ಹೊಸ ವರ್ಷಕ್ಕೆ ತಯಾರಿಸಿ ಗರಿಗರಿ ಚಿಕನ್ ಪಕೋಡ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿಂತಾರೆ ನೋಡಿ, ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ವರ್ಷಕ್ಕೆ ತಯಾರಿಸಿ ಗರಿಗರಿ ಚಿಕನ್ ಪಕೋಡ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿಂತಾರೆ ನೋಡಿ, ಇಲ್ಲಿದೆ ಪಾಕವಿಧಾನ

ಹೊಸ ವರ್ಷಕ್ಕೆ ತಯಾರಿಸಿ ಗರಿಗರಿ ಚಿಕನ್ ಪಕೋಡ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿಂತಾರೆ ನೋಡಿ, ಇಲ್ಲಿದೆ ಪಾಕವಿಧಾನ

ಹೊಸ ವರ್ಷಕ್ಕೆ ಏನಾದರೂ ಸ್ಪೆಷಲ್ ರೆಸಿಪಿ ಮಾಡಬೇಕು ಎಂದು ಯೋಜಿಸುತ್ತಿದ್ದರೆ ರುಚಿಕರ, ಗರಿಗರಿಯಾದ ಚಿಕನ್ ಪಕೋಡ ತಯಾರಿಸಬಹುದು. ಇದನ್ನು ತಯಾರಿಸುವುದು ತುಂಬಾ ಸರಳ. ಮಕ್ಕಳು ಕೂಡ ಖಂಡಿತ ಇಷ್ಟಪಟ್ಟು ತಿಂತಾರೆ. ಒಮ್ಮೆ ಮಾಡಿ ನೋಡಿ. ಇಲ್ಲಿದೆ ಪಾಕವಿಧಾನ.

ಹೊಸ ವರ್ಷಕ್ಕೆ ತಯಾರಿಸಿ ಗರಿಗರಿ ಚಿಕನ್ ಪಕೋಡ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿಂತಾರೆ ನೋಡಿ, ಇಲ್ಲಿದೆ ಪಾಕವಿಧಾನ
ಹೊಸ ವರ್ಷಕ್ಕೆ ತಯಾರಿಸಿ ಗರಿಗರಿ ಚಿಕನ್ ಪಕೋಡ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿಂತಾರೆ ನೋಡಿ, ಇಲ್ಲಿದೆ ಪಾಕವಿಧಾನ (PC: YouTube )

ಪಕೋಡ ಹೆಸರು ಹೇಳಿದರೆ ಸಾಕು ಅನೇಕರ ಬಾಯಲ್ಲಿ ನೀರೂರಬಹುದು. ಕೇವಲ ಈರುಳ್ಳಿ, ತರಕಾರಿ ಪಕೋಡ ಮಾತ್ರವಲ್ಲ ಚಿಕನ್ ಪಕೋಡ ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಹೊಸ ವರ್ಷಕ್ಕೆ ಏನಾದರೂ ಸ್ಪೆಷಲ್ ರೆಸಿಪಿ ಮಾಡಬೇಕು ಅಂದುಕೊಂಡಿದ್ದರೆ ಈ ಟೇಸ್ಟಿ, ಗರಿಗರಿಯಾದ ಚಿಕನ್ ಪಕೋಡ ತಯಾರಿಸಿ. ಇದನ್ನು ತಯಾರಿಸುವುದು ಕೂಡ ತುಂಬಾನೇ ಸುಲಭ. ಗರಿಗರಿಯಾದ ಚಿಕನ್ ಪಕೋಡ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಚಿಕನ್ ಪಕೋಡ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಚಿಕನ್- ಅರ್ಧ ಕೆ.ಜಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಮೆಣಸಿನಪುಡಿ- ಒಂದು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- ಮೂರು ಟೀ ಚಮಚ, ಅರಿಶಿನ- ಕಾಲು ಟೀ ಚಮಚ, ಗರಂ ಮಸಾಲೆ- ಒಂದು ಟೀ ಚಮಚ, ಜೀರಿಗೆ ಪುಡಿ- ಅರ್ಧ ಟೀ ಚಮಚ, ಎಣ್ಣೆ- ಆಳವಾಗಿ ಕರಿಯಲು, ನಿಂಬೆ ರಸ- ಒಂದು ಟೀ ಚಮಚ, ಹಸಿಮೆಣಸಿನಕಾಯಿ- ನಾಲ್ಕು, ಕರಿಬೇವು- ಒಂದು ಹಿಡಿ, ಅಕ್ಕಿ ಹಿಟ್ಟು- ಎರಡು ಟೀ ಚಮಚ.

ಮಾಡುವ ವಿಧಾನ: ಕೋಳಿ ಮಾಂಸವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.

- ಒಂದು ಪಾತ್ರೆಯಲ್ಲಿ ಚಿಕನ್ ತುಂಡುಗಳನ್ನು ಹಾಕಿ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ನಿಂಬೆ ರಸ, ಒಂದು ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

- ನಂತರ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಹಸಿಮೆಣಸಿನಕಾಯಿಯನ್ನು ಉದ್ದಕ್ಕೆ ಕತ್ತರಿಸಿ ಅದಕ್ಕೆ ಎರಡು ಚಮಚ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ.

- ಈಗ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇರಿಸಿ, ಕರಿಯಲು ಸಾಕಷ್ಟು ಎಣ್ಣೆಯನ್ನು ಹಾಕಿ.

- ಇದಕ್ಕೆ ಈ ಚಿಕನ್ ತುಂಡುಗಳನ್ನು ಸೇರಿಸಿ ಫ್ರೈ ಮಾಡಿ. ಅದು ಕೆಂಪು ಬಣ್ಣಕ್ಕೆ ಬರುಗುವವರೆಗೆ ಫ್ರೈ ಮಾಡಿ, ಅದನ್ನು ಪಕ್ಕಕ್ಕೆ ಇರಿಸಿ.

- ಇಷ್ಟು ಮಾಡಿದರೆ ಟೇಸ್ಟಿ ಚಿಕನ್ ಪಕೋಡ ಸವಿಯಲು ಸಿದ್ಧ.

ನಿಮಗೆ ಮಸಾಲೆ ಬೇಕಾದರೆ, ಸ್ವಲ್ಪ ಹೆಚ್ಚು ಸೇರಿಸಬಹುದು. ಹೊಸ ವರ್ಷಕ್ಕೆ ಯಾವ ವಿಶೇಷ ರೆಸಿಪಿ ಮಾಡುವುದು ಎಂದು ಯೋಚಿಸುತ್ತಿದ್ದರೆ ಚಿಕನ್ ಪಕೋಡ ಪಾಕವಿಧಾನ ಮಾಡಿ ನೋಡಬಹುದು. ಇದು ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner