New Year 2025: ಹೊಸ ವರ್ಷಕ್ಕೆ ಈ 10 ಹಣಕಾಸು ನಿರ್ಣಯಗಳನ್ನು ತೆಗೆದುಕೊಳ್ಳಿ, ಆರ್ಥಿಕ ಸ್ಥಿತಿ ಸುಧಾರಣೆಗೆ ನೆರವು ನೀಡುವ ಸಂಕಲ್ಪ
New Year financial resolution 2025: ಹೊಸ ವರ್ಷ ಆಗಮನಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹ್ಯಾಪಿ ನ್ಯೂ ಇಯರ್ 2025 ಎಂದು ಕೇವಲ ಶುಭಾಶಯ ಹಂಚುವುದಕ್ಕೆ ಸೀಮಿತವಾಗಬೇಡಿ. ಹೊಸ ವರ್ಷದಲ್ಲ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಜಾದು ಆಗುವಂತೆ 10 ಹಣಕಾಸು ನಿರ್ಧಾರಗಳನ್ನು, ನಿರ್ಣಯಗಳನ್ನು ತೆಗೆದುಕೊಳ್ಳಿ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ.
New Year financial resolution 2025: ಹೊಸ ವರ್ಷ ಬಂದಾಗ ಏನಾದರೂ ಹೊಸ ನಿರ್ಣಯ, ಸಂಕಲ್ಪ ಮಾಡಿಕೊಳ್ಳುವುದು ಒಳ್ಳೆಯದು. ಆದರೆ, ಇದನ್ನು ವರ್ಷವಿಡೀ ಮುಂದುವರೆಸುವ ಬದ್ಧತೆ ನಿಮ್ಮಲ್ಲಿ ಇರಬೇಕು. ನೀವು 2025ರ ಹೊಸ ವರ್ಷದಲ್ಲಿ ಏನಾಗಬೇಕು, ಏನುಮಾಡಬೇಕು ಎಂದು ನ್ಯೂ ಇಯರ್ ರೆಸಲ್ಯೂಷನ್ ಪಟ್ಟಿ ಮಾಡುತ್ತಿದ್ದರೆ ಅದಕ್ಕೆ ಹಣಕಾಸು ಸಂಕಲ್ಪಗಳನ್ನೂ ಸೇರಿಸಿಕೊಳ್ಳಿ. ಹಣ ಉಳಿತಾಯ ಹೆಚ್ಚಿಸುವುದು, ಕ್ರೆಡಿಟ್ ಸ್ಕೋರ್ ಉತ್ತಮಪಡಿಸುವುದು ಸೇರಿದಂತೆ ವಿವಿಧ ಹೊಸ ವರ್ಷದ ನಿರ್ಣಯಗಳನ್ನು ಕೈಗೊಳ್ಳಬಹುದು. ನಮ್ಮ ಹಣಕಾಸು ಪರಿಸ್ಥಿತಿ, ಆರ್ಥಿಕ ತೊಂದರಗಳನ್ನು ಸರಿಪಡಿಸುವಲ್ಲಿ ಹಣಕಾಸು ಶಿಸ್ತು ಪ್ರಮುಖ ಪಾತ್ರವಹಿಸುತ್ತದೆ. ಈ ಮುಂದಿನ ಹಣಕಾಸು ನಿರ್ಣಯಗಳನ್ನು ಪರಿಶೀಲಿಸಿ.
1. ಹೆಚ್ಚು ಹಣ ಉಳಿತಾಯ ಮಾಡಿ
ನಾವು ಉಳಿಸಿದ ಹಣವೇ ನಾವು ಗಳಿಸಿದ ಹಣ ಎಂಬ ಮಾತಿದೆ. ಅಂದರೆ, ಸಂಪಾದನೆ ಮಾಡಿ ಖರ್ಚು ಮಾಡಿದಾಗ ಅದು ನಮ್ಮ ಹಣವಾಗುವುದಿಲ್ಲ. ನಾವು ಸಂಪಾದನೆ ಮಾಡಿರುವುದರಲ್ಲಿ ಎಷ್ಟು ಉಳಿತಾಯ ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಈ ವರ್ಷ ನಿಮ್ಮ ಸಂಪಾದನೆಯಲ್ಲಿ ಹೆಚ್ಚು ಹಣ ಉಳಿತಾಯ ಮಾಡಿ. ಹೆಚ್ಚು ಉಳಿತಾಯ ಮಾಡುವುದೆಂದರೆ ಹೊಟ್ಟೆಬಟ್ಟಿ ಕಟ್ಟಿ ಜಿಪುಣತನವೆಂದಲ್ಲ, ದುಂದುವಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಇದರೊಂದಿಗೆ ಹಣ ಉಳಿತಾಯ ಮಾಡಲು ಮತ್ತು ಹೂಡಿಕೆ ಮಾಡುವ ವಿವಿಧ ಅವಕಾಶಗಳನ್ನು ಬಳಸಿಕೊಳ್ಳಿ.
2. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳಿ
ಸರಿಯಾದ ಸಮಯಕ್ಕೆ ಸಾಲದ ಕಂತುಗಳನ್ನು ಪಾವತಿಸಿ. ಇದಕ್ಕಾಗಿ ಆಟೋಪೇ ಆಯ್ಕೆಗಳನ್ನು ಬಳಸಿಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಸರಿಾದ ಸಮಯಕ್ಕೆ ಪಾವತಿಸಿ. ಇಂತಹ ಹಲವು ವಿಧಾನಗಳ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳಿ.
3. ಬಜೆಟ್ ನಿರ್ವಹಣೆ
ನಿಮ್ಮ ಖರ್ಚು ವೆಚ್ಚಗಳ ಮೇಲೆ ನಿಗಾ ಇಡಿ. ಇವುಗಳನ್ನ ಬರೆದಿಡಿ. ಈ ರೀತಿ ನಿಮ್ಮ ಖರ್ಚುಗಳನ್ನು ಟ್ರ್ಯಾಕ್ ಮಾಡುವ ಮೂಲಕ ನಿಮಗೆ ನಿಮ್ಮ ಹಣ ಏನಾಗುತ್ತಿದೆ ಎನ್ನುವ ಸ್ಪಷ್ಟತೆ ದೊರಕುತ್ತದೆ. ಇದರೊಂದಿಗೆ ಯಾವುದಕ್ಕೆ ಎಷ್ಟು ಹಣ ವಿನಿಯೋಗ ಮಾಡಬೇಕು ಎನ್ನುವ ಸ್ಪಷ್ಟತೆ ಇರಲಿ. ಮನೆ ಬಾಡಿಗೆ, ಮನೆ ಸಾಲದ ಇಎಂಐ, ಕರೆಂಟ್ ಬಿಲ್, ಮಕ್ಕಳ ಶಾಲಾ ಶುಲ್ಕ, ತಿಂಗಳ ದಿನಸಿ ಖರ್ಚು ಇತ್ಯಾದಿ ತಪ್ಪಿಸಲಾಗದ ಖರ್ಚು ಹೊರತುಪಡಿಸಿ ಎಷ್ಟು ಹಣ ಉಳಿತಾಯವಾಗುತ್ತದೆ ನೋಡಿ. ಇದಕ್ಕಾಗಿ ಒಂದು ಪ್ರತ್ಯೇಕ ಡೈರಿ ಮಾಡಿ ಅದರಲ್ಲ ಪ್ರತಿದಿನದ ಖರ್ಚುಗಳನ್ನು ಬರೆಯಬಹುದು. ಇದೇ ರೀತಿ ಕೆಲವೊಂದು ಆಪ್ಗಳ ಮೂಲಕವೂ ನಿಮ್ಮ ಖರ್ಚುಗಳ ಮೇಲೆ ನಿಗಾ ಇಡಬಹುದು.
4. ಕ್ರೆಡಿಟ್ ಕಾರ್ಡ್ ಸಾಲ ಕಡಿಮೆ ಮಾಡಿ
ಈಗ ಸಾಕಷ್ಟು ಜನರು ಕ್ರೆಡಿಟ್ಕಾರ್ಡ್ ಬಳಸುತ್ತಿದ್ದಾರೆ. ಆದರೆ, ಇದರ ಅತಿಯಾದ ಅವಲಂಬನೆ ಬೇಡ. ಕ್ರೆಡಿಟ್ ಕಾರ್ಡ್ ಮೇಲೆ ಸಾಲ ತೆಗದುಕೊಳ್ಳುವಾಗ ಹುಷಾರು. ನಿಗದಿತ ಸಮಯದಲ್ಲಿ ಕಟ್ಟುವ ಧೈರ್ಯವಿದ್ದರೆ ಮಾತ್ರ ಸಾಲ ಪಡೆಯಿರಿ. ಇಲ್ಲವಾದರೆ ಕ್ರೆಡಿಟ್ ಕಾರ್ಡ್ ಹೆಚ್ಚು ಬಳಸಬೇಡಿ.
5. ತುರ್ತು ಅವಶ್ಯಕತೆಗೆ ನಿಧಿ
ಈಗ ಜಗತ್ತಿನಲ್ಲಿ ಕುಟುಂಬದ ಯಾರಿಗೆ ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಸ್ಪತ್ರೆಗೆ ಹೋದಾಗ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇದಕ್ಕಾಗಿ ಸೂಕ್ತವಾದ ಆರೋಗ್ಯ ವಿಮೆ ಇರಲಿ. ಇದರೊಂದಿಗೆ ಎಮರ್ಜೆನ್ಸಿ ಫಂಡ್ ಎಂದು ಒಂದಿಷ್ಟು ಹಣ ತೆಗೆದಿಡಿ.
6. ನಿವೃತ್ತಿಗಾಗಿ ಹಣ ಉಳಿತಾಯ ಮಾಡಿ. ಎನ್ಪಿಎಸ್ನಂತಹ ಯೋಜನೆಗಳಿಗೆ ಸೇರಿ.
7. ಹಣಕಾಸು ಸಾಕ್ಷರತೆ ಹೆಚ್ಚಿಸಿಕೊಳ್ಳಿ. ವಿವಿಧ ಹೂಡಿಕೆಗಳ ಬಗ್ಗೆ ಕಲಿಯಿರಿ.
8. ಆದಾಯ ಹೆಚ್ಚಿಸಿಕೊಳ್ಳುವ ಸಂಕಲ್ಪ ಮಾಡಿ
ವೇತನ ಕಡಿಮೆ ಇದ್ದರೆ ಉತ್ತಮ ವೇತನದ ಉದ್ಯೋಗ ಪಡೆಯಲು ಯತ್ನಿಸಿ. ವ್ಯವಹಾರದಲ್ಲಿ ಇನ್ನಷ್ಟು ಲಾಭ ಗಳಿಸುವ ಮಾರ್ಗಗಳನ್ನು ಹುಡುಕಿ.
9. ಷೇರುಪೇಟೆ ಕುರಿತು ಜ್ಞಾನ ಹೆಚ್ಚಿಸಿಕೊಳ್ಳುವ ಸಂಕಲ್ಪ ಮಾಡಿ
ಈ ಹಣಕಾಸು ಜಗತ್ತಿನಲ್ಲಿ ಷೇರುಪೇಟೆ ಕುರಿತು ಜ್ಞಾನ ಇರುವವರು ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಜ್ಞಾನ ಇಲ್ಲದೆ ಹೂಡಿಕೆ ಮಾಡಿದವರು ಹಣ ಕಳೆದುಕೊಳ್ಳವ ಸಾಧ್ಯತೆ ಇದೆ. ಹೀಗಾಗಿ, ಷೇರುಪೇಟೆಯ ಕುರಿತು ಈ ವರ್ಷ ಇನ್ನಷ್ಟು ಕಲಿಯುವ ಸಂಕಲ್ಪ ಮಾಡಿ.
10. ನಾಮಿನಿ ಅಪ್ಡೇಟ್ ಮಾಡಿ
ನಿಮ್ಮ ಎಲ್ಲಾ ಹಣಕಾಸು ವ್ಯವಹಾರಗಳಲ್ಲಿ, ವಿಮೆಗಳಲ್ಲಿ ನಾಮಿನಿ ಅಪ್ಡೇಟ್ ಮಾಡಿ. ಸಾಕಷ್ಟು ಜನರು ನಾಮಿನಿ ಅಪ್ಡೇಟ್ ಮಾಡುವ ಕುರಿತು ಕಡೆಗಣಿಸುತ್ತಾರೆ. ನೀವು ಈ ರೀತಿ ಮಾಡಿದ್ದರೆ ಈ ವರ್ಷದ ಆರಂಭದಲ್ಲಿ ಎಲ್ಲಾ ಖಾತೆಗಳ ನಾಮಿನಿ ಅಪ್ಡೇಟ್ ಮಾಡುವ ಸಂಕಲ್ಪ ಮಾಡಿ.
ವಿಭಾಗ