2025 ರಲ್ಲಿ ಸಿಂಗಪೂರ್‌, ಮಾಲ್ಡೀವ್ಸ್‌, ಮಲೇಷ್ಯಾ ಸೇರಿದಂತೆ ವಿದೇಶ ಸುತ್ತಬೇಕು ಅನ್ನೋ ಆಸೆ ಇದ್ಯಾ? ಇಲ್ಲಿದೆ ಟಿಪ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  2025 ರಲ್ಲಿ ಸಿಂಗಪೂರ್‌, ಮಾಲ್ಡೀವ್ಸ್‌, ಮಲೇಷ್ಯಾ ಸೇರಿದಂತೆ ವಿದೇಶ ಸುತ್ತಬೇಕು ಅನ್ನೋ ಆಸೆ ಇದ್ಯಾ? ಇಲ್ಲಿದೆ ಟಿಪ್ಸ್‌

2025 ರಲ್ಲಿ ಸಿಂಗಪೂರ್‌, ಮಾಲ್ಡೀವ್ಸ್‌, ಮಲೇಷ್ಯಾ ಸೇರಿದಂತೆ ವಿದೇಶ ಸುತ್ತಬೇಕು ಅನ್ನೋ ಆಸೆ ಇದ್ಯಾ? ಇಲ್ಲಿದೆ ಟಿಪ್ಸ್‌

Foreign Trip: ಹೊಸ ವರ್ಷ ಬರುತ್ತಿದ್ದಂತೆ ಜನರು ಹೊಸ ಹೊಸ ರೆಸಲ್ಯೂಷನ್‌ಗಳನ್ನು ಮಾಡುತ್ತಾರೆ. ಕೆಲವರಿಗೆ ವಿದೇಶ ಸುತ್ತುವ ಪ್ಲ್ಯಾನ್‌ ಇರುತ್ತದೆ. ಒಂದು ವೇಳೆ ನೀವು 2025ರಲ್ಲಿ ಫಾರಿನ್‌ ಟ್ರಿಪ್‌ ಹೋಗುವ ಆಸೆ ಇದ್ದಲ್ಲಿ ನಿಮಗಾಗಿ ಇಲ್ಲಿ ಕೆಲವೊಂದು ಉಪಯುಕ್ತ ಟಿಪ್ಸ್‌ ಇವೆ.

2025ರಲ್ಲಿ ವಿದೇಶ ಸುತ್ತುವ ಪ್ಲ್ಯಾನ್‌ ಇರುವವರಿಗೆ ಟಿಪ್ಸ್‌
2025ರಲ್ಲಿ ವಿದೇಶ ಸುತ್ತುವ ಪ್ಲ್ಯಾನ್‌ ಇರುವವರಿಗೆ ಟಿಪ್ಸ್‌ (PC: Unsplash,‍Freepik)

2025 ಬಂದೇ ಬಿಡ್ತು, ಇಷ್ಟು ಬೇಗ ಒಂದು ವರ್ಷ ಕಳೆದುಹೋಯ್ತಾ ಎನ್ನಿಸುತ್ತಿದೆ. ಇನ್ನು 2 ದಿನಗಳು ಕಳದರೆ ಮತ್ತೊಂದು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಇಂಗ್ಲೀಷ್‌ ಕ್ಯಾಲೆಂಡರ್‌ ಪ್ರಕಾರ ಜನವರಿ 1 ರಂದು ವಿಶ್ವಾದ್ಯಂತ ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗುತ್ತಿದೆ. ಪಾರ್ಟಿ, ಮೋಜು, ಮಸ್ತಿಗೆ ಎಲ್ಲಾ ಸಿದ್ಧತೆ ನಡೆದಿದೆ.

ಇನ್ನು ಹೊಸ ವರ್ಷ ಎಂದರೆ ಸಾಮಾನ್ಯವಾಗಿ ಏನಾದರೂ ರೆಸಲ್ಯೂಷನ್‌ ಇದ್ದೇ ಇರುತ್ತದೆ ಅಡುಗೆ ಕಲಿಯುವುದು, ಜಿಮ್‌ಗೆ ಹೋಗುವುದು, ಕೋಪ ಕಡಿಮೆ ಮಾಡಿಕೊಳ್ಳುವುದು, ಧೂಮಪಾನ-ಮಧ್ಯಪಾನ ತ್ಯಜಿಸುವುದು, ವೇಗವಾಗಿ ವಾಹನ ಚಾಲನೆ ಮಾಡದೆ ಇರುವುದು, ಹೆಚ್ಚು ಸಿಹಿ ತಿನ್ನದೆ ಇರುವುದು ಸೇರಿದಂತೆ ಜನರು ಹೊಸ ಹೊಸ ರೆಸಲ್ಯೂಷನ್‌ಗಳನ್ನು ಮಾಡುತ್ತಾರೆ, ಅದರಲ್ಲಿ ಕೆಲವರು ಯಶಸ್ವಿಯಾಗದರೆ, ಕೆಲವರು ಅದರ ಪ್ರಯತ್ನ ಕೂಡಾ ಮಾಡುವುದಿಲ್ಲ. 

ಹಾಗೇ ಮುಂದಿನ ವರ್ಷ ವಿದೇಶ ಸುತ್ತಬೇಕೆಂದು ಕೆಲವರು ಪ್ಲ್ಯಾನ್‌ ಮಾಡುತ್ತಾರೆ. ದೇಶ ಸುತ್ತು ಕೋಶ ಓದು ಎಂದು ಹಿರಿಯರು ಹೇಳಿದ್ದಾರೆ. ಹೊರ ದೇಶದ ಸಂಸ್ಕೃತಿ, ಆಚಾರ, ವಿಚಾರ, ಆಹಾರ ಪದ್ಧತಿ, ಹವಾಮಾನ ಎಲ್ಲವರನ್ನೂ ಎಕ್ಸ್‌ಪ್ಲೋರ್‌ ಮಾಡಬೇಕು ಎಂದುಕೊಂಡಿದ್ದೀರಾ? 2025ರಲ್ಲಿ ವಿದೇಶ ಸುತ್ತಬೇಕೆಂದು ಪ್ಲ್ಯಾನ್‌ ಮಾಡಿರುವವರಿಗೆ ಇಲ್ಲಿ ಕೆಲವೊಂದು ಟಿಪ್ಸ್‌ ಇವೆ.

  • ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್‌, ವೀಸಾ ಅವಶ್ಯಕತೆ ಇದೆ. ಆದರೆ ಥಾಯ್ಲೆಂಡ್‌, ಭೂತಾನ್‌, ನೇಪಾಳ, ಮಾರಿಷಸ್‌, ಮಲೇಷ್ಯಾ ಸೇರಿದಂತೆ ಕೆಲವೊಂದು ದೇಶಗಳಿಗೆ ಹೋಗಲು ವಿಸಾ ಅವಶ್ಯಕತೆ ಇಲ್ಲ, ಆ ದೇಶಗಳ ಬಗ್ಗೆ ತಿಳಿದುಕೊಳ್ಳಿ.
  • ವೀಸಾ ಫ್ರೀ ದೇಶಗಳನ್ನು ಬಿಟ್ಟು ಬೇರೆ ದೇಶಗಳಿಗೆ ಹೋಗಬೇಕು ಎಂದುಕೊಂಡಿದ್ದರೆ ಮೊದಲು ಪಾಸ್‌ಪೋರ್ಟ್‌ ಮಾಡಿಸಿಕೊಳ್ಳಿ, ವೀಸಾಗೆ ಅಪ್ಲೈ ಮಾಡಿ. ವೀಸಾ ನಿಯಮಗಳನ್ನು ತಿಳಿದುಕೊಳ್ಳಿ.
  • ನಿಮ್ಮ ಬಜೆಟ್‌ಗೆ ಅನುಗುಣವಾಗಿ ಯಾವ ದೇಶಕ್ಕೆ ಹೋಗಬೇಕು, ಅಲ್ಲಿ ಎಷ್ಟು ದಿನಗಳು ಉಳಿಯಬೇಕು, ಎಷ್ಟು ಜನರು ಫಾರಿನ್‌ ಟ್ರಿಪ್‌ ಮಾಡಬೇಕೆಂದುಕೊಂಡಿದ್ದೀರೆಂದು ಮುಂಚೆಯೇ ನಿರ್ಧರಿಸಿ.
  • ವಿದೇಶಕ್ಕೆ ಹೋಗುವ ಮುನ್ನ ಅಲ್ಲಿನ ಸ್ಥಳಗಳ ಬಗ್ಗೆ ಆನ್‌ಲೈನ್‌ನಲ್ಲಿ ಪರಿಚಯ ಮಾಡಿಕೊಳ್ಳಿ, ಮೊದಲೇ ಗೈಡ್‌ ವ್ಯವಸ್ಥೆ ಮಾಡಿಕೊಳ್ಳಿ, ನೀವು ಹೋಗುವ ದೇಶದಲ್ಲಿ ಪರಿಚಯಸ್ಥರು ಇದ್ದರೆ ಅವರಿಗೆ ಮೊದಲೇ ಮಾಹಿತಿ ನೀಡಿ.
  • ಬಜೆಟ್‌ ಹೊಂದಾಣಿಕೆ ಆದಲ್ಲಿ ಫಾರಿನ್‌ ಟೂರ್‌ ಆಯೋಜನೆ ಮಾಡುವ ಟ್ರಾವೆಲ್‌ ಏಜೆನ್ಸಿ ಮೂಲಕ ಹೋಗಿಬನ್ನಿ, ಹಣ ತುಸು ಹೆಚ್ಚು ಎನಿಸಿದರೂ ನಿಮ್ಮನ್ನು ಕರೆದುಕೊಂಡು ಹೋಗಿ, ವಾಪಸ್‌ ಕರೆತರುವ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿರುತ್ತದೆ.
  • ನೀವು ಪ್ರತ್ಯೇಕವಾಗಿ ಹೋಗಬೇಕು ಎಂದಾದರೆ ಆಯಾ ದೇಶದ ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಿ, ಕರೆನ್ಸಿ ವಿನಿಮಯ ಮಾಡಿಕೊಳ್ಳುವುದು ಹೇಗೆ, ಎಲ್ಲಿ ಎಂಬುದರ ಬಗ್ಗೆ ಮೊದಲೇ ಮಾಹಿತಿ ಪಡೆಯಿರಿ.

ಇದನ್ನೂ ಓದಿ: ಹೊಸ ವರ್ಷಕ್ಕೆ ಪ್ರವಾಸ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿವೆ ಪ್ಯಾಕಿಂಗ್‌ ಟಿಪ್ಸ್‌, ಹೀಗಿರಲಿ ನಿಮ್ಮ ಬ್ಯಾಗ್‌

  • ನೀವು ಹೋಗುವ ಸ್ಥಳದಲ್ಲಿ ಭಾರತೀಯ ರೆಸ್ಟೋರೆಂಟ್‌ಗಳು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ವಿದೇಶದಲ್ಲಿ ಹೆಚ್ಚಾಗಿ ಬ್ರೆಡ್‌, ಮಸಾಲೆ ರಹಿತ, ಚೀಸ್‌ ಪದಾರ್ಥಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ, ನಿಮಗೆ ಅದು ರುಚಿಸದೆ ಇರಬಹುದು.
  • ಬಹುತೇಕ ದೇಶಗಳಲ್ಲಿ ಸ್ನೋ ಫಾಲ್‌ ಆಗುವ ವೇಳೆ ಹೊರಗಿನ ಚಟುವಟಿಕೆಗಳು ಹೆಚ್ಚಾಗಿ ಇರುವುದಿಲ್ಲ, ಆದ್ದರಿಂದ ಯಾವ ಸಮಯದಲ್ಲಿ ವಿದೇಶಿ ಟ್ರಿಪ್‌ ಸೂಕ್ತ ಎಂಬುದು ನಿಮಗೆ ಮೊದಲೇ ತಿಳಿದಿರಲಿ.
  • ಕಾನೂನು ನಿಯಮಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ, ಆದ್ದರಿಂದ ನೀವು ಭೇಟಿ ಮಾಡಬೇಕೆಂದುಕೊಂಡಿರುವ ದೇಶದ ರೀತಿ ನೀತಿ ನಿಯಮಗಳು ನಿಮಗೆ ತಿಳಿದಿರಲಿ. ಇಲ್ಲದಿದ್ದರೆ ಅಲ್ಲಿ ಹೋದ ನಂತರ ಸಮಸ್ಯೆ ಆದೀತು.
  • ನಿಮ್ಮ ಡಿಎಲ್‌, ಆಧಾರ್‌ ಕಾರ್ಡ್‌, ಎಟಿಎಂ, ಏರ್‌ ಟಿಕೆಟ್‌ಗಳು, ನಿಮಗೆ ಪ್ರತಿದಿನ ಬಳಸಲು ಬೇಕಾದ ಅಗತ್ಯ ವಸ್ತುಗಳನ್ನು ತಪ್ಪದೆ ಪ್ಯಾಕ್‌ ಮಾಡಿಕೊಳ್ಳಿ.
  • ವಿಮಾನ ನಿಲ್ದಾಣಕ್ಕೆ ಕನಿಷ್ಠ 3 ಗಂಟೆ ಮುನ್ನವೇ ತಲುಪಿ, ಒಂದು ವೇಳೆ ನೀವು ಮೊದಲ ಬಾರಿಗೆ ವಿದೇಶಿ ಟ್ರಿಪ್‌ ಮಾಡುವವರಾಗಿದ್ದರೆ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್‌, ಚೆಕ್‌ ಇನ್‌, ಲಗ್ಗೇಜ್‌ ನಿಮಯಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗುತ್ತದೆ.

ಹೊಸ ವರ್ಷ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಹೊಸ ಅನುಭವಗಳನ್ನು ತರಲಿ.

                                                        ---------

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

 

Whats_app_banner