ಹೊಸ ವರ್ಷಾಚರಣೆಗೆ ಬೆಸ್ಟ್‌ ಜಾಗಗಳಿವು; ವರ್ಷಾಂತ್ಯ ಎಂಜಾಯ್‌ ಮಾಡೋ ಪ್ಲಾನ್‌ ಇದ್ರೆ ನಿಮ್ಮ ಬಕೆಟ್‌ ಲಿಸ್ಟ್‌ಗೆ ಈ ತಾಣಗಳನ್ನ ಸೇರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ವರ್ಷಾಚರಣೆಗೆ ಬೆಸ್ಟ್‌ ಜಾಗಗಳಿವು; ವರ್ಷಾಂತ್ಯ ಎಂಜಾಯ್‌ ಮಾಡೋ ಪ್ಲಾನ್‌ ಇದ್ರೆ ನಿಮ್ಮ ಬಕೆಟ್‌ ಲಿಸ್ಟ್‌ಗೆ ಈ ತಾಣಗಳನ್ನ ಸೇರಿಸಿ

ಹೊಸ ವರ್ಷಾಚರಣೆಗೆ ಬೆಸ್ಟ್‌ ಜಾಗಗಳಿವು; ವರ್ಷಾಂತ್ಯ ಎಂಜಾಯ್‌ ಮಾಡೋ ಪ್ಲಾನ್‌ ಇದ್ರೆ ನಿಮ್ಮ ಬಕೆಟ್‌ ಲಿಸ್ಟ್‌ಗೆ ಈ ತಾಣಗಳನ್ನ ಸೇರಿಸಿ

2023ರ ಡಿಸೆಂಬರ್‌ ತಿಂಗಳು ಕಾಲಿಟ್ಟಿದೆ. ನೋಡ ನೋಡುತ್ತಿದ್ದಂತೆ 2023 ಮುಗಿಯುತ್ತದೆ. ಮನಸ್ಸು ಈಗಾಗಲೇ 2024ರ ಸ್ವಾಗತಕ್ಕೆ ಸಜ್ಜಾಗಿದೆ. ಹೊಸ ವರ್ಷಾಚಾರಣೆಯನ್ನು ಎಂಜಾಯ್‌ ಮಾಡಲು ಕೆಲವು ನಿರ್ದಿಷ್ಟ ಹಾಗೂ ಜನಪ್ರಿಯ ಜಾಗಗಳಿವೆ. ನೀವು ಈ ಬಾರಿ ಹೊಸ ವರ್ಷವನ್ನು ಎಂಜಾಯ್‌ ಮಾಡ್ಬೇಕು ಅಂತಿದ್ರೆ ನಿಮ್ಮ ಬಕೆಟ್‌ಲಿಸ್ಟ್‌ಗೆ ಈ ತಾಣಗಳನ್ನೂ ಸೇರಿಸಿ

ಹೊಸ ವರ್ಷಾಚರಣೆಗೆ ಬೆಸ್ಟ್‌ ಜಾಗಗಳಿವು
ಹೊಸ ವರ್ಷಾಚರಣೆಗೆ ಬೆಸ್ಟ್‌ ಜಾಗಗಳಿವು

ಹೊಸ ವರ್ಷ ಎಂದರೆ ಹುರುಷ. ಹಳೆಯ ದಿನಗಳು ಕಳೆದ ಹೊಸತು ಆರಂಭವಾಗುತ್ತದೆ ಎಂದರೆ ಏನೋ ಉತ್ಸಾಹ. ಹೊಸ ವರ್ಷದ ಆರಂಭವನ್ನು ಸ್ವಾಗತಿಸಲು ಜಗತ್ತು ಸಿದ್ಧವಾಗುತ್ತಿದೆ. ಕೆಲವರು ಹೊಸ ವರ್ಷವನ್ನು ಗೋವಾ, ಊಟಿ, ಪಾಂಡಿಚೇರಿ, ಪಾಂಡಿಚೇರಿಯಂತಹ ಜಾಗಗಳಲ್ಲಿ ಸೆಲೆಬ್ರೆಟ್‌ ಮಾಡಲು ಇಷ್ಟಪಡುತ್ತಾರೆ. ಹೊಸ ವರ್ಷಾಚರಣೆಯ ಸಂಭ್ರಮ ಹೆಚ್ಚಿಸಲೆಂದೇ ಕೆಲವೊಂದು ಜನಪ್ರಿಯ ತಾಣಗಳಿವೆ. ಅಂತಹ ಕೆಲವು ತಾಣಗಳ ಪರಿಚಯ ಇಲ್ಲಿದೆ.

ಗೋವಾ

ಹೊಸ ವರ್ಷದ ಸಂಭ್ರಮಾಚರಣೆಗೆ ಗೋವಾ ಹೇಳಿ ಮಾಡಿಸಿದ ಜಾಗ. ಇಲ್ಲಿ ಮೊದಲೇ ಬುಕ್‌ ಮಾಡಿರದೇ ಇದ್ದರೆ ನಿಮಗೆ ಅವಕಾಶ ಸಿಗುವುದು ಕಷ್ಟ. ಅಲ್ಲದೇ ಹೊಸ ವರ್ಷದ ದಿನಗಳಲ್ಲಿ ಗೋವಾದಲ್ಲಿ ವೆಚ್ಚವೂ ದುಪ್ಪಟ್ಟಾಗುತ್ತದೆ. ಆದರೆ ಇದೆಲ್ಲಕ್ಕೂ ಮೀರಿ ಇಲ್ಲಿ ಹೊಸವರ್ಷದ ಸಮಯದಲ್ಲಿ ಸ್ವರ್ಗವೇ ಸೃಷ್ಟಿಯಾಗಿರುತ್ತದೆ. ಕುಡಿದು ಕುಣಿದು ಎಂಜಾಯ್‌ ಮಾಡಲು ಗೋವಾ ಹೇಳಿ ಮಾಡಿಸಿದ್ದು.

ಊಟಿ

ನೀವು ಶಾಂತ ವಾತಾವರಣದಲ್ಲಿ ಹೊಸವರ್ಷಾಚರಣೆಯನ್ನು ಸ್ವಾಗತಿಸಬೇಕು ಅಂತಿದ್ರೆ ಊಟಿ ಬೆಸ್ಟ್‌ ಜಾಗ. ಮೈಕೊರೆಯುವ ಚಳಿ ನಡುವೆ ಊಟಿ ವಾತಾವರಣವು ಹೊಸ ವರ್ಷವನ್ನು ಎಂಜಾಯ್‌ ಮಾಡಲು ಹೇಳಿ ಮಾಡಿಸಿದ್ದು.

ಪುಷ್ಕರ್‌

ರಾಜಸ್ಥಾನದ ಪುಷ್ಕರ್‌ ಯಾವುದೇ ಸೀಸನ್‌ನಲ್ಲಿ ಭೇಟಿ ನೀಡಿದರೂ ಅದ್ಭುತವಾಗಿರುವ ಸಾಂಸ್ಕೃತಿಕ ಪರಂಪರೆ ಹೊಂದಿರುವ ತಾಣ. ಆದರೆ ಹೊಸ ವರ್ಷಾಚರಣೆಯ ಸಂಭ್ರಮವನ್ನು ಮಾತ್ರ ಇಲ್ಲಿಗೆ ಭೇಟಿ ನೀಡಿಯೇ ಸವಿಯಬೇಕು.

ಗೋಕರ್ಣ

ನೀವು ಕರ್ನಾಟಕದಲ್ಲೇ ನ್ಯೂ ಇಯರ್‌ ನೈಟ್‌ ಎಂಜಾಯ್‌ ಮಾಡ್ಬೇಕು ಅಂತಿದ್ರೆ ಗೋಕರ್ಣ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ವಿಶಾಲವಾಗಿ ಹರಡಿರುವ ಸಮುದ್ರ ತೀರದಲ್ಲಿ ನೀವು ಮನಸೋ ಇಚ್ಛೆ ಎಂಜಾಯ್‌ ಮಾಡಬಹುದು.

ಪಾಂಡಿಚೇರಿ

ನ್ಯೂ ಇಯಲ್‌ ಸಂಭ್ರಮಾಚರಣೆಗೆ ಪಾಂಡಿಚೇರಿ ಹೇಳಿ ಮಾಡಿಸಿದ್ದು. ವಿದೇಶದಂತೆ ಕಾಣುವ ಪಾಂಡಿಚೇರಿ ಬೀದಿಗಳಲ್ಲಿ ಸುತ್ತಾಡುವುದು, ಬೀಜ್‌ನಲ್ಲಿ ಎಂಜಾಯ್‌ ಮಾಡುವ ಮೂಲಕ ಹೊಸ ವರ್ಷವನ್ನು ಎಂಜಾಯ್‌ ಮಾಡಬಹುದು.

ಲಕ್ಷದ್ವೀಪ

ನೀವು ನ್ಯೂ ಇಯರ್‌ ಬಾಶ್‌ಗೆ ರೆಡಿ ಆಗಿದ್ರೆ, ಲಕ್ಷದ್ವೀಪವನ್ನು ಆಯ್ಕೆ ಮಾಡಿಕೊಳ್ಳಬಹುದು. ಈಗಲೇ ಬುಕ್ಕಿಂಗ್‌ ಮಾಡಿ ಇಡುವುದು ಉತ್ತಮ. ಸಮುದ್ರ ತೀರಗಳು, ತಿಳಿನೀಲಿ ಆಕಾಶ, ಬಿಳಿ ಮರಳಿನ ಬೀಚ್‌ ಇವು ನಿಮ್ಮ ಹೊಸ ವರ್ಷದ ಖುಷಿ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

ಮನಾಲಿ

ಚಳಿಗಾಲದಲ್ಲಿ ಅದರಲ್ಲೂ ಹೊಸವರ್ಷಾಚರಣೆಗೆ ಮನಾಲಿ ಹೇಳಿ ಮಾಡಿಸಿದ ಜಾಗ. ಹಿಮದ ಮಂಜಿನ ನಡುವೆ ಹೊಸ ವರ್ಷವನ್ನು ಸ್ವಾಗತಿಸುವ ಸುಖವೇ ಬೇರೆ.

ಬೆಂಗಳೂರು

ಹೊಸ ವರ್ಷದ ನಿಜವಾದ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು ಅಂದ್ರೆ ಡಿಸೆಂಬರ್‌ 31ರ ರಾತ್ರಿ ನೀವು ಎಂಜಿ ರಸ್ತೆಗೆ ಭೇಟಿ ನೀಡಬೇಕು. ಇಲ್ಲಿನ ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಜನಜಾತ್ರೆಯೊಂದಿಗೆ ನೀವು ಹೊಸ ವರ್ಷವನ್ನು ಎಂಜಾಯ್‌ ಮಾಡಬಹುದು.

ಮುಂಬೈ

ಕನಸಿನ ಸಿಟಿ ಎಂದು ಕರೆಸಿಕೊಳ್ಳುವ ಮುಂಬೈನಲ್ಲಿ ಹೊಸವರ್ಷಾಚರಣೆಯ ಸೊಬಗನ್ನು ಸವಿಯಬಹುದು.

ಶಿಲ್ಲಾಂಗ್‌

ಸ್ಕಾಟ್‌ಲ್ಯಾಂಡ್‌ ಆಫ್‌ ಇಂಡಿಯಾ ಎಂದು ಕರೆಸಿಕೊಳ್ಳುವ ಶಿಲ್ಲಾಂಗ್‌ ಕೂಡ ಹೊಸ ವರ್ಷಕ್ಕೆ ಬೆಸ್ಟ್‌ ಪ್ಲೇಸ್‌.

Whats_app_banner