New Year Trip Plan: ನ್ಯೂ ಇಯರ್‌ಗೆ ಟ್ರಿಪ್ ಹೊರಟಿದ್ದೀರಾ? ಹಾಗಾದರೆ ಸೂಟ್‌ಕೇಸ್ ಪ್ಯಾಕಿಂಗ್ ಮಾಡುವಾಗ ಈ ಜಾಣ್ಮೆ ತೋರಿಸಿ
New Year Trip: ಸೂಟ್‌ಕೇಸ್ ಪ್ಯಾಕಿಂಗ್ ಮಾಡುವಾಗ ಸ್ವಲ್ಪ ಜಾಣ್ಮೆ ಇರಬೇಕು. ಸೂಟ್‌ಕೇಸ್‌ನ ಒಳಗೆ ಇರುವಷ್ಟೇ ಜಾಗದಲ್ಲಿ ಗರಿಷ್ಠ ಸಾಮಾನುಗಳನ್ನು ಅದರಲ್ಲಿಡುವ ಕಲೆ ತಿಳಿದುಕೊಂಡರೆ ಆರಾಮದಾಯಕ ವ್ಯವಸ್ಥಿತ ಪ್ರಯಾಣ ನಿಮ್ಮದಾಗುತ್ತದೆ. ಹೊಸ ವರ್ಷಕ್ಕೆ ಪ್ರವಾಸ ಹೊರಟಿದ್ದೀರಲ್ಲ, ಇಲ್ಲಿ ಹೇಳಿದಂತೆ ಬುದ್ಧಿವಂತಿಕೆಯಿಂದ ಪ್ಯಾಕಿಂಗ್ ಮಾಡಿ.
ಇನ್ನೇನು ಹೊಸ ವರ್ಷ ಬಂದೇ ಬಿಟ್ಟಿತು. ಹೊಸ ವರ್ಷ ಬರಮಾಡಿಕೊಳ್ಳಲು ಪ್ರವಾಸಕ್ಕೆ ಹೋಗುವುದು ಇತ್ತೀಚಿನ ಟ್ರೆಂಡ್. ಇಯರ್ ಎಂಡ್ ಟ್ರಿಪ್ ಪ್ಲಾನ್ ಮಾಡುವುದೆಂದರೆ ಎಲ್ಲರಿಗೂ ಖುಷಿ. ವಾರದ ಮೊದಲೇ ಪ್ಲಾನ್ ರೆಡಿಮಾಡಲಾಗುತ್ತದೆ. ಹೀಗೆ ಹೊಸ ವರ್ಷಾಚರಣೆಗೆ ಪ್ರವಾಸಕ್ಕೆ ಹೋಗುವಾಗ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬೇಕು. ಎಲ್ಲಿ ಹೋಗಬೇಕೆಂದು ಪ್ಲಾನ್ ಮಾಡುವವರು, ತೆಗೆದುಕೊಂಡು ಹೋಗಲೇಬೇಕಾದ ಅಗತ್ಯ ವಸ್ತುಗಳ ಪ್ಯಾಕಿಂಗ್ ಮಾಡಲು ಹರಸಾಹಹ ಪಡುತ್ತಾರೆ. ಕೊನೆಗಳಿಗೆಯಲ್ಲಿ ಮರೆತು ಹೋಗುವುದೇ ಹೆಚ್ಚು. ಹಾಗಾಗಿ ಪ್ರವಾಸಕ್ಕೆ ಹೋಗುವ ಮೊದಲು ಪ್ಯಾಕಿಂಗ್ ಮಾಡಲು ಅಷ್ಟೇ ಜಾಣ್ಮೆಯೂ ಬೇಕು.
ಸೂಟ್‌ಕೇಸ್‌ನಲ್ಲಿ ಹೇಗೋ ಒಂದಿಷ್ಟು ಸಾಮನುಗಳನ್ನು ತುಂಬಿಸಿಕೊಂಡು ಹೋದರೆ ಆಗ ತೊಂದರೆ ಅನುಭವಿಸುವುದಂತು ಖಂಡಿತ. ಅಗತ್ಯ ವಸ್ತುಗಳಿಗಾಗಿ ಹುಡುಕಾಡಲು ಸಮಯ ತೆಗೆದುಕೊಳ್ಳುತ್ತದೆ. ಮತ್ತು ಅದು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಇರುವಷ್ಟೇ ಜಾಗದಲ್ಲಿ ಹೆಚ್ಚಿನ ವಸ್ತುಗಳನ್ನು ಇಡುವುದು ಬುದ್ಧಿವಂತಿಕೆ. ವ್ಯವಸ್ಥಿತವಾಗಿ ಸ್ಮಾರ್ಟ್ ಪ್ಯಾಕಿಂಗ್ ಮಾಡಿಕೊಂಡು ಹೋದರೆ ಅನಗತ್ಯ ಹುಡುಕಾಡುವುದು ತಪ್ಪುತ್ತದೆ. ಚೆಂದ ಕಾಣಬೇಕೆಂದು ಐರನ್ ಮಾಡಿಟ್ಟುಕೊಂಡ ಬಟ್ಟೆಗಳು ಹಾಳಾಗುವುದು ತಪ್ಪುತ್ತದೆ. ಸ್ಪಾರ್ಟ್ ಆಗಿ ಪ್ಯಾಕಿಂಗ್ ಮಾಡಲು ನಿಮಗೆ ಸಹಾಯವಾಗುವ 7 ಬೆಸ್ಟ್ ಟಿಪ್‌ಗಳು ಇಲ್ಲಿವೆ. ಹೊಸವರ್ಷಕ್ಕೆ ಟ್ರಿಪ್ ಪ್ಲಾನ್ ಮಾಡಿದ್ದೀರಲ್ಲ, ಮತ್ತೇಕೆ ತಡ ಪ್ಯಾಕಿಂಗ್ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ. ಹುಡುಕಾಟದಲ್ಲಿ ವ್ಯರ್ಥವಾಗುವ ಸಮಯ ಉಳಿಸಿಕೊಳ್ಳಿ.
1. ಬಟ್ಟೆಗಳನ್ನು ಸ್ಮಾರ್ಟ್ ಆಗಿ ಫೋಲ್ಡ್ ಮಾಡಿ
ಬಟ್ಟೆಗಳನ್ನು ಸಾಂಪ್ರದಾಯಿಕ ಮಡಿಸುವ ಬದಲು, ರೋಲಿಂಗ್ ವಿಧಾನದಲ್ಲಿ ಬಟ್ಟೆಗಳನ್ನು ಮಡಿಸಲು ಪ್ರಯತ್ನಿಸಿ. ಈ ವಿಧಾನವು ಜಾಗವನ್ನು ಉಳಿಸುತ್ತದೆ ಮತ್ತು ಬಟ್ಟೆಯ ಮೇಲಾಗುವ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಶರ್ಟ್, ಪ್ಯಾಂಟ್, ಕುರ್ತಾ, ಲೆಗಿನ್ಸ್ ಮುಂತಾದ ಸುಕ್ಕುಗಟ್ಟುವ ಬಟ್ಟೆಗಳಿಗೆ, ಅವುಗಳನ್ನು ಅಂದವಾಗಿ ಮಡಿಸುವುದು ಉತ್ತಮ.
2. ಬಟ್ಟೆಗಳನ್ನು ಬುದ್ಧಿವಂತಿಕೆಯಿಂದ ಆಯ್ಕೆಮಾಡಿ
ಹತ್ತಿ, ಉಣ್ಣೆ, ತೆಳುವಾದ, ಮತ್ತು ಮೃದುವಾದ ಬಟ್ಟೆಗಳನ್ನು ಆರಿಸಿಕೊಳ್ಳಿ. ಟ್ರಕ್ಕಿಂಗ್ ಪ್ಯಾಂಟ್‌ಗಳಂತಹವು ಸುಕ್ಕು ಗಟ್ಟುವುದಿಲ್ಲ. ಜೊತೆಗೆ ಕಡಿಮೆ ಜಾಗದಲ್ಲಿ ಇರಿಸಬಹುದಾಗಿದೆ. ಉದ್ದ ಪದರುಗಳಾಗಿ ಬಟ್ಟೆಗಳನ್ನು ಮಡಿಸುವುದರಿಂದಲೂ ನಿಮ್ಮ ಸೂಟ್‌ಕೇಸ್‌ನಲ್ಲಿ ಹೆಚ್ಚು ಬಟ್ಟೆ ಹೊಂದಿಸಿಕೊಳ್ಳಲು ಸಹಾಯವಾಗುತ್ತದೆ.
3. ನಿಮ್ಮ ಲಗೇಜ್ ಅನ್ನು ವಾಸನೆ ರಹಿತವಾಗಿಸಿ
ಬಟ್ಟೆಯ ಪದರಗಳ ನಡುವೆ ಡ್ರೈಯರ್ ಶೀಟ್‌ಗಳನ್ನು ಇರಿಸುವ ಮೂಲಕ ಸೂಟ್‌ಕೇಸ್ ಅಥವಾ ನಿಮ್ಮ ಲಗೇಜ್‌ನಲ್ಲಾಗುವ ವಾಸನೆಯನ್ನು ತಡೆಗಟ್ಟಬಹುದು. ಜೊತೆಗೆ ಬಟ್ಟ ಪ್ಯಾಕ್ ಮಾಡುವು ಮೊದಲು ಸೂಟ್‌ಕೇಸ್ ಒಳಗಡೆ ಸೌಮ್ಯ ಪರಿಮಳದ ಸ್ಪ್ರೇ ಯನ್ನು ಹಾಕಿ. ನಂತರ ಬಟ್ಟೆ ಜೋಡಿಸಿ.
4. ಡ್ರೈ ಕ್ಲೀನ್ ಬಟ್ಟೆಗಳಿಗೆ ಪ್ಲಾಸ್ಟಿಕ್ ಬಳಸಿ
ಡ್ರೈ–ಕ್ಲೀನಿಂಗ್ ಬಟ್ಟೆಗಳಿಗೆ ಪ್ರತ್ಯೇಕ ಕವರ್ ಹಾಕಿ. ಅವು ಬಹಳ ನಾಜೂಕಿನ ಬಟ್ಟೆಗಳಾಗಿರುವುದರಿಂದ ಹಾಳಾಗುವ ಸಾಧ್ಯತೆ ಹೆಚ್ಚು.
5. ಶೂ ಗಳನ್ನು ಹೀಗೆ ಪ್ಯಾಕ್ ಮಾಡಿ
ನಿಮ್ಮ ಶೂ ಅಥವಾ ಬೂಟುಗಳನ್ನು ಶವರ್ ಕ್ಯಾಪ್‌ನಲ್ಲಿ ಪ್ಯಾಕ್ ಮಾಡುವ ಮೂಲಕ ಶೂ ಧೂಳಿನಿಂದ ನಿಮ್ಮ ಬಟ್ಟೆಗಳನ್ನು ಹಾಳಾಗದಂತೆ ರಕ್ಷಿಸಿಕೊಳ್ಳಬಹುದು.
6. ಸ್ಕಿನ್‌ಕೇರ್ ಪ್ಯಾಕಿಂಗ್
ಕ್ರೀಮ್‌ಗಳು, ಲೋಷನ್‌ಗಳು ಮತ್ತು ಮುಲಾಮು ಮುಂತಾದ ತ್ವಚೆಯ ನಿರ್ವಹಣೆಗೆ ಅಗತ್ಯವಿರುವ ವಸ್ತುಗಳನ್ನು ಪ್ರತ್ಯೇಕ ಚಿಕ್ಕ ಬ್ಯಾಗ್‌ನಲ್ಲಿ ಇರಿಸಿಕೊಳ್ಳಿ. ಬಟ್ಟೆಯ ಮಧ್ಯೆ ಸೇರಿ ಹುಡುಕಲು ಕಷ್ಟಪಡುವುದನ್ನು ತಪ್ಪಿಸುತ್ತದೆ.
7. ಔಷಧಗಳನ್ನು ಮರೆಯದೇ ತೆಗದುಕೊಂಡು ಹೋಗಿ
ನಿಮಗೆ ಅಗತ್ಯವಿರುವ ಔಷಧಗಳನ್ನು ಒಂದು ಪ್ರತ್ಯೇಕ ಚಿಕ್ಕ ಬ್ಯಾಗ್‌ನಲ್ಲಿ ಹಾಕಿ, ತೆಗೆದುಕೊಂಡು ಹೋಗಿ, ಸಾಮಾನ್ಯವಾಗಿ, ಜ್ವರ, ಶೀತ, ತಲೆನೋವು ಮುಂತಾದ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಇವು ಪರಿಹಾರ ಒದಗಿಸುತ್ತವೆ. ನಿಮ್ಮ ಪ್ರವಾಸದ ಮಜವನ್ನು ಸಹ ಹಾಳಾಗದಂತೆ ನೋಡಿಕೊಳ್ಳುತ್ತವೆ.