರಾವೆಲ್ ಮಾಡುವುದನ್ನು ತಪ್ಪಿಸಿ.
- ವಯಸ್ಸಾದವರು, ಮಕ್ಕಳು ನಿಮ್ಮೊಂದಿಗೆ ಬರುತ್ತಿದ್ದರೆ ಅವರಿಗೆ ಅಗ್ಯವಿರುವ ಸ್ವೆಟರ್, ಅವರ ಮೆಡಿಸನ್‌ಗಳು, ಡಾಕ್ಟರ್ ಪ್ರಿಸ್ಕಪ್ಷನ್, ಫಸ್ಟ್ ಏಡ್ ಬಾಕ್ಸ್‌ನ್ನು ಜೊತೆಗೆ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.
- ಯಾವುದೇ ರಾಜ್ಯವಾಗಲೀ ನೀವು ಅಲ್ಲಿರುವ ಎಲ್ಲಾ ಸ್ಥಳಗಳನ್ನು ಒಮ್ಮೆಲೇ ನೋಡಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಅಲ್ಲಿನ ಪ್ರಮುಖ ಸ್ಥಳಗಳ ಬಗ್ಗೆ ನಿಮಗೆ ಮೊದಲೇ ಮಾಹಿತಿ ಇರಲಿ. ನೋಡಲೇಬೇಕಾದಂಥ ಸ್ಥಳಗಳಿಗೆ ವಿಸಿಟ್ ಮಾಡಿ ಬನ್ನಿ.
- ಸಾಧ್ಯವಾದರೆ, ನಿಮ್ಮ ಬಜೆಟ್‌ಗೆ ಹೊಂದಾಣಿಕೆ ಆದರೆ ಗೈಡ್ ಸಹಾಯ ಪಡೆಯಬಹುದು, ಅಥವಾ ನಿಮಗೆ ಆ ರಾಜ್ಯದಲ್ಲಿ ಯಾರಾದರೂ ಸ್ನೇಹಿತರಿದ್ದರೆ ಅವರಿಗೇ ಮೊದಲೇ ಮಾಹಿತಿ ನೀಡಿ ಸಹಾಯ ಪಡೆದುಕೊಳ್ಳಿ.
ಇದನ್ನೂ ಓದಿ: ಸೋಲೋ ಟ್ರಾವೆಲ್ ಮಾಡುವ ಮಹಿಳೆಯರಿಗೆ ಗುಡ್ ನ್ಯೂಸ್; ನಿಮಗಾಗಿ ಕೇರಳದಲ್ಲಿ ರೂಪುಗೊಳ್ಳುತ್ತಿದೆ She ತಾಣಗಳು
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope