New Year Celebrations 2025: ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಬಯಸುವಿರಾ? ವರ್ಷಾಚರಣೆಗೆ ಭಾರತದ 8 ಬೆಸ್ಟ್‌ ಸ್ಥಳಗಳು ಇಲ್ಲಿವೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year Celebrations 2025: ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಬಯಸುವಿರಾ? ವರ್ಷಾಚರಣೆಗೆ ಭಾರತದ 8 ಬೆಸ್ಟ್‌ ಸ್ಥಳಗಳು ಇಲ್ಲಿವೆ ನೋಡಿ

New Year Celebrations 2025: ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಬಯಸುವಿರಾ? ವರ್ಷಾಚರಣೆಗೆ ಭಾರತದ 8 ಬೆಸ್ಟ್‌ ಸ್ಥಳಗಳು ಇಲ್ಲಿವೆ ನೋಡಿ

New Year Celebrations 2025: ಈ ಬಾರಿ ಹೊಸ ವರ್ಷ ಆಚರಿಸುವ ಕುರಿತು ಈಗಿನಿಂದಲೇ ಸಾಕಷ್ಟು ಜನರು ಪ್ಲ್ಯಾನ್‌ ಆರಂಭಿಸಿರಬಹುದು. ಭಾರತದಲ್ಲಿ ಹೊಸ ವರ್ಷಾಚರಣೆ ಮಾಡಲು ಜನಪ್ರಿಯವಾಗಿರುವ 8 ಅತ್ಯುತ್ತಮ ಸ್ಥಳಗಳ ವಿವರ ಇಲ್ಲಿದೆ ನೋಡಿ.

New Year Celebrations 2025:  ಹೊಸ  ವರ್ಷಾಚರಣೆಗೆ ಭಾರತದ 8 ಬೆಸ್ಟ್‌  ಸ್ಥಳಗಳು (Photo: Pexels)
New Year Celebrations 2025: ಹೊಸ ವರ್ಷಾಚರಣೆಗೆ ಭಾರತದ 8 ಬೆಸ್ಟ್‌ ಸ್ಥಳಗಳು (Photo: Pexels)

New Year Celebrations 2025: ಹೊಸ ವರ್ಷದ ಆಗಮನಕ್ಕೆ ಇನ್ನೊಂದು ತಿಂಗಳು ಮತ್ತು ಮೂರುನಾಲ್ಕು ದಿನ ಉಳಿದಿದೆ ಅಷ್ಟೇ. ಹೊಸ ವರ್ಷಕ್ಕೆ ಎಲ್ಲಾದರೂ ಬೇರೆ ಕಡೆಗೆ ಪ್ರಯಾಣ ಬೆಳೆಸಲು ಬಯಸಿದರೆ ಇದು ಪ್ಲ್ಯಾನ್‌ ಮಾಡಲು ಸರಿಯಾದ ಸಮವಾಗಿದೆ. ಈ ಬಾರಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ, ಬೇರೆ ಯಾವುದಾದರೂ ಸ್ಥಳದಲ್ಲಿ ಆಚರಿಸಬೇಕು ಎಂದುಕೊಂಡವರಿಗೆ ಅನುಕೂಲವಾಗುವಂತೆ ಭಾರತದ ಎಂಟು ಅತ್ಯುತ್ತಮ ಸ್ಥಳಗಳ ವಿವರವನ್ನು ಇಲ್ಲಿ ನೀಡಿದ್ದೇವೆ.

ಗೋವಾ

ಹೊಸ ವರ್ಷದ ಆಚರಣೆಗೆ ಗೋವಾ ಸೂಕ್ತ ಸ್ಥಳವಾಗಿದೆ. ಹೊಸ ವರ್ಷದ ಮುನ್ನಾದಿನದಂದು ಇಲ್ಲಿ ಬೀಚ್ ಪಾರ್ಟಿ ನಡೆಯುತ್ತದೆ. ಗೋವಾ ನೈಟ್‌ಕ್ಲಬ್‌ಗಳು, ನೀರಿನ ಆಟಗಳು, ವಿಭಿನ್ನ ಆಹಾರ, ಪಾರ್ಟಿ ಮಸ್ತಿಯಿಂದ ಇಲ್ಲಿ ಹೊಸ ವರ್ಷದ ಸಂಭ್ರಮ ದೊಡ್ಡಮಟ್ಟದಲ್ಲಿ ಇರುತ್ತದೆ.

ಮನಾಲಿ

ತಂಪಾದ ವಾತಾವರಣ ಮತ್ತು ಹಿಮಭರಿತ ಬೆಟ್ಟಗಳನ್ನು ಇಷ್ಟಪಡುವವರು ಹೊಸ ವರ್ಷವನ್ನು ಆಚರಿಸಲು ಮನಾಲಿಗೆ ಪ್ರಯಾಣ ಬೆಳೆಸಬಹುದು. ಹೊಸ ವರ್ಷದ ಸಂದರ್ಭದಲ್ಲಿ ಇಲ್ಲಿ ಡಿಜೆ ನೈಟ್ ಪಾರ್ಟಿಗಳು ಅದ್ಧೂರಿಯಾಗಿ ನಡೆಯುತ್ತವೆ. ನಿಮಗೆ ಆಸಕ್ತಿ ಇದ್ದರೆ, ನೀವು ಟ್ರೆಕ್ಕಿಂಗ್ ಮಾಡಬಹುದು. ಈ ಸಮಯದಲ್ಲಿ ಹಿಮ ಬೀಳುವ ಸಾಧ್ಯತೆಯೂ ಇದೆ. ಪ್ರಕೃತಿ ಅದ್ಭುತವಾಗಿರುತ್ತದೆ.

ಪಾಂಡಿಚೇರಿ

ಬೀಚ್ ಪ್ರೇಮಿಗಳು ಪಾಂಡಿಚೇರಿಯನ್ನು ಇಷ್ಟಪಡುತ್ತಾರೆ. ಇಲ್ಲಿ ಸಾಕಷ್ಟು ಹೊಸ ವರ್ಷದ ಪಾರ್ಟಿಗಳು ನಡೆಯುತ್ತವೆ. ಕಡಲತೀರಗಳಲ್ಲಿ ಬೈಕಿಂಗ್ ಕೂಡ ಮಾಡಬಹುದು. ಇಲ್ಲಿನ ಕೆಫೆಗಳು ಕೂಡ ಆಕರ್ಷಕವಾಗಿವೆ. ಮೀನಿನ ಖಾದ್ಯಗಳನ್ನು ಇಷ್ಟಪಡುವವರಿಗೆ ಇಲ್ಲಿ ವೈವಿಧ್ಯಮಯ ಆಯ್ಕೆಗಳಿವೆ.. ಪುರಾತನ ಕಟ್ಟಡಗಳೂ ಇವೆ.

ಊಟಿ

ಪ್ರಕೃತಿಯ ಸೊಬಗಿನ ನಡುವೆ ಹೊಸ ವರ್ಷವನ್ನು ಸ್ವಾಗತಿಸಲು ತಮಿಳುನಾಡಿನ ಊಟಿ ಸೂಕ್ತ ಸ್ಥಳವಾಗಿದೆ. ಈ ಗಿರಿಧಾಮದಲ್ಲಿರುವ ಹಸಿರು, ಸರೋವರಗಳು, ಚಹಾ ತೋಟಗಳು ಮತ್ತು ಉದ್ಯಾನಗಳು ಮನಸ್ಸಿಗೆ ಮುದ ನೀಡುತ್ತವೆ. ಈ ಸುಂದರ ನಗರದಲ್ಲಿ ಹೊಸ ವರ್ಷದ ಪಾರ್ಟಿ ಜೋರಾಗಿರುತ್ತದೆ.

ಬೆಂಗಳೂರು

ಹೊರರಾಜ್ಯಗಳಿಗೆ ಹೋಗುವುದೇಕೆ ಕರ್ನಾಟಕದಲ್ಲಿ ಹೊಸ ವರ್ಷಾಚರಣೆ ಮಾಡೋಣ ಎಂದುಕೊಂಡವರಿಗೆ ಕರ್ನಾಟಕದಲ್ಲಿ ಹಲವು ಸ್ಥಳಗಳು ಸೂಕ್ತ ಆಯ್ಕೆಯಾಗಬಲ್ಲದು. ಗೋಕರ್ಣ, ಹಂಪಿ, ಮೈಸೂರು, ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ಹಲವು ನಗರಗಳಲ್ಲಿ ಮಸ್ತಿ ಮಾಡಬಹುದು. ಬೆಂಗಳೂರಿನಲ್ಲಿ ಎಂಜಿ ರೋಡ್‌ನಲ್ಲಿ ಹೊಸ ವರ್ಷಾಚರಣೆ ದೊಡ್ಡಮಟ್ಟದಲ್ಲಿ ನಡೆಯುತ್ತದೆ. ಬೆಂಗಳೂರಿನ ವಿವಿಧ ಕ್ಲಬ್‌ಗಳು, ಪಬ್‌ಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು ಹೊಸ ವರ್ಷದ ಸಮಯದಲ್ಲಿ ತುಂಬಿ ತುಳುಕುತ್ತವೆ.

ಶ್ರೀನಗರ

ಕಾಶ್ಮೀರದ ಶ್ರೀನಗರ ಕೂಡ ಹೊಸ ವರ್ಷವನ್ನು ಆಚರಿಸಲು ಉತ್ತಮ ಸ್ಥಳವಾಗಿದೆ. ಹಿಮಾಲಯದ ತಂಪಾದ ವಾತಾವರಣದಲ್ಲಿ ಹೊಸ ವರ್ಷವನ್ನು ಸ್ವಾಗತಿಸಬಹುದು. ವರ್ಷದ ಕೊನೆಯಲ್ಲಿ ಶ್ರೀನಗರದ ಅನೇಕ ಭಾಗಗಳಲ್ಲಿ ಹಿಮಪಾತವಾಗುತ್ತದೆ. ಹೊಸ ವರ್ಷಕ್ಕೆ ಇಲ್ಲಿಗೆ ಹಿಮವನ್ನು ನೋಡುವ ಉದ್ದೇಶಕ್ಕೆ ಬಂದರೆ ಖಂಡಿತಾ ಸ್ವರ್ಗವೇ ಧರೆಗೆ ಇಳಿದಂತೆ ನಿಮಗೆ ಖುಷಿ ನೀಡಬಹುದು.

ಮುನ್ನಾರ್

ಕೇರಳದ ಮುನ್ನಾರ್ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಸೂಕ್ತ ಸಮಯವಾಗಿದೆ. ಇಲ್ಲಿನ ಹಸಿರು ಮನಸೆಳೆಯುತ್ತದೆ. ಹೊಸ ವರ್ಷವನ್ನು ಆಹ್ಲಾದಕರ ವಾತಾವರಣದಲ್ಲಿ ಸ್ವಾಗತಿಸಲು ಈ ಸ್ಥಳವು ಉತ್ತಮವಾಗಿದೆ. ಚಾರಣಕ್ಕೂ ಸೂಕ್ತವಾಗಿದೆ. ಪಾರ್ಟಿಗಳಿಗೆ ಇಲ್ಲಿ ಕ್ಲಬ್‌ಗಳು ಉತ್ತಮವಾಗಿವೆ.

ಮುಂಬೈ

ಮುಂಬೈನಲ್ಲೂ ಹೊಸ ವರ್ಷದ ಸಂಭ್ರಮಾಚರಣೆಗಳು ಒಂದು ರೇಂಜ್‌ನಲ್ಲಿ ನಡೆಯುತ್ತವೆ. ಪಾರ್ಟಿ ದೊಡ್ಡಮಟ್ಟದಲ್ಲಿ ನಡೆಯುತ್ತದೆ. ಅಲ್ಲಿನ ಸಮುದ್ರದ ಬದಿಗಳಲ್ಲಿ ಸಂಭ್ರಮಿಸಬಹುದು. ಗೇಟ್‌ವೇ ಆಫ್ ಇಂಡಿಯಾಕ್ಕೆ ಹೋಗಬಹುದು.

Whats_app_banner